'ಧೂಮಂ'ನಲ್ಲಿ 'ಕೆಜಿಎಫ್ 2' ಸೀನ್ ಯಾಕೆ? ಉದ್ದೇಶಪೂರ್ವಕವಾಗಿಯೇ ತೋರಿಸಿದ್ರಾ?ಕನೆಕ್ಷನ್ ಏನು?

'ಕೆಜಿಎಫ್', 'ಕಾಂತಾರ' ದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿದ ಹೊಂಬಾಳೆ ಸಂಸ್ಥೆ ಬೇರೆ ಭಾಷೆಗೂ ಲಗ್ಗೆ ಇಟ್ಟಿದ್ದು ಗೊತ್ತಿದೆ. ಅದರಲ್ಲೂ ಮಲಯಾಳಂ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು ಹಳೇ ವಿಷಯ. ಆದ್ರೀಗ ಅದೇ ಸಿನಿಮಾ ಟ್ರೈಲರ್ ರಿಲೀಸ್ ಮಾಡಿ ಮತ್ತಷ್ಟು ಕುತೂಹಲ ಮೂಡಿಸಿದೆ.

ಹೊಂಬಾಳೆ ಫಿಲ್ಮ್ಸ್ ತನ್ನ ಮೊದಲ ಮಲಯಾಳಂ ಸಿನಿಮಾ ಟೈಟಲ್ 'ಧೂಮಂ' ಅನೌನ್ಸ್ ಮಾಡಿತ್ತು. ಅಲ್ಲಿಂದ ಇಲ್ಲಿವರೆಗೂ ಈ ಸಿನಿಮಾವನ್ನು ರಹಸ್ಯವಾಗಿಯೇ ಇಟ್ಟಿತ್ತು. ಹೆಸರಿಗೆ ತಕ್ಕಂತೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಅನ್ನೋದನ್ನು ಸಿನಿಮಾ ಟ್ರೈಲರ್ ಹೇಳಿದೆ.

KGF2 Scene in Hombale Films,Pawan Kumar,Fahadh Faasils Dhoomam movie Trailer

'ಯೂಟರ್ನ್' ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದ ನಿರ್ದೇಶಕ ಪವನ್ ಕುಮಾರ್ 'ಧೂಮಂ' ಸೂತ್ರಧಾರ. ಮಲಯಾಳಂ ನಟ ಫಹಾದ್ ಫಾಸಿಲ್ ಹೀರೊ. ಥಿಯೇಟರ್‌ನಲ್ಲಿ ತೋರಿಸುವ ಧೂಮಪಾನ ಆರೋಗ್ಯ ಹಾನಿಕರ ಅನ್ನೋ ಕಾನ್ಸೆಪ್ಟ್‌ನಿಂದ ಟ್ರೈಲರ್ ಆರಂಭ ಆಗುತ್ತೆ. ಈ ಮಧ್ಯೆ 'ಕೆಜೆಎಫ್ 2' ಸೀನ್ ಕೂಡ ಬಂದು ಹೋಗುತ್ತೆ. ಅಸಲಿಗೆ ಈ ಸೀನ್ ಯಾಕೆ?

'ಧೂಮಂ' ಟ್ರೈಲರ್‌ನಲ್ಲಿ ಏನೇನಿದೆ?

'ಧೂಮಂ' ಟ್ರೈಲರ್ ನೋಡಿದ್ಮೇಲೆ ಇದು ಧೂಮಪಾನದ ಬಗ್ಗೆ ಉಪದೇಶ ಕೊಡುವ ಸಿನಿಮಾ ಅಲ್ಲ ಅನ್ನೋದು ಗೊತ್ತಾಗುತ್ತೆ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಸ್ಟೋರಿ. ಸಿನಿಮಾದ ಎರಡು ಪ್ರಮುಖ ಪಾತ್ರ ಫಹಾದ್ ಫಾಸಿಲ್ ಹಾಗೂ ಅಪರ್ಣ ಬಾಲಮುರಳಿ ನಡುವೆ ಸುತ್ತುವ ಕಥೆ.

ಸಮಯದ ವಿರುದ್ಧದ ಓಟದಲ್ಲಿ ಸಿಲುಕಿರುವ ಅವಿ (ಫಹಾದ್ ಫಾಸಿಲ್) ಮತ್ತು ದಿಯಾ (ಅಪರ್ಣ) ಪಾತ್ರಗಳು ಅಪಾಯ ಹಾಗೂ ಮನಸ್ಸಿನ ಭಯವನ್ನು ಮೆಟ್ಟಿ ನಿಲ್ಲುವುದಕ್ಕೆ ಏನೆಲ್ಲಾ ತ್ಯಾಗಗಳನ್ನು ಮಾಡುತ್ತಾರೆ ಎಂಬುದೇ ಕಥೆ. ನಿರ್ದೇಶನ, ಕಥೆ, ಚಿತ್ರಕಥೆ ಎಲ್ಲವೂ ಪವನ್ ಕುಮಾರ್ ಅವರದ್ದೇ ಹೀಗಾಗಿ 'ಧೂಮಂ'ನಲ್ಲಿ ಧಮ್ ಇರುತ್ತೆ ಅನ್ನೋ ನಿರೀಕ್ಷೆ ಇಟ್ಟುಕೊಳ್ಳಬಹುದು.

KGF2 Scene in Hombale Films,Pawan Kumar,Fahadh Faasils Dhoomam movie Trailer

'ಕೆಜಿಎಫ್ 2' ಸೀನ್ ಯಾಕೆ?

ಇಷ್ಟೆಲ್ಲಾ ಇದ್ದರೂ, ಟ್ರೈಲರ್‌ನಲ್ಲಿ ಒಮ್ಮೆ 'ಕೆಜಿಎಫ್ 2' ಸೀನ್ ಬಂದು ಹೋಗುತ್ತೆ. ರಾಕಿ ಭಾಯ್ ಗನ್‌ನಿಂದ ಸಿಗರೇಟು ಹೊತ್ತಿಸಿಕೊಳ್ಳುವ ಫೇಮಸ್ ಸೀನ್. ಅದನ್ನು ಫಹಾದ್ ಫಾಸಿಲ್ ವೀಕ್ಷಿಸುತ್ತಿರುವ ದೃಶ್ಯನಲ್ಲಿದೆ. 'ಕೆಜಿಎಫ್ 2' ಸಿನಿಮಾ ಸೀನ್ 'ಧೂಮಂ'ನಲ್ಲಿ ಯಾಕೆ? ಅಂತ ಸಿನಿಪ್ರಿಯರು ತೆಗೆ ಹುಳ ಬಿಟ್ಟಿಕೊಂಡಿದ್ದಾರೆ.

ಅಂದ್ಹಾಗೆ, ಸಿನಿಮಾದಲ್ಲಿ 'ಕೆಜಿಎಫ್ 2' ದೃಶ್ಯಕ್ಕೆ ಮಾನ್ಯತೆ ಇದೆಯೇ? ಅಥವಾ ಧೂಮಪಾನದ ದೃಶ್ಯವನ್ನು ವಿವರಿಸಲಷ್ಟೇ ಬಳಸಿಕೊಳ್ಳಲಾಗಿದೇ? ಇಲ್ಲಾ ಪ್ರೇಕ್ಷಕರನ್ನು ಸೆಳೆಯಲು ಉದ್ದೇಶ ಪೂರ್ವಕವಾಗಿಯೇ ಈ ಸೀನ್ ಇಟ್ಟಿದ್ದಾರೇ ಅನ್ನೋದು ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಗೊತ್ತಾಗಲಿದೆ.

ಧೂಮಂ ರಿಲೀಸ್ ಯಾವಾಗ?

ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ 'ಧೂಮಂ'ಸಿನಿಮಾವನ್ನು ನಿರ್ಮಿಸಿದೆ. ಟ್ರೈಲರ್ ಮೂಲಕ ಪ್ರಚಾರ ಆರಂಭಿಸಿರುವ ತಂಡ ಸಿನಿಮಾವನ್ನು ಜೂನ್ 23ಕ್ಕೆ ರಿಲೀಸ್ ಮಾಡುತ್ತಿದೆ. ಮಲಯಾಳಂ ಜೊತೆ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ ಟ್ರೈಲರ್ ರಿಲೀಸ್ ಮಾಡಿದೆ.

'ಪುಷ್ಪ' ಖ್ಯಾತಿಯ ಫಹಾದ್ ಫಾಸಿಲ್, ಅಪರ್ಣ ಬಾಲಮುರಳಿ, ಅಚ್ಯುತ್ ಕುಮಾರ್, ರೋಶನ್ ಮ್ಯಾಥ್ಯೂ, ವಿನೀತ್ ರಾಧಾಕೃಷ್ಣನ್, ಅನು ಮೋಹನ್, ಜಾಯ್ ಮ್ಯಾಥ್ಯೂ, ನಂದು ಸೇರಿದಂತೆ ಹಲವರು ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಟ್ಯೂನ್ ಹಾಕಿದ್ದಾರೆ. ಇದೇ ಜೂನ್ 23ರಂದು ಕೇರಳ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಆಗುತ್ತಿದೆ.

More from Filmibeat

English summary
KGF2 Scene in Hombale Films,Pawan Kumar,Fahadh Faasil's Dhoomam movie Trailer, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X