ನಟ, ಮಿಮಿಕ್ರಿ ಕಲಾವಿದ ಕಲಾಭವನ್ ಜಯೇಶ್ ನಿಧನ

ಖ್ಯಾತ ಮಲಯಾಳಂ ನಟ ಮತ್ತು ಮಿಮಿಕ್ರಿ ಕಲಾವಿದ ಕಲಾಭವನ್ ಜಯೇಶ್ (44) ಅವರು ಕೇರಳದ ಕೊಡಕರ ಶಾಂತಿ ಆಸ್ಪತ್ರೆಯಲ್ಲಿ ಭಾನುವಾರ ಸಂಜೆ ನಿಧನರಾದರು.

ಕಳೆದ ಒಂದು ವರ್ಷದಿಂದ ಕ್ಯಾನ್ಸರ್‌ ವಿರುದ್ಧ ಹೋರಾಟ ನಡೆಸುತ್ತಿದ್ದ ಅವರ ಆರೋಗ್ಯದಲ್ಲಿ ಏರುಪೇರು ಸಂಭವಿಸಿದ್ದರಿಂದ ಕಳೆದ ವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಸೋಮವಾರ ಅವರ ಅಂತ್ಯ ಸಂಸ್ಕಾರ ನಡೆಯಿತು.

ಕಳೆದ ಎರಡು ದಶಕಗಳಿಂದ ಮಿಮಿಕ್ರಿ ಕಲಾವಿದರಾಗಿ ಗುರುತಿಸಿಕೊಂಡಿರುವ ಜಯೇಶ್, 11 ಸಿನಿಮಾಗಳಲ್ಲಿ ನಟಿಸಿದ್ದಾರೆ. ಲಾಲ್ ಜೋಸ್ ಅವರ ಮುಲ್ಲಾ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಸಾಲ್ಟ್ ಆಂಡ್ ಪೆಪ್ಪರ್, ಪ್ರೇತಂ, ಸು ಸು ಸುದ್ದಿ ವಮ್ಲೀಕನ್, ಪ್ಯಾಸೆಂಜರ್, ಕ್ರೇಜಿ ಗೋಪಾಲನ್ ಮತ್ತು ಎಲ್ಸಮ್ಮಾ ಎನ್ನ ಆಂಕುಟ್ಟಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಮುಂದೆ ಓದಿ...

ಚಿತ್ರರಂಗದ ಗಣ್ಯರ ಶೋಕ

ಚಿತ್ರರಂಗದ ಗಣ್ಯರ ಶೋಕ

ಟೆಲಿವಿಷನ್ ಚಾನೆಲ್‌ಗಳಲ್ಲಿ ಅನೇಕ ಕಾಮಿಡಿ ಶೋಗಳಲ್ಲಿಯೂ ಅವರು ಭಾಗವಹಿಸಿದ್ದರು. ಜಯೇಶ್ ಅವರ ನಿಧನಕ್ಕೆ ಮಲಯಾಳಂ ಚಿತ್ರರಂಗದ ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ. ಅವರ ಕುಟುಂಬಕ್ಕೆ ಈ ನೋವು ಸಹಿಸಿಕೊಳ್ಳುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ಎರಡು ವರ್ಷದ ಹಿಂದೆ ಮಗನ ಸಾವು

ಎರಡು ವರ್ಷದ ಹಿಂದೆ ಮಗನ ಸಾವು

ತ್ರಿಶ್ಶೂರಿನಲ್ಲಿ ಜನಿಸಿದ ಜಯೇಶ್ ಅವರಿಗೆ ಪತ್ನಿ ಸುನಾಜಾ ಮತ್ತು ಮಗಳು ಶಿವಾನಿ ಇದ್ದಾರೆ. ಎರಡು ವರ್ಷದ ಹಿಂದಷ್ಟೇ ಅವರು ಐದು ವರ್ಷದ ಮಗ ಸಿದ್ಧಾರ್ಥ್‌ನನ್ನು ಕಳೆದುಕೊಂಡಿದ್ದರು.

ಜಲ್ಲಿಕಟ್ಟು ಕೊನೆಯ ಚಿತ್ರ

ಜಲ್ಲಿಕಟ್ಟು ಕೊನೆಯ ಚಿತ್ರ

ಜಯೇಶ್ ಅವರ ತಂದೆ ಗೋಪಿ ಮೆನನ್ ಪಂಚಾಯತಿ ನೌಕರರಾಗಿದ್ದರು. ತಾಯಿ ಅರಿಕಟ್ಟು ಗೌರಿ ಮತ್ತತ್ತೂರು ಶ್ರೀ ಕೃಷ್ಣ ಹೈಸ್ಕೂಲಲ್ಲಿ ಶಿಕ್ಷಕಿಯಾಗಿದ್ದರು. ಜಯೇಶ್ ಅವರು ಕೊನೆಯದಾಗಿ 'ಜಲ್ಲಿಕಟ್ಟು' ಚಿತ್ರದಲ್ಲಿ ನಟಿಸಿದ್ದರು.

ಯುವ ನಿರ್ದೇಶಕನ ನೀಧನ

ಯುವ ನಿರ್ದೇಶಕನ ನೀಧನ

ಇದು ಮಲಯಾಳಂ ಚಿತ್ರರಂಗಕ್ಕೆ ಶೋಕದ ವಾರವಾಗಿದೆ. ಮಲಯಾಳಂನ ಯುವ ಚಿತ್ರ ನಿರ್ದೇಶಕ ಜಿಬಿತ್ ಜಾರ್ಜ್ ಕೂಡ ಕಳೆದ ವಾರ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದರು. ಕೊಳಿಪ್ಪೊರು ಚಿತ್ರದಲ್ಲಿ ಅವರು ಸಹ ನಿರ್ದೇಶಕರಾಗಿ ದುಡಿದಿದ್ದರು.

More from Filmibeat

English summary
Malayalam actor, mimicry artiste Kalabhavan Jayesh passed away on Sunday. He was battling with cancer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X