Nirmal Benny Death:ಮಲಯಾಳಂ ನಟ ನಿರ್ಮಲ್ ಬೆನ್ನಿ ಹೃದಯಾಘಾತದಿಂದ ನಿಧನ

ಮಲಯಾಳಂ ಚಿತ್ರರಂಗ ಶೋಕಸಾಗರದಲ್ಲಿ ಮುಳುಗಿದೆ. 37 ವರ್ಷದ ಮಲಯಾಳಂ ನಟ ನಿರ್ಮಲ್ ಬೆನ್ನಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಈ ದು:ಖಕರ ವಿಷಯವನ್ನು ನಿಮಲ್ ಬೆನ್ನಿ ಸ್ನೇಹಿತ ಸಂಜಯ್ ಪಡಿಯೂರ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಂದು (ಆಗಸ್ಟ್ 23) ಬೆಳಗ್ಗೆ ತಿರುವನಂತಪುರಂನಲ್ಲಿರುವ ನಟ ನಿರ್ಮಲ್ ಬೆನ್ನಿ ಮನೆಯಲ್ಲಿಯೇ ಹೃದಯಾಘಾತವಾಗಿತ್ತು ಎಂದು ತಿಳಿದು ಬಂದಿದೆ.

ನಿರ್ಮಲ್ ಬೆನ್ನಿ ಮಲಯಾಳಂ ಚಿತ್ರರಂಗದಲ್ಲಿ 'ಕೊಚ್ಚನ್' ಅನ್ನು ಪಾತ್ರದ ಮೂಲಕ ಜನಪ್ರಿಯರಾಗಿದ್ದರು. 'ಆಮೆನ್' ಅನ್ನು ಸಿನಿಮಾದಲ್ಲಿ ಕಿರಿಯ ಪಾದ್ರಿಯಾಗಿ ನಟಿಸಿದ್ದರು. ಈ ಸಿನಿಮಾವನ್ನು ಲಿಜೊ ಪೆಲ್ಲಿಸ್ಸೆರಿ ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ನಿರ್ಮಲ್ ಬೆನ್ನಿ ನಟಿಸಿದ ಪಾತ್ರ ಅವರಿಗೆ ಹೆಚ್ಚು ಹೆಸರನ್ನು ತಂದುಕೊಟ್ಟಿತ್ತು.

Malayalam actor Nirmal Benny passes away after suffering from a heart attack

ನಿರ್ಮಲ್ ಬೆನ್ನಿ ಸಿನಿಮಾಗಳಲ್ಲಿ ನಟಿಸಿದ್ದು ಕಡಿಮೆಯೇ ಆದರೂ, ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದರು. 2012ರಲ್ಲಿ 'ನವಗತರ್ಕ್ ಸ್ವಾಗತಂ' ಇವರು ನಟಿಸಿದ ಮೊದಲ ಸಿನಿಮಾ. 2012ರಿಂದ ಇಲ್ಲಿವರೆಗೂ ನಿರ್ಮಲ್ ಬೆನ್ನಿ ನಟಿಸಿದ್ದು ಕೇವಲ 5 ಸಿನಿಮಾಗಳು. ಆದರೂ ಅವರು ಮಲಯಾಳಂ ಚಿತ್ರರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು.

"ಆತ್ಮೀಯ ಗೆಳೆಯನಿಗೆ ಭಾರವಾದ ಹೃದಯದಿಂದ ಬೀಳ್ಕೊಡುಗೆ ನೀಡುತ್ತಿದ್ದೇವೆ. ನಿರ್ಮಲ್ 'ಆಮೆನ್' ಸಿನಿಮಾದಲ್ಲಿ ಕೊಚ್ಚನ್ ಅನ್ನುವ ಪಾತ್ರದ ಮೂಲಕ ಜನಪ್ರಿಯರಾಗಿದ್ದರು. ಇಂದು ಬೆಳಗ್ಗೆ ಹೃದಯಾಘಾತದಿಂದ ಅವರ ಸಾವು ಸಂಭವಿಸಿದೆ. ನನ್ನ ಆತ್ಮೀಯ ಗೆಳೆಯನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದೇನೆ" ಎಂದು ನಿರ್ಮಲ್ ಬೆನ್ನಿ ಗೆಳೆಯ ಸಂಜಯ್ ಪಡಿಯೂರ್ ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ.

ನಿರ್ಮಲ್ ಬೆನ್ನಿ ಸಿನಿಮಾಗಳ ಜೊತೆ ಡಿಜಿಟಲ್ ಮಾಧ್ಯಮಗಳಲ್ಲಿ ಬ್ಯುಸಿಯಾಗಿದ್ದರು. ಅದರಲ್ಲೂ ಯೂಟ್ಯೂಬ್‌ನಲ್ಲಿ ವಿಶಾಲ ಮನೋಭಾವವಿರುವವರಿಗೆ ತಮ್ಮ ಕಾಮಿಡಿಯ ಕಲೆಯನ್ನು ತೋರಿಸುತ್ತಿದ್ದರು. ಈ ಮೂಲಕ ವೀಕ್ಷಕರನ್ನು ಸೆಳೆದು ಇಡುತ್ತಿದ್ದರು. ಈ ಮೂಲಕ ಅವರ ಜನಪ್ರಿಯತೆ ಹೆಚ್ಚಾಗಿತ್ತು.

ನಿರ್ಮಲ್ ಬೆನ್ನಿಯವರ ದಿಢೀರ್ ಸಾವು ಮಲಯಾಳಂ ಚಿತ್ರರಂಗಕ್ಕೆ ದೊಡ್ಡ ನಷ್ಟ ಆಗಿದೆ. ನಟಿಸಿದ್ದು ಕೆಲವೇ ಕೆಲವು ಸಿನಿಮಾಗಳು ಆಗಿದ್ದರೂ, ಮಲಯಾಳಿಗಳ ಜನ ಮಾನಸದಲ್ಲಿ ಉಳಿದುಕೊಂಡು ಬಿಟ್ಟಿದ್ದಾರೆ. ನಿರ್ಮಲ್ ಬೆನ್ನಿ ಸಾವಿನ ಸುದ್ದಿ ಹೇಳಿ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

More from Filmibeat

English summary
Malayalam actor Nirmal Benny passes away after suffering from a heart attack:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X