The Kerala Story 2: 2 ವಾರ ರಿಲೀಸ್ ಆಗದಂತೆ 'ದಿ ಕೇರಳ ಸ್ಟೋರಿ 2'ಗೆ ಹೈಕೋರ್ಟ್ ತಡೆ; ನಿರ್ಮಾಪಕರ ನಡೆಯೇನು?

ಎಲ್ಲ ಅಂದುಕೊಂಡಂತೆ ಆಗಿದ್ದರೆ ವಿವಾದಕ್ಕೆ ಸಿಲುಕಿರುವ 'ದಿ ಕೇರಳ ಸ್ಟೋರಿ 2' ನಾಳೆ (ಫೆಬ್ರವರಿ 27) ರಿಲೀಸ್ ಆಗಬೇಕಿತ್ತು. ಆದರೆ, ಈ ಸಿನಿಮಾ ಒಂದು ಟೀಸರ್ ಕೇರಳ ಮಂದಿಯ ನಿದ್ದೆ ಕೆಡಿಸಿತ್ತು. ಹೀಗಾಗಿ ಈ ಸಿನಿಮಾ ರಿಲೀಸ್ ಆಗುವುದಕ್ಕೆ ಬಿಡಬಾರದು ಎಂದು ಕೆಲ ಸಂಘ ಸಂಸ್ಥೆಗಳು ಕೇರಳ ಹೈ ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ವಿಚಾರಣೆ ನಡೆಯುತ್ತಿತ್ತು. ಇಂದು (ಫೆಬ್ರವರಿ 26) ಹೈ ಕೋರ್ಟ್ ಸಿನಿಮಾ ರಿಲೀಸ್ ಮಾಡಂತೆ ತಡೆ ನೀಡಿದೆ.

ಕೇರಳ ಹೈ ಕೋರ್ಟ್‌ನ ನ್ಯಾಯಮೂರ್ತಿ ಬಿಚು ಕುರಿಯನ್ ಥಾಮಸ್ 'ದಿ ಕೇರಳ ಸ್ಟೋರಿ 2' ಬಿಡುಗಡೆ ಬಗ್ಗೆ ಅಂತಿಮ ಆದೇಶವನ್ನು ಹೊರಡಿಸಿದ್ದಾರೆ. ಇನ್ನು 15 ದಿನಗಳ ಕಾಲ ಈ ಸಿನಿಮಾ ರಿಲೀಸ್ ಅನ್ನು ತಡೆಯುವಂತೆ ಆದೇಶಿಸಲಾಗಿದೆ. ತಮ್ಮ ಆದೇಶದಲ್ಲಿ ಈ ಸಿನಿಮಾದ ಫಿಲ್ಮ್ ಮೇಕರ್ಸ್ ಕೇರಳ ರಾಜ್ಯವನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಮಾಡಿದ್ದಾರೆಂದು ಆರೋಪ ಮಾಡಲಾಗಿದೆ.

Kerala High Court ordered 2 week stay On controversial movie The Kerala Story 2 release

ಲಾ ಬೀಟ್ ವರದಿ ಮಾಡಿದಂತೆ ಕೇರಳ ಹೈ ಕೋರ್ಟ್‌ ನ್ಯಾಯಮೂರ್ತಿಗಳು ಆದೇಶದಲ್ಲಿ ಸಿನಿಮಾ ತಂಡಕ್ಕೆ "ಕಲಾತ್ಮಕ ಸ್ವಾತಂತ್ರ್ಯ ಅನ್ನೋದು ಯಾವುದೇ ಒಂದು ರಾಜ್ಯದ ಅಥವಾ ಆ ಜನರ ಗೌರವಕ್ಕೆ ಧಕ್ಕೆಯನ್ನು ತರಬಾರದು" ಎಂದು ತಮ್ಮ ಆದೇಶದಲ್ಲಿ ಹೇಳಿದ್ದಾರೆಂದು ವರದಿಯಾಗಿದೆ. ಶ್ರೀದೇವ್ ನಂಬೂದಿರಿ ಎಂಬುವವರು ಈ ಹಿಂದೆ ಸೆನ್ಸಾರ್ ಮಂಡಳಿ ನೀಡಿದ u/a ಸರ್ಟಿಫಿಕೇಟ್ ಅನ್ನು ತೆಗೆದು ಹಾಕಬೇಕೆಂದು ದೂರು ನೀಡಿದ್ದರು. ಈ ಸಂಬಂಧ 'ದಿ ಕೇರಳ ಸ್ಟೋರಿ 2' ರಿಲೀಸ್ ಬಗ್ಗೆ ವಾದ-ವಿವಾದಗಳು ನಡೆದು ಎರಡು ವಾರಗಳ ಕಾಲ ಸಿನಿಮಾ ರಿಲೀಸ್ ಮಾಡದಂತೆ ಆದೇಶ ಹೊರಡಿಸಲಾಗಿದೆ.

ಕೇರಳ ಹೈ ಕೋರ್ಟ್ ನೀಡಿದ ಆದೇಶದಲ್ಲಿ 'ದಿ ಕೇರಳ ಸ್ಟೋರಿ 2' ಅನ್ನೂ ಯಾಕೆ ತಡೆ ಹಿಡಿಯಲಾಗಿದೆ ಎಂಬ ಕಾರಣವನ್ನು ನೀಡಿದ್ದಾರೆ. " ಈ ಸಿನಿಮಾ ಟೀಸರ್‌ನಲ್ಲಿ ಕಂಟೆಂಟ್ ರಾಜ್ಯದ ಜನರ ನಡುವೆ ಕೋಮು ಸೌಹಾರ್ದವನ್ನು ಹಾಳು ಮಾಡುತ್ತೆ." ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ನ್ಯಾಯಾಧೀಶರು ಈ ಸಿನಿಮಾವನ್ನು ಮರು ಪರಿಶೀಲನೆ ಮತ್ತೆ ಸೆನ್ಸಾರ್‌ ಬೋರ್ಡ್‌ಗೆ ಆದೇಶವನ್ನು ನೀಡಿದೆ. ಹಾಗೇ ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾಜದಲ್ಲಿ ಗೊಂದಲಗಳನ್ನು ಸೃಷ್ಟಿಸಬಾರದು. ಹಾಗೇ ಲಾ ಅಂಡ್ ಆರ್ಡರ್ ಅನ್ನು ಹಾಳು ಮಾಡುವುದಕ್ಕೆ ಕಾರಣವಾಗಬಾರದು ಎಂದು ಅಭಿಪ್ರಾಯ ಪಟ್ಟಿದೆ.

ಈಗಾಗಲೇ 'ದಿ ಕೇರಳ ಸ್ಟೋರಿ 2' ನಿರ್ಮಾಪಕ ವಿಪುಲ್ ಶಾ ಹೈ ಕೋರ್ಟ್‌ನಲ್ಲಿ ಮನವಿಯನ್ನು ಮಾಡಿಕೊಂಡಿದ್ದರು. ಈಗಾಗಲೇ ಸಿನಿಮಾಗೆ ಸೆನ್ಸಾರ್ ಆಗಿದ್ದು, ತಜ್ಞರು ಸಿನಿಮಾವನ್ನು ವೀಕ್ಷಣೆ ಮಾಡಿದ ಬಳಿಕ ಸರ್ಟಿಫಿಕೇಟ್ ಅನ್ನು ನೀಡಲಾಗಿದೆ. ಹೀಗಾಗಿ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಅನುವು ಮಾಡಿಕೊಡಬೇಕು ಇಲ್ಲದೇ ಹೋದಲ್ಲಿ ನಿರ್ಮಾಪಕನಾಗಿ ಸಾಕಷ್ಟು ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತೆ ಎಂದು ಹೇಳಿದ್ದರು. ಆದರೆ, ಕೇರಳ ಹೈ ಕೋರ್ಟ್ ಇದಕ್ಕೆ ಮನ್ನಣೆಯನ್ನು ನೀಡಿಲ್ಲ.

Kerala High Court ordered 2 week stay On controversial movie The Kerala Story 2 release

ಇಷ್ಟೇ ಅಲ್ಲದೆ ಹೈ ಕೋಟ್ ಸಿನಿಮಾದ ಟೀಸರ್ ಹಾಗೂ ತುಣುಕುಗಳನ್ನು ತೆಗೆದು ಹಾಕುವಂತೆ ಹೇಳಿತ್ತು. ಹಾಗೇ ಸಿನಿಮಾದ ಟೈಟಲ್ ಅನ್ನು ಬದಲಾಯಿಸುವಂತೆ ಹೇಳಿತ್ತು. ಕಾರಣ ನಿರ್ಮಾಪಕ ವಿಪುಲ್ ಶಾ ಸಿನಿಮಾ ಕಥೆ ಕೇರಳ ಸುತ್ತವೇ ಸುತ್ತುವುದಿಲ್ಲ ಎಂದು ಹೇಳಿದ್ದರು. ಈ ಕಾರಣಕ್ಕಾಗಿ ಸಿನಿಮಾ ಟೈಟಲ್ ಬದಲಾಯಿಸುವಂತೆ ಹೇಳಿತ್ತು. ಆದರೆ, 'ದಿ ಕೇರಳ ಸ್ಟೋರಿ 2' ನಿರ್ಮಾಪಕರು ಸಿನಿಮಾ ಶೀರ್ಷಿಕೆಯನ್ನು ಬದಲಾಯಿಸುವುದಕ್ಕೆ ಒಪ್ಪಿರಲಿಲ್ಲ.

'ದಿ ಕೇರಳ ಸ್ಟೋರಿ' ಕೂಡ ಹೀಗೆ ವಿವಾದವನ್ನು ಸೃಷ್ಟಿಸಿತ್ತು. ಈ ಸಿನಿಮಾ ತೆರೆಕಂಡಾಗಲೂ ಸಿನಿಮಾ ವಿರುದ್ಧ ಕೇರಳದಲ್ಲಿ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗಿತ್ತು. ಈಗ ಸೀಕ್ವೆಲ್ ಕೂಡ ಇಂತಹದ್ದೇ ವಿವಾದವನ್ನು ಸೃಷ್ಟಿಸಿದೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ಕೇರಳ ಹೈ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿನಿಮಾದ ನಿರ್ಮಾಪಕ ವಿಪುಲ್ ಶಾ ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ. ಹೀಗಾಗಿ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಬಹುದು.

More from Filmibeat

English summary
Kerala High Court ordered 2 week stay On controversial movie The Kerala Story 2 release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X