ಮಲಯಾಳಂನ 'ಕಟ್ಟಾಲನ್‌'ಗೆ ಅಜನೀಶ್ ಅಲ್ಲ, ರವಿ ಬಸ್ರೂರ್ ಮ್ಯೂಸಿಕ್; ಪ್ರಿ-ರಿಲೀಸ್ ಬ್ಯುಸಿನೆಸ್‌ನಲ್ಲಿ ದಾಖಲೆ

ದಕ್ಷಿಣ ಭಾರತದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಕ್ರೇಜ್ ದಿನದಿಂದ ದಿನಕ್ಕೆ ಮತ್ತಷ್ಟು ಹೆಚ್ಚಾಗುತ್ತಿದೆ. ಈ ಪ್ಯಾನ್ ಇಂಡಿಯಾ ಸಿನಿಮಾಗಳಿಂದ ದೂರ ಉಳಿದಿದ್ದ ಮಲಯಾಳಂ ಚಿತ್ರರಂಗ ಕೂಡ ಈಗ ಅದೇ ಹಾದಿಯಲ್ಲಿ ಹೆಜ್ಜೆ ಇಡುವುದಕ್ಕೆ ಶುರು ಮಾಡಿದೆ. ಮಾಲಿವುಡ್‌ನ ಮೊತ್ತೊಂದು ಸಿನಿಮಾ 'ಕಟ್ಟಾಲನ್' ದೇಶಾದ್ಯಂತ ಸದ್ದು ಮಾಡುವುದಕ್ಕೆ ಸಜ್ಜಾಗುತ್ತಿದೆ.

ವಿಶೇಷ ಅಂದರೆ, ಈ ಸಿನಿಮಾಕ್ಕೆ 'ಕೆಜಿಎಫ್', 'ಮಾರ್ಕೋ' ಮತ್ತು 'ಟಾಕ್ಸಿಕ್' ಖ್ಯಾತಿಯ ಕನ್ನಡದ ಹೆಮ್ಮೆಯ ಸಂಗೀತ ನಿರ್ದೇಶಕ ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ಈ ಹಿಂದೆ ಈ ಸಿನಿಮಾಗೆ 'ಕಾಂತಾರ' ಖ್ಯಾತಿಯ ಅಜನೀಶ್ ಲೋಕನಾಥ್ ಸಂಗೀತ ನೀಡಲಿದ್ದಾರೆಂದು ಹೇಳಲಾಗಿತ್ತು. ಕೊನೆಗೆ ಈಗ ರವಿ ಬಸ್ರೂರ್ ಅವರಿಗೆ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

KGF fame Ravi Basrur music directed Malayalam movie Kattaalan Pre Release business details

ಬಹುಕೋಟಿ ವೆಚ್ಚದ 'ಕಟ್ಟಾಲನ್' ಸಿನಿಮಾವನ್ನು ಮಲಯಾಳಂ ಕ್ಯೂಬ್ಸ್ ಎಂಟರ್‌ಟೈನ್ಮೆಂಟ್ ನಿರ್ಮಾಣ ಮಾಡಿದೆ. ರವಿ ಬಸ್ರೂರ್ ಸಂಗೀತ ನೀಡುತ್ತಿರುವ ಈ ಸಿನಿಮಾ ಸುಮಾರು 45 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಪ್ಯಾನ್-ಇಂಡಿಯಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದೇ ಮೇ 14 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳು ಈ ಸಿನಿಮಾವನ್ನು ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಇದು ಅತಿದೊಡ್ಡ ಬಿಡುಗಡೆಗಳಲ್ಲಿ ಒಂದಾಗಲಿದೆ ಎಂದು ನಿರೀಕ್ಷಿಸಿದ್ದಾರೆ.

ಮಲಯಾಳಂ ಸಿನಿಮಾ 'ಕಟ್ಟಾಲನ್' ಈಗಾಗಲೇ ಸಿನಿಮಾ ಮಂದಿಯ ಗಮನ ಸೆಳೆದಿದೆ. ಬಹುಕೋಟಿ ವೆಚ್ಚದ ಸಿನಿಮಾ ಆಗಿದ್ದರಿಂದ ಪ್ಯಾನ್ ಇಂಡಿಯಾ ರಿಲೀಸ್‌ಗೆ ಮುಂದಾಗಿದ್ದು, ಈಗಾಗಲೇ ಪ್ರಿ-ರಿಲೀಸ್‌ನಲ್ಲಿ ದಾಖಲೆ ವ್ಯವಹಾರ ಕುದುರಿಸಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಸಿನಿಮಾದ ಹೈಲೈಟ್ ಏನು? ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿರುವುದಕ್ಕೆ ಕಾರಣವೇನು? ತಿಳಿಯುವುದಕ್ಕೆ ಮುಂದೆ ಓದಿ.

Also Read
ಲೈಂ*ಗಿಕ ಕಿರುಕುಳ ಆರೋಪ ; ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ರಂಜಿತ್ ಅರೆಸ್ಟ್ - ನಡುಗಿದ ಮಲಯಾಳಂ ಚಿತ್ರರಂಗ
ಲೈಂ*ಗಿಕ ಕಿರುಕುಳ ಆರೋಪ ; ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ರಂಜಿತ್ ಅರೆಸ್ಟ್ - ನಡುಗಿದ ಮಲಯಾಳಂ ಚಿತ್ರರಂಗ

ರವಿ ಬಸ್ರೂರ್ ಸಂಗೀತ ನೀಡುತ್ತಿರುವ 'ಕಟ್ಟಾಲನ್' ಸಿನಿಮಾದ ಪ್ರಮುಖ ಪಾತ್ರದಲ್ಲಿ ಆಂಟೋನಿ ವರ್ಗೀಸ್ (Antony Varghese) ನಾಯಕನಾಗಿ ನಟಿಸುತ್ತಿದ್ದಾರೆ. ಇದು ಅವರ ವೃತ್ತಿ ಬದುಕಿನ ಬಿಗ್ ಬಜೆಟ್ ಸಿನಿಮಾಗಳಲ್ಲಿ ಒಂದು. ಇದರೊಂದಿಗೆ ತೆಲುಗಿನ ಸ್ಟಾರ್ ನಟ ಸುನಿಲ್, ಕಬೀರ್ ದುಹಾನ್ ಸಿಂಗ್ ಮತ್ತು ಬಾಲಿವುಡ್‌ನ ಪಾರ್ಥ್ ತಿವಾರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದುಶಾರಾ ವಿಜಯನ್ ಈ ಸಿನಿಮಾದ ಮೂಲಕ ಮಲಯಾಳಂಗೆ ಪದಾರ್ಪಣೆ ಮಾಡುತ್ತಿರೋದು ಮತ್ತೊಂದು ವಿಶೇಷ.

KGF fame Ravi Basrur music directed Malayalam movie Kattaalan Pre Release business details

ಈ ಸಿನಿಮಾದಲ್ಲಿ ಅಂತರಾಷ್ಟ್ರೀಯ ಮಟ್ಟದ ಆಕ್ಷನ್ ಸೀಕ್ವೆನ್ಸ್ ಇರೋದು ಹೈಲೈಟ್. ಥೈಲ್ಯಾಂಡ್‌ನಲ್ಲಿ ಈ ಸಿನಿಮಾದ ಸಾಹಸ ದೃಶ್ಯಗಳನ್ನು ಶೂಟಿಂಗ್ ಮಾಡಲಾಗಿದೆ. 'ಆಂಗ್-ಬಾಕ್' ಸೀರಿಸ್‌ನ ಖ್ಯಾತ ಸ್ಟಂಟ್ ಮಾಸ್ಟರ್ ಕೆಚಾ ಖಾಂಫಕ್ಡೀ ಈ ದೃಶ್ಯಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನೊಂದ ವಿಶೇಷವೆಂದರೆ 'ಆಂಗ್-ಬಾಕ್' ಖ್ಯಾತಿಯ 'ಪಾಂಗ್' ಎಂಬ ಆನೆ ಕೂಡ ಈ ಸಿನಿಮಾದಲ್ಲಿದೆ.

ಸಾಕಷ್ಟು ವಿಶೇಷತೆಗಳನ್ನು ಹೊಂದಿರುವ 'ಕಟ್ಟಾಲನ್' ಶೂಟಿಂಗ್ ಮುಗಿಯುವ ಮೊದಲೇ ಮಲಯಾಳಂ ಚಿತ್ರರಂಗದ ಹಲವು ಪ್ರಿ-ರಿಲೀಸ್ ದಾಖಲೆಗಳನ್ನು ಬ್ರೇಕ್ ಮಾಡಿದೆ. T-Series ಸಂಸ್ಥೆ ಈ ಸಿನಿಮಾದ ಆಡಿಯೋ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದ್ದು, ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳನ್ನು ಶೆಮಾರು (Shemaroo) ಸಂಸ್ಥೆ ಪಾಲಾಗಿದೆ ಎನ್ನಲಾಗಿದೆ.

'ಕಟ್ಟಾಲನ್' ಸಿನಿಮಾವನ್ನು ಪಾಲ್ ಜಾರ್ಚ್ ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಅನ್ನೋದು ವಿಶೇಷ. ಕ್ಯೂಬ್ಸ್ ಎಂಟರ್‌ಟೈನ್‌ಮೆಂಟ್ಸ್‌ನ ಶರೀಫ್ ಮೊಹಮ್ಮದ್ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಮಲಯಾಳಂ ಸೇರಿದಂತೆ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ರವಿ ಬಸ್ರೂರ್ ಮಾಸ್ ಬಿಜಿಎಂ ಹಾಗೂ ಸಾಂಗ್ಸ್ 'ಕಟ್ಟಾಲನ್' ಸಿನಿಮಾಗೆ ಥಿಯೇಟರ್‌ನಲ್ಲಿ ಕಿಕ್ ಕೊಡಲಿದೆ.

More from Filmibeat

English summary
KGF fame Ravi Basrur music directed Malayalam movie Kattaalan Pre Release business details.
Read more about: ravi basrur music
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X