'ಕೆಜಿಎಫ್' ನೋಡಿದವರು ಕೊಲೆಗಾರರಾಗಿಲ್ಲ ಎಂದಿದ್ದ ಮಾಲಯಾಳಂ ನಟನ 'ಮಾರ್ಕೊ' ಸಿನಿಮಾ ಟಿವಿಯಲ್ಲಿ ಬ್ಯಾನ್!

ಇತ್ತೀಚೆಗೆ 'ಮಾರ್ಕೊ' ಅನ್ನುವ ಮಲಯಾಳಂ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗಿ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ವಿಭಿನ್ನ ಸಿನಿಮಾಗಳಿಗೆ ಹೆಸರಾಗಿರುವ ಮಲಯಾಳಂ ಚಿತ್ರರಂಗದಿಂದ ಹಾರ್ಡ್‌ಕೋರ್ ಕ್ರೈಂ ಸಿನಿಮಾ ರಿಲೀಸ್ ಆದಾಗಲೇ ವಿವಾದಗಳು ಹುಟ್ಟಿಕೊಂಡಿದ್ದರು. ಈಗ ಸೆನ್ಸಾರ್ ಬೋರ್ಡ್ ಈ ಸಿನಿಮಾ ಟಿವಿ ರಿಲೀಸ್‌ಗೆ ನಿರ್ಬಂಧವನ್ನು ಹೇರಿದೆ.

'ಮಾರ್ಕೊ' ಸಿನಿಮಾದಲ್ಲಿ ನೋಡುವುದಕ್ಕೂ ಆಗದಷ್ಟು ಹಿಂಸೆಯ ದೃಶ್ಯಗಳು ಇವೆ ಅನ್ನೋವ ಕಾರಣಕ್ಕೆ ವಿವಾದಕ್ಕೆ ಸಿಲುಕಿತ್ತು. ಆ ವೇಳೆ 'ಮಾರ್ಕೊ' ಸಿನಿಮಾದ ಹೀರೋ ಉನ್ನು ಮುಕುಂದನ್ ಕನ್ನಡದ 'ಕೆಜಿಎಫ್' ಸಿನಿಮಾವನ್ನು ವಿವಾದಕ್ಕೆ ಎಳೆದು ತಂದು ಸುದ್ದಿಯಾಗಿದ್ದರು. ಇದು ಕೂಡ ವಿವಾದಕ್ಕೆ ಕಾರಣವಾಗಿತ್ತು. ಅದೆಷ್ಟೇ ಕಾಂಟ್ರವರ್ಸಿ ಆದರೂ, ಥಿಯೇಟರ್‌ನಲ್ಲಿ ಈ ಸಿನಿಮಾ 100 ಕೋಟಿ ರೂಪಾಯಿಗೂ ಅಧಿಕ ಬ್ಯುಸಿನೆಸ್ ಮಾಡಿ ಗೆದ್ದಿತ್ತು.

Censor Board has banned the TV screening of Unni Mukundan starrer Marco film and ott also affected

ಈ ವಿವಾದಾತ್ಮಕ ಮಲಯಾಳಂ ಸಿನಿಮಾ 'ಮಾರ್ಕೊ' ಚಿತ್ರಮಂದಿರದಲ್ಲಿ ರಿಲೀಸ್ ಆದ ಬಳಿಕ ಓಟಿಟಿಯಲ್ಲೂ ತೆರೆಕಂಡಿದೆ. ಈಗ ಟಿವಿಯ ಪ್ರಸಾರ ಆಗುವುದಕ್ಕೆ ಮುಂದಾಗಿತ್ತು. ಆದರೆ, ಅಷ್ಟರಲ್ಲೇ ಸೆನ್ಸಾರ್ ಬೋರ್ಡ್ ಈ ಸಿನಿಮಾದ ಪ್ರಸಾರಕ್ಕೆ ಬ್ರೇಕ್ ಹಾಕಿದೆ. ಟಿವಿಯಲ್ಲಿ 'ಮಾರ್ಕೊ' ಪ್ರಸಾರವನ್ನು ಬ್ಯಾನ್ ಮಾಡಿದೆ. ಹಾಗೇ ಓಟಿಟಿಯಿಂದಲೂ ಈ ಸಿನಿಮಾವನ್ನು ತೆಗೆದು ಹಾಕಬಹುದು ಎಂಬ ಭೀತಿಯನ್ನು ಎದುರಿಸುತ್ತಿದೆ.

'ಮಾರ್ಕೊ' ರಿಲೀಸ್ ಆದಾಗ ಉನ್ನಿ ಮುಕುಂದನ್ ಸಿನಿಮಾ ಟೀಕೆಗೆ ಗುರಿಯಾಗಿತ್ತು. ಈಗ ಸಿನಿಮಾ ರಿಲೀಸ್ ಆಗಿ ಎರಡು ತಿಂಗಳುಗಳಾದ್ಮೇಲೆ ಮತ್ತೆ ವಿವಾದಕ್ಕೆ ಸಿಲುಕಿದೆ. ಸೆನ್ಸಾರ್ ಬೋರ್ಡ್ ಈ ಸಿನಿಮಾವನ್ನು ಟಿವಿಯಲ್ಲಿ ಪ್ರಸಾರ ಮಾಡದಂತೆ ನಿರ್ಬಂಧವನ್ನು ಹೇರಿದೆ. ಇದು 'ಮಾರ್ಕೊ' ತಂಡಕ್ಕೆ ದೊಡ್ಡ ಆಘಾತ ಆಗಿದೆ. ಆದರೆ ಈ ಸಿನಿಮಾ ಓಟಿಟಿಯಲ್ಲಿ ಲಭ್ಯವಿದೆ. ಸೋನಿ ಲೈವ್‌ನಲ್ಲಿ 'ಮಾರ್ಕೊ' ಸ್ಟ್ರೀಮಿಂಗ್ ಆಗುತ್ತಿದೆ.

ಹನೀಫ್ ಅದೇನಿ ನಿರ್ದೇಶಿಸಿದ್ದ 'ಮಾರ್ಕೊ' ಸಿನಿಮಾಗೆ ಕೇರಳದ ಕೆಲವು ಮಂದಿ ವಿರೋಧವನ್ನು ವ್ಯಕ್ತ ಪಡಿಸಿದ್ದರು. ಈ ಸಿನಿಮಾದಲ್ಲಿ ಅತಿಯಾದ ಹಿಂಸಾತ್ಮಕ ದೃಶ್ಯಗಳು ಇರುವುದರಿಂದ ಟಿವಿಯಲ್ಲಿ ನೋಡುವುದಕ್ಕೆ ಯೋಗ್ಯವಲ್ಲ ಎಂದು ಟೀಕಿಸಿದ್ದರು. ಈ ಬೆನ್ನಲ್ಲೇ ಪ್ರಾದೇಶಿಕ ಸೆನ್ಸಾರ್ ಬೋರ್ಡ್ ಅಧಿಕಾರಿ ಮತ್ತೆ ಈ ಸಿನಿಮಾವನ್ನು ವೀಕ್ಷಿಸಿ ಟಿವಿಯಲ್ಲಿ ಪ್ರಸಾರ ಮಾಡದಂತೆ ಆದೇಶಿಸಿದ್ದಾರೆ. ಹಾಗೇ ಓಟಿಟಿಯಲ್ಲೂ ಈ ಸಿನಿಮಾವನ್ನು ತೆಗೆದು ಹಾಕುವುದಕ್ಕೂ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

Censor Board has banned the TV screening of Unni Mukundan starrer Marco film and ott also affected

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ (ಮಾರ್ಚ್ 4) ಸದನದಲ್ಲಿ ಸಿನಿಮಾಗಳಲ್ಲಿ ಡ್ರಗ್ ಹಾಗೂ ಹಿಂಸೆಯ ವೈಭವೀಕರಣದ ಬಗ್ಗೆ ಮಾತಾಡಿದ್ದರು. ಆ ಹಿನ್ನೆಲೆಯಲ್ಲಿಯೇ ಸೆನ್ಸಾರ್ ಬೋರ್ಡ್ ಟಿವಿಯಲ್ಲಿ 'ಮಾರ್ಕೊ' ಬ್ಯಾನ್ಸ್‌ಗೆ ಮುಂದ್ದಾಗಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇತ್ತೀಚೆಗೆ ಫಹಾದ್ ಫಾಸಿಲ್ ನಟಿಸಿದ್ದ 'ಆವೇಶಂ' ಸಿನಿಮಾವನ್ನು ಉದಾಹರಣೆಯಾಗಿಟ್ಟು ಸಿನಿಮಾದಲ್ಲಿ ಡ್ರಗ್ ಹಾಗೂ ಹಿಂಸೆಯ ಬಗ್ಗೆ ಮಾತಾಡಿದ್ದರು.

'ಮಾರ್ಕೊ' ಸಿನಿಮಾದ ವಿವಾದದ ಬಗ್ಗೆ ನಿರ್ಮಾಪಕ ಹಾಗೂ ನಟ ಉನ್ನಿ ಮುಕುಂದನ್ ಸೇರಿದಂತೆ ಚಿತ್ರತಂಡ ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಲ್ಲ. ಸಿನ್ನು ಕೆಲವೇ ದಿನಗಳಲ್ಲಿ 'ಮಾರ್ಕೊ' ತಂಡ ಮಾಧ್ಯಮದ ಮುಂದೆ ಈ ಬಗ್ಗೆ ಸ್ಪಷ್ಟನೆ ನೀಡಿವ ಸಾಧ್ಯತೆಯಿದೆ. ಸದ್ಯ ಸೆನ್ಸಾರ್ ಬೋರ್ಡ್ ತೆಗೆದುಕೊಂಡ ನಿರ್ಧಾರದ ಬಗ್ಗೆ ಕೌಟಂರ್ ಕೊಡುವ ಸಾಧ್ಯಯಿದೆ.

More from Filmibeat

English summary
The Censor Board has banned the TV screening of the Unni Mukundan starrer Marco film, and OTT may get affected:
Read more about: ban ott
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X