ಇಬ್ಬರು ಅಪ್ರಾಪ್ತರ ಎದುರು ಮರ್ಮಾಂಗ ಪ್ರದರ್ಶಿಸಿದ ನಟ ಶ್ರೀಜಿತ್ ರವಿ ಬಂಧನ!

ಮಲಯಾಳಂ ನಟ ಶ್ರೀಜಿತ್ ರವಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತರಿಗೆ ತನ್ನ ದೇಹದ ಖಾಸಗಿ ಭಾಗವನ್ನು ಪ್ರದರ್ಶನ ಮಾಡಿದ್ದರಿಂದ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಸೆಕ್ಷನ್ 11ರ ಅಡಿ ಬಂಧಿಸಲಾಗಿದೆ.

ಜುಲೈ 4ರಂದು ತ್ರಿಶೂರ್ ಜಿಲ್ಲೆಯ ಈ ಘಟನೆ ನಡೆದಿದೆ ಎಂದು ವರದಿ ಮಾಡಲಾಗಿದೆ. ಇಬ್ಬರು ಅಪ್ರಾಪ್ತರು ನಟ ಶ್ರೀಜಿತ್ ರವಿ ತನ್ನ ಕಾರಿನಲ್ಲಿ ಕುಳಿತಿದ್ದ ವೇಳೆ ಸಮೀಪಿಸಿದ್ದರು. ಆಗ ದಿಢೀರನೇ ಕಾರಿನಿಂದ ಇಳಿದ ನಟ ಶ್ರೀಜಿತ್ ರವಿ ತನ್ನ ದೇಹದ ಖಾಸಗಿ ಅಂಗಾಂಗಗಳನ್ನು ಪ್ರದರ್ಶನ ಮಾಡಲಾಗಿದೆ.

ಏನಿದು ಘಟನೆ?

ಏನಿದು ಘಟನೆ?

ಜುಲೈ 4 ರಂದು ಮಲಯಾಳಂ ಹಿರಿಯ ನಟ ಟಿಜಿ ರವಿ ಅವರ ಪುತ್ರ ಹಾಗೂ ಫೇಮಸ್‌ ನಟ ಶ್ರೀಜಿತ್ ರವಿ ಸಾರ್ವಜನಿಕಾಗಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ. 14 ಹಾಗೂ 9 ವರ್ಷದ ಮಕ್ಕಳ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತ್ರಿಶೂರು ಪಾರ್ಕ್‌ಗೆ ಕಾರಿನಲ್ಲಿ ಬಂದಿದ್ದರು. ಈ ವೇಳೆ ಕಾರಿನಿಂದ ಇಳಿದು ತನ್ನ ಮರ್ಮಾಂಗನ್ನು ಪ್ರದರ್ಶಿಸಿದ್ದರು. ಈ ವೇಳೆ ಪೊಲೀಸರು ಸಿಸಿಟಿವಿಯನ್ನು ಪರೀಶಿಲಿಸಿದಾಗ, ನಟ ಶ್ರೀಜಿತ್ ಮನೆ ಎಂದು ತಿಳಿದು ಬಂದಿದೆ.

ಮಾಲಯಾಳಂ ನಟನಿಗೆ ಮಾನಸಿಕ ಸಮಸ್ಯೆ

ಮಾಲಯಾಳಂ ನಟನಿಗೆ ಮಾನಸಿಕ ಸಮಸ್ಯೆ

ಆನ್‌ಮನೋರಮ ವರದಿ ಪ್ರಕಾರ, ಈ ಘಟನೆಯ ಬಗ್ಗೆ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಈ ವೇಳೆ ಶ್ರೀಜಿತ್ ರವಿ ವಿರುದ್ಧ ದೂರನ್ನು ದಾಖಲಿಸಲಾಗಿದೆ. ಇದೇ ವೇಳೆ ನಟ ಶ್ರೀಜಿತ್ ತಪ್ಪೊಪ್ಪಿಕೊಂಡಿದ್ದು, ತನ್ನ ಇಂತಹ ವರ್ತನೆ ಬಗ್ಗೆ ಚಿಕಿತ್ಸೆಯನ್ನು ಪಡೆಯುತ್ತಿರುವುದಾಗಿ ಮಲಯಾಳಂ ನಟ ಹೇಳಿಕೊಂಡಿದ್ದಾರೆ.

6 ವರ್ಷಗಳ ಹಿಂದೆ ಇದೇ ರೀತಿ ವರ್ತನೆ

6 ವರ್ಷಗಳ ಹಿಂದೆ ಇದೇ ರೀತಿ ವರ್ತನೆ

ಶ್ರೀಜಿತ್ ರವಿ ಇಂತಹ ವರ್ತನೆ ಇದೇ ಮೊದಲೇನಲ್ಲ. ಕೆಲವು ವರ್ಷಗಳ ಹಿಂದೆ, ಇದನ್ನೇ ಹೋಲುವಂತಹ ದೂರು ದಾಖಲಾಗಿತ್ತು. 2016ರಲ್ಲಿ ಮಲಯಾಳಂ ನಟ ಶ್ರೀಜಿತ್ ಕೇರಳದ ಪಾಲಕ್ಕಡ್‌ನಲ್ಲಿ 14 ಮಂದಿ ಶಾಲಾ ಬಾಲಕಿಯ ಪೋಷಕರು ಸಾರ್ವಜನಿಕವಾಗಿ ನಗ್ನರಾಗಿ ಹುಚ್ಚುತನ ಮೆರೆದಿದ್ದಾನೆಂದು ದೂರು ನೀಡಿದ್ದರು. ದೂರಿನ ಬಳಿಕ ಶ್ರೀಜಿತ್ ರವಿಯನ್ನು ಜಾಮೀನು ನೀಡಲಾಗಿತ್ತು. ಆ ವೇಳೆ ಈ ಕೇಸ್ ಮುಖ್ಯಭೂಮಿಕೆಗೆ ಬರಲಿಲ್ಲ. ಸರಿಯಾ ಸಾಕ್ಷ್ಮಿಗಳನ್ನು ಕಲೆ ಹಾಕದೆ ಕೇಸಿನ ಹಾದಿ ಕೆಡಿಸಿದ್ದರು ಎಂದು ಅಪ್ರಾಪ್ತ ಬಾಲಕಿಯ ಪೋಷಕರು ಪೊಲೀಸರನ್ನು ದೂರಿದ್ದರು.

ಹಲವು ಸಿನಿಮಾಗಳಲ್ಲಿ ನಟನೆ

ಹಲವು ಸಿನಿಮಾಗಳಲ್ಲಿ ನಟನೆ

2005ರಲ್ಲಿ ಶ್ರೀಜಿತ್ 'ಮಯೂಖಂ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. 'ಛಂತುಪೊಟ್ಟು' ಸಿನಿಮಾ ಶ್ರೀಜಿತ್ ರವಿ ಸಿನಿಮಾ ಕರಿಯರ್‌ಗೆ ಬಿಗ್ ಬ್ರೇಕ್ ನೀಡಿತ್ತು. 'ಮಿಷನ್ 90 ಡೇಸ್', 'ಪುಣ್ಯಲನ್ ಅಗರ್‌ಬತ್ತೀಸ್', ಪುಣ್ಯಲನ್ ಪ್ರೈವೇಟ್ ಲಿಮಿಟೆಡ್ ಅಂತಹ ಸಿನಿಮಾಗಳಿ ಬಿಗ್ ಬ್ರೇಕ್ ಕೊಟ್ಟಿದ್ದವು. ತಮಿಳಿನಲ್ಲೂ ಶ್ರೀಜಿತ್ ರವಿ ಅದ್ಭುತ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ವೇಟ್ಟೈ', ಕುಂಕಿ', 'ಮಧ ಯಾನೈ ಕೂಟ್ಟಂ', 'ಕಥಕಲಿ ಮತ್ತು ಅಸುರವಧಂ' ಅಂತಹ ಸುಮಾರು 70 ಸಿನಿಮಾಗಳಲ್ಲಿ ನಟಿಸಿದ್ದಾರೆ.

More from Filmibeat

English summary
Malayalam Actor Sreejith Ravi arrested for allegedly exhibiting nudity to two minors in public, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X