Premalu: ಥಿಯೇಟರ್‌ನಲ್ಲಿ ಮೆಚ್ಚಿಕೊಂಡ್ರು.. ಓಟಿಟಿಯಲ್ಲಿ ನೋಡಿ ಉಗಿದ್ರು; 'ಪ್ರೇಮಲು' ಕತೆಯೇನು?
2024 ಮಲಯಾಳಂ ಚಿತ್ರರಂಗಕ್ಕೆ ಬಂಪರ್ ಸಿನಿಮಾಗಳು ಸಿಕ್ಕಿವೆ. ಒಂದರ ಹಿಂದೊಂದು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ನೂರಾರು ಕೋಟಿಯನ್ನು ಲೂಟಿ ಮಾಡುತ್ತಿವೆ. ಮೊದಲ ನಾಲ್ಕು ತಿಂಗಳಲ್ಲಿಯೇ 600 ಕೋಟಿ ರೂಪಾಯಿಗೂ ಅಧಿಕ ಲಾಭ ಮಾಡಿ ಮುನ್ನುಗ್ಗುತ್ತಿವೆ. ಇದರಲ್ಲಿ ಕೆಲವರು ಹೊಸಬರ ಸಿನಿಮಾಗಳು ಕೂಡ ಬಾಕ್ಸಾಫೀಸ್‌ನಲ್ಲಿ ಚಮತ್ಕಾರ ಮಾಡಿವೆ.
ಮಲಯಾಳಂ ಬಾಕ್ಸಾಫೀಸ್‌ನಲ್ಲಿ ಚಮತ್ಕಾರ ಮಾಡಿದ ಸಿನಿಮಾಗಳಲ್ಲಿ 'ಪ್ರೇಮಲು' ಕೂಡ ಒಂದು. ನಲ್ಸನ್ ಹಾಗೂ ಮಮಿತಾ ಬೈಜು ನಟಿಸಿರುವ ಈ ಸಿನಿಮಾ ಮಲಯಾಳಂ ಗಲ್ಲಾಪೆಟ್ಟಿಗೆಯಲ್ಲಿ 140 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ. ಇಷ್ಟು ದೊಡ್ಡ ಸಕ್ಸಸ್ ಕಾಣುತ್ತಿದ್ದಂತೆ ಆಂಧ್ರ, ತೆಲಂಗಾಣದಲ್ಲೂ ರಿಲೀಸ್ ಮಾಡಲಾಗಿತ್ತು.

ಸದ್ಯ 'ಪ್ರೇಮಲು' ಸಿನಿಮಾ ಓಟಿಟಿಯಲ್ಲೂ ರಿಲೀಸ್ ಆಗಿದೆ. ಆದರೆ, ಈ ಸಿನಿಮಾವನ್ನು ಓಟಿಟಿಯಲ್ಲಿ ನೋಡಿದವರು ನೆಗೆಟಿವ್ ಕಾಮೆಂಟ್‌ಗಳನ್ನು ಮಾಡುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ. ಥಿಯೇಟರ್‌ಗಳಲ್ಲಿ ಸಿನಿಮಾ ನೋಡಿ ಅದ್ಭುತ ಅಂದವರು, ಓಟಿಟಿಯಲ್ಲಿ ಓಕೆ ಓಕೆ ಅಂತಿದ್ದಾರೆ. ಇದೇ ಗ್ಯಾಪ್‌ನಲ್ಲಿ ಚಿತ್ರತಂಡ ಬೇರೆ ಜೋಷ್‌ನಲ್ಲಿ ಸೀಕ್ವೆಲ್ ಅನ್ನೂ ಅನೌನ್ಸ್ ಮಾಡಿದೆ.
'ಪ್ರೇಮಲು' ಕೇರಳದ ಚಿತ್ರಮಂದಿರಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಯುವ ಪ್ರತಿಭೆಗಳ ತಂಡ ಬಾಕ್ಸಾಫೀಸ್‌ನಲ್ಲೂ ಗೆದ್ದು ಬೀಗಿದ್ದರು. ಈ ಯಶಸ್ಸಿನ ಬಳಿಕ 'ಪ್ರೇಮಲು' ತಂಡ ತೆಲುಗಿನಲ್ಲೂ ರಿಲೀಸ್ ಮಾಡಲು ಮುಂದಾಗಿದ್ದರು. ಆದರೆ, ನಿರೀಕ್ಷೆ ಮಾಡಿದಷ್ಟು ಸಕ್ಸಸ್ ಸಿಗಲಿಲ್ಲ. ಆದರೂ, 17 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ ಎಂದು ಹೇಳಲಾಗಿದೆ.
ಒಂದ್ಕಡೆ 'ಪ್ರೇಮಲು' ಸಕ್ಸಸ್ ಬಗ್ಗೆ ಮಾತಾಡುತ್ತಿರುವಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ಈ ಸಿನಿಮಾ ಬಗ್ಗೆ ನೆಗೆಟಿವ್ ಕಾಮೆಂಟ್‌ಗಳು ಬರುವುದಕ್ಕೆ ಶುರುವಾಗಿದೆ. ಸಿನಿಮಾ ನೋಡಿದ ಕೆಲವು ತೆಲುಗು ಮಂದಿಗೆ 'ಪ್ರೇಮಲು' ಇಷ್ಟ ಆಗಿಲ್ಲ. ಮತ್ತೆ ಕೆಲವರಿಗೆ ಈ ಸಿನಿಮಾ ಓಕೆ ಓಕೆ ಅನಿಸಿದೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ.
ಮತ್ತೆ ಕೆಲವರು 'ಪ್ರೇಮಲು' ಸಿನಿಮಾವನ್ನು ಓಟಿಟಿಯಲ್ಲಿ ನೋಡಿದ್ದಾರೆ. ಅವರಲ್ಲೂ ಕೆಲವರಿಗೆ ಈ ಸಿನಿಮಾ ಅಷ್ಟೊಂದು ಕಿಕ್ ಕೊಟ್ಟಿಲ್ಲ. ಹೀಗಾಗಿ ಟೀಕೆ ಮಾಡುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ. "ಪ್ರೇಮಲು ಸಿನಿಮಾ ಓಕೆ. ಬಿಲ್ಡಪ್ ಕೊಟ್ಟ ಹಾಗೆ ಇಲ್ಲ". " ಓವರ್‌ರೇಟೆಡ್ ಸಿನಿಮಾ" ಅಂತೆಲ್ಲ ಕಾಮೆಂಟ್ ಮಾಡಿದ್ದಾರೆ.
ನೆಟ್ಟಿಗರೊಬ್ಬರು " ಈಗಷ್ಟೇ ಸಿನಿಮಾ ನೋಡಿದೆ. ಟಾಲಿವುಡ್ ಈ ಸಿನಿಮಾವನ್ನು ಯಾಕೆ ಇಷ್ಟು ಹೈಪ್ ಮಾಡುತ್ತಿದೆ ಅನ್ನೋದೇ ತಿಳಿಯುತ್ತಿಲ್ಲ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











