ಇಬ್ಬರು ಮಕ್ಕಳ ಮೇಲೆ ಕಾರು ಹರಿಸಿದ ಮಲಯಾಳಂ ನಟ

ಆಟೋ ಮತ್ತು ಕಾರಿನ ನಡುವೆ ಸಂಭವಿಸಿದ ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ಅಡಿಮೇಲಾಗಿ ಮಗುಚಿ ಬಿದ್ದಿವೆ. ಥಿಲಕನ್ ಕಾರು ಅತಿವೇಗವಾಗಿ ಪ್ರಯಾಣಿಸುತ್ತಿದ್ದದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಫಿರೋಜ್ ಖಾನ್ ಆಟೋವನ್ನು ಚಾಲು ಮಾಡುತ್ತಿದ್ದಾಗ ಆಕೆಯ ಪತ್ನಿ ಜಸೀನಾ ತನ್ನ ಇಬ್ಬರು ಮಕ್ಕಳನ್ನು ಹಿಂಬದಿಯಲ್ಲಿ ಕುಳ್ಳರಿಸಿಕೊಂಡಿದ್ದರು.
ಅಪಘಾತ ಸಂಭವಿಸಿದ ಕೂಡಲೆ ಸ್ಥಳೀಯರು ಜಮಾಯಿಸಿ ಆಟೋ ರಿಕ್ಷಾದಲ್ಲಿನ ಮಕ್ಕಳನ್ನು ಹೊರತೆಗೆದು ಕೂಡಲೆ ಆಸ್ಪತ್ರೆಗೆ ಸಾಗಿಸಿದರಾದರೂ, ಅಷ್ಟರಲ್ಲಾಗಲೆ ಕಂದಮ್ಮಗಳ ಜೀವ ಹಾರಿಹೋಗಿತ್ತು. ಅಪಘಾತ ಸಂಭವಿಸಿದ ಬಳಿಕ ಥಿಲಕನ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡು ಅವರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸುಸ್ಥಿತಿಯಲ್ಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕಾರಿನಲ್ಲಿದ್ದ ಥಿಲಕನ್ ಅವರ ಸಹಾಯಕಿ ಸವಿತಾ ಕೂಡ ಗಾಯಗೊಂಡಿದ್ದಾರೆ. ಇವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಯಾಣಿಸುತ್ತಿದ್ದರು. ವೇಗವಾಗಿ ಹಾಗೂ ಬೇಕಾಬಿಟ್ಟಿ ಕಾರು ಚಾಲೂ ಮಾಡಿದ್ದಕ್ಕಾಗಿ ಪಂಡಿಕ್ಕಾಡ್ ಪೊಲೀಸರು ಥಿಲಕನ್ ಮೇಲೆ ಕೇಸನ್ನು ದಾಖಲಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಥಿಲಕನ್ ಆನಾರೋಗ್ಯದಿಂದ ಬಳಲುತ್ತಿರುವುದಾಗಿ ಸುದ್ದಿ.


Click it and Unblock the Notifications











