ಮಲಯಾಳಂ ಚಿತ್ರರಂಗದ ಕರ್ಮಕಾಂಡ; ನಟಿಯೊಬ್ಬರಿಗೆ 17 ಬಾರಿ ಅಪ್ಪಿಕೊಳ್ಳುವಂತೆ ಮಾಡಿದ್ದ ಖ್ಯಾತ ನಟ!

ಐದು ವರ್ಷಗಳಿಂದ ನ್ಯಾಯಮೂರ್ತಿ ಹೇಮಾ ಕಮಿಟಿ ವರದಿಯನ್ನು ಕೊನೆಗೂ ರಿವೀಲ್ ಮಾಡಲಾಗಿದೆ. 2019ರಲ್ಲಿಯೇ ಮಲಯಾಳಂ ಚಿತ್ರರಂಗದ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಕೆಲಸ ಮಾಡುವ ಸ್ಥಳದಲ್ಲಿರುವ ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ವರದಿಯನ್ನು ಸಲ್ಲಿಕೆ ಮಾಡಲಾಗಿತ್ತು. ಈ ವರದಿ ಮಲಯಾಳಂ ಚಿತ್ರರಂಗದ ಶಾಕಿಂಗ್ ಸಂಗತಿಗಳು ಹೊರಬಿದ್ದಿವೆ.

235 ಪುಟಗಳ ಜಸ್ಟಿಸ್ ಹೇಮಾ ಕಮಿಟಿ ವರದಿಯನ್ನು 2019ರಲ್ಲಿ ಕೇರಳ ಸರ್ಕಾರಕ್ಕೆ ಒಪ್ಪಿಸಲಾಗಿತ್ತು. ಆದರೆ ಅದನ್ನು ಕೇರಳ ಸರ್ಕಾರ ಬಹಿರಂಗ ಪಡಿಸಿರಲಿಲ್ಲ. ಐದು ವರ್ಷಗಳ ಬಳಿಕ ಈ ವರದಿಯನ್ನು ಬಹಿರಂಗಗೊಳಿಸಲಾಗಿದೆ. ಇದರಲ್ಲಿ ಸುಮಾರು 65 ಪುಟಗಳನ್ನು ಖಾಸಗಿ ವಿಚಾರಗಳಿಗಾಗಿ ರಿವೀಲ್ ಮಾಡಲಾಗಿಲ್ಲ. ಸದ್ಯ ಈ ವರದಿ ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಸಂಚಲನವನ್ನು ಸೃಷ್ಟಿಸುತ್ತಿದೆ.

Hema committee report revealed that a sexually assaulted Malayalam actress has to hug in the scene 17 times

ಈ ವರದಿಯಿಂದ ಹೊರಬಿದ್ದಿರುವ ಶಾಕಿಂಗ್ ಸಂಗತಿ ಏನಪ್ಪಾ ಅಂದರೆ, ಮಲಯಾಳಂ ಚಿತ್ರರಂಗದ 30 ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಲೈಂಗಿಕ ಶೋಷಣೆಯನ್ನು ಅನುಭವಿಸಿದ್ದಾರೆ. ಸುಮಾರು 17 ಪ್ರಕಾರಗಳಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರು ಶೋಷಣೆಗೆ ಒಳಗಾಗಿದೆ ಎಂದು ವರದಿ ಹೇಳಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದೇ ವರದಿಯಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ನಟಿಯೊಬ್ಬರ ಕರಾಳ ಅನುಭವವನ್ನು ವರದಿ ಮಾಡಿದೆ. ಮಲಯಾಳಂ ನಟನೊಬ್ಬನನ್ನು ಅಪ್ಪಿಕೊಳ್ಳುವ ದೃಶ್ಯದಲ್ಲಿ ಈ ನಟಿ ನಟಿಸಬೇಕಿತ್ತು. ಆದರೆ, ಈ ಹಿಂದೆ ಅದೇ ನಟನೊಂದಿಗೆ ಆ ನಟಿ ಕೆಲಸ ಮಾಡಿದ್ದರು. ಆ ವೇಳೆ ಕೂಡ ಆ ನಟ ಲೈಂಗಿಕ ಕಿರುಕುಳವನ್ನು ನೀಡಿದ್ದ. ಇನ್ನೊಂದು ಸಿನಿಮಾದಲ್ಲಿ ನಟಿಸುವಾಗ ಅಪ್ಪಿಕೊಳ್ಳುವ ದೃಶ್ಯದ ಚಿತ್ರೀಕರಣದ ವೇಳೆ ಅಸಾಧ್ಯ ಅನುಭವ ಆಗಿತ್ತೆಂದು ಆ ನಟಿ ಹೇಳಿಕೊಂಡಿದ್ದಾರೆ.

ಸಿನಿಮಾ, ನಟ ಹಾಗೂ ನಟಿಯ ಹೆಸರನ್ನು ಈ ವರದಿಯಲ್ಲಿ ಹೇಳಲಾಗಿಲ್ಲ. ಲೈಂಗಿಕ ಕಿರುಕುಳಕ್ಕೆ ಒಳಗಾಗಿ ನಟಿ ಅದೇ ನಟನ ಪತ್ನಿಯಾಗಿ ನಟಿಸುತ್ತಿದ್ದರು. ದೃಶ್ಯವೊಂದಕ್ಕಾಗಿ ಆ ಖ್ಯಾತ ನಟನನ್ನು ಅಪ್ಪಿಕೊಳ್ಳುವ ದೃಶ್ಯವನ್ನು ಇಡಲಾಗಿತ್ತು. ಆದರೆ, ಸುಮಾರು 17 ಬಾರಿ ರೀಟೇಕ್ ತೆಗೆದುಕೊಂಡರೂ ಆ ದೃಶ್ಯದಲ್ಲಿ ನಟಿಸಲು ಸಾಧ್ಯವಾಗಿಲ್ಲ. ಇದರಿಂದ ನಿರ್ದೇಶಕ ಕೋಪಗೊಂಡು ಹೊರಟೇ ಹೋದರು ಎಂದು ಆ ನಟಿ ಹೇಳಿಕೊಂಡಿದ್ದಾರೆ.

ಈ ಸಿನಿಮಾ ಹಿಂದೆ ಆ ನಟ ನಡೆದುಕೊಂಡ ರೀತಿಯಿಂದ ಮತ್ತೆ ಆ ನಟನೊಂದಿಗೆ ಕೆಲಸ ಮಾಡುವುಕ್ಕೆ ಕಷ್ಟ ಆಗುತ್ತಿತ್ತು. ಅದೇ ನಟನನ್ನು ಅಪ್ಪಿಕೊಳ್ಳುವ ದೃಶ್ಯದ ಚಿತ್ರ್ರೀಕರಣ ಮಾಡುವಾಗ ಅಸಮಧಾನ ಹಾಗೂ ಕೋಪ ಬರುತ್ತಿತ್ತು ಎಂದು ಆ ನಟಿ ಹೇಳಿಕೆ ಕೊಟ್ಟಿದ್ದನ್ನು ವರದಿಯಲ್ಲಿ ಹೇಳಿರುವ ಬಗ್ಗೆ ವರದಿಯಾಗಿದೆ. ಅಷ್ಟೇ ಅಲ್ಲದೆ ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರೂ, ತಮ್ಮ ಸಮಸ್ಯೆಯನ್ನು ಓಪನ್ ಆಗಿ ಹೇಳಿಕೊಳ್ಳುತ್ತಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

2017ರಲ್ಲಿ ಮಲಯಾಳಂ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಕೇರಳ ಸರ್ಕಾರ ಮೂರು ಸದಸ್ಯರ ಕಮಿಟಿಯನ್ನು ಮಾಡಿತ್ತು. ಅದರಲ್ಲಿ ನಿವೃತ್ತ ನ್ಯಾಯಮೂರ್ತಿ ಕೆ ಹೇಮಾ, ಮಾಜಿ ಅಧಿಕಾರಿ ಕೆಬಿ ವಲ್ಸಲ ಕುಮಾರಿ ಹಾಗೂ ಹಿರಿಯ ನಟ ಶಾರದ ಅವರನ್ನೊಳಗೊಂಡ ಕಮಿಟಿಯನ್ನು ಮಾಡಲಾಗಿತ್ತು. ಈ ಮೂವರ ಕಮಿಟಿ ಎರಡು ವರ್ಷದೊಳಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಈಗ ಐದು ವರ್ಷಗಳ ಬಳಿಕ ಆ ವರದಿಯನ್ನು ಬಹಿರಂಗಗೊಳಿಸಲಾಗಿದೆ.

More from Filmibeat

English summary
Hema committee report revealed shocking insidents of an Malayalam actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X