ತನಿಖಾಧಿಕಾರಿಗಳನ್ನೇ ಕೊಲ್ಲಲು ಯತ್ನಿಸಿದ್ದ ನಟ ದಿಲೀಪ್; ಏನಂತಾರೆ ಪೊಲೀಸರು?

2017 ರಲ್ಲಿ ಮಲಯಾಳಂ ನಟ ದಿಲೀಪ್ ಸ್ಟಾರ್ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಹಲ್ಲೆಗೆ ಮುಂದಾಗಿದ್ದರು ಎನ್ನಲಾದ ಪ್ರಕರಣಕ್ಕೆ ಭಯಂಕರ ಟ್ವಿಸ್ಟ್ ಸಿಕ್ಕಿದೆ. ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದ ನಟಿಯ ಮೇಲಿನ ಅತ್ಯಾಚಾರ ಯತ್ನ ಹಾಗೂ ಹಲ್ಲೆಯ ಹಿಂದಿನ ರೂವಾರಿ ಮಲಯಾಳಂ ಸ್ಟಾರ್ ನಟ ದಿಲೀಪ್ ಎನ್ನುವ ಆರೋಪವಿದೆ. ಈ ಪ್ರಕರಣದ ಸಂಬಂಧ ಕೇರಳ ಪೊಲೀಸರಿಗೆ ಹೊಸ ಮಾಹಿತಿಯೊಂದು ಸಿಕ್ಕಿದೆ. ಇದೇ ವಿಚಾರವಾಗಿ ಕ್ರೈಂ ಬ್ರ್ಯಾಂಚ್ ಇಂದು( ಜನವರಿ 21) ನಟ ದಿಲೀಪ್ ಅವರನ್ನು ಕಸ್ಟಡಿಗೆ ಪಡೆಯುವ ಸಾಧ್ಯತೆಗಳಿವೆ.

ಕೆಲವು ದಿನಗಳ ಹಿಂದೆ ಕೇರಳದ ಕ್ರೈಂ ಬ್ರ್ಯಾಂಚ್ ಪೊಲೀಸರು ನಟ ದಿಲೀಪ್ ಹಾಗೂ ಅವರ ಸಹೋದರನ ಮನೆಗಳ ಮೇಲೆ ದಾಳಿ ನಡೆಸಿದ್ದರು. ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಯುತ್ತಿದ್ದ ಅಧಿಕಾರಿಗಳ ಮೇಲೆ ದಾಳಿ ನಡೆಸಲು ನಟ ದಿಲೀಪ್ ಸಂಚು ನಡೆಸಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಈ ವಿಚಾರವನ್ನು ಕ್ರೈಂ ಬ್ರ್ಯಾಂಚ್ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಹೆಚ್ಚಿನ ತನಿಖೆಗಾಗಿ ಕಸ್ಟಡಿಗೆ ಪಡೆಯುವ ಸಾಧ್ಯತೆಗಳಿವೆ.

ಅಧಿಕಾರಿಗಳನ್ನೇ ಕೊಲ್ಲಲು ಯತ್ನಿಸಿದ್ದ ದಿಲೀಪ್

ಅಧಿಕಾರಿಗಳನ್ನೇ ಕೊಲ್ಲಲು ಯತ್ನಿಸಿದ್ದ ದಿಲೀಪ್

ಸ್ಟಾರ್ ನಟಿ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಹಲ್ಲೆ ಆರೋಪ ಎದುರಿಸುತ್ತಿರುವ ಮಲಯಾಳಂ ನಟ ದಿಲೀಪ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದ ಅಧಿಕಾರಿಗಳನ್ನು ಕೊಲ್ಲಲು ಐವರೊಂದಿಗೆ ಸೇರಿಕೊಂಡು ದಿಲೀಪ್ ಸಂಚು ರೂಪಿಸಿದ್ದರು ಎಂದು ಕೇರಳ ಪೊಲೀಸರು ಆರೋಪಿಸಿದ್ದಾರೆ. "ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಗಂಭೀರ ಅಪರಾಧದ ಆರೋಪಿಯೊಬ್ಬ ತನಿಖಾಧಿಕಾರಿಗಳ ಜೀವಕ್ಕೆ ಹಾನಿ ಮಾಡಲು ಕ್ರಿಮಿನಲ್ ಸಂಚು ರೂಪಿಸಿದ್ದಾನೆ. ದಿಲೀಪ್ ವಿರುದ್ಧದ ಆರೋಪಗಳು ತುಂಬಾ ಗಂಭೀರ ಸ್ವರೂಪದ್ದಾಗಿವೆ. ಹಾಗಾಗಿ ಆರೋಪದ ಸತ್ಯಾಸತ್ಯತೆ ಹೊರಬರಲು ಆತನ ಕಸ್ಟಡಿಗೆ ಪಡೆದು ವಿಚಾರಣೆ ಮಾಡುವುದು ಅಗತ್ಯ." ಎಂದು ಕೇರಳದ ಕ್ರೈಂ ಬ್ರ್ಯಾಂಚ್ ಪೊಲೀಸರು ತಿಳಿಸಿದ್ದಾರೆ.

ಜಾಮೀನು ನೀಡುವ ಬಗ್ಗೆ ಪೊಲೀಸರ ವಿರೋಧ

ಜಾಮೀನು ನೀಡುವ ಬಗ್ಗೆ ಪೊಲೀಸರ ವಿರೋಧ

ಮಲಯಾಳಂ ನಟ ದಿಲೀಪ್ ಸಂಕಷ್ಟದ ಮೇಲೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಟಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರಕರಣ ಎದುರಿಸುತ್ತಿದ್ದಾರೆ. ಈ ಮಧ್ಯೆ ತನಿಖಾಧಿಕರನ್ನು ಕೊಲ್ಲಲು ಮುಂದಾಗಿದ್ದ ಹೊಸ ಕೇಸ್ ಕೂಡ ಇವರ ಮೇಲಿದೆ. ಹೀಗಾಗಿ ದಿಲೀಪ್ ನಿರೀಕ್ಷಣಾ ಜಾಮೀನನ್ನು ಪಡೆಯಲು ಮುಂದಾಗಿದ್ದಾರೆ. ಈ ಬಗ್ಗೆ ಕೇರಳ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದು, ನಿರೀಕ್ಷಣಾ ಜಾಮೀನು ನೀಡಿದರೆ, ಇದುವರೆಗೂ ತನಿಖೆ ನಡೆಸಿದ್ದೆಲ್ಲಾ ಹಾಳಾಗಿ ಹೋಗುತ್ತೆ ಎಂದು ಎರ್ನಾಕುಲಂನ ಕ್ರೈಂ ಬ್ರ್ಯಾಂಚ್‌ನ ಎಸ್‌ಪಿ ಎಂಪಿ ಮೋಹನಚಂದ್ರನ್ ತಿಳಿಸಿದ್ದಾರೆ.

ಸಮಸ್ಯೆಯಿಂದ ಹೊರ ಬರಲು ದಿಲೀಪ್ ಯತ್ನ

ಸಮಸ್ಯೆಯಿಂದ ಹೊರ ಬರಲು ದಿಲೀಪ್ ಯತ್ನ

ಮಲಯಾಳಂ ನಟ ದಿಲೀಪ್ ಲೈಂಗಿಕ ಪ್ರಕರಣ ಹಾಗೂ ಹಲ್ಲೆ ಯತ್ನಕ್ಕೆ ಸಂಬಂಧಿಸಿದಂತೆ ಕಾನೂನು ಕಪಿಮುಷ್ಠಿಯಿಂದ ಹೊರಬರಲು ಪ್ರಯತ್ನ ಪಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದಿಲೀಪ್‌ಗೆ ಸಹಾಯ ಮಾಡಿದ 20 ಸಾಕ್ಷಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಅಲ್ಲದೆ ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ್ದಕ್ಕೆ ಎರಡು ದೂರುಗಳನ್ನು ಪೊಲೀಸರು ದಾಖಲು ಮಾಡಲಾಗಿದೆ.

ಹಲ್ಲೆಗೊಳಗಾಗಿದ್ದ ನಟಿಯ ಪತ್ರ

ಹಲ್ಲೆಗೊಳಗಾಗಿದ್ದ ನಟಿಯ ಪತ್ರ

ಮಲಯಾಳಂ ನಟ ದಿಲೀಪ್ ಮೇಲೆ ಹೊಸ ಪ್ರಕರಣ ದಾಖಲಾಗುತ್ತಿದ್ದಂತೆ ಲೈಂಗಿಕ ದೌರ್ಜನ್ಯ ಹಾಗೂ ಹಲ್ಲೆಗೆ ಒಳಗಾಗಿದ್ದ ನಟಿ ಪತ್ರ ಬರೆದಿದ್ದರು. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಂದಿನ ಘಟನೆ ಬಗ್ಗೆ ನಟಿ ವಿವರವಾಗಿ ಬರೆದುಕೊಂಡಿದ್ದಾರೆ. 'ನ್ಯಾಯಕ್ಕಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ನಾನು ಒಂಟಿಯಲ್ಲ ಎನಿಸಿದೆ' ಎಂದು, ಆ ನಟಿಗೆ ಬೆಂಬಲಕ್ಕೆ ಇಡೀ ಮಲಯಾಳಂ ಚಿತ್ರರಂಗ ಬೆಂಬಲ ಸೂಚಿಸಿದೆ.

More from Filmibeat

English summary
Malayalam actor Dileep plotting to kill the investigating officers in actor abduction and assault incident. Dileep and five others were involved in the conspiracy. A serious offence hatched a criminal conspiracy to harm the life of even the investigating officers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X