For Quick Alerts
  ALLOW NOTIFICATIONS  
  For Daily Alerts

  ಚಿತ್ರೀಕರಣ ವೇಳೆ ನಟ ಫಹಾದ್ ಫಾಸಿಲ್‌ ಗೆ ಗಾಯ, ಶಸ್ತ್ರಚಿಕಿತ್ಸೆ

  |

  ಮಲಯಾಳಂ ನ ಖ್ಯಾತ ನಟ ಫಹಾದ್ ಫಾಸಿಲ್‌ಗೆ ಚಿತ್ರೀಕರಣದ ವೇಳೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

  ಕೊಚ್ಚಿಯಲ್ಲಿ 'ಮಲಯಾಳಂಕುಂಜು' ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರೀಕರಣದಲ್ಲಿ ಭಾಗವಹಿಸಿದ್ದ ನಾಯಕ ನಟ ಫಹಾದ್ ಫಾಸಿಲ್ ಆಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಕೆಳಗೆ ಬಿದ್ದು ಮುಖಕ್ಕೆ ಗಾಯ ಮಾಡಿಕೊಂಡಿದ್ದಾರೆ.

  'ದೃಶ್ಯಂ 2' ಸಿನಿಮಾಕ್ಕೆ ಆದ ಖರ್ಚೆಷ್ಟು, ಗಳಿಸಿದ ಲಾಭ ಎಷ್ಟು?

  ಫಹಾದ್ ಅವರನ್ನು ಕೂಡಲೇ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಫಹಾದ್‌ಗೆ ಸಣ್ಣ ಆಪರೇಷನ್ ಮಾಡಲಾಗಿದೆ. ಫಹಾದ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಫಹಾದ್ ಅವರು ಈಗಾಗಲೇ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಸಹ ಆಗಿದ್ದು, ಮನೆಯಲ್ಲಿ ಕೆಲವು ದಿನಗಳ ಕಾಲ ಬೆಡ್ ರೆಸ್ಟ್ ತೆಗೆದುಕೊಳ್ಳಲಿದ್ದಾರೆ.

  'ಮಲಯಾಳಂಕುಂಜು' ಸಿನಿಮಾವನ್ನು ಫಹಾದ್ ಫಾಸಿಲ್ ಅವರ ತಂದೆ ಫಾಸಿಲ್ ಅವರೇ ನಿರ್ದೇಶಿಸುತ್ತಿದ್ದಾರೆ. ತಮ್ಮ ತಂದೆಯ ನಿರ್ದೇಶನದಲ್ಲಿ ಫಹಾದ್ ನಟಿಸುತ್ತಿರುವ ಎರಡನೇ ಸಿನಿಮಾ ಇದು. ಇಬ್ಬರ ನಡುವೆ ತುಸು ಭಿನ್ನಾಭಿಪ್ರಾಯಗಳು ಬಂದ ಕಾರಣ ಒಬ್ಬರೊಟ್ಟಿಗೊಬ್ಬರು ಕೆಲಸ ಮಾಡಿರಲಿಲ್ಲ. ಫಾಸಿಲ್ ಅವರು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರು.

  ಫಹಾದ್ ಫಾಸಿಲ್ ಮಲಯಾಳಂ ನ ಅತ್ಯಂತ ಪ್ರತಿಭಾವಂತ ನಟ, 'ಟ್ರಾನ್ಸ್' 'ಕುಂಬಳಂಗಿ ನೈಟ್ಸ್' ಸಿನಿಮಾಗಳಲ್ಲಿ ಫಾಸಿಲ್ ಅವರ ನಟನೆಗೆ ಭಾರಿ ಪ್ರಶಂಸೆ ಬಂದಿದೆ. ಈ ಬಾರಿ ರಾಷ್ಟ್ರಪ್ರಶಸ್ತಿ ಫಹಾದ್ ಗೆ ಬರುವ ನಿರೀಕ್ಷೆ ಸಹ ಇದೆ.

  ದೃಶ್ಯಂ 2 ಸಿನಿಮಾ ಮೆಚ್ಚಿಕೊಂಡ ಕ್ರಿಕೆಟರ್ R ಅಶ್ವಿನ್ | Filmibeat Kannada

  'ಮಲಯಾಳಂಕುಂಜು' ಸೇರಿಸಿ ಏಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಫಹಾದ್ ಫಾಸಿಲ್. 'ಮಾಲಿಕ್', 'ಇರುಲ್', 'ತಂಕಂ', 'ಜೋಜಿ', 'ಪಾಟ್ಟು', 'ಪಾಚ್ಚುವಂ ಅಲ್ಬುದ ವಿಲಕ್ಕುಂ' ಸಿನಿಮಾಗಳಲ್ಲಿ ಫಹಾದ್ ಫಾಸಿಲ್ ನಟಿಸುತ್ತಿದ್ದಾರೆ.

  English summary
  Actor Fahad Fazil injured during shoot of movie Malayalakunju in Kochi. He undergone minor surgery and now taking bed rest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X