ದೋಸೆ,ವಡೆ,ಇಡ್ಲಿ,ಖಾರಾ ಬಾತ್,ಒಂದು ಕಾಫಿ.. ಬೆಂಗಳೂರಿನ ಫೇಮಸ್ 'ವಿದ್ಯಾರ್ಥಿ ಭವನ್'ನಲ್ಲಿ ವಿಕ್ಟರಿ ವೆಂಕಟೇಶ್
ಇಲ್ಲಿವರೆಗೂ ಐಟಿ ಹಬ್ ಆಗಿ ಹೆಸರು ಮಾಡಿದ್ದ ಬೆಂಗಳೂರು ಈಗ ಫುಡ್ ಹಬ್ ಆಗುವತ್ತಾ ಸಾಗುತ್ತಿದೆ. ಬೆಂಗಳೂರಿನ ಜನಪ್ರಿಯ ಹೋಟೆಲ್‌ಗಳನ್ನು ಸೆಲೆಬ್ರಿಟಿಗಳು ಹುಡುಕಿಕೊಂಡು ಬರುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ಸ್ ಒಂದೊಂದು ಏರಿಯಾಗೂ ಹುಡುಕಿಕೊಂಡು ಹೋಗಿ ಒಳ್ಳೆಯ ಆಹಾರ ಸಿಗುವ ರೆಸ್ಟೋರೆಂಟ್‌ಗಳನ್ನು ಪರಿಚಯಿಸುತ್ತಿದ್ದಾರೆ.
ಆದರೆ, ಇದ್ಯಾವುದರ ಅಗತ್ಯವಿಲ್ಲದೆ ತನ್ನ ಜನಪ್ರಿಯತೆ ಉಳಿಸಿಕೊಂಡಿರುವ ಬೆಂಗಳೂರಿನ ಹಳೆಯ ಜನಪ್ರಿಯ ಹೋಟೆಲ್ 'ವಿದ್ಯಾರ್ಥಿ ಭವನ್'. ಬೆಂಗಳೂರಿಗರು ಅಷ್ಟೇ ಅಲ್ಲ. ಬೇರೆ ಬೇರೆ ಕಡೆಗಳಿಂದಲೂ ಇಲ್ಲಿ ಫೇಮಸ್ ದೋಸೆಯನ್ನು ಹುಡುಕಿಕೊಂಡು ಬರುವ ಜನರು ಇದ್ದಾರೆ. ಹಾಗೇ ಇಲ್ಲಿಗೆ ಬಂದು ಈ ಹೋಟೆಲ್‌ನ ದೋಸೆಯನ್ನು ಸವಿದ ಸೆಲೆಬ್ರೆಟಿಗಳಿಗೇನು ಕಮ್ಮಿಯಿಲ್ಲ.

ಇಂದು (ಮಾರ್ಚ್ 29) ತೆಲುಗು ಚಿತ್ರರಂಗದ ಜನಪ್ರಿಯ ನಟ ವಿಕ್ಟರಿ ವೆಂಕಟೇಶ್ ಕೂಡ ವಿದ್ಯಾರ್ಥಿ ಭವನ್‌ಗೆ ವಿಸಿಟ್ ಹಾಕಿದ್ದಾರೆ. ಈ ಹೋಟೆಲ್‌ನ ಜನಪ್ರಿಯ ದೋಸೆಯನ್ನು ಸವಿಯುತ್ತಿರುವ ವಿಡಿಯೋವನ್ನು ವಿದ್ಯಾರ್ಥಿ ಭವನದ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ.
ಹೌದು, ತೆಲುಗು ನಟ ವೆಂಕಟೇಶ್ ದಗ್ಗುಬಾಟಿ ಬೆಂಗಳೂರಿನ ಐಕಾನಿಕ್ ಹೋಟೆಲ್ 'ವಿದ್ಯಾರ್ಥಿ ಭವನ್'ಗೆ ವಿಸಿಟ್ ಹಾಕಿದ್ದಾರೆ. ಸಾಮಾನ್ಯರಂತೆ ದಿಢೀರನೇ ವಿಸಿಟ್ ಹಾಕಿ ಫೇಮಸ್ ಮಸಾಲೆ ದೋಸೆಯನ್ನು ಸವಿದಿದ್ದಾರೆ. ಜೊತೆಗೆ ಒಂದು ಇಡ್ಲಿ, ಒಂದು ಉದ್ದಿನ ವಡೆ, ಖಾರಾ ಬಾತ್ ಅನ್ನು ಸವಿಯುತ್ತಿರೋದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವಿಡಿಯೋ ಪೋಸ್ಟ್ ಆದಲ್ಲಿಂದ ಲಕ್ಷದ ಹತ್ತಿರ ಲೈಕ್ಸ್ ಬಂದಿದೆ.
ವಿಕ್ಟರಿ ವೆಂಕಟೇಶ್ ಅಂತಲೇ ಜನಪ್ರಿಯರಾಗಿರುವ ನಟ 65ನೇ ವಯಸ್ಸಿನಲ್ಲೂ ಸಕ್ಸಸ್‌ಫುಲ್ ಸಿನಿಮಾ ಜರ್ನಿಯನ್ನು ಮುಂದುವರೆಸಿದ್ದಾರೆ. ಇತ್ತೀಚೆಗಷ್ಟೇ ಮೆಗಾಸ್ಟಾರ್ ಚಿರಂಜೀವಿ ನಟಿಸಿದ 'ಮನಶಂಕರ ವರಪ್ರಸಾದ ಗಾರು' ಸಿನಿಮಾದ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು. ಈಗ ಅವರ ಬಳಿ ಸಾಲು ಸಾಲು ಸಿನಿಮಾಗಳು ಕೈಯಲ್ಲಿವೆ. ಅಷ್ಟು ಬ್ಯುಸಿಯಾಗಿದ್ದಾರೆ.
ಕೌಟುಂಬಿ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ವಿಕ್ಟರ್ ವೆಂಕಟೇಶ್‌ಗೆ ಅವರದ್ದೇ ಆದ ಫ್ಯಾನ್ ಫಾಲೋವಿಂಗ್ ಇದೆ. ಹಾಸ್ಯ ಪಾತ್ರಗಳಲ್ಲೂ ನಟಿಸಿ ಗೆದ್ದು ಬೀಗಿದ್ದಾರೆ. ಕಳೆದ ವರ್ಷ ತೆರೆಕಂಡಿದ್ದ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಫ್ಯಾಮಿಲಿ ಆಡಿಯನ್ಸ್ ಅನ್ನು ಸೆಳೆದು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಹೀಗೆ ಸಿನಿಮಾದಲ್ಲಿ ಕಳೆದ ನಾಲ್ಕು ದಶಕಗಳಿಂದ ಯಶಸ್ಸು ಕಂಡಿರುವ ವಿಕ್ಟರಿ ವೆಂಕಟೇಶ್‌ಗೆ ಕ್ರಿಕೆಟ್ ಬಗ್ಗೆನೂ ಆಸಕ್ತಿಯಿದೆ.
ಐಪಿಎಲ್‌ನ 19ನೇ ಸೀಸನ್‌ನ ಮೊದಲ ಪಂದ್ಯ ನಿನ್ನೆ (ಮಾರ್ಚ್ 29) ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೀತು. ಈ ಪಂದ್ಯದ ವೀಕ್ಷಣೆಗೆ ವಿಕ್ಟರಿ ವೆಂಕಟೇಶ್ ಬಂದಿರಬಹುದೆಂದು ಅಭಿಮಾನಿಗಳು ಅಂದಾಜಿಸಿದ್ದಾರೆ. ಇದೇ ವೇಳೆ ಬೆಂಗಳೂರಿನ ಜನಪ್ರಿಯ ಹೋಟೆಲ್ ವಿದ್ಯಾರ್ಥಿ ಭವನ್‌ಗೆ ಭೇಟಿ ನೀಡಿರಬಹುದೆಂದು ಅವರ ಫ್ಯಾನ್ಸ್ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ವಿಕ್ಕರಿ ವೆಂಕಟೇಶ್ ವಿದ್ಯಾರ್ಥಿ ಭವನ್‌ಗೆ ಭೇಟಿ ಕೊಟ್ಟಿದ್ದಕ್ಕೆ ನೆಟ್ಟಿಗರು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. "ಲೆಜೆಂಡರಿ ಸ್ಥಳದಲ್ಲಿ ಲೆಜೆಂಡ್ ಅನ್ನು ನೋಡಿ ಖುಷಿ ಆಯ್ತು" ಅಂತ ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು "ಎಸ್‌ಆರ್‌ಎಚ್ ಅಥವಾ ಭಾರತದ ಯಾವುದೇ ಪ್ರಮುಖ ಪಂದ್ಯವಿರಲಿ, ಜಗತ್ತಿನ ಯಾವುದೇ ಮೂಲೆಯಲ್ಲಿ ಇದ್ದರೂ ವೆಂಕಿ ಮಾಮಾ ಅಲ್ಲಿಗೆ ಹಾಜರಾಗುತ್ತಾರೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗಂತ ಇಲ್ಲಿಗೆ ಬಂದ ಸೆಲೆಬ್ರೆಟಿಗಳಲ್ಲಿ ಇವರು ಮೊದಲೇನು ಅಲ್ಲ. ಈ ಹಿಂದೆ ಕನ್ನಡ ಸೇರಿದಂತೆ ಸಾಕಷ್ಟು ನಟರು ಇಲ್ಲಿಗೆ ಬಂದು ಹೀಗಿದ್ದಾರೆ.


Click it and Unblock the Notifications















