ಮಲಯಾಳಂ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಹೊಸ ಟ್ವಿಸ್ಟ್: ದಿಲೀಪ್ ಸಹೋದರನಿಂದ ವಿಡಿಯೋ?

ಮಲಯಾಳಂನ ಜನಪ್ರಿಯ ನಟಿಯನ್ನುಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ ದಿಲೀಪ್ ಕುಮಾರ್ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. 2017 ರಿಂದ ಈ ಪ್ರಕರಣದಲ್ಲಿ ಪ್ರತಿ ಬಾರಿಯೂ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಇದೆ.

ಕಳೆದ ಕೆಲವು ತಿಂಗಳುಗಳಲ್ಲಿ ನಡೆದ ತನಿಖೆಯಲ್ಲಿ ಸಿಕ್ಕಿರುವ ಪುರಾವೆಗಳ ಆಧಾರದ ಮೇಲೆ ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು ಪ್ರಾಸಿಕ್ಯೂಷನ್ ವಾದ ಮಂಡಿಸಿತ್ತು. ಇದೇ ವೇಳೆ ವಿಚಾರಣೆ ಪೂರ್ಣಗೊಳಿಸಲು ಹೆಚ್ಚಿನ ಕಾಲಾವಕಾಶ ನೀಡುವಂತೆ ಹೈಕೋರ್ಟ್‌ಗೆ ಮನವಿ ಕೂಡ ಮಾಡಲಾಗಿತ್ತು. ಈಗ ಈ ಪ್ರಕರಣದಲ್ಲಿ ಮತ್ತೊಂದು ಆತಂಕಕಾರಿ ವಿಷಯ ಹೊರಬಿದ್ದಿದೆ.

ನಟಿಯನ್ನು ಅಪಹರಿಸಿ ವಿಡಿಯೋ ರೆಕಾರ್ಡ್

ಮಲಯಾಳಂ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡುವಾಗ ವಿಡಿಯೋ ರೆಕಾರ್ಡ್ ಮಾಡಲಾಗಿತ್ತು ಎನ್ನಲಾಗಿದೆ. ತನಿಖೆಯ ವೇಳೆ ಸಂಗ್ರಹಿಸಲಾದ ಡಿಜಿಟಲ್ ಡೇಟಾದಲ್ಲಿ ಆರೋಪ ಎದುರಿಸುತ್ತಿರುವ ನಟ ದಿಲೀಪ್ ಅವರ ಸಹೋದರ ಅನೂಪ್ ಫೋನ್‌ನಿಂದ ಕೆಲವು ಫೋಟೊಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Actress Assault Case: Dileep likely to have original Copies Of Attack Says Crime Branch

ನಟಿಯ ವಿರುದ್ಧ ಲೈಂಗಿಕ ಕಿರುಕುಳದ ವೀಡಿಯೊಗಳಿವೆ ಮತ್ತು ದೃಶ್ಯದ ಸಾಕ್ಷಿಗಾಗಿ ಫೋಟೊಗಳನ್ನು ಸಹ ತೆಗೆದುಕೊಳ್ಳಲಾಗಿದೆ ಎನ್ನಲಾಗಿತ್ತಿದೆ. ಈ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿಯೇ ಅನೂಪ್ ಮೊಬೈಲ್‌ನಿಂದ ವಿಡಿಯೋ ರೆಕಾರ್ಡ್ ಮಾಡಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಈ ದೃಶ್ಯಗಳ ನಕಲು ದಿಲೀಪ್ ಬಳಿ ಇರಬಹುದು ದಿಲೀಪ್ ಬಳಿ ನಕಲು ಇರಬಹುದು ಪ್ರಕರಣದ ತನಿಖೆಯ ವೇಳೆ ದೃಶ್ಯಗಳನ್ನು ಅನೂಪ್ ಮೊಬೈಲ್‌ನಿಂದಲೇ ರಿಕವರಿ ಮಾಡಿಕೊಳ್ಳಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿಕೆ ನೋಡಿದ್ದಾರೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಲೀಪ್ ಕುಮಾರ್ ಬಳಿಯೂ ದಾಲಿ ಮಾಡಿದ ವಿಡಿಯೋ ಇರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

Actress Assault Case: Dileep likely to have original Copies Of Attack Says Crime Branch

ಮಲಯಾಳಂ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಬಗ್ಗೆ ತನಿಖೆಯು 2017 ರಿಂದ ನಡೆಯುತ್ತಿದೆ. ಈ ತನಿಖೆಯಲ್ಲಿ ನಾನಾ ಸಾಕ್ಷ್ಯಗಳು ಹೊರಬೀಳುತ್ತಲೇ ಇವೆ. ದಿಲೀಪ್ ಬಳಿಯೂ ಮೆಮೊರಿ ಕಾರ್ಡ್ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಫೊರೆನ್ಸಿಕ್ ಎಕ್ಸ್‌ಪರ್ಟ್ಸ್, ಇದೂವರೆಗೂ ದಿಲೀಪ್ ಹಾಗೂ ಅವರ ಸಂಬಂಧಿಕರಿಗೆ ಸಂಬಂಧಿಸಿದ 6 ಫೋನ್‌ಗಳನ್ನು ವಶಕ್ಕೆ ಪಡೆದಿದ್ದರು. ಇವುಗಳಿಂದ ಸುಮಾರು 11.161 ವಿಡಿಯೋ, 11238 ಆಡಿಯೋ ತುಣುಕು ಹಾಗೂ 2 ಲಕ್ಷ ಪೋಟೊಗಳು 1597 ಡಾಕ್ಯೂಮೆಂಟ್‌ಗಳನ್ನು ಸಂಗ್ರಹಿಸಲಾಗಿದೆ. ದಿಲೀಪ್ ಮೊಬೈಲ್‌ನಿಂದ ಹೋದ ಕರೆಗಳ ತುಣುಕುಗಳೇ 200 ಗಂಟೆಗಳಿಷ್ಟಿದೆ ಎನ್ನಲಾಗಿದೆ.

More from Filmibeat

English summary
Malayalam Actress Assault Case: Dileep likely to have original Copies Of Attack Says Crime Branch, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X