ಹಣಕ್ಕಾಗಿ ಅಶ್ಲೀಲ ದೃಶ್ಯಗಳಲ್ಲಿ ನಟನೆ.. ವಯಸ್ಕರ ವೆಬ್‌ಸೈಟ್‌ಗೆ ಮಾರಾಟ: ನಟಿ ಶ್ವೇತಾ ಮೆನನ್ ವಿರುದ್ಧ FIR

ಮಲಯಾಳಂನ ನಟಿಯೊಬ್ಬರ ಮೇಲೆ ಕೇರಳದ ಎರ್ನಾಕುಲಂ ಸೆಂಟ್ರಲ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅಶ್ಲೀಲ ಮತ್ತು ಅಸಭ್ಯ ದೃಶ್ಯಗಳಲ್ಲಿ ನಟಿಸಿರುವ ಆರೋಪದ ಮೇಲೆ ನಟಿಯ ವಿರುದ್ಧ, ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಸೆಕ್ಷನ್ 67 ಎ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಅಷ್ಟಕ್ಕೂ ಎಫ್‌ಐಆರ್ ದಾಖಲಾಗಿರುವ ಆ ನಟಿಯ ಹೆಸರು ಶ್ವೇತಾ ಮೆನನ್.

ಶ್ವೇತಾ ಮೆನನ್ ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿ. ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. 1994ರ ಫೆಮಿನಾ ಮಿನ್ ಇಂಡಿಯಾ ಏಷ್ಯಾ ಪೆಸಿಫಿಕ್ ಆಗಿದ್ದವರು. ಕೇರಳ ರಾಜ್ಯ ಪ್ರಶಸ್ತಿ ಹಾಗೂ ಎರಡು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿರುವ ನಟಿ. ಇವರ ಮೇಲೆ ಈಗ ಹಣದ ಲಾಭಕ್ಕಾಗಿ ಅಶ್ಲೀಲ ದೃಶ್ಯಗಳಲ್ಲಿ ನಟಿಸುತ್ತಿದ್ದಾರೆಂಬ ದೂರು ದಾಖಲಾಗಿದೆ.

Malayalam actress Shwetha Menon faces charges for allegedly performing in films with obscene content aimed at financial gain

ಕೇರಳದ ಎರ್ನಾಕುಲಂ ಮೂಲದ ಮಾರ್ಟಿನ್ ಮೆನಾಚೆರಿ ಎಂಬುವವರು ನಟಿ ಶ್ವೇತಾ ಮೆನನ್ ವಿರುದ್ಧ ದೂರನ್ನು ದಾಖಲಿಸಿದ್ದರು. ಇದರ ಆಧಾರದ ಮೇಲೆ ಅಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸ್ಥಳೀಯ ಪೊಲೀಸರಿಗೆ ಕ್ರಮಕೈಗೊಳ್ಳುವಂತೆ ಸೂಚಿಸಿತ್ತು. ಈ ಬೆನ್ನಲ್ಲೇ ಎರ್ನಾಕುಲಂ ಪೊಲೀಸರು ನಟಿಯರ ವಿರುದ್ಧ ಎಫ್‌ಐಆರ್ ಅನ್ನು ದಾಖಲಿಸಿದ್ದಾರೆ. ಅನೈತಿಕ ಕಳ್ಳಸಾಗಣೆ ಕಾಯ್ದೆಯ ಸೆಕ್ಷನ್ 3 ಮತ್ತು 5 ನ್ನೂ ಸಹ ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ.

ನಟಿ ಶ್ವೇತಾ ಮೆನನ್ ಆರ್ಥಿಕ ಲಾಭಕ್ಕಾಗಿ ಅಸಭ್ಯ ಮತ್ತು ಅಶ್ಲೀಲ ದೃಶ್ಯಗಳಲ್ಲಿ ನಟಿಸಿದ್ದಾರೆಂದು ಮಾರ್ಟಿನ್ ಮೆನಾಚೆರಿ ದೂರಿನಲ್ಲಿ ಆರೋಪಿಸಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ 51 ವರ್ಷದ ನಟಿ ಶ್ವೇತಾ ಮೆನನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶ್ವೇತಾ ಮೆನನ್ ನಟಿಸಿದ ಹಲವು ಸಿನಿಮಾಗಳಿಗೆ ಕೇರಳದ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೇ ಈ ನಟಿ ಹೆಚ್ಚಾಗಿ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದೂ ಇದೆ.

Malayalam actress Shwetha Menon faces charges for allegedly performing in films with obscene content aimed at financial gain

ಈ ನಟಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಮಾರ್ಟಿನ್ ಮೆನಾಚೆರಿ ಬಗ್ಗೆ ಹೆಚ್ಚಿನ ಮಾಹಿತಿ ವರದಿಯಾಗಿಲ್ಲ. ಆದರೆ, ಇವರ ಆರೋಪ ಗಂಭೀರವಾಗಿದೆ. ನಟಿ ಶ್ವೇತಾ ಮೆನನ್ ಆರ್ಥಿಕ ಲಾಭಕ್ಕಾಗಿ ಅಸಭ್ಯ ಮತ್ತು ಅಶ್ಲೀಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಳಿಕ ಅದನ್ನು ಹಣಕ್ಕಾಗಿ ಸೋಶಿಯಲ್ ಮೀಡಿಯಾ ಹಾಗೂ ವಯಸ್ಕರ ವೆಬ್‌ ಸೈಟ್‌ಗಳಲ್ಲಿ ಹಂಚಲಾಗಿದೆ. ಹಣ ಗಳಿಸುವ ದೃಷ್ಟಿಯಿಂದ ತಾನು ನಟಿಸಿದ ದೃಶ್ಯಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಶ್ವೇತಾ ಮೆನನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ನಟಿ ಶ್ವೇತಾ ಮೆನನ್ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಈಗಾಗಲೇ ತನಿಖೆ ಆರಂಭ ಮಾಡುವುದಾಗಿ ಪೊಲೀಸರು ಹೇಳಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಸೆಕ್ಷನ್ 67 ಎ ಪ್ರಕಾರ, ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ದೃಶ್ಯಗಳನ್ನು ಪ್ರಕಟಿಸುವುದು ಅಥವಾ ರವಾನಿಸುವುದು ಅಪರಾಧವಾಗಿದೆ. ಹೀಗಾಗಿ ನಟಿ ಶ್ವೇತಾ ಮೆನನ್ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ.

ಶ್ವೇತಾ ಮೆನನ್ ಮಲಯಾಳಂನಲ್ಲಿ 'ಸಾಲ್ಟ್ ಎಂಡ್ ಪೆಪ್ಪರ್', 'ಪಾಲೆರಿ ಮಾಣಿಕ್ಯಂ: ಒರು ಪಾತಿರಕೊಲಪತಕತಿಂತೆ ಕಥಾ', 'ರತಿನಿರ್ವೇದಂ' ಮತ್ತು 'ಕಾಳಿಮಣ್ಣು' ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಮಲಯಾಳಂ ಚಿತ್ರರಂಗದ ಅಂಗಸಂಸ್ಥೆ 'ಅಮ್ಮ'ದ ಪದಾಧಿಕಾರಿಗಳು ಹೇಮಾ ಕಮಿಟಿಯ ವರದಿ ಬಳಿಕ ರಾಜೀನಾಮೆ ನೀಡಿದ್ದರು. ಹಾಗಾಗಿ ಆಗಸ್ಟ್ 15 ರಂದು 'ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ಸ್' (ಅಮ್ಮ) ಕಾರ್ಯಕಾರಿ ಸಮಿತಿಯ ಚುನಾವಣೆ ನಡೆಯುತ್ತಿದೆ. ಇದರ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲೂ ದೂರ ದಾಖಲಿಸಿರಬಹುದು ಎಂದು ಅಂದಾಜಿಸಲಾಗಿದೆ.

More from Filmibeat

English summary
Malayalam actress Shwetha Menon faces charges for allegedly performing in films with obscene content aimed at financial gain.
Read more about: actress fir
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X