ಧೂಮಪಾನ ಮಾಡುವ ಹೀರೋಗೆ ಲಿಪ್‌ಲಾಕ್ ಮಾಡಿದ ಅನುಭವ ಹಂಚಿಕೊಂಡ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ
ಕಳೆದ ವರ್ಷ ಮಲಯಾಳಂ ಚಿತ್ರರಂಗ ಒಳ್ಳೊಳ್ಳೆ ಸಿನಿಮಾಗಳನ್ನು ನೀಡಿತ್ತು. ಅತೀ ಹೆಚ್ಚು ಯಶಸ್ಸು ಕಂಡ ಚಿತ್ರರಂಗ ಅಂತ ಸಾಬೀತಾಗಿತ್ತು. 2024ರ ಕೊನೆಯಲ್ಲಿ ಇದೇ ಚಿತ್ರರಂಗ ಸ್ಟಾರ್ ನಟರಿಲ್ಲದ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಅದುವೇ 'ರೈಫಲ್ ಕ್ಲಬ್'. 2024ರ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಬಾಕ್ಸಾಫೀಸ್ ಅನ್ನು ದೋಚಿತ್ತು. ಸ್ಟಾರ್ ಸಿನಿಮಾಗಳಿಗೆ ಸೆಟ್ಟು ಹೊಡೆದು ಗೆದ್ದಿತ್ತು. ಹಾಗೇ ಈ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ವೇಳೆ ಬರುವ ಲಿಪ್‌ಲಾಕ್ ಸೀನ್ ಸಂಚಲನ ಸೃಷ್ಟಿಸಿತ್ತು.
ಈ ಲಿಪ್ ಲಾಕ್ ಸೀನ್ ಬಗ್ಗೆ ತಮಗಾದ ಅನುಭವನ್ನು ನಟಿ ಸುರಭಿ ಲಕ್ಷ್ಮಿ ಇತ್ತೀಚೆಗೆ ತಮ್ಮ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆ ಸಂದರ್ಶನ ಕೂಡ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನಿರಂತರವಾಗಿ ಧೂಮಪಾನ ಮಾಡುವ ನಟನೊಂದಿಗೆ ಲಿಪ್‌ಲಾಕ್ ಸೀನ್‌ನಲ್ಲಿ ನಟಿಸುವ ಅನುಭವ ಹೇಗಿತ್ತು? ಎನ್ನುವುದನ್ನು ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಮಲಯಾಳಂ ಸಿನಿಮಾ 'ರೈಫಲ್ ಕ್ಲಬ್' ಸಿನಿಮಾದಲ್ಲಿ ಈ ಸೀನ್‌ನಲ್ಲಿ ನಟಿಸಿದ್ದು ಸುರಭಿ ಲಕ್ಷ್ಮಿ. ಇವರ ಪತಿಯಾಗಿ ನಟಿಸುತ್ತಿದ್ದ ಸಜೀವ್ ಕುಮಾರ್‌ಗೆ ಈ ನಟಿ ಕಿಸ್ ಮಾಡುವ ದೃಶ್ಯವಿತ್ತು. ಚಿಕ್ಕದೊಂದು ಕಿಸ್ಸಿಂಗ್ ಸೀನ್ ಎಂದುಕೊಂಡಿದ್ದ ನಟಿಗೆ ಲಿಪ್‌ಲಾಕ್ ದೃಶ್ಯದಲ್ಲಿ ನಟಿಸಬೇಕು ಅಂದಾಗ ತನ್ನ ಸಹ ನಟನಿಗೆ ಏನು ಹೇಳಿದ್ದರು? ಆ ಸೀನ್ ಶೂಟ್ ಮಾಡುವಾಗ ಇಡೀ ಚಿತ್ರತಂಡವನ್ನು ಕರೆದು ನಿಲ್ಲಿಸಿದ್ದು ಏಕೆ? ಅನ್ನುವುದನ್ನು ರಿವೀಲ್ ಮಾಡಿದ್ದಾರೆ.
'ರೈಫಲ್ ಕ್ಲಬ್' ನಟಿ ಸುರಭಿ ಲಕ್ಷ್ಮಿ ಇತ್ತೀಚೆಗೆ ಕ್ಯೂ ಸ್ಟುಡಿಯೋ ಅನ್ನುವ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಇದರಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಫೇಮಸ್ ಆದ ಈ ಲಿಪ್‌ಲಾಕ್ ಸೀನ್ ಶೂಟ್ ಮಾಡುವುದಕ್ಕೂ ಮುನ್ನ ನಡೆದ ಘಟನೆಯನ್ನು ವಿವರಿಸಿದ್ದಾರೆ. ಮೊದಲು ಇದೊಂದು ಸಿಂಪಲ್ ಲಿಪ್‌ಲಾಕ್ ದೃಶ್ಯ ಎಂದುಕೊಂಡಿದ್ದರು. ಆದರೆ, ಪೂರ್ಣ ಪ್ರಮಾಣದ ಲಿಪ್‌ಲಾಕ್ ಸೀನ್ ಅನ್ನೋದು ಸೆಟ್ಟಿಗೆ ಹೋದ್ಮೇಲೆ ಗೊತ್ತಾಗಿತ್ತು. ಕೂಡಲೇ ತನ್ನ ಪತಿಯಾಗಿ ನಟಿಸುತ್ತಿದ್ದ ಸಜೀವ್ ಕುಮಾರ್ ಬಳಿ ಹೋಗಿ ಈ ದೃಶ್ಯಕ್ಕೆ ಅವರ ಸಮ್ಮಿತಿ ಇದೆಯಾ? ಎಂದು ಕೇಳಿದ್ದರಂತೆ. ಆ ನಟ ಕೂಡ ತನಗೆ ಏನೂ ಸಮಸ್ಯೆ ಇಲ್ಲ ಎಂದಾಗ ಲಿಪ್ ಲಾಕ್ ಸೀನ್‌ಗೆ ಮುಂದಾಗಿದ್ದರು.

ಆದರೆ, ಇಲ್ಲೊಂದು ಸಮಸ್ಯೆ ಇತ್ತು. ಈ ನಟಿಯ ಪತಿಯಾಗಿ ನಟಿಸುತ್ತಿದ್ದ ಸಜೀವ್ ಕುಮಾರ್ ಸಿಕ್ಕಾಪಟ್ಟೆ ಧೂಮಪಾನ ಮಾಡುತ್ತಿದ್ದರು. ಹೀಗಾಗಿ ಲಿಪ್‌ಲಾಕ್ ಸೀನ್ ಮಾಡುವುದಕ್ಕೂ ಮುನ್ನ ಸಜೀವ್ ಕುಮಾರ್‌ಗೆ ಹಲ್ಲ ಉಜ್ಜಿಕೊಂಡು ಬರುವಂತೆ ಹೇಳಿದ್ದರಂತೆ. ಹಾಗೇ ಈಕೆ ಕೂಡ ಫುಡ್ ಡಿಪಾರ್ಟ್‌ಮೆಂಟ್‌ನಿಂದ ಏಲಕ್ಕಿಯನ್ನು ತರಿಸಿಕೊಂಡು ಅಗೆದಿದ್ದ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಸುರಭಿ ಲಕ್ಷ್ಮಿ ಹೇಳಿಕೊಂಡಿದ್ದಾರೆ.
ಸಾಮಾನ್ಯವಾಗಿ ಇಂತಹ ದೃಶ್ಯಗಳನ್ನು ತೆಗೆಯುವಾಗ ಸೆಟ್ಟಿನಲ್ಲಿ ಕೆಲವೇ ಜನರು ಇರುತ್ತಾರೆ. ಆದರೆ, ಇಲ್ಲಿ ನಟಿ ಸೆಟ್ಟಿನಲ್ಲಿ ಇರುವವರೆಲ್ಲರನ್ನೂ ಕರೆದಿದ್ದರು. ಇಂತಹ ಗಂಭೀರ ದೃಶ್ಯ ಚಿತ್ರ ನಡೆಯುವಾಗ ತಮಾಷೆ ಇರಲಿ ಎಂಬುದು ಅವರ ಉದ್ದೇಶವಾಗಿತ್ತಂತೆ. ಇದೇ ವೇಳೆ ಅದಾಗಲೇ ಲಿಪ್‌ಲಾಕ್ ದೃಶ್ಯದಲ್ಲಿ ನಟಿಸಿ ಅನುಭವವಿದ್ದ ದರ್ಶನಾ ಅವರ ಬಳಿ ಸಹಾಯ ಕೇಳುವುದಕ್ಕೆ ಯತ್ನಿಸಿದ್ದರು. ಆ ವೇಳೆ ಆ ನಟಿ ಸೆಟ್ಟಿನಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ.
ಇನ್ನು ರೈಫಲ್ ಕ್ಲಬ್ ಸಿನಿಮಾವನ್ನು ಆಶಿಕ್ ಅಬು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ದೊಡ್ಡ ಸ್ಟಾರ್ ಕಾಸ್ಟ್ ಇರಲಿಲ್ಲ. ಹೀಗಿದ್ದರೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಕೇವಲ 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಸಿನಿಮಾ ಬಾಕ್ಸಾಪೀಸ್‌ನಲ್ಲಿ ಬರೋಬ್ಬರಿ 30 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ಸಿನಿಮಾ ರಿಲೀಸ್ ಆದ ವೇಳೆನೇ ಮೋಹನ್‌ಲಾಲ್ ಸಿನಿಮಾ ರಿಲೀಸ್ ಆಗಿದ್ದರೂ, ಆ ಸಿನಿಮಾಗಳಿಗೆಲ್ಲ ಟಕ್ಕರ್ ಕೊಟ್ಟು ಬಾಕ್ಸಾಫೀಸ್‌ನಲ್ಲಿ ಗೆದ್ದಿತ್ತು.


Click it and Unblock the Notifications











