ಬೆಂಗಳೂರಿಗೆ ಹೊರಟಿದ್ದ ನಟನ ಕಾರು ಭೀಕರ ಅಪಘಾತ; ತಂದೆ ಸ್ಥಳದಲ್ಲೇ ಸಾವು, ಗಂಭೀರ ಸ್ಥಿತಿಯಲ್ಲಿ ನಟ

ವಾಹನ ಚಾಲನೆ ಸೂಕ್ಷ್ಮ ಜವಾಬ್ದಾರಿ. ಈ ಸಮಯದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ಚೂರು ಯಾಮಾರಿದರೂ ಕೂಡ ಅಪಾಯ ಕಟ್ಟಿಟ್ಟ ಬುತ್ತಿ. ನೀವು ಅಥವಾ ನಿಮ್ಮ ಎದುರು ಇರುವವರಲ್ಲಿ ಯಾರೇ ತಪ್ಪು ಮಾಡಿದರೂ ಕೂಡ ಸಂಕಷ್ಟ ತಪ್ಪಿದ್ದಲ್ಲ. ಆದರೂ ಕೂಡ ಕೆಲವರು ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಾರೆ. ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವುದರ ಜೊತೆಯಲ್ಲಿ ಬೇರೆಯವರ ಸಾವು ನೋವಿಗೂ ಕೂಡ ಕಾರಣವಾಗುತ್ತಾರೆ.

ಇದಕ್ಕೆ ಇಂದು ನಡೆದ ಶೈನ್ ಟಾಮ್ ಚಾಕೋ ಅವರ ಕಾರು ಅಪಘಾತ ಮತ್ತೊಂದು ಉದಾಹರಣೆ. ಹೌದು, ಶೈನ್ ಟಾಮ್ ಚಾಕೊ. ಮಲಯಾಳಂನ ಜನಪ್ರಿಯ ನಟ. ಇತ್ತೀಚೆಗಷ್ಟೇ ನಟಿಯರಿಂದ ಲೈಂಗಿಕ ಕಿರುಕುಳದ ಆರೋಪಕ್ಕೆ ಒಳಗಾಗಿದ್ದ ಶೈನ್ ಟಾಮ್ ಚಾಕೊ ಡ್ರಗ್ ಸೇವನೆ ಪ್ರಕರಣದಲ್ಲಿ ಇತ್ತೀಚೆಗೆ ಬಂಧಿತರಾಗಿದ್ದರು. ಆ ನಂತರ ಬಿಡುಗಡೆಯಾಗಿದ್ದರು.

Malayalam actor Shine Tom Chacko injured father dies in accident

ಇಂಥಾ ಶೈನ್ ಟಾಮ್ ಚಾಕೊ ಅವರ ಕಾರು ಭೀಕರ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಶೈನ್ ಟಾಮ್ ಚಾಕೊ ಅವರ ತಂದೆ ಸಿಪಿ ಚಾಕೋ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಶೈನ್ ಟಾಮ್ ಚಾಕೋ ಅವರ ಸಹೋದರ ಜೋ ಜಾನ್ ಚಾಕೋ , ತಾಯಿ ಮರಿಯಾ ಕಾರ್ಮೆಲ್, ಮತ್ತು ಮ್ಯಾನೇಜರ್ ಕಂ ಡ್ರೈವರ್ ಅನಿಸ್ ಅವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತಮ್ಮ ತಂದೆ ಸಿಪಿ ಚಾಕೋ ಅವರ ವೈದ್ಯಕೀಯ ತಪಾಸಣೆಗಾಗಿ ಶೈನ್ ಟಾಮ್ ಚಾಕೋ ತಮ್ಮ ಕುಟುಂಬದ ಜೊತೆ ಕಾರಿನಲ್ಲಿ ತ್ರಿಶೂರ್‌ದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಈ ಸಮಯದಲ್ಲಿ ಧರ್ಮಪುರಿ ಜಿಲ್ಲೆಯ ಪಾಲಕೋಡ್‌ನ ಪರೈಯೂರ್ ಬಳಿ ಅನಿಸ್ ಅವರ ನಿಯಂತ್ರಣ ತಪ್ಪಿ ಕಾರು ಅಲ್ಲಿಯೇ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.

ಅಪಘಾತದ ಮಾಹಿತಿ ದೊರೆಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿರುವ ಪಾಲಕೋಡ್ ಪೊಲೀಸರು ಗಾಯಾಳುಗಳನ್ನು ರಕ್ಷಿಸಿ, ಚಿಕಿತ್ಸೆಗಾಗಿ ಧರ್ಮಪುರಿ ಸರ್ಕಾರಿ ವೈದ್ಯಕೀಯ ಕಾಲೇಜ್‌ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶೈನ್ ಟಾಮ್ ಚಾಕೋ ಅವರ ತಂದೆ ಸಿಪಿ ಚಾಕೋ ಅವರ ಮೃತದ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಧರ್ಮಪುರಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಕುರುತಿ, ಜಿಗರ್‌ಥಾಂಡ ಡಬಲ್ ಎಕ್ಸ್, ಕಮ್ಮಟಿಪಾದಂ, ಇಷ್ಕ್, ಲವ್, ಕುರುಪ್, ಭೀಷ್ಮ ಪರ್ವಂ,ಬಾಜೂಕಾ, ಹೀಗೆ ಹಲವು ಚಿತ್ರಗಳಲ್ಲಿ ತಮ್ಮ ಅಭಿನಯದಿಮದ ಗಮನ ಸೆಳೆದ ಶೈನ್ ಚಾಕೋ ತೆಲುಗಿನಲ್ಲಿ ದಸರಾ,ಡಾಕು ಮಹಾರಾಜ್, ರಾಬಿನ್ ಹುಡ್ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ

ತಮ್ಮ ತಂದೆಯ ಕುರಿತು ಹಿಂದೆ ಸಂದರ್ಶನದಲ್ಲಿ ಮಾತನಾಡಿದ್ದ ಶೈನ್ ಟಾಮ್ ಚಾಕೋ, "ಕೊಕೇನ್ ಪ್ರಕರಣದ ಸಮಯದಲ್ಲಿ ನಾನು ಎರ್ನಾಕುಲಂ ಉತ್ತರ ಪೊಲೀಸ್ ಠಾಣೆಯಲ್ಲಿ ಬಂಧನದಲ್ಲಿದ್ದಾಗ ನನ್ನ ತಂದೆ ಕೆಳಗೆ ಕುಳಿತು ಅಳುತ್ತಿರುವ ಆ ಚಿತ್ರವು ಎಂದಿಗೂ ನನ್ನ ಮನಸ್ಸಿನಿಂದ ಮಾಸುವುದಿಲ್ಲ" ಎಂದು ಹೇಳಿದ್ದರು. ನನ್ನ ಬಂಧನದ ಸುದ್ದಿಯನ್ನು ಟಿವಿಯಲ್ಲಿ ನೋಡಿ ನನ್ನ ತಂದೆ ಆಘಾತಕ್ಕೊಳಗಾಗಿದ್ದರು ಎಂದು ಹೇಳಿದ್ದ ಶೈನ್ ನನ್ನ ತಂದೆ ನನ್ನ ಬದುಕಿನ ಪ್ರತಿಯೊಂದು ಹಂತದಲ್ಲಿಯೂ ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದು ಹೇಳಿದ್ದರು. ಕೊಕೇನ್ ಪ್ರಕರಣದಲ್ಲಿ, ಹೈಬ್ರಿಡ್ ಗಾಂಜಾ ಪ್ರಕರಣದಲ್ಲಿ ನಾನು ಬಂಧನಕ್ಕೊಳಗಾದಾಗ ಅವರು ನನ್ನನ್ನೂ ಅನುಮಾನಿಸಲಿಲ್ಲ ಬದಲಿಗೆ ನನಗೆ ಧೈರ್ಯ ತುಂಬಿದ್ದರು ಎಂದು ಹೇಳಿದ್ದರು.

ಆ ನಂತರ ತನ್ನ ತಂದೆಯೊಂದಿಗೆ ನಿರ್ಮಾಣ ಸಂಸ್ಥೆಯನ್ನು ಕೂಡ ಆರಂಭ ಮಾಡುವ ಕನಸನ್ನು ಕೂಡ ಶೈನ್ ಕಂಡಿದ್ದರು. ತಮ್ಮ ಸಂಸ್ಥೆಯ ಮೊದಲ ಚಿತ್ರದಲ್ಲಿ ತಮ್ಮ ಸಹೋದರನ ಜೊತೆ ಅಭಿನಯಿಸಲು ಶೈನ್ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಅವರ ತಂದೆಯ ಅಕಾಲಿಕ ನಿಧನದಿಂದ ಆ ಕನಸು ಕಮರಿ ಹೋದಂತೆ ಆಗಿದೆ.

More from Filmibeat

English summary
Malayalam actor Shine Tom Chacko was involved in a road accident in which he sustained injuries, while his father sadly lost his life. Further details about the incident are awaited
Read more about: accident mollywood filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X