"ಕತ್ತಲೆ ರೂಮಿಗೆ ಕರೆದ.. ಬಳೆಗಳ ಜೊತೆ ಆಟ ಆಡಿದ.. ಕತ್ತು, ಭುಜ ಮುಟ್ಟಿದ";ನಿರ್ದೇಶಕ ರಂಜಿತ್ ವಿರುದ್ದ ಗಂಭೀರ ಆರೋಪ
ಹೇಮಾ ಕಮಿಟಿ ವರದಿ ಬಳಿಕ ಮಲಯಾಳಂ ಚಿತ್ರರಂಗ ಮುಜುಗರವನ್ನು ಎದುರಿಸುತ್ತಿದೆ. ಒಂದೊಂದೇ ಪ್ರಕರಣಗಳು ಹೊರಬರುತ್ತಿವೆ. ಈಗ ಮಲಯಾಳಂ ಚಿತ್ರರಂಗದ ಜನಪ್ರಿಯ ನಿರ್ದೇಶಕ ಹಾಗೂ ಕೇರಳ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ರಂಜಿತ್ ವಿರುದ್ಧ ಬೆಂಗಾಲಿ ನಟಿ ಗಂಭೀರ ಆರೋಪ ಮಾಡಿದ್ದಾರೆ. ಸಿನಿಮಾಗೆ ಅವಕಾಶ ಕೊಡುವುದಾಗಿ ಕರೆದು ತನ್ನೊಂದು ಕೆಟ್ಟದಾಗಿ ವರ್ತಿಸಿದ್ದರು ಎಂದು ಹೇಳಿಕೆ ಕೊಟ್ಟಿದ್ದಾರೆ.
ಮಲಯಾಳಂ ನಿರ್ದೇಶಕ ರಂಜಿತ್ ವಿರುದ್ಧ ಕೆಟ್ಟದಾಗಿ ವರ್ತಿಸಿದ ಗಂಭೀರ ಆರೋಪ ಮಾಡಿದ ಬೆಂಗಾಲಿ ನಟಿ ಶ್ರೀಲೇಖಾ ಮಿತ್ರಾ. 2009ರಲ್ಲಿ ರಂಜಿತ್ ನಿರ್ದೇಶಿಸುತ್ತಿದ್ದ 'ಪೆಲೆರಿ ಮಾಣಿಕ್ಯಂ: ಓರು ಪತಿರಕೋಲಪಥಕತಿಂತೆ ಕಥಾ'ದಲ್ಲಿ ನಟಿಸಬೇಕಿತ್ತು. ಆದರೆ, ನಿರ್ದೇಶಕ ತನ್ನ ರೂಮಿಗೆ ಕರೆಸಿಕೊಂಡು ಕೆಟ್ಟದಾಗಿ ವರ್ತಿಸಿದ್ದರು. ಅದನ್ನು ವಿರೋಧಿಸಿದ್ದಕ್ಕೆ ಸಿನಿಮಾದಿಂದ ಕೈ ಬಿಡಲಾಯಿತು ಎಂದು ಹೇಳಿಕೊಂಡಿದ್ದಾರೆ.

ನಿನ್ನೆ (ಆಗಸ್ಟ್ 23)ರಂದು ಮಾಧ್ಯಮಗಳಿಗೆ ಈ ಬೆಂಗಾಲಿ ನಟಿ ಪ್ರತಿಕ್ರಿಯೆ ನೀಡುತ್ತಾ, ಮಲಯಾಳಂ ನಿರ್ದೇಶಕ ರಂಜಿತ್ ವಿರುದ್ಧ ಈ ಆರೋಪ ಮಾಡಿದ್ದಾರೆ. ಬೆಂಗಾಲಿ ನಟಿ ಮಾಡಿದ ಆರೋಪಗಳ ಪಟ್ಟಿಯನ್ನು ನೋಡುವುದಾದರೆ,
'ಪೆಲೆರಿ ಮಾಣಿಕ್ಯಂ: ಓರು ಪತಿರಕೋಲಪಥಕತಿಂತೆ ಕಥಾ' ಸಿನಿಮಾಗೆ ಆಫರ್ ಬರುವುದಕ್ಕೂ ಮುನ್ನ ಶ್ಯಾಮ್ ಪ್ರಸಾದ್ ನಿರ್ದೇಶಿಸಿದ್ದ 'ಅಕಲೆ'ಯಲ್ಲಿ ನಟಿಸಿದ್ದರು. ಇದರಲ್ಲಿ ಚಿಕ್ಕದೊಂದು ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರವನ್ನು ನೋಡಿ ರಂಜಿತ್ 'ಪೆಲೆರಿ ಮಾಣಿಕ್ಯಂ: ಓರು ಪತಿರಕೋಲಪಥಕತಿಂತೆ ಕಥಾ' ಗೆ ಆಫರ್ ಕೊಟ್ಟಿದ್ದರು. ಅಲ್ಲದೆ ಶ್ರೀಲೇಖಾ ಮಿತ್ರಾ ಅಡಿಷನ್ ಕೊಟ್ಟ ಬಳಿಕ ಅವರನ್ನು ಕೊಚ್ಚಿಗೆ ಕರೆಸಿಕೊಂಡಿದ್ದರೆಂದು ಮಾಧ್ಯಮಗಳಿಗೆ ಹೇಳಿಕೊಂಡಿದ್ದಾರೆ.
"ಬೆಳಗ್ಗೆ ನಿರ್ದೇಶಕರಿಗೆ ಫೋನ್ ಮಾಡಿದ್ದೆ. ಫೋಟೋಶೂಟ್ ಕೂಡ ನಡೀತು. ಆ ನಿರ್ದೇಶಕರ ಹೆಸರು ರಂಜಿತ್. ಆ ಸಿನಿಮಾ ಪೆಲೆರಿ ಮಾಣಿಕ್ಯಂ: ಓರು ಪತಿರಕೋಲಪಥಕತಿಂತೆ ಕಥಾ. ಆ ಸಿನಿಮಾದಲ್ಲಿ ಮಮ್ಮುಟ್ಟಿ ಜೊತೆ ನಟಿಸುವುದು ನನಗೆ ದೊಡ್ಡ ಡೀಲ್ ಆಗಿತ್ತು. ನನಗೂ ದಕ್ಷಿಣ ಭಾರತದ ಸಿನಿಮಾಗಳು ಇಷ್ಟ ಆಗಿದ್ದವು. ಅದರಲ್ಲೂ ಮಲಯಾಳಂ ಚಿತ್ರರಂಗದ ಮೇಲೆ ದೊಡ್ಡ ಹೋಪ್ ಇಟ್ಟುಕೊಂಡಿದ್ದೆ" ಎಂದು ಶ್ರೀಲೇಖಾ ಮಿತ್ರಾ ಹೇಳಿದ್ದಾರೆ.

ಬೆಂಗಾಲಿ ನಟಿ ಶ್ರೀಲೇಖಾ ಮಿತ್ರಾ ಆರೋಪ ಮಾಡಿದಂತೆ, ಮಲಯಾಳಂ ನಿರ್ದೇಶಕ ರಂಜಿತ್ ಅವರ ಅಪಾರ್ಟ್‌ಮೆಂಟ್‌ಗೆ ಕರೆಸಿಕೊಂಡಿದ್ದರು. ಅಷ್ಟೊತ್ತಿಗಾಗಲೇ ಸಾಕಷ್ಟು ಮಂದಿ ಅಲ್ಲಿ ಇದ್ದರು. ಫೋನ್‌ನಲ್ಲಿ ಈಕೆ ನಟಿಸಿದ ಹಿಂದಿನ ಸಿನಿಮಾದ ಛಾಯಾಗ್ರಾಹಕರೊಂದಿಗೆ ಫೋನ್‌ನಲ್ಲಿ ಮಾತಾಡುತ್ತಿದ್ದರು. ಆ ವೇಳೆ ತನ್ನ ಬೆಡ್‌ರೂಮ್‌ಗೆ ಬರುವಂತೆ ಕರೆಸಿಕೊಂಡವರು. ಅಲ್ಲಿ ಹೆಚ್ಚು ಗಲಾಟೆ ಇದ್ದಿದ್ದರಿಂದ ತನ್ನ ಪಾತ್ರದ ಬಗ್ಗೆ ಮಾತಾಡುವುದಕ್ಕೆ ಕರೆಸಿಕೊಂಡಿದ್ದಾರೆಂದು ಒಳಗೆ ಹೋದೆ. ಆದರೆ ಅಲ್ಲಿ ನಿರ್ದೇಶಕ ರಂಜಿತ್ ಅನುಚಿತವಾಗಿ ವರ್ತಿಸುವುದಕ್ಕೆ ಶುರು ಮಾಡಿದ್ದರು ಎಂದು ಆರೋಪಿಸಿದ್ದಾರೆ.
"ನಾನು ಛಾಯಾಗ್ರಾಹಕನೊಂದಿಗೆ ಮಾತಾಡುತ್ತಿದೆ. ಆಗ ರಂಜಿತ್ ನನ್ನ ಹಿಂದೆ ಬಂದು ನಿಂತುಕೊಂಡರು. ನನ್ನ ಕೈಯಲ್ಲಿದ್ದ ಬಳೆಗಳೊಂದಿಗೆ ಆಟ ಆಡುವುದಕ್ಕೆ ಶುರು ಮಾಡಿದ್ದರು. ಅದೇ ವೇಳೆ ನನ್ನ ಸ್ಕಿನ್ ಅನ್ನು ಮುಟ್ಟಿದರು. ಆಗ ನನಗೆ ಕಸಿವಿಸಿ ಆಗುವುದಕ್ಕೆ ಶುರುವಾಗಿತ್ತು. ಆದರೆ, ಆಗ ನನಗೆ ಓವರ್ ಆಗಿ ಯೋಚನೆ ಮಾಡುತ್ತಿದ್ದೇನೆ ಅಂತ ಅನಿಸಿ ಸುಮ್ಮನಿದ್ದೆ. ಆ ರೂಮ್‌ನಲ್ಲಿ ಕತ್ತಲು ಆವರಿಸಿತ್ತು. ನಾನು ಅದಕ್ಕೆ ಪ್ರತಿಕ್ರಿಯೆ ನೀಡದೇ ಇದ್ದಾಗ, ನನ್ನ ಕತ್ತು ಹಾಗೂ ಕೂದಲಿನೊಂದಿಗೆ ಆಟ ಆಡುವುದಕ್ಕೆ ಶುರು ಮಾಡಿದ್ದರು. ನನಗೆ ಯಾಕೋ ಸರಿ ಹೋಗುತ್ತಿಲ್ಲ ಅಂತ ಅನಿಸಿ. ಅಲ್ಲಿಂದ ಹೊರಟು ಹೋದೆ" ಎಂದು ಹೇಳಿಕೊಂಡಿದ್ದಾರೆ.
ಈ ಘಟನೆ ಬಳಿಕ ತನಗೆ ಆ ಸಿನಿಮಾದಲ್ಲಿ ಅವಕಾಶ ಸಿಗಲಿಲ್ಲ. ಅಷ್ಟೇ ಅಲ್ಲದೆ ಮುಂದೆ ಯಾವುದೇ ಮಲಯಾಳಂ ಸಿನಿಮಾದಲ್ಲೂ ನಟಿಸುವುದಕ್ಕೆ ಅವಕಾಶ ಬರಲಿಲ್ಲ ಎಂದು ಆರೋಪಿಸಿದ್ದಾರೆ. ಆದರೆ, ನಿರ್ದೇಶಕ ರಂಜಿತ್ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಅವರು ಪಾತ್ರಕ್ಕೆ ಸರಿ ಹೊಂದುತ್ತಿರಲಿಲ್ಲ. ಈ ಕಾರಣಕ್ಕೆ ಅವರನ್ನು ಸಿನಿಮಾದಿಂದ ಕೈ ಬಿಡಲಾಗಿತ್ತು. ಅವರು ಕಾನೂನು ಹೋರಾಟಕ್ಕೆ ಮುಂದಾದರೆ, ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಮಲಯಾಳಂ ನಿರ್ದೇಶಕ ರಂಜಿತ್ ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











