'ದೃಶ್ಯಂ 3' ಸೆಟ್ಟೇರೋದು ಕನ್ಫರ್ಮ್: ಮತ್ತೆ ಜಾರ್ಜ್ ಕುಟ್ಟಿ ಅವತಾರದಲ್ಲಿ ಮೋಹನ್‌ಲಾಲ್!
'ದೃಶ್ಯಂ' ಮಲಯಾಳಂ ಸಿನಿಮಾ ಆಗಿದ್ದರೂ, ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿದೆ. ದಕ್ಷಿಣ ಭಾರತದ ಐದು ಪ್ರಮುಖ ಭಾಷೆಗಳಲ್ಲೂ 'ದೃಶ್ಯಂ' ನಿರ್ಮಾಣಗೊಂಡಿರೋದು ಈ ಸಿನಿಮಾದ ಜನಪ್ರಿಯತೆಗೆ ಸಾಕ್ಷಿ. ರಿಮೇಕ್ ಆದ ಎಲ್ಲಾ ಭಾಷೆಗಳಲ್ಲೂ ಸಿನಿಮಾ ಗೆಲುವಿನ ನಗೆ ಬೀರಿದೆ.
ಮೋಹನ್‌ಲಾಲ್ 'ದೃಶ್ಯಂ 2' ದೇಶಾದ್ಯಂತ ಬೇಜಾನ್ ಸದ್ದು ಮಾಡಿತ್ತು. ಎರಡನೇ ಸೀರಿಸ್ ಹೇಗಿರುತ್ತೋ? ಟ್ವಿಸ್ಟ್ ಹೇಗಿರುತ್ತೋ? ಅಂತ ಕುತೂಹಲದಿಂದ ಕಾದು ಕೂತಿದ್ದವರಿಗೆ ಸಿನಿಮಾ ಸಖತ್ ಥ್ರಿಲ್ ಕೊಟ್ಟಿತ್ತು. ಸಿನಿಮಾ ರಿಲೀಸ್ ಆಗುತ್ತಂದೆ ಮೂರುನೇ ಸೀರಿಸ್ ಬಗ್ಗೆನೂ ಟಾಕ್ ಶುರುವಾಗಿತ್ತು. ಅದರಂತೆ ಈಗ 'ದೃಶ್ಯಂ 3' ಬಗ್ಗೆ ಅಧಿಕೃತವಾಗಿ ಮಾಹಿತಿ ಸಿಕ್ಕಿದೆ. ಮೋಹನ್ ಲಾಲ್ ಮತ್ತೆ ಜಾರ್ಜ್ ಕುಟ್ಟಿಯಾಗಿ ತೆರೆಮೇಲೆ ಬರೋದು ಕನ್ಫರ್ಮ್.
'ದೃಶ್ಯಂ 3' ಸಿನಿಮಾ ಸೆಟ್ಟೇರೋ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ಸೋಶಿಯಲ್ ಮೀಡಿಯಾದಲ್ಲಿ ಮೋಹನ್ ಲಾಲ್ ಸಿನಿಮಾ ಬಗ್ಗೆನೇ ಮಾತು ಶುರುವಾಗಿದೆ. ಹೀಗಾಗಿ 'ದೃಶ್ಯಂ 3' ಬಗ್ಗೆ ಸಹಜವಾಗಿಯೇ ಕುತೂಹಲ ದುಪ್ಪಟ್ಟಾಗಿದೆ. ಅಷ್ಟಕ್ಕೂ 'ದೃಶ್ಯಂ 3' ಮೇಕಿಂಗ್ ಹೇಗಿರುತ್ತೆ? ಯಾವಾಗ ಶುರುವಾಗುತ್ತೆ? ಅನ್ನೋ ಮಾಹಿತಿ ಇಲ್ಲಿದೆ.

ಮೋಹನ್ ಲಾಲ್ 'ದೃಶ್ಯಂ 3' ಅನೌನ್ಸ್
ಮಲಯಾಳಂನ ಕ್ರೈಂ ಥ್ರಿಲ್ಲರ್ 'ದೃಶ್ಯಂ' ಸೀರಿಸ್‌ನ ಮೂರನೇ ಸರಣಿ ಅಧಿಕೃತವಾಗಿ ಅನೌನ್ಸ್ ಆಗಿದೆ. 'ದೃಶ್ಯಂ' ಹಾಗೂ 'ದೃಶ್ಯಂ 2' ಸಿನಿಮಾ ನಿರ್ಮಿಸಿದ್ದ ನಿರ್ಮಾಪಕರೇ ಈ ಸಿನಿಮಾವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. 'ದೃಶ್ಯಂ' ನಿರ್ಮಾಪಕ ಅಂಥೋಣಿ ಪೆರುಂಬವೂರ್ ಇತ್ತೀಚೆಗೆ ಅವಾರ್ಡ್ ಪಂಕ್ಷನ್‌ನಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಮಳವಿಲ್ ಎಂಟರ್‌ಟೈನ್ಮೆಂಟ್ ಪ್ರಶಸ್ತಿ ಸಮಾರಂಭದಲ್ಲಿ 'ದೃಶ್ಯಂ 3' ಬರೋದು ಕನ್ಫರ್ಮ್ ಎಂದಿದ್ದಾರೆ.

ಮೋಹನ್ ಲಾಲ್ ಅಭಿಮಾನಿಗಳ ಸಂಭ್ರಮ
ನಿರ್ಮಾಪಕ ಅಂಥೋಣಿ ಪೆರುಂಬವೂರ್ 'ದೃಶ್ಯಂ 3' ಅನೌನ್ಸ್ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಆಕ್ಟಿವ್ ಆಗಿದ್ದಾರೆ. ಮೋಹಲ್ ಲಾಲ್ ಅಭಿಮಾನಿಗಳು ಸಿನಿಮಾವನ್ನು ಟ್ರೆಂಡ್ ಮಾಡಲು ಶುರುಮಾಡಿದ್ದಾರೆ. 'ದೃಶ್ಯಂ 3' ಹ್ಯಾಶ್‌ಟ್ಯಾಗ್ ಹಾಕಿ ನಿರ್ಮಾಪಕ ಅವಾರ್ಡ್ ಫಂಕ್ಷನ್‌ನಲ್ಲಿ ಹೇಳಿರುವ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ. ಒಬ್ಬರು ವಿಡಿಯೋ ಶೇರ್ ಮಾಡಿ " ಈಗ ದೃಶ್ಯಂ 3 ಅಧಿಕೃತ" ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು "ಕ್ಲಾಸಿಕ್ ಕ್ರಿಮಿನಲ್ ಈಸ್ ಬ್ಯಾಕ್.. ದೃಶ್ಯಂ 3 ಅಧಿಕೃತವಾಗಿ ಆರಂಭ." ಆಗಲಿದೆ ಎಂದು ಹೇಳಿದ್ದಾರೆ.

ಕ್ಲೈಮ್ಯಾಕ್ಸ್ ಇಷ್ಟಪಟ್ಟಿದ್ದ ಮೋಹನ್ ಲಾಲ್
'ದೃಶ್ಯಂ 2' ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಜನರು ಮೆಚ್ಚಿಗೆ ಸೂಚಿಸಿದ್ದರು. ಬಳಿಕ 'ದೃಶ್ಯಂ 3' ಬಗ್ಗೆ ನಿರ್ದೇಶಕರಿಗೆ ಮೋಹನ್ ಲಾಲ್ ಅಭಿಮಾನಿಗಳು ಒತ್ತಡ ಹೇರಿದ್ದರು. ಆಗಲೇ ನಿರ್ದೇಶಕರು 'ದೃಶ್ಯಂ 3' ಬಗ್ಗೆ ಸುಳಿವು ನೀಡಿದ್ದರು. 'ದೃಶ್ಯಂ 3' ಕ್ಲೈಮ್ಯಾಕ್ಸ್ ಮೋಹನ್ ಲಾಲ್‌ಗೆ ಇಷ್ಟ ಆಗಿದೆ. ಆದರೆ ಕಥೆ ಇನ್ನೂ ರೆಡಿಯಾಗಿಲ್ಲ. ಅದಕ್ಕೆ ಎಷ್ಟು ಸಮಯಬೇಕಾದರೂ ಹಿಡಿಯಬಹುದು ಎಂದು ಜೀತು ಜೋಸೆಫ್ ಹೇಳಿದ್ದರು. ಈಗ 'ದೃಶ್ಯಂ 3' ಬಗ್ಗೆ ಅಧಿಕೃತವಾಗಿ ಹೇಳಿಕೆ ಸಿಕ್ಕಿದ್ದು, ಜನರು ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ.

'ದೃಶ್ಯಂ 3' ಬಗ್ಗೆ ಟೆನ್ಷನ್
'ದೃಶ್ಯಂ' ಫ್ರ್ಯಾಂಚೈಸಿ ಆಗಿ ಹೊರಹೊಮ್ಮಿದೆ. ಮಲಯಾಳಂ ಸಿನಿಮಾ ಆಗಿದ್ದರೂ, ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಈ ಸಿನಿಮಾ ರಿಮೇಕ್ ಆಗಿದೆ. ಅಲ್ಲದೆ ಹಿಂದಿಗೂ ರಿಮೇಕ್ ಆಗಿದೆ. ಹೀಗಾಗಿ 'ದೃಶ್ಯಂ 3' ಸಿನಿಮಾ ರಿಲೀಸ್‌ಗಾಗಿ ಎದುರು ನೋಡಲಾಗುತ್ತಿದೆ. ಇನ್ನೊಂದು ಕಡೆ 'ದೃಶ್ಯಂ 3' ಪ್ಯಾನ್ ಇಂಡಿಯಾ ಸಿನಿಮಾ ಆದರೆ, ಬೇರೆ ಭಾಷೆಯಲ್ಲಿ ರಿಮೇಕ್ ಮಾಡುತ್ತಿದ್ದ ನಿರ್ಮಾಪಕ ಮುಂದಿನ ನಡೆ ಏನಿರುತ್ತೆ? ಅನ್ನೋ ಕುತೂಹಲವಂತೂ ಇದ್ದೇ ಇದೆ.


Click it and Unblock the Notifications











