Manorathangal Trailer; ಒಂದಾದ್ರು ಕಮಲ್, ಮಮ್ಮುಟಿ, ಲಾಲ್, ಫಹಾದ್; 'ಮನೋರಥಂಗಳ್' ಟ್ರೈಲರ್ ಚಿಂದಿ
ಮಲಯಾಳಂ ಚಿತ್ರರಂಗ ಸಣ್ಣ ಚಿತ್ರರಂಗವೇ ಇರಬಹುದು. ಆದರೆ ಅಲ್ಲಿ ನಡೆಯುವ ಪ್ರಯತ್ನಗಳು ಬೇರೆ ಇಂಡಸ್ಟ್ರಿಗಳಲ್ಲಿ ಸಾಧ್ಯವಿಲ್ಲ. ಅದ್ಭುತ ಕಥೆಗಳನ್ನು ಸಿನಿಮಾ, ವೆಬ್ ಸೀರಿಸ್ ರೂಪದಲ್ಲಿ ತೆರೆಗೆ ತರುವ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಈ ವರ್ಷ ಬಾಕ್ಸಾಫೀಸ್‌ನಲ್ಲಿ ಕೂಡ ಮಲಯಾಳಂ ಸಿನಿಮಾಗಳ ಆರ್ಭಟ ಜೋರಾಗಿದೆ.
'ಆಡುಜೀವಿತಂ', 'ಮಂಜುಮೇಲ್ ಬಾಯ್ಸ್', 'ಅನ್ವೆಶಿಪಿನ್ ಕಂಡೆತುಂ', 'ಪ್ರೇಮಲು', 'ವರ್ಷಂಗಲ್ಕ್ಕು ಶೇಷಮ್', 'ಬ್ರಹ್ಮಯುಗಂ' ಹಾಗೂ 'ಆವೇಶಂ' ಸಿನಿಮಾಗಳು ಕೋಟಿ ಕೋಟಿ ಕೊಳ್ಳೆ ಹೊಡೆದು ದಾಖಲೆ ಬರೆದಿವೆ. ಬರೀ ಸಿನಿಮಾಗಳು ಮಾತ್ರವಲ್ಲ ಮಲಯಾಳಂನಲ್ಲಿ ವೆಬ್ ಸೀರಿಸ್‌ಗಳ ನಿರ್ಮಾಣವೂ ಜೋರಾಗಿದೆ. ಸ್ಟಾರ್ ನಟರೇ ಇದಕ್ಕಾಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ. ಅಂಥದ್ದೇ ಒಂದು ಅದ್ಭುತ ಪ್ರಯತ್ನ 'ಮನೋರಥಂಗಳ್'.

8 ಜನ ನಿರ್ದೇಶಕರು 'ಮನೋರಥಂಗಳ್' ಆಂಥಾಲಜಿ ವೆಬ್ ಸೀರಿಸ್ ಕಟ್ಟಿಕೊಟ್ಟಿದ್ದಾರೆ. 9 ಎಪಿಸೋಡ್‌ಗಳು ಇದರಲ್ಲಿದೆ. ಎಂ. ಟಿ ವಾಸುದೇವನ್ ಬರೆದ ಕಥೆಗಳನ್ನು ಆಧರಿಸಿ ಈ ವೆಬ್ ಸೀರಿಸ್ ನಿರ್ಮಾಣವಾಗಿದೆ. ಅಚ್ಚರಿ ಎಂದರೆ ದಕ್ಷಿಣ ಭಾರತದ ದಿಗ್ಗಜ ಕಲಾವಿದರು ಈ ಸೀರಿಸ್‌ನಲ್ಲಿ ಬಣ್ಣ ಹಚ್ಚಿದ್ದಾರೆ. ಕಮಲ್ ಹಾಸನ್, ಮೋಹನ್ ಲಾಲ್, ಮಮ್ಮುಟಿ, ಫಹಾದ್ ಫಾಸಿಲ್ ತಾರಾಗಣದಲ್ಲಿದ್ದಾರೆ. ಕಮಲ್ ಹಾಸನ್ ನಿರೂಪಕನಾಗಿ ಕಥೆಗಳನ್ನು ಹೇಳುತತಾ ಸಾಗುತ್ತಾರೆ.
ಒಲ್ಲವುಂ ತೀರವುಂ (ಪ್ರಿಯದರ್ಶನ್), ಕಡುಗನ್ನವ ಒರು ಯಾತ್ರೆ (ರಂಜಿತ್), ಕಜ್ಚಾ (ಶ್ಯಾಮಪ್ರಸಾದ್), ಶಿಲಾಲಿಖಾತಂ (ಪ್ರಿಯದರ್ಶನ್), ವಿಲ್ಪನಾ (ಅಶ್ವತಿ ವಿ ನಾಯರ್), ಷರ್ಲಾಕ್ (ಮಹೇಶ್ ನಾರಾಯಣನ್), ಷರ್ಲಾಕ್ (ಮಹೇಶ್ ನಾರಾಯಣನ್), ಸ್ವರ್ಗಂ ತುರಕ್ಕುನ ಸಮಯ (ಜಯರಾಜನ್ ನಾಯರ್), ಅಭ್ಯಂ ತೀಡಿ ವೆಂಡಮ್(ಸಂತೋಷ್ ಶಿವನ್) ಹೀಗೆ 9 ಕಥೆಗಳನ್ನು 9 ಎಪಿಸೋಡ್‌ಗಳಾಗಿ 8 ಜನ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಬಿಜು ಮೆನನ್, ನದಿಯಾ ಮೊಯ್ದು, ಪಾರ್ವತಿ ತಿರುವೋತ್ತು, ಇಂದ್ರಜಿತ್, ಅಪರ್ಣಾ ಬಾಲಮುರಳಿ, ಆಸಿಫ್ ಅಲಿ, ಮಧೂ ಕೂಡ ತಾರಾಗಣದಲ್ಲಿದ್ದಾರೆ.
ಮಮ್ಮುಟಿ, ಮೋಹನ್ ಲಾಲ್, ಫಹಾದ್ ಸುಮ್ಮನೆ ಹೀಗೆ ಬಂದು ಹಾಗೆ ಹೋಗುವ ಪಾತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ವಿಭಿನ್ನ ಗೆಟಪ್‌ಗಳಲ್ಲಿ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಸದ್ಯ ಬಿಡುಗಡೆ ಆಗಿರುವ 'ಮನೋರಥಂಗಳ್' ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಮಲಯಾಳಂ ಜೊತೆಗೆ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಈ ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗಲಿದೆ. ಜೀ5ನಲ್ಲಿ ಸಿನಿಮಾ ಲಭ್ಯವಾಗಲಿದೆ. ಆಗಸ್ಟ್ 15ರಿಂದ ಸ್ಟ್ರೀಮಿಂಗ್ ಶುರುವಾಗಲಿದೆ.

ವಾಪೂಟ್ಟಿ ಆಗಿ ಮೋಹನ್ ಲಾಲ್, ವೇಣುಗೋಪಾಲ್ ಆಗಿ ಮಮ್ಮುಟಿ, ಬಾಲು ಆಗಿ ಫಹಾದ್ ಫಾಸಿಲ್ ನಟಿಸಿದ್ದಾರೆ. ಬಿಜಿಬಲ್ ಸಂಗೀತ, ಸಂತೋಷ್ ಶಿವನ್ ಛಾಯಾಗ್ರಹಣ 'ಮನೋರಥಂಗಳ್' ವೆಬ್ ಸೀರಿಸ್‌ಗೆ ಇದೆ. ಹೀಗೆ ಮಲಯಾಳಂ ಸ್ಟಾರ್ ನಟರೆಲ್ಲಾ ಒಂದೇ ವೆಬ್ ಸೀರಿಸ್‌ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಕನ್ನಡದಲ್ಲಿ ವೆಬ್‌ಸೀರಿಸ್‌ಗಳ ನಿರ್ಮಾಣವೇ ದೊಡ್ಡದಾಗಿ ಆಗುತ್ತಿಲ್ಲ. ಇನ್ನು ಸ್ಟಾರ್ ನಟರೆಲ್ಲಾ ಹೀಗೆ ಒಟ್ಟಿಗೆ ಕಾಣಿಸಿಕೊಳ್ಳುವ ಕನಸಿನ ಮಾತೇ ಸರಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











