ಕರ್ನಾಟಕದ ಪಠ್ಯಪುಸ್ತಕದಲ್ಲಿ ಪೋಸ್ಟ್‌ಮ್ಯಾನ್ ಆದ ಮಲಯಾಳಂ ನಟ: ಸರ್ಕಾರಿ ಕೆಲಸ ಸಿಕ್ಕಿತು ಎಂದ ನಟ

ಕರ್ನಾಟಕದ ಶಾಲಾ ಪಠ್ಯ ಪುಸ್ತಕದಲ್ಲಿ ಮತ್ತೊಂದು ಎಡವಟ್ಟು ಆಗಿದೆ. ಪ್ರಸಿದ್ಧ ಮಲಯಾಳಂ ನಟನ ಫೋಟೊವನ್ನು ಪಠ್ಯಪುಸ್ತಕದಲ್ಲಿ ಪೋಸ್ಟ್‌ಮ್ಯಾನ್ ರೀತಿ ಬಿಂಬಿಸಲಾಗಿದೆ. ಈ ಫೋಟೊವನ್ನು ಮಲಯಾಳಂ ನಟ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಷ್ಟೇ ಅಲದೆ ಕೊನೆಗೂ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದಾಗಿ ಮಲಯಾಳಂ ನಟ ಜೋಕ್ ಮಾಡಿದ್ದಾರೆ.

ಅಂದಹಾಗೇ ಆ ನಟ ಹೆಸರು ಕುಂಚಕ್ಕೊ ಬೊಬನ್. ಮಲಯಾಳಂ ಚಿತ್ರರಂಗದಲ್ಲಿ ಸುಮಾರು 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲ ನಟನಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದ ನಟ, ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸ್ವತಃ ನಿರ್ಮಾಪಕರು ಆಗಿರುವ ಬೊಬನ್ ಮಲಯಾಳಂ ಚಿತ್ರರಂಗದ ಕುಂಚಕ್ಕೊ ಕುಟುಂಬ ಸೇರಿದವರು. ಈ ಕುಟುಂಬ ಮಲಯಾಳಂ ಚಿತ್ರರಂಗದಲ್ಲಿ ಹಲವು ಸಿನಿಮಾಗಳನ್ನು ನಿರ್ಮಿಸಿ, ವಿತರಣೆ ಮಾಡಿದ್ದಾರೆ.

ಕರ್ನಾಟಕದ ಶಾಲಾ ಪಠ್ಯಪುಸ್ತಕದಲ್ಲಿ ಪೋಸ್ಟ್‌ಮ್ಯಾನ್ ಆದ ಬೊಬನ್

ಹೌದು, ಕರ್ನಾಟಕದ ಶಾಲಾ ಪಠ್ಯಪುಸ್ತಕದಲ್ಲಿ ಇದೇ ಮಲಯಾಳಂ ನಟ ಕುಂಚಕ್ಕೊ ಬೊಬನ್‌ರನ್ನು ಪೋಸ್ಟ್‌ಮ್ಯಾನ್ ರೀತಿ ಬಿಂಬಿಸಲಾಗಿದೆ. ಇದು ಬೊಬನ್ ಗಮನಕ್ಕೆ ಬರುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆ ಫೋಟೊವನ್ನು ಹಂಚಿಕೊಂಡಿದ್ದು, ಪೋಸ್ಟ್‌ಮ್ಯಾನ್ ಫೋಟೊ ಬಗ್ಗೆ ಜೋಕ್ ಮಾಡಿದ್ದಾರೆ. ಕೊನೆಗೂ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡೆ ಎಂದಿದ್ದಾರೆ.

Malayalam actor Kunchacko Boban become postman in Karnataka school textbook

"ಕೊನೆಗೂ ಕರ್ನಾಟಕದಲ್ಲಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡೆ. ಹಲವು ವರ್ಷಗಳಿಂದ ಪತ್ರಗಳನ್ನು ತಲುಪಿಸುತ್ತಿದ್ದ ಪೋಸ್ಟ್‌ಮ್ಯಾನ್ ಪ್ರಾರ್ಥನೆ ಈಡೇರಿದೆ." ಎಂದು ಆ ಫೋಟೊಗೆ ಶೀರ್ಷಿಕೆ ಕೊಟ್ಟಿದ್ದಾರೆ. ಈ ಫೋಟೊವನ್ನು ಶೇರ್ ಮಾಡುವಾಗ ತಮ್ಮನ್ನು ತಾವು ಪೋಸ್ಟ್ ಮ್ಯಾನ್ ಎಂದು ಪರಿಚಯಿಸಿಕೊಂಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೊ ವೈರಲ್ ಆಗುತ್ತಿದೆ. ನೆಟ್ಟಿಗರು ಈ ಫೋಟೊಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.

2010ರಲ್ಲಿ ಬಿಡುಗಡೆಯಾಗಿದ್ದ ಅವರದ್ದೇ ಸಿನಿಮಾದ ಫೋಟೊ

ಮಲಯಾಳಂ ನಟ ಕುಂಚಕ್ಕೊ ಬೊಬನ್ 2010ರಲ್ಲಿ 'ಒರಿದಥೊರು ಪೋಸ್ಟ್‌ಮ್ಯಾನ್' ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಬೊಬನ್ ಹಳ್ಳಿಗಳಿಗೆ ಹೋಗಿ ಪತ್ರಗಳನ್ನು ತಲುಪಿಸುವ ಪೋಸ್ಟ್‌ಮ್ಯಾನ್ ಪಾತ್ರ ಕಾಣಿಸಿಕೊಂಡಿದ್ದರು. ಅದೇ ಸಿನಿಮಾದ ಫೋಟೊವನ್ನು ಕರ್ನಾಟಕದ ಶಾಲಾ ಪಠ್ಯಪುಸ್ತಕದಲ್ಲಿ ಬಳಸಲಾಗಿದೆ. ಈ ಫೋಟೊ ಬಗ್ಗೆ ಮಲಯಾಳಂ ಸಿನಿಮಾ ನಿರ್ದೇಶಕ ಮಿಧುನ್ ಮ್ಯಾನ್ಯೂಯಲ್ ಥಾಮಸ್ ತಮಾಷೆಯಾಗಿ ಕಾಲೆಳೆದಿದ್ದಾರೆ.

"ನಿನ್ನ ಕೆಲಸ ಹೇಗೆ ನಡೆಯುತ್ತಿದೆ. ಈಗತಾನೇ ಕೆಲಸ ಸಿಕ್ಕಿದೆ. ಹಾಗಾಗಿ ನಿನಗೆ ರಜೆ ಸಿಗುವುದಿಲ್ಲ. ನಾನು ಈಗಾಗಲೇ ಕಥೆ ಬರೆಯಲು ಆರಂಭಿಸಿದ್ದೇನೆ. ರಾಜು ನಂಬರ್ ಸಿಕ್ಕ ಕೂಡಲೇ ನನಗೆ ಕಳಿಸು ಎಂದು ಕಮೆಂಟ್ ಮಾಡಿದ್ದಾರೆ. ಕುಂಚಕ್ಕೊ ಬೊಬನ್ ಕೊನೆಯದಾಗಿ 'ಭೀಮಂತೆ ವಾಳಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 'ರೆಂಡಗಮ್', 'ಪಾಕಲುಂ', 'ಪಕಲುಂ ಪಾಥಿರಾವನ್' 'ಅರಿಯಿಪ್ಪು' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಪಠ್ಯ ಪುಸ್ತಕದಿಂದ ಫೋಟೊ ತೆಗೆಯಲು ಸಾಧ್ಯವೇ?

ಮಲಯಾಳಂ ನಟ ಬೊಬನ್ ಫೋಟೊವನ್ನು ಪಠ್ಯಪುಸ್ತಕದಿಂದ ತೆಗೆಯಲು ಸಾಧ್ಯವೇ ಎಂಬ ಪ್ರಶ್ನೆ ಮೂಡುವುದು ಸಹಜ. ಆದರರ, ಈಗಾಗಲೇ ಮಕ್ಕಳ ಪಠ್ಯ ಪುಸ್ತಕ ಪ್ರಿಂಟ್ ಆಗಿ ಮಕ್ಕಳ ಕೈ ಸೇರಿದೆ. ಅಲ್ಲದೆ ಇದೊಂದು ಫೋಟೊಗಾಗಿ ಇಡೀ ಪಠ್ಯ ಪುಸ್ತಕವನ್ನು ಪ್ರಿಂಟ್ ಹಾಕಲು ಅಸಾಧ್ಯ. ಹೀಗಾಗಿ ಕರ್ನಾಟಕ ಸರ್ಕಾರ ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನುವ ಕುತೂಹಲವಿದು. ಅಲ್ಲದೆ ಫೋಟೊ ಸಾಂದಾರ್ಭಿಕ ಚಿತ್ರ ಆಗಿರುವುದರಿಂದ ಸಮಸ್ಯೆ ಎದುರಾಗುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಮಲಯಾಳಂ ನಟ ಬೊಬನ್ ಫೋಟೊ ಕರ್ನಾಟಕದ ಪಠ್ಯ ಪುಸ್ತಕದಲ್ಲಿ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ.

More from Filmibeat

English summary
Malayalam actor Kunchacko Boban become postman in Karnataka school textbook. Kunchacko Boban acted as village postman in 2010 movie Oridathoru Postman. He says finally get a govt job.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X