ಕಾರಿನೊಳಗೆ ಜನಪ್ರಿಯ ಮಲಯಾಳಂ ನಟನ ಶವ ಪತ್ತೆ: ಸಾವಿಗೆ ಕಾರಣ ACನಾ? ಬೇರೆನಾ?
ಮಲಯಾಳಂನ ಜನಪ್ರಿಯ ನಟ ವಿನೋದ್ ಥಾಮಸ್ ಕೇರಳದ ಕೊಟ್ಟಾಯಂ ಸಮೀಪದ ಪಂಪಾಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪಂಪಾಡಿಯ ಹೊಟೇಲ್ ಸಮೀಪ 45 ವರ್ಷದ ನಟ ವಿನೋದ್ ಥಾಮಸ್ ಕಾರಿನಲ್ಲಿಯೇ ಸಾವನ್ನಪ್ಪಿರೋ ಸಂಗತಿ ಕೇರಳದಲ್ಲಿ ಸಂಚಲವನ್ನು ಸೃಷ್ಟಿಸಿದೆ.
ಬಹಳ ಹೊತ್ತಿನ ಹೊರಗೆ ಒಂದೇ ಕಡೆ ಕಾರು ನಿಂತಿತ್ತು. ಹೀಗಾಗಿ ಅನುಮಾನಗೊಂಡ ಹೊಟೇಲ್‌ನ ಸಿಬ್ಬಂದಿ ಕೇರಳದ ಪೊಲೀಸರಿಗೆ ವಿಷಯವನ್ನು ಮುಟ್ಟಿಸಿದ್ದರು. ತಕ್ಷಣವೇ ವಿನೋದ್ ಥಾಮಸ್‌ರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು, ಅಷ್ಟರಲ್ಲಾಗಲೇ ವಿನೋದ್ ಥಾಮಸ್ ಸಾವನ್ನಪ್ಪಿದ್ದಾಗಿ ವೈದ್ಯರು ಘೋಷಿಸಿದರು.

ವಿನೋದ್ ಥಾಮಸ್ ಸಾವು ಹೇಗೆ ಸಂಭವಿಸಿತು ಅನ್ನೋ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಈಗಾಗಲೇ ಕೇರಳ ಪೊಲೀಸರು ವಿನೋದ್ ಥಾಮಸ್ ಸಾವಿನ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
"ಕಾರಿನೊಳಗೆ ವಿನೋದ್ ಥಾಮಸ್ ಅವರನ್ನು ನೋಡಿದ್ವಿ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ್ವಿ. ವೈದ್ಯರು ಅವರನ್ನು ಪರೀಕ್ಷೆ ಮಾಡಿದ ಬಳಿಕ ಸಾವನ್ನಪ್ಪಿದ್ದಾರೆಂದು ಘೋಷಿಸಿದರು." ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೇ " ಸಾವಿಗೆ ಕಾರಣವೇನು ಅಂತ ತಿಳಿದು ಕೊಳ್ಳುವುದಕ್ಕೆ ಮೃತದೇಹವನ್ನು ಪೋಸ್ಟ್‌ಮಾರ್ಟಮ್‌ಗೆ ಕಳುಹಿಸಿ ಕೊಡಲಾಗಿದೆ. ವರದಿ ಬಂದ ಬಳಿಕ ಸಾವಿಗೆ ಕಾರಣವೇನು ಅನ್ನೋದನ್ನು ರಿವೀಲ್ ಮಾಡುತ್ತೇವೆ." ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವರು ವಿನೋದ್ ಥಾಮಸ್ ಕಾರಿನ ಏಸಿಯಿಂದ ಸಾವನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಕಾರಿನ ಏಸಿಯಿಂದ ವಿಷಕಾರಿ ಅನಿಲ ರಿಲೀಸ್ ಆಗಿರಬಹುದು. ಅದರಿಂದ ಸಾವು ಸಂಭವಿಸಿರಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ, ಈ ಬಗ್ಗೆ ಪೊಲೀಸರು ಖಚಿತ ಪಡಿಸಿಲ್ಲ. "ಕಾರಿನ ಏಸಿಯಿಂದ ಸಾವು ಸಂಭವಿಸಿರಬಹುದೆಂಬ ಶಂಕೆಯಿದೆ. ಆದರೆ, ಪೋಸ್ಟ್‌ಮಾರ್ಟಮ್ ವರದಿ ಬಂದ ಬಳಿಕ ಗೊತ್ತಾಗುತ್ತೆ" ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಮಲಯಾಳಂ ನಟ ವಿನೋದ್ ಥಾಮಸ್ ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಮೆಗಾ ಸಿನಿಮಾ 'ಅಯ್ಯಪ್ಪನುಂ ಕೋಶಿಯುಂ', ನಾತೋಲಿ ಒರು ಚೆರಿಯಾ ಮೀನಲ್ಲ', 'ಒರು ಮುರೈ ವಂತ ಪಾತಾಯ' ಅನ್ನುವಂತಹ ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ.


Click it and Unblock the Notifications











