Bigg Boss: ಆರಂಭಕ್ಕೂ ಮುನ್ನವೇ ವಿವಾದಕ್ಕೆ ಸಿಲುಕಿದ ಬಿಗ್‌ಬಾಸ್ ಮಲಯಾಳಂ ಸೀಸನ್ 6; ಅಂತಹದ್ದೇನಾಯ್ತು?

ಬಿಗ್‌ಬಾಸ್ ರಿಯಾಲಿಟಿ ಶೋ ಯಾವುದೇ ಭಾಷೆಯಲ್ಲಾದರೂ ಸಂಚಲನ ಸೃಷ್ಟಿಸುವುದು ಗ್ಯಾರಂಟಿ. ಬಿಗ್ ಬಾಸ್ ಆರಂಭಕ್ಕೂ ಮುನ್ನ, ಇಲ್ಲವೇ ನಂತರದ ದಿನಗಳಲ್ಲಿ ವಿವಾದಗಳಿಗೆ ಸಿಕ್ಕಿಕೊಳ್ಳುತ್ತೆ. ಸದ್ಯ ಬಿಗ್‌ಬಾಸ್ ಕನ್ನಡ ಸೀಸನ್ 10 ಯಶಸ್ಸುಗೊಂಡ ಬಳಿಕ ಈಗ ಮಲಯಾಳಂನಲ್ಲಿ ಈ ರಿಯಾಲಿಟಿ ಶೋ ಆರಂಭ ಆಗುತ್ತಿದೆ. ಇದು ಮಲಯಾಳಂ ಆವೃತ್ತಿಯ 6ನೇ ಸೀಸನ್.

ಮಲಯಾಳಂನಲ್ಲಿ ಬಿಗ್‌ಬಾಸ್ ರಿಯಾಲಿಟಿ ಶೋ ಆರಂಭ ಆಗುವುದಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈಗಾಗಲೇ ಬಿಗ್‌ಬಾಸ್ ಮಲಯಾಳಂ ಸೀಸನ್ 6ಕ್ಕೆ ಸಂಬಂಧಿಸಿದಂತೆ ಚರ್ಚೆಗಳು ಆರಂಭ ಆಗಿವೆ. ಆದರೆ, ಈ ಸೀಸನ್ ಆರಂಭಕ್ಕೂ ಮುನ್ನವೇ ವಿವಾದಕ್ಕೆ ಸಿಲುಕಿದೆ.

Bigg Boss Malayalam season 6 controversy

ಇಲ್ಲಿವರೆಗೂ ಭಾಷೆ ಯಾವುದೇ ಇದ್ದರೂ ಬಿಗ್‌ಬಾಸ್‌ಗೆ ಎಂಟ್ರಿ ಕೊಡುವವರ ಗುರುತನ್ನು ಗೌಪ್ಯವಾಗಿ ಇಡಲಾಗುತ್ತೆ. ಆದರೆ, ಇದೇ ಮೊದಲ ಬಾರಿಗೆ ಬಿಗ್‌ಬಾಸ್ ಮಲಯಾಳಂ ಸೀಸನ್ 6ನಲ್ಲಿ ಬಿಗ್‌ಬಾಸ್ ಮನೆಯೊಳಗೆ ಪ್ರವೇಶ ಮಾಡುವ ಇಬ್ಬರು ಸದಸ್ಯರನ್ನು ರಿವೀಲ್ ಮಾಡಿದೆ. ಇದೇ ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಅಷ್ಟಕ್ಕೂ ಅಂತಹದ್ದೇನಾಯ್ತು? ಎಂದು ನೋಡುವುದಾದರೆ..

ಬಿಗ್‌ಬಾಸ್ ಮಲಯಾಳಂ ಸೀಸನ್ 6 ಪ್ರೋಮೊ ರಿಲೀಸ್ ಮಾಡಲಾಗಿದೆ. ಇದರಲ್ಲಿ ಇಬ್ಬರು ಸದಸ್ಯರ ಹೆಸರನ್ನು ಬಹಿರಂಗ ಪಡಿಸಲಾಗಿತ್ತು. ಇದು ವಿಶಿಷ್ಟ ಪ್ರಯತ್ನ ಅನ್ನುವುದರಲ್ಲಿ ಎರಡು ಮಾತಿಲ್ಲ. ಇವರಿಬ್ಬರನ್ನೂ ಕಾಮನ್ ಮ್ಯಾನ್ ಕ್ಯಾಟಗರಿಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಒಬ್ಬರು ರಸ್ಮಿನ್ ಬಾಯ್. ಇವರು ದೈಹಿಕ ಶಿಕ್ಷಕಿ. ತನಗೆ ರೈಡಿಂಗ್‌ನಲ್ಲಿ ಆಸಕ್ತಿ ಇದೆ ಎಂದು ಹೇಳಿಕೊಂಡಿದ್ದಾರೆ. ಇನ್ನೊಬ್ಬರು ನಿಶಾನಾ. ಇವರು ಗೃಹಿಣಿಯಾಗಿದ್ದು ಪ್ರಯಾಣ ಮಾಡುವುದು ಇಷ್ಟ ಎಂದು ಹೇಳಿಕೊಂಡಿದ್ದಾರೆ.

ಅಷ್ಟಕ್ಕೂ ವಿವಾದ ಯಾಕೆ ಅಂದ್ರೆ, ಇವರಿಬ್ಬರೂ ಸಾಮಾನ್ಯ ಕೆಟಗರಿಗೆ ಬರುವ ಸ್ಪರ್ಧಿಗಳ ಅಲ್ಲ ಎಂದು ಚರ್ಚೆಯಾಗುತ್ತಿದೆ. ಇಬ್ಬರೂ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿದ್ದಾರೆ. ಇವರಿಗೆ ಸಿನಿಮಾ ತಾರೆಯರೊಂದಿಗೆ ಸಂಪರ್ಕವಿದೆ. ಹೀಗಿರುವಾಗ, ಅವರು ಹೇಗೆ ಕಾಮನ್ ವ್ಯಕ್ತಿಗಳಾಗುತ್ತಾರೆ ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ.

More from Filmibeat

English summary
Bigg Boss Malayalam season 6 selection creates controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X