"80 ಕೆಜಿ ತೂಕದ ನಟ ನನ್ನ ಮೇಲೆ ಮಲಗಿದ್ದ.. ಕ್ಯಾಮರಾ ಮುಂದೆ ಬೇರೆ ಆಲೋಚನೆ ಇರಲ್ಲ"-ನಟಿ ದಿವ್ಯಾ ಪಿಳ್ಳೈ

ಸಿನಿಮಾಗಳಲ್ಲಿ ಕೆಲವೊಮ್ಮೆ ಅಚಾನಕ್ ಆಗಿ ಬರುವ ಹಸಿ ಬಿಸಿ ದೃಶ್ಯಗಳನ್ನು ನೋಡುವಾಗ ಯಾರು ಏನಂದು ಕೊಳ್ಳುತ್ತಾರೋ? ನೋಡಬೇಕೋ ಬೇಡವೋ ಅಂತ ಗೊಂದಲಕ್ಕೆ ಒಳಗಾಗುತ್ತೇವೆ. ಇಂತಹ ದೃಶ್ಯಗಳು ಇತ್ತೀಚೆಗೆ ಸಿನಿಮಾಗಳಲ್ಲಿ ಕಾಮನ್ ಆಗಿದ್ದರೂ, ಕೆಲವರು ನೋಡುವುದಕ್ಕೆ ಮುಜುಗರ ಪಟ್ಟುಕೊಳ್ಳುವುದೂ ಉಂಟು. ಆದರೆ, ಇಂತಹ ದೃಶ್ಯಗಳಲ್ಲಿ ನಟಿಸು ಕಲಾವಿದರ ಪರಿಸ್ಥಿತಿ ಹೇಗಿರುತ್ತೆ? ಅದರಲ್ಲೂ ಒಬ್ಬ ನಟಿ ಹೇಗೆ ನಟಿಸಬಹುದು? ಈ ಯೋಚನೆ ಎಲ್ಲರಲ್ಲೂ ಬಂದೇ ಇರುತ್ತೆ.

ಇಂತಹದ್ದೊಂದು ಅನುಭವನನ್ನು ಮಲಯಾಳಂ ನಟಿ ದಿವ್ಯಾ ಪಿಳ್ಳೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ನಟಿಸಿದ ರೊಮ್ಯಾಂಟಿಕ್ ಸೀನ್‌ಗಳ ಅನುಭವದ ಬಗ್ಗೆ ಕೊಟ್ಟ ಹೇಳಿಕೆಗಳು ಚರ್ಚೆಗೆ ಎಡೆ ಮಾಡಿಕೊಟ್ಟಿವೆ. 2015ರಿಂದ ಸಿನಿಮಾಗಳಲ್ಲಿ ನಟಿಸುತ್ತಿರುವ ಈ ನಟಿ ಇತ್ತೀಚೆಗೆ ರೊಮ್ಯಾಂಟಿಕ್ ದೃಶ್ಯಗಳನ್ನು ನಟಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ.

Malayalam actress Divya Pillai share her experience in intimate scenes shooting in Movies

ಮಲಯಾಳಂ ಸಿನಿಮಾಗಳಿಂದ ವೃತ್ತಿ ಬದುಕು ಆರಂಭ ಮಾಡಿದ್ದರೂ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ. ತೆಲುಗಿನ 'ಮಂಗಳವಾರಂ' ಮತ್ತು 'ತಂಡೇಲ್' ಅಂತಹ ಸಿನಿಮಾಗಳಿಂದ ತೆಲುಗು ಮಂದಿಯನ್ನು ಸೆಳೆದಿದ್ದಾರೆ. ಈ ಸಿನಿಮಾಗಳ ಹಸಿ ಬಿಸಿ ದೃಶ್ಯಗಳನ್ನು ಚಿತ್ರೀಕರಿಸುವ ವೇಳೆ ಎದುರಾದ ಸವಾಲುಗಳ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ದಿವ್ಯಾ ಪಿಳ್ಳೈ ದುಬೈನಲ್ಲಿ ಜನಿಸಿರೋ ನಟಿ. ಜೊತೆ ಸಿನಿಮಾರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ತೆರೆಮೇಲೆ ಗ್ಲಾಮರ್ ಲುಕ್ ಕೊಡುವುದಕ್ಕೆ ಇವರಿಗೆ ಅಂತಹ ಸಮಸ್ಯೆ ಏನೂ ಆಗಿರಲಿಲ್ಲ. ಅದೇ ಇಂಟಿಮೇಟ್ ಸೀನ್‌ಗಳಲ್ಲಿ ನಿರ್ದೇಶಕರು ನಟಿಸಬೇಕು ಎಂದಾಗ ಅವರಿಗೆ ಆಗುತ್ತಿದ್ದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ದಿವ್ಯಾ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟಿದ್ದು 'ಮಂಗಳವಾರಂ'. ಈ ಸಿನಿಮಾದಲ್ಲಿ ಜಮೀನ್ದಾರನ ಪತ್ನಿ ರಾಜೇಶ್ವರಿ ಪಾತ್ರದಲ್ಲಿ ನೆಗೆಟಿವ್ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದರು.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ದಿವ್ಯಾ ಪಿಳ್ಳೈ ಮಲಯಾಳಂ ಸಿನಿಮಾವೊಂದರ ಇಂಟಿಮೇಟ್ ಸೀನ್‌ನಲ್ಲಿ ನಟಿಸುವಾ ಆದ ಅನುಭವವನ್ನು ಹೇಳಿಕೊಂಡಿದ್ದಾರೆ. "ಕಲಾಪುರುಷ್ ಎಂಬ ಮಲಯಾಳಂ ಸಿನಿಮಾ. ಇದರಲ್ಲಿ ಹೀರೋ ಟೊವಿನೋ ಥಾಮಸ್ ಜೊತೆ ಮೊದಲ ಬಾರಿಗೆ ಇಂಟಿಮೇಟ್ ದೃಶ್ಯದಲ್ಲಿ ನಟಿಸಬೇಕಾಯ್ತು. ನಿರ್ದೇಶಕರು ಆ ಸೀನ್ ವಿವರಿಸಿದ ಬಳಿಕ ನನಗಿದು ಬೇಡ, ನನ್ನಿಂದ ಆಗುವುದಿಲ್ಲವೆಂದು ಹೇಳಿದೆ. ಯಾಕಂದ್ರೆ, ಅಲ್ಲಿಂದ ಜನರ ಹಾಗೂ ಕ್ಯಾಮರಾಗಳ ಎದುರು ಆ ಸೀನ್‌ಗಳಲ್ಲಿ ನಟಿಸುವುದಕ್ಕೆ ನನಗೆ ಸಾಧ್ಯವಾಗಲಿಲ್ಲ" ಎಂದು ದಿವ್ಯಾ ಪಿಳ್ಳೈ ಹೇಳಿದ್ದಾರೆ.

Malayalam actress Divya Pillai share her experience in intimate scenes shooting in Movies

ಕೊನೆಗೆ ಆ ಇಂಟಿಮೇಟ್ ದೃಶ್ಯದ ಬಗ್ಗೆ ಆ ಸಿನಿಮಾದ ಹೀರೋ ಟೊವೊನೋ ಥಾಮಸ್ ಬಳಿ ಚರ್ಚೆ ಮಾಡಿದ್ದರು. ಸ್ವಲ್ಪ ಕಂಫರ್ಟ್‌ ಅಂತ ಅನಿಸಿದ ಬಳಿಕ ಪೂರ್ಣಗೊಳಿಸಿದ್ದಾಗಿ ಹೇಳಿಕೊಂಡಿದ್ದಾರೆ. "ನಾನು ಆ ದೃಶ್ಯದ ಬಗ್ಗೆ ಟೊವಿನೋ ಥಾಮಸ್ ಜೊತೆ ಚರ್ಚೆ ಮಾಡಿ ಶೂಟಿಂಗ್ ಮುಗಿಸಿದೆ. ಆದರೆ 75 ರಿಂದ 80 ಕೆಜಿ ತೂಕದ ನಟನೊಬ್ಬ ನನ್ನ ಮೇಲೆ ಮಲಗಿರುವಾಗ ಕ್ಯಾಮರಾ ಪೋಷನ್‌ಗೆ ತಕ್ಕಂತೆ ಭಾವನೆಗಳನ್ನು ವ್ಯಕ್ತಪಡಿಸುವುದು ಹೇಗೆ? ಆ ವೇಳೆ ನಮ್ಮ ಮನಸ್ಸಿನಲ್ಲಿ ಬೇರೆ ಯಾವುದೇ ಆಲೋಚನೆ ಇರಬಾರದು. ಅಷ್ಟೇ ಅಲ್ಲದೆ ಚುಂಬನವನ್ನೂ ಆನಂದಿಸಲೂ ಆಗುವುದಿಲ್ಲ" ಎಂದು ನಟಿ ದಿವ್ಯಾ ಹೇಳಿದ್ದಾರೆ.

ಇಷ್ಟೇ ಅಲ್ಲದೆ ಕೆಲವು ಸೀನ್‌ಗಳಲ್ಲಿ ಲಿಪ್‌ಲಾಕ್ ಹಾಗೂ ಇಂಟಿಮೇಟ್ ಸೀನ್‌ಗಳಲ್ಲಿ ನಟಿಸುವಾಗ ನಮಗೆ ಅಸಹ್ಯ ಎನಿಸಿದ್ರೂ, ಆ ಭಾವನೆಯನ್ನು ನಮ್ಮ ಮುಖದಲ್ಲಿ ತೋರಿಸಬಾರದು. ನಮ್ಮ ಕೋ-ಸ್ಟಾರ್ ಏನೇ ಮಾಡಿದರೂ ನಿರ್ದೇಶಕರು ಕಟ್ ಹೇಳುವವರೆಗೂ ಸಹಿಸಿಕೊಳ್ಳಬೇಕಾಗುತ್ತೆ ಎಂದು ದಿವ್ಯಾ ಪಿಳ್ಳೈ ಹೇಳಿದ್ದನ್ನು ನೆಟ್ಟಿಗರು ಚರ್ಚೆ ಮಾಡುತ್ತಿದ್ದರೆ.

More from Filmibeat

English summary
Malayalam actress Divya Pillai share her experience in intimate scenes shooting in Movies.
Read more about: actress malayalam cinema divya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X