ಶರ್ಟ್ ಗುಂಡಿ ಬಿಚ್ಚಿ ನಿಂತ ದರ್ಶನ್ ನಾಯಕಿ:'ಗಜ' ನಾಯಕಿ ನವ್ಯಾ ನಾಯರ್‌ಗೆ ನೆಟ್ಟಿಗರ ತರಾಟೆ

ಮಲಯಾಳಂ ಚಿತ್ರರಂಗದ ಜನಪ್ರಿಯರ ನಟಿ ನವ್ಯಾ ನಾಯರ್ ಕನ್ನಡಿಗರಿಗೂ ಚಿರಪರಿಚಿತ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೂಪರ್ ಹಿಟ್ ಸಿನಿಮಾ ಕೊಟ್ಟ 'ಗಜ'ದಲ್ಲಿ ನಾಯಕಿಯಾಗಿ ನಟಿಸಿದ್ದರು. ಅಲ್ಲದೆ ಇತ್ತೀಚೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ದೃಶ್ಯಂ' ಸಿನಿಮಾದ ಕನ್ನಡ ಅವರಣಿಕೆಯಲ್ಲೂ ನಟಿಸಿದ್ದಾರೆ.

ಹೀಗಾಗಿ ಮಲಯಾಳಂ ನಟಿ ನವ್ಯಾ ನಾಯರ್‌ ಬಗ್ಗೆ ಕನ್ನಡಿಗರಿಗೆ ವಿಶೇಷವಾಗಿ ಹೇಳಬೇಕಿಲ್ಲ. ಇನ್ನು ಈಕೆ ಮಲಯಾಳಿಗಳಿಗೆ ಫೇವರೀಟ್ ನಟಿ. ಬಾಲನಟಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ನಟಿ ಜನರ ಮನದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ಬಾಲ ನಟಿಯಾದಾಗಿನಿಂದ ಇಲ್ಲಿವರೆಗೂ ಮಲಯಾಳಂನ ಅಚ್ಚುಮೆಚ್ಚಿನ ನಟಿ.

Darshan Movie Gaja, Navya Nair

ಬಹುತೇಕ ನಟನೆಗೆ ಅವಕಾಶವಿರುವ ಸಿನಿಮಾಗಳನ್ನೇ ನವ್ಯಾ ನಾಯರ್ ಆಯ್ಕೆ ಮಾಡಿಕೊಳ್ಳುತ್ತಾರೆ. ಗ್ಲಾಮರ್ ಪಾತ್ರಗಳಲ್ಲಿ ನವ್ಯಾ ನಾಯರ್ ಕಂಡಿದ್ದು ತೀರಾ ವಿರಳ. ಹೀಗಾಗಿ ಈ ನಟಿಯ ಬಗ್ಗೆ ಮಲಯಾಳಂ, ತಮಿಳು ಹಾಗೂ ಕನ್ನಡ ಚಿತ್ರರಂಗದಲ್ಲಿ ವಿಶೇಷವಾದ ಸ್ಥಾನವಿದೆ.

ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ವೀವ್ ಆಗಿರುವ ನವ್ಯಾ ನಾಯರ್ ಇತ್ತೀಚೆಗೆ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದರು. ಆ ಫೋಟೊಗಳ ನೆಟ್ಟಿಗರಿಗೆ ಹಿಡಿಸಿಲ್ಲ. ಅದಕ್ಕಾಗಿ ಆ ಫೋಟೊಗಳನ್ನೇ ವಿರೋಧಿಸಿ ಕಮೆಂಟ್ ಮಾಡಿದ್ದಾರೆ. ಅಷ್ಟಕ್ಕೂ ನವ್ಯಾ ನಾಯರ್ ಅಷ್ಟೊಂದು ಗ್ಲಾಮರಸ್ ಫೋಟೊಗಳನ್ನು ಹಂಚಿಕೊಂಡರೇ..?

ಮಲಯಾಳಂ ನಟಿ ನವ್ಯಾ ನಾಯರ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ನಟನೆಯ ಒಂದೇ ಅಲ್ಲ ಡ್ಯಾನ್ಸ್‌ನಲ್ಲೂ ನವ್ಯಾ ನಾಯರ್ ತಮ್ಮ ಪ್ರತಿಭೆ ಏನು ಅನ್ನೋದನ್ನು ತೋರಿಸಿದ್ದಾರೆ. ನವ್ಯಾ ತಮಗೆ ಬಿಡುವು ಇದ್ದಾಗಲೆಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿ ಫೋಟೊ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇತ್ತೀಚೆಗೆ ನವ್ಯಾ ನಾಯರ್ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದರು. ಸಾಮಾನ್ಯವಾಗಿ ಡಿ ಗ್ಲಾಮರ್ ರೋಲ್‌ಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುವ ನಟಿ ಈ ಬಾರಿ ಗ್ಲಾಮರ್ ಲುಕ್ ಕೊಟ್ಟಿದ್ದಾರೆ. ಅದಕ್ಕೆ ಈಕೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹುಬೇಗನೇ ವೈರಲ್ ಆಗಿತ್ತು.

ನವ್ಯಾ ನಾಯರ್ ವಿಡಿಯೋ ನೋಡಿ ಹಲವರು ಕಮೆಂಟ್‌ಗಳ ಸುರಿ ಮಳೆಯನ್ನೇ ಸುರಿಸಿದ್ದಾರೆ. ಟೀಕೆಗಳನ್ನು ಮಾಡಿ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. "ನೀವು ಸ್ವಲ್ಪ ಎಕ್ಸ್‌ಪೋಸ್ ಮಾಡಲು ಆರಂಭಿಸಿದ್ದೀರ" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು " ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ" ಎಂದು ಟೀಕೆ ಮಾಡಿದ್ದಾರೆ.

Darshan Movie Gaja, Navya Nair

ಕಮೆಂಟ್‌ಗಳ ಸುರಿಮಳೆ ಇಲ್ಲಿಗೆ ನಿಂತಿಲ್ಲ. "ಬಾಲನಟಿ ಮದುವೆ ಆದ್ಮೇಲೆ ಮಾಡರ್ನ್ ಆಗಿದ್ದಾರೆ" ಎಂದು ಲೇವಡಿ ಮಾಡಿದ್ದಾರೆ. ಇನ್ನೊಬ್ಬರು "ಈಗ ಫುಲ್ ಡಿಸ್‌ಪ್ಲೇ ಆಯ್ತು." ಎಂದಿದ್ದಾರೆ. ಇದೆಲ್ಲಾ ಏನೇ ಕಮೆಂಟ್‌ಗಳು ಬಂದರೂ ನವ್ಯಾ ನಾಯರ್ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ.

ನವ್ಯಾ ನಾಯರ್ ಮದುವೆಯಾದ ಬಳಿಕ ಸಿನಿಮಾದಿಂದ ದೂರ ಉಳಿದಿದ್ದರು. ಹತ್ತು ವರ್ಷಗಳ ಬಳಿಕ ಮತ್ತೆ ಮರಳಿದಾಗ ಅವರಿಗೆ ಸಿನಿಮಾದಲ್ಲಿ ಸೂಪರ್‌ ಸಕ್ಸಸ್ ಸಿಕ್ಕಿತ್ತು. ಇತ್ತೀಚೆಗೆ ನವ್ಯಾ ನಾಯರ್ ನಟಿಸಿದ ಸಿನಿಮಾ ಅಷ್ಟೊಂದು ಯಶಸ್ಸು ಕಾಣಲಿಲ್ಲ. ಸದ್ಯ ರಿಯಾಲಿಟಿ ಶೋ ನಿರೂಪಕಿಯಾಗಿ ನವ್ಯಾ ನಾಯರ್ ಬ್ಯುಸಿಯಾಗಿದ್ದಾರೆ.

More from Filmibeat

English summary
Darshan Movie Gaja Actress Navya Nair news in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X