ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್‌ಗೆ ಅವಾಜ್ ಹಾಕಿದ ಕೆಜಿಎಫ್ ಗರುಡ ರಾಮ್

ಒಂದು ಸಿನಿಮಾ, ಒಂದು ಪಾತ್ರ ಎಂತಹವರ ಬದುಕನ್ನು ಬದಲಿಸಬಲ್ಲದು. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್' ಕೂಡ ಹಲವರ ಬದುಕನ್ನೇ ಬದಲಿಸಿದೆ. ಇದರಲ್ಲಿ 'ಕೆಜಿಎಫ್' ಸಿನಿಮಾ ಖಡಕ್ ವಿಲನ್ ಗರುಡ ಪಾತ್ರದ ರಾಮ್ ಕೂಡ ಒಬ್ಬರು. ಈ ಸಿನಿಮಾ ತೆರೆಕಂಡಲ್ಲಿಂದ ಗರುಡ ರಾಮ್ ಕೈಗೆ ಸಿಗುತ್ತಿಲ್ಲ. ಆ ಮಟ್ಟಿಗೆ ಬ್ಯುಸಿಯಾಗಿದ್ದಾರೆ. ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲೂ ಬಿಡುವಿಲ್ಲದೆ ನಟಿಸುತ್ತಿದ್ದಾರೆ. ಇದೇ ಜೋಷ್‌ನಲ್ಲಿ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ ಲಾಲ್‌ಗೆ ಅವಾಜ್ ಹಾಕಿದ್ದಾರೆ.

ಗರುಡ ರಾಮ್ ಕನ್ನಡ ಸಿನಿಮಾದಲ್ಲಷ್ಟೇ ಅಲ್ಲ, ಬೇರೆ ಬೇರೆ ಭಾಷೆಗಳಲ್ಲೂ ಬ್ಯುಸಿಯಾಗಿದ್ದಾರೆ. ರಾಮ್‌ ಈಗ ಪರಭಾಷೆಯಲ್ಲಿ ಇವರಿಗೆ ಬೇಡಿಕೆ ಹೆಚ್ಚಿದೆ. ತಮಿಳಿನ ಸ್ಟಾರ್‌ ನಟ ಕಾರ್ತಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜಯಂ ರವಿ, ಮಲಯಾಳಂನ ಸೂಪರ್‌ ಸ್ಟಾರ್‌ ಮೋಹನ್‌ಲಾಲ್‌ ಜೊತೆನೂ ನಟಿಸಿ ಬಂದಿದ್ದಾರೆ. ಮೋಹನ್ ಲಾಲ್‌ ಮತ್ತು ಉನ್ನಿಕೃಷ್ಣನ್‌ ಜೋಡಿಯ 'ಆರಾಟ್ಟು' ಸಿನಿಮಾದಲ್ಲಿ ಗರುಡ ರಾಮ್‌ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಗ್ಯಾಪ್‌ನಲ್ಲೇ ಮೋಹನ್ ಲಾಲ್‌ಗೆ ಅವಾಜ್ ಹಾಕಿದ್ದು, ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

 ಮೋಹನ್ ಲಾಲ್‌ಗೆ ಗರುಡ ರಾಮ್ ಅವಾಜ್

ಮೋಹನ್ ಲಾಲ್‌ಗೆ ಗರುಡ ರಾಮ್ ಅವಾಜ್

ಹೌದು.. ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್‌ಗೆ ಅವಾಜ್ ಹಾಕಿದ್ದಾರೆ. ಅದೂ ಮಲಯಾಳಂ ಭಾಷೆಯಲ್ಲಿ ಅಲ್ಲ. ಅಚ್ಚ ಕನ್ನಡದಲ್ಲಿ ಬೇಜಾನ್ ಅವಾಜ್ ಬಿಟ್ಟಿದ್ದಾರೆ. ಈ ವಿಡಿಯೋ ನೋಡಿ ಗರುಡ ರಾಮ್ ಫ್ಯಾನ್ಸ್ ಸಿಕ್ಕಾ ಪಟ್ಟೆ ಥ್ರಿಲ್ ಆಗಿದ್ದಾರೆ. ಈಗಿನ್ನೂ ಫ್ಯಾನ್ ಇಂಡಿಯಾ ವಿಲನ್ ಆಗಿ ಹೆಜ್ಜೆ ಇಡುತ್ತಿರುವ ನಟ ಅದ್ಯಾಕೆ ಮಲಯಾಳಂ ಸೂಪರ್‌ಸ್ಟಾರ್‌ಗೆ ಅವಾಜ್ ಹಾಕಿದ್ದಾರೆ ಅಂತ ಯೋಚನೆ ಮಾಡುತ್ತಿದ್ದಾರಾ? ಗರುಡ ರಾಮ್ ಸೂಪರ್‌ಸ್ಟಾರ್ ಮೋಹನ್ ಲಾಲ್‌ಗೆ ಅವಾಜ್ ಹಾಕಿದ್ದು ನಿಜ. ಆದರೆ, ಅದು ರಿಯಲ್ ಲೈಫ್‌ನಲ್ಲಿ ಅಲ್ಲ. ಇಬ್ಬರೂ ಜೊತೆಯಾಗಿ ನಟಿಸುತ್ತಿರುವ 'ಆರಾಟ್ಟು' ಸಿನಿಮಾದಲ್ಲಿ ಅವಾಜ್ ಬಿಟ್ಟಿದ್ದಾರೆ.

 ಗರುಡ ರಾಮ್ ಬಿಟ್ಟ ಡೈಲಾಗ್ ಏನು?

ಗರುಡ ರಾಮ್ ಬಿಟ್ಟ ಡೈಲಾಗ್ ಏನು?

ಒಂದು ಸಿನಿಮಾದಲ್ಲಿ ಸೂಪರ್‌ಸ್ಟಾರ್‌ಗೆ ಅವಾಜ್ ಹಾಕುವುದು ಅಷ್ಟು ಸುಲಭದ ಮಾತಲ್ಲ. ಡೈಲಾಗ್ ಹೊಡೆಯುವುದರಲ್ಲಿ ಸ್ವಲ್ಪವೂ ಹಿಂದೆ ಮುಂದೆ ಆದರೂ, ಅವರ ಅಭಿಮಾನಿಗಳು ಹಿಗ್ಗಾ-ಮುಗ್ಗಾ ತಿರುಗಿಸಿ ಅವಾಜ್ ಹಾಕಿ ಬಿಡುತ್ತಾರೆ. ಆದರೆ, 'ಆರಾಟ್ಟು' ಸಿನಿಮಾದಲ್ಲಿ ಗರುಡ ರಾಮ್ ಕನ್ನಡದಲ್ಲಿ ಮೋಹನ್ ಲಾಲ್‌ಗೆ ಖಡಕ್ ಡೈಲಾಗ್ ಬಿಟ್ಟಿದ್ದಾರೆ. " ಏಯ್ ನಿನ್ನ ಆಟ ಎಲ್ಲಾ ಚೆನ್ನಾಗಿ ಗೊತ್ತಲೇ ಮಗನೇ.." ಎಂದು ಅವಾಜ್ ಹಾಕಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ಚರ್ಚೆಯಾಗುತ್ತಿದೆ.

 'ಆರಾಟ್ಟು' ಟ್ರೈಲರ್‌ಗೆ ಬಹುಪರಾಕ್

'ಆರಾಟ್ಟು' ಟ್ರೈಲರ್‌ಗೆ ಬಹುಪರಾಕ್

ಮಲಯಾಳಂ ಲೆಜೆಂಡ್ ಮೋಹನ್ ಲಾಲ್ ಅಭಿನಯದ 'ಆರಾಟ್ಟು' ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಕಿಚ್ಚ ಸುದೀಪ್ ಈ ಟ್ರೈಲರ್ ಅನ್ನು ರಿಲೀಸ್ ಮಾಡಿದ್ದಾರೆ. ಟ್ರೈಲರ್ ನೋಡಿ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಮೋಹನ್ ಲಾಲ್ ಡೈಲಾಗ್, ಆಕ್ಷನ್, ಮ್ಯಾನರಿಸಂಗೆ ಉಘೇ ಅಂದಿದ್ದಾರೆ. ಎರಡೂವರೆ ಗಂಟೆಗಳಲ್ಲಿ ಸುಮಾರು ಐದೂವರೆ ಲಕ್ಷಕ್ಕೂ ಅಧಿಕ ಮಂದಿ ಟ್ರೈಲರ್ ನೋಡಿ ಮೆಚ್ಚಿಕೊಂಡಿದ್ದಾರೆ.

 'ಆರಾಟ್ಟು' ಸಿನಿಮಾದಲ್ಲಿ ಕನ್ನಡದ ಇಬ್ಬರು ನಟರು

'ಆರಾಟ್ಟು' ಸಿನಿಮಾದಲ್ಲಿ ಕನ್ನಡದ ಇಬ್ಬರು ನಟರು

'ಆರಾಟ್ಟು' ಹೈ ವೋಲ್ಟೆಜ್ ಸಿನಿಮಾ ಸಿನಿಮಾ ಅನ್ನುವುದು ಟ್ರೈಲರ್ ನೋಡಿದರೆ ಗೊತ್ತಾಗುತ್ತೆ. ವಿಶೇಷ ಅಂದರೆ, ಈ ಟ್ರೈಲರ್‌ನಲ್ಲಿ ಕನ್ನಡದ ಇಬ್ಬರು ನಟರು ಕಾಣಿಸಿಕೊಂಡಿದ್ದಾರೆ. ನಟಿ ಶ್ರದ್ಧಾ ಶ್ರೀನಾಥ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಕಡೆ ಗರುಡ ರಾಮ್ ಖಡಕ್ ಪಾತ್ರ ಒಂದೇ ಒಂದು ಡೈಲಾಗ್ ಮೂಲಕ ಗೊತ್ತಾಗುತ್ತಿದೆ. ಈ ಇಬ್ಬರು ನಟರಿರುವ ಈ ಸಿನಿಮಾ ಅತೀ ಶೀಘ್ರದಲ್ಲಿ ತೆರೆಮೇಲೆ ಪ್ರದರ್ಶನ ಕಾಣಲಿದೆ. ಇತ್ತೀಚೆಗೆ ಮೋಹನ್ ಲಾಲ್ ಸಿನಿಮಾ ಒಟಿಟಿಯಲ್ಲೇ ಹೆಚ್ಚು ರಿಲೀಸ್ ಆಗುತ್ತಿದ್ದು, ಆದರೆ, 'ಆರಾಟ್ಟು' ಥಿಯೇಟರ್‌ಗೆ ಎಂಟ್ರಿ ಕೊಡಲಿದೆ.

More from Filmibeat

English summary
KGF fame actor Garuda Ram scold Mohanlal in Malayalam movie Aaraattu. Mohanlal and Garuda Ram Starrer Aaraattu Movie trailer released. Garuda Ram dailogue creating sensation in social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X