'ಅಪ್ಪ ಇವತ್ತು ಮನೆಗೆ ಬರ್ತಾರಾ?': ಕಣ್ಣೀರಿಡುತ್ತಾ ಕೇಳುತ್ತಿದ್ದಾಳೆ ಹೀರೋ ಮಗಳು

ಕೊರೊನಾ ವೈರಸ್ ಲಾಕ್ ಡೌನ್ ಕಾರಣದಿಂದ ಅನೇಕರು ತಮ್ಮ ಕುಟುಂಬದವರಿಂದ ದೂರವಾಗಿದ್ದಾರೆ. ಬೇರೆ ಪ್ರದೇಶಕ್ಕೆ ಹೋದವರು ಅಲ್ಲಿಂದ ಮರಳಿ ಬರಲಾಗದೆ ಸಿಲುಕಿಕೊಂಡಿದ್ದಾರೆ. ಇದರಲ್ಲಿ ಅನೇಕರು ಹೇಗೋ ಅನುಮತಿ ಪಡೆದು ತಮ್ಮವರನ್ನು ಸೇರಿಕೊಂಡಿದ್ದಾರೆ.

ವಿದೇಶದಲ್ಲಿ ಸಿಲುಕಿರುವ ಪ್ರಜೆಗಳನ್ನು ಮರಳಿ ಕರೆದು ತರುವ ಕೆಲಸಗಳನ್ನು ವಿವಿಧ ರಾಜ್ಯಗಳು ಆರಂಭಿಸಿವೆ. ಆದರೆ ಎಲ್ಲರೂ ತಾಯ್ನಾಡಿಗೆ ಬರಲು ಸದ್ಯಕ್ಕೆ ಸಾಧ್ಯವಾಗುವುದಿಲ್ಲ. ಕೆಲವರು ಇನ್ನೂ ಹಲವು ದಿನ ಕಾಯುವುದು ಅನಿವಾರ್ಯ. ಚಿತ್ರೀಕರಣಕ್ಕೆಂದು ತೆರಳಿ ಆಫ್ರಿಕಾದ ಜೋರ್ಡಾನ್‌ನಲ್ಲಿ ಸಿಲುಕಿರುವ ನಟ ಪೃಥ್ವಿರಾಜ್ ಸುಕುಮಾರನ್ ಕೂಡ ತಮ್ಮ ಮನೆಗೆ ಮರಳಲು ಕಾಯುತ್ತಿದ್ದಾರೆ. ಈ ಹಿಂದೆ ತಮ್ಮ ಸಂಕಷ್ಟದ ಕುರಿತು ಅವರು ಪೋಸ್ಟ್ ಮಾಡಿ, ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಅವರು ಎರಡು ತಿಂಗಳಿನಿಂದ ಅಲ್ಲಿಯೇ ಇದ್ದಾರೆ. ಇತ್ತ ಅವರ ಮಗಳು ದಿನವೂ ಕಣ್ಣೀರು ಸುರಿಸುತ್ತಾ ಅಪ್ಪನಿಗಾಗಿ ಕಾಯುತ್ತಿದ್ದಾಳೆ. ಮುಂದೆ ಓದಿ...

ಜೋರ್ಡಾನ್‌ನಲ್ಲಿ ಚಿತ್ರತಂಡ

ಜೋರ್ಡಾನ್‌ನಲ್ಲಿ ಚಿತ್ರತಂಡ

'ಆಡುಜೀವಿತಂ' ಚಿತ್ರದ ಶೂಟಿಂಗ್‌ಗಾಗಿ ಪೃಥ್ವಿರಾಜ್ ಮತ್ತು ಚಿತ್ರತಂಡದ ಅನೇಕರು ಜೋರ್ಡಾನ್‌ಗೆ ತೆರಳಿದ್ದರು. ಈ ತಂಡದಲ್ಲಿ 56 ಮಂದಿ ಇದ್ದರು. ಲಾಕ್ ಡೌನ್ ಘೋಷಣೆಯಾಗಿದ್ದರಿಂದ ಅವರು ಭಾರತಕ್ಕೆ ಮರಳಲು ಸಾಧ್ಯವಾಗಿಲ್ಲ. ಭಾರತಕ್ಕೆ ಮರಳಲು ಸಹಾಯ ಮಾಡುವಂತೆ ಕೇರಳ ಸರ್ಕಾರವನ್ನು ಅವರು ಕೋರಿದ್ದರು.

ಮಗಳ ಚಡಪಡಿಕೆ

ಮಗಳ ಚಡಪಡಿಕೆ

ಮನೆಯಲ್ಲಿ ಮಗಳ ವೇದನೆ ನೋಡಲಾಗದೆ ಪೃಥ್ವಿರಾಜ್ ಪತ್ನಿ ಸುಪ್ರಿಯಾ ಭಾವುಕ ಬರಹವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಐದು ವರ್ಷದ ಮಗಳು ಅಲಂಕೃತಾ ಅಪ್ಪನನ್ನು ನೋಡಲು ಚಡಪಡಿಸುತ್ತಿದ್ದಾಳೆ ಎಂದು ಅವರು ಬರೆದಿದ್ದಾರೆ.

ದಾದಾ ಇವತ್ತು ಬರುತ್ತಾರಾ?

ದಾದಾ ಇವತ್ತು ಬರುತ್ತಾರಾ?

'ಪ್ರತಿದಿನವೂ ನನ್ನ ಮಗಳು ಲಾಕ್ ಡೌನ್ ಯಾವಾಗ ಮುಗಿಯುತ್ತದೆ ಎಂದು ಕೇಳುತ್ತಿದ್ದಾಳೆ. ದಾದಾ ಇವತ್ತು ಮನೆಗೆ ಬರುತ್ತಾರಾ? ದಾದಾ ಜತೆಗೆ ಸೇರಲು ನಾನು ಮತ್ತು ಅಲಿ ಒಬ್ಬರೂ ಕಾತರದಿಂದ ಕಾಯುತ್ತಿದ್ದೇವೆ' ಎಂದು ಅವರು ಹೇಳಿದ್ದಾರೆ.

ವಿವಾಹ ವಾರ್ಷಿಕೋತ್ಸವದಲ್ಲಿ ದೂರ ದೂರ

ವಿವಾಹ ವಾರ್ಷಿಕೋತ್ಸವದಲ್ಲಿ ದೂರ ದೂರ

ಏಪ್ರಿಲ್ 25 ಈ ದಂಪತಿಯ ಒಂಬತ್ತನೇ ವಿವಾಹ ವಾರ್ಷಿಕೋತ್ಸವ. ಆದರೆ ಈ ಸಂದರ್ಭದಲ್ಲಿ ಒಟ್ಟಿಗೆ ಸಂಭ್ರಮಿಸುವ ಅವಕಾಶ ಅವರಿಗೆ ಸಿಕ್ಕಿಲ್ಲ. ಇಬ್ಬರೂ ಒಬ್ಬರನ್ನೊಬ್ಬರು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂಬುದನ್ನು ವಿವರಿಸಲು ಅವರು ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡಿದ್ದಾರೆ.

More from Filmibeat

English summary
Malayalam actor Prithviraj Sukumaran's wife Supriya pens an emotional note as her daughter asking about her daada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X