ಅತ್ತೆ ಪಾತ್ರದಲ್ಲಿ ಕಾಲು ಮುರಿದು ಕೊಂಡ ತಾರೆ ಖುಷ್ಬು
ಜನಪ್ರಿಯ ಸಿನಿಮಾ ತಾರೆ ಖುಷ್ಬು ಅವರು ಚಿತ್ರೀಕರಣದಲ್ಲಿ ಕಾಲು ಮುರಿದುಕೊಂಡ ಘಟನೆ ಕೊಚ್ಚಿಯಲ್ಲಿ ನಡೆದಿದೆ. ಮಲಯಾಳಂ ಚಿತ್ರ 'ಮಿ.ಮರುಮಗನ್' ಚಿತ್ರೀಕರಣ ವೇಳೆ ಈ ಘಟನೆ ನಡೆದಿದೆ.
ಚಿತ್ರೀಕರಣಕ್ಕಾಗಿ ಹಾಕಾಲಾಗಿದ್ದ ಸ್ಟೇರ್‌ಕೇಸ್ ಸೆಟ್ ಮೇಲೆ ಹತ್ತುತ್ತಿರಬೇಕಾದರೆ ಖುಷ್ಬು ಕಾಲು ಜಾರಿ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಅವರ ಎಡಗಾಲಿನ ಮೂಳೆ ಮುರಿದಿದೆ ಎಂದು ಮೂಲಗಳು ತಿಳಿಸಿವೆ. ಕೂಡಲೆ ಖುಷ್ಬು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಪರೀಕ್ಷಿಸಿದ ವೈದ್ಯರು ಹೆಚ್ಚಿಗೇನು ಗಾಬರಿ ಬೀಳುವಂತಹದ್ದೇನು ಇಲ್ಲ. ಎರಡು ವಾರ ರೆಸ್ಟ್ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಈ ಅಹಿತರಕರ ಘಟನೆಯಿಂದ ಚಿತ್ರೀಕರಣವನ್ನು ರದ್ದುಪಡಿಸಲಾಯಿತು. ಈ ಚಿತ್ರದಲ್ಲಿ ಖುಷ್ಬು ಅವರದು ಅತ್ತೆ ಪಾತ್ರವಂತೆ. (ಏಜೆನ್ಸೀಸ್)
More from Filmibeat
English summary
Renowned actress Khushboo suffered a severe injury during the shooting of her Malayalam film Mr. Marumagan in Kochi onFriday. Sources said that the actress sustained a fracture on her left leg when a staircase set (erected for the movie) collapsed and she had a fall.


Click it and Unblock the Notifications











