ನಂದ ಕಿಶೋರ್ ನಿರ್ದೇಶಿಸುತ್ತಿರುವ ಮೋಹನ್‌ಲಾಲ್ ಸಿನಿಮಾಗೆ ಹಾಲಿವುಡ್ ಕಾರ್ಯಕಾರಿ ನಿರ್ಮಾಪಕ ಎಂಟ್ರಿ
ಸ್ಯಾಂಡಲ್‌ವುಡ್ ನಿರ್ದೇಶಕ ನಂದ ಕಿಶೋರ್ ಬಿಗ್ ಪ್ರಾಜೆಕ್ಟ್‌ಗೆ ಕೈ ಹಾಕಿರೋದು ಗೊತ್ತೇ ಇದೆ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಈ ಸಿನಿಮಾಗೆ ಬಾಲಿವುಡ್‌ನ ನಿರ್ಮಾಪಕಿ ಏಕ್ತಾ ಕಪೂರ್ ಕೂಡ ಕೈ ಜೋಡಿಸಿದ್ದಾರೆ.
ಹೀಗಾಗಿ ಈ ಸಿನಿಮಾ ಬೇರೆ ಬೇರೆ ಚಿತ್ರರಂಗದ ಫಿಲ್ಮ್ ಮೇಕರ್ಸ್ ಕೂಡ ಕಣ್ಣಿಟ್ಟಿದ್ದಾರೆ. 'ವೃಷಭ' ಸಿನಿಮಾ ಪಕ್ಕಾ ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಎಲ್ಲಾ ಭಾಗಗಳಿಗೂ ಸಲ್ಲುವಂತಹ ಕಥೆಯನ್ನು ನಂದ ಕಿಶೋರ್ ಹೆಣೆದಿದ್ದು, ಪ್ರೇಕ್ಷಕರು ಕುತೂಹಲದಿಂದ ನೋಡುತ್ತಿದ್ದಾರೆ.

ವಿಶೇಷ ಅಂದ್ರೆ, ಈ ವೃಷಭ ತಂಡವನ್ನು ಹಾಲಿವುಡ್‌ನ ಕಾರ್ಯನಿರ್ವಾಹಕ ನಿರ್ಮಾಪಕ ನಿಕ್ ಡೊರ್ಲೊವ್ ಸೇರಿಕೊಂಡಿದ್ದಾರೆ. ಈ ಸಿನಿಮಾ ಇವರ ಮೊದಲ ಭಾರತೀಯ ಸಿನಿಮಾ. ಹೀಗಾಗಿ ಹಾಲಿವುಡ್ ಶೈಲಿಯಲ್ಲಿ ಸಿನಿಮಾ ಮುಗಿಸಲು ನಂದ ಕಿಶೋರ್ ಆಲೋಚನೆ ಮಾಡಿದಂತಿದೆ.
'ವೃಷಭ' ಸಿನಿಮಾದಲ್ಲಿ ಮೋಹನ್ ಲಾಲ್ ಜೊತೆ ರೋಷನ್ ಮೇಘಾ ಸಹರಾ ಎಸ್ ಖಾನ್ ಮತ್ತು ಶನಯಾ ಕಪೂರ್ ನಟಿಸುತ್ತಿದ್ದಾರೆ. ಈ ಸಿನಿಮಾಗೆ ನಿಕ್ ಡೊರ್ಲೊವ್ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಲಿದ್ದಾರೆ. ಹಾಲಿವುಡ್‌ನ ಪ್ರತಿಷ್ಠಿತ ಸಿನಿಮಾಗೆ ಇವರು ಕೆಲಸ ಮಾಡಿದ್ದಾರೆ.

ನಿಕ್ ಡೊರ್ಲೊವ್ 2016ರಲ್ಲಿ ತೆರೆಕಂಡಿರೋ ಆಸ್ಕರ್ ಪ್ರಶಸ್ತಿ ವಿಜೇತ ಸಿನಿಮಾ 'ಮೂನ್‌ಲೈಟ್' ಸಿನಿಮಾಗೂ ಕಾರ್ಯಕಾರಿ ನಿರ್ಮಾಪಕರಾಗಿದ್ದರು. ಅಂತೆಯೇ 'ತ್ರೀ ಬಿಲ್‌ಬೋರ್ಡ್ಸ್ ಔಟ್‌ಸೈಡ್ ಎಬ್ಬಿಂಗ್' ಮತ್ತು'ಮಿಸೌರಿ' ಹಲವು ಹಾಲಿವುಡ್ ಸಿನಿಮಾಗಳಿಗಾಗಿ ಕೆಲಸ ಮಾಡಿದ್ದಾರೆ.
ಈಗಾಗಲೇ 'ವೃಷಭ' ಫಿಲ್ಮ್ ಮೇಕರ್ 57 ಸೆಕೆಂಡುಗಳ ಟೀಸರ್ ವೀಡಿಯೊವನ್ನು ರಿಲೀಸ್ ಮಾಡಿದ್ದಾರೆ. ಇದರಲ್ಲಿ ಚಿತ್ರರಂಗದ ಪ್ರಮುಖ ತಂತ್ರಜ್ಞರಿಂದ ನಿರ್ಮಾಣವಾಗಿರುವ ಭವ್ಯವಾದ ಸೆಟ್-ಅಪ್‌ವಿರುವ ದೃಶ್ಯಗಳನ್ನು ಒಳಗೊಂಡಿದೆ. ಇದು ಸಿನಿಮಾ ಪ್ರಿಯರಿಗೆ ಕಿಕ್ ಕೊಟ್ಟಿತ್ತು. ಹಾಲಿವುಡ್ ಸಿನಿಮಾ ಮೇಕಿಂಗ್ ಶೈಲಿಯನ್ನು ಅನುಸರಿಸುತ್ತಿರುವ ಮೊದಲ ಭಾರತೀಯ ಸಿನಿಮಾ ಎಂಬುದಾಗಿದೆ.
"ವೃಷಭ ನನ್ನ ಮೊದಲ ಭಾರತೀಯ ಸಿನಿಮಾ. ಈ ಸಿನಿಮಾದಲ್ಲಿ ಕೆಲಸ ಮಾಡುವುದಕ್ಕೆ ನಾನು ಎದುರು ನೋಡುತ್ತಿದ್ದೇನೆ. ಕಾರ್ಯಕಾರಿ ನಿರ್ಮಾಪಕನಾಗಿ, ನಾನು ಸಿನಿಮಾ ನಿರ್ಮಾಣದ ವಿವಿಧ ಅಂಶಗಳತ್ತ ಗಮನ ಹರಿಸುತ್ತೇನೆ. ವೃಷಭ ನನ್ನ ದೇಶದ ಹೊರಗಿನ ನನ್ನ ಮೊದಲ ಸಿನಿಮಾ." ಎಂದು ಹಾಲಿವುಡ್‌ನ ಸಿನಿಮಾಗಳ ಕಾರ್ಯಕಾರಿ ನಿರ್ಮಾಪಕ ನಿಕ್ ಡೊರ್ಲೊವ್ ಹೇಳಿದ್ದಾರೆ.
'ವೃಷಭ' ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ ಎಂಬ ಟಾಕ್ ಇದೆ. ಈ ಸಿನಿಮಾದಲ್ಲಿ ಮೋಹನ್ ಲಾಲ್ ಜೊತೆ ಶ್ರೀಕಾಂತ್ ಮತ್ತು ರಾಗಿಣಿ ದ್ವಿವೇದಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಇದು 2024ರ ಅತೀ ದೊಡ್ಡ ಸಿನಿಮಾ ಆಗಲಿದೆ ಎನ್ನಲಾಗಿದೆ.
ನಂದ ಕಿಶೋರ್ ನಿರ್ದೇಶಿಸುತ್ತಿರುವ 'ವೃಷಭ' ಸಿನಿಮಾವನ್ನು ಅಭಿಷೇಕ್ ವ್ಯಾಸ್, ವಿಶಾಲ್ ಗುರ್ನಾನಿ, ಜೂಹಿ ಪರೇಖ್ ಮೆಹ್ತಾ ಮತ್ತು ಶ್ಯಾಮ್ ಸುಂದರ್, ವರುಣ್ ಮಾಥುರ್ ಮತ್ತು ಸೌರಭ್ ಮಿಶ್ರಾ ನಿರ್ಮಿಸುತ್ತಿದ್ದಾರೆ. ಕನ್ನಡ, ತೆಲುಗು, ಮಲಯಾಳಂ, ತಮಿಳು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.


Click it and Unblock the Notifications











