ಮುಸ್ಲಿಂ ಪತಿಗೆ ವಿಚ್ಛೇದನ.. 51ನೇ ವಯಸ್ಸಿನಲ್ಲಿ ಗ್ಲಾಮರ್ ಗೊಂಬೆಯಾದ ಊರ್ಮಿಳಾ; ಮಿನಿ ಸ್ಕರ್ಟ್‌ನಲ್ಲಿ ರಂಗ್ ರಂಗೀಲಾ!

ಒಂದು ಕಾಲದಲ್ಲಿಸ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ನಟಿ ಉರ್ಮಿಳಾ ಮತೋಂಡ್ಕರ್. 'ಸತ್ಯ', 'ರಂಗೀಲಾ', 'ಚೈನಾ ಗೇಟ್', 'ಏಕ್ ಹಸಿನಾ ತಿ' ಅಂತಹ ಸಿನಿಮಾಗಳು ಕಣ್ಮುಂದೆ ಬರುತ್ತವೆ. ಅದರಲ್ಲೂ ಇಂದಿಗೂ 'ರಂಗೀಲಾ' ಸಿನಿಮಾ ನೋಡಿ ರಂಗುರಂಗಾದ ಕನಸುಗಳನ್ನು ಕಾಣುವುದನ್ನು ಪಡ್ಡೆ ಹುಡುಗರು ಇನ್ನೂ ನಿಲ್ಲಿಸಿಲ್ಲ. ಆದ್ರೀಗ ಈ ನಟಿಗೆ ಬರೋಬ್ಬರು 51 ವರ್ಷ. ಆದ್ರೂ ಕಿಂಚಿತ್ತೂ ಸೌಂದರ್ಯ ಮಾತ್ರ ಕಮ್ಮಿಯಾಗಿಲ್ಲ. ಅದಕ್ಕೆ ಈ ಫೋಟೊಗಳೇ ಸಾಕ್ಷಿ.

ಬಾಲಿವುಡ್ ನಟಿ ಉರ್ಮಿಳಾ ಮಾತೋಂಡ್ಕರ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೊಸ ಫೋಟೋಶೂಟ್‌ನಿಂದ ಸಂಚಲನ ಸೃಷ್ಟಿಸಿದ್ದಾರೆ. ತಮ್ಮ 51 ನೇ ವಯಸ್ಸಿನಲ್ಲಿಯೂ ತಮ್ಮ ಗ್ಲಾಮರ್ ಲುಕ್‌ನಿಂದ ಅಸಂಖ್ಯಾತ ಅಭಿಮಾನಿಗಳಲ್ಲಿ ಹೊಸ ಆಸೆಯನ್ನು ಮೂಡಿಸಿದ್ದಾರೆ. ಊರ್ಮಿಳಾ ಶೇರ್ ಮಾಡಿರುವ ಇತ್ತೀಚಿನ ಫೋಟೋಗಳನ್ನು ನೋಡಿದ ಅಭಿಮಾನಿಗಳು ಮತ್ತೆ ಇವರನ್ನು ಸಿನಿಮಾಗಳಲ್ಲಿ ನೋಡಲು ಬಯಸುತ್ತಿರುವುದಾಗಿ ಆಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

Urmila Matondkar Stuns in Mini Skirt at 51 After Divorce Reminds Fans of Rangeela Days

ಊರ್ಮಿಳಾ ಮಾತೋಂಡ್ಕರ್ ನಟಿಯಾಗಿ ಗುರುತಿಸಿಕೊಂಡಿದ್ದು ಒಂದೆಡೆಯಾದರೆ, ಈ ನಟಿ ಫಿಟ್ನೆಸ್‌ನಿಂದಲೇ ಹೆಚ್ಚು ಗಮನ ಸೆಳೆದವರು. ತಮ್ಮ ವೃತ್ತಿ ಬದುಕಿನ ಉತ್ತುಂಗದಲ್ಲಿ ಇರುವಾಗಲೇ ಊರ್ಮಿಳಾ ಸ್ಲಿಮ್ ಅಂಡ್ ಫಿಟ್ ಆಗಿದ್ದರು. ಆ ಫಿಟ್ನೆಸ್ ಅನ್ನು ಅವರ ಹಲವು ಸಿನಿಮಾಗಳಲ್ಲಿ ನೋಡಬಹುದು. ಅದೇ ಫಿಟ್ನೆಸ್ ಅನ್ನು ಒಂದಿಗೂ ಹಾಗೇ ಕಾಪಾಡಿಕೊಂಡು ಬಂದಿದ್ದಾರೆ. ಅದಕ್ಕೆ ಊರ್ಮಿಳಾ ಶೇರ್‌ ಮಾಡಿಕೊಂಡಿರುವ ಈ ಫೋಟೊಗಳೇ ಸಾಕ್ಷಿ.

ಮಿನಿ ಸ್ಕರ್ಟ್‌ನಲ್ಲಿ ಮಿಂಚುತ್ತಿರುವ ಊರ್ಮಿಳಾ ಫೋಟೊಗಳನ್ನು ನೋಡುತ್ತಿದ್ದರು. ಈಕೆಯ ಸೌಂದರ್ಯಕ್ಕೂ ವಯಸ್ಸಿಗೂ ಸಂಬಂಧವೇ ಇಲ್ಲವೇನೋ ಎಂದೆನಿಸುತ್ತೆ. ಈ ಫೋಟೊಗಳಿಗೆ ನೆಟ್ಟಿಗರು ಕಮೆಂಟ್‌ಗಳೇ ಕಮ್ಮಿ ಮಾಡಿಲ್ಲ. "ಕ್ವೀನ್ ಯಾವಾಗಲೂ ಕ್ವೀನ್", "ಯಾವಾಗಲೂ ನೀವೇ ಗ್ಲಾಮರ್ ಪ್ರಪಂಚದ ಕ್ವೀನ್", ಅಂತೆಲ್ಲ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಮತ್ತೆ ಗ್ಲಾಮರ್‌ ಲುಕ್‌ನಲ್ಲಿ ಊರ್ಮಿಳಾರನ್ನು ನೋಡಿ ಕೆಲವರಂತೂ ಹಾರ್ಟ್ ಎಮೋಜಿಗಳನ್ನು ಕಳುಹಿಸುವುದಕ್ಕೆ ಶುರು ಮಾಡಿದ್ದಾರೆ.

ಉರ್ಮಿಳಾ ಕೇವಲ ಸಿನಿಮಾದಲ್ಲಷ್ಟೇ ಅಲ್ಲ ರಾಜಕೀಯದಲ್ಲೂ ಮಿಂಚಿದ್ದರು. ಆದರೆ, ಸಿನಿಮಾ ಸಿಕ್ಕಷ್ಟು ಯಶಸ್ಸು ಅವರಿಗೆ ರಾಜಕೀಯದಲ್ಲಿ ಒಲಿದು ಬರಲಿಲ್ಲ. ಹಾಗೇ ಅವರ ವೈವಾಹಿಕ ಜೀವನ ಕೂಡ ಅಷ್ಟೊಂದು ಸುಗಮವಾಗಿಲ್ಲ. ಪತಿ ಮೋಹಸಿನ್ ಅಖ್ತರ್ ಮಿರ್ ಜೊತೆ 2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2024ರಲ್ಲಿ ಉರ್ಮಿಳಾ ಮಾತೋಂಡ್ಕರ್ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಮದುವೆಯಾದ 8 ವರ್ಷಗಳ ಬೇರೆಯಾಗುವುದಕ್ಕೆ ನಿರ್ಧರಿಸಿದ್ದರು. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಮುಂದೇನಾಯ್ತು? ಅನ್ನೋ ಬಗ್ಗೆ ಮಾಹಿತಿ ನೀಡಿಲ್ಲ.

ಬಾಲಿವುಡ್ ನಟಿ ಉರ್ಮಿಳಾ ಮಾತೋಂಡ್ಕರ್ ಪ್ರಸ್ತುತ, ಅವರು ತಮ್ಮ ಫಿಟ್‌ನೆಸ್ ಮತ್ತು ಬಾಲಿವುಡ್ ಕಾರ್ಯಕ್ರಮಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅವರ 'ರಂಗೀಲಾ ಗರ್ಲ್' ಎಂಬ ಅಡ್ಡ ಹೆಸರು ಇದೀಗ ಮತ್ತೆ ಸುದ್ದಿಯಲ್ಲಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಆಕ್ಟಿವ್ ಆಗಿರುವ ಉರ್ಮಿಳಾ ಮಾತೋಂಡ್ಕರ್ ಇನ್‌ಸ್ಟಾಗ್ರಾಮ್‌ನಲ್ಲಿ 1 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ರಾಜಕಾರಣಿ, ನಟಿ ಮತ್ತು ಸಾಮಾಜಿಕ ಕಾರ್ಯಕರ್ತೆ ಆಗಿದ್ದು, ತಮ್ಮ ದಿನನಿತ್ಯದ ಅಪ್‌ಡೇಟ್‌ಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಅವರು ಆಗಾಗ್ಗೆ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ. ತಮ್ಮ ಫಿಟ್‌ನೆಸ್ ಕಡೆಗೆ ಹೆಚ್ಚು ಗಮನ ಹರಿಸುತ್ತಾರೆ.

ಉರ್ಮಿಳಾ ಬಾಲ್ಯ ಕಲಾವಿದೆಯಾಗಿ 1977 ರ 'ಕರ್ಮ' ಚಿತ್ರದೊಂದಿಗೆ ತಮ್ಮ ವೃತ್ತಿ ಬದುಕನ್ನು ಆರಂಭಿಸಿದರು. 1983ರ 'ಮಾಸೂಮ್' ಸಿನಿಮಾದ ನಂತರ ಅವರನ್ನು ಬಾಲಿವುಡ್ ಮಂದಿ ಗುರುತಿಸುವುದಕ್ಕೆ ಆರಂಭಿಸಿದ್ದರು. ನಾಯಕಿಯಾಗಿ 'ನರಸಿಂಹ' ಸಿನಿಮಾದ ಮೂಲಕ ಮಿಂಚುವುದಕ್ಕೆ ಶುರು ಮಾಡಿದರು. ಆದರೆ 1995 ರಲ್ಲಿ ತೆರೆಕಂಡ 'ರಂಗೀಲಾ' ಸಿನಿಮಾ ಅವರಿಗೆ ಸ್ಟಾರ್ ಪಟ್ಟವನ್ನು ತಂದುಕೊಟ್ಟಿತ್ತು.

More from Filmibeat

Read more about: urmila actress relationship
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X