ಮಲಯಾಳಂ ಸೂಪರ್ ಹಿಟ್ ಚಿತ್ರ 'ಫೋರೆನ್ಸಿಕ್' ಕನ್ನಡದಲ್ಲಿ 'ಅಂತಿಮ ಕ್ಷಣ'

ಮಲಯಾಳಂ ಚಿತ್ರರಂಗದಲ್ಲಿ ಕಥೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೆ. ಸದಾ ವಿಭಿನ್ನ ಕಥೆಯುಳ್ಳ ಸಿನಿಮಾಗಳನ್ನೇ ಸಿನಿಪ್ರಿಯರಿಗೆ ನೀಡುತ್ತಿದೆ. ಈ ಸಿನಿಮಾಗಳು ಬಾಕ್ಸಾಫೀಸ್‌ನಲ್ಲೂ ಉತ್ತಮ ಗಳಿಕೆ ಕಂಡಿವೆ. ಆದರೆ, ಮಲಯಾಳಂ ಸಿನಿಮಾಗಳು ಕನ್ನಡ ಭಾಷೆಗಳಿಗೆ ಅತೀ ಕಡಿಮೆ ಸಂಖ್ಯೆಯಲ್ಲಿ ಡಬ್ ಆಗುತ್ತಿತ್ತು. ಆದ್ರೀಗ 2020ರಲ್ಲಿ ತೆರೆಕಂಡಿದ್ದ ಸೂಪರ್ ಹಿಟ್ ಸಿನಿಮಾವೊಂದು ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಸಜ್ಜಾಗಿದೆ. ಅದುವೇ 'ಫೋರೆನ್ಸಿಕ್'

ಮಲಯಾಳಂ ಸಿನಿಮಾ 'ಫೋರೆನ್ಸಿಕ್' ಕೇರಳದಲ್ಲಿ ಸೂಪರ್ ಹಿಟ್ ಆಗಿತ್ತು. ಈ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿದ್ದರು. ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ಇದೇ ಸಿನಿಮಾ ಈಗ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಕನ್ನಡದ ಅಷ್ಟೇ ಅಲ್ಲ ದಕ್ಷಿಣ ಭಾರತದ ಮೂರು ಭಾಷೆಗಳಲ್ಲೂ ಡಬ್ ಆಗುತ್ತಿದೆ. ಎರಡು ವರ್ಷ ಹಳೆಯ ಸಿನಿಮಾ ಈಗ ಡಬ್ ಆಗುತ್ತಿರುವುದೇಕೆ? ಅನ್ನುವ ಪ್ರಶ್ನೆಗೊಂದು ಕಾರಣವಿದೆ.

 ಕನ್ನಡಕ್ಕೆ 'ಫೋರೆನ್ಸಿಕ್' ಡಬ್

ಕನ್ನಡಕ್ಕೆ 'ಫೋರೆನ್ಸಿಕ್' ಡಬ್

ಮಲಯಾಳಂ ಸ್ಟಾರ್ ಟೊವಿನೋ ಥಾಮಸ್ ಹಾಗೂ ಮಮತಾ ಮೋಹನ್‌ದಾಸ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ 'ಫೋರೆನ್ಸಿಕ್'. 2020ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಪ್ರೇಕ್ಷಕರಿಂದ ಹಾಗೂ ಬಾಕ್ಸಾಫೀಸ್‌ನಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಹೀಗಾಗಿ ಈ ಸಿನಿಮಾ ನೋಡಿದ ಗೋಪಿನಾಥ್ ಹಾಗೂ ಚಂದ್ರಶೇಖರ್ ನಾಯ್ಡು ಎಂಬುವವರು ಕನ್ನಡಕ್ಕೆ ತಂದಿದ್ದಾರೆ. ಅಂದ್ಹಾಗೆ ಈ ಸಿನಿಮಾ 'ಅಂತಿಮ ಕ್ಷಣ' ಎಂದು ಟೈಟಲ್ ಇಡಲಾಗಿದೆ.

 ಶೀಘ್ರದಲ್ಲಿಯೇ ಡಬ್ಬಿಂಗ್ ಸಿನಿಮಾ

ಶೀಘ್ರದಲ್ಲಿಯೇ ಡಬ್ಬಿಂಗ್ ಸಿನಿಮಾ

'ಫೋರೆನ್ಸಿಕ್' ಸಿನಿಮಾವನ್ನು ಮಲಯಾಳಂ ನಿರ್ದೇಶಕರಾದ ಅಖಿಲ್ ಪೌಲ್ ಹಾಗೂ ಅನಾಸ್ ಖಾನ್ ನಿರ್ದೇಶಿಸಿದ್ದಾರೆ. ಈ ಸಿನಿಮಾದ ಡಬ್ಬಿಂಗ್ ಕೆಲಸ ಭರದಿಂದ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಜೆಕ್ಸ್ ಬಿಜೋಯ್ ಸಂಗೀತ ನೀಡಿದ್ದು, ಅಖಿಲ್ ಜಾರ್ಜ್ ಛಾಯಾಗ್ರಹಣವಿದೆ. ಬಿ.ಮಂಜುನಾಥ್ ಹಾಗೂ ರಜನೀಶ್ ದೇವ ಕನ್ನಡಕ್ಕೆ ಸಂಭಾಷಣೆ ಬರೆದಿದ್ದಾರೆ.

 'ಫೋರೆನ್ಸಿಕ್' ಸಿನಿಮಾ ತಮಿಳು-ತೆಲುಗಿಗೂ ಡಬ್

'ಫೋರೆನ್ಸಿಕ್' ಸಿನಿಮಾ ತಮಿಳು-ತೆಲುಗಿಗೂ ಡಬ್

ಮಲಯಾಳಂ ಸಿನಿಮಾ 'ಫೋರೆನ್ಸಿಕ್' ಕೇವಲ ಕನ್ನಡ ಅಷ್ಟೇ ಅಲ್ಲ. ತೆಲುಗು ಹಾಗೂ ತಮಿಳು ಭಾಷೆಗೂ ಡಬ್ ಆಗಿದೆ. ತಮಿಳು ಭಾಷೆಯಲ್ಲಿ 'ಕಡೈಸಿ ನೊಡಿಗಳ್' ಹೆಸರಿನಲ್ಲಿ ಬಿಡುಗಡೆಯಾಗಿದೆ. ಇದೇ ರೀತಿ ತೆಲುಗಿಗೂ ಸಿನಿಮಾ ಡಬ್ ಆಗಿದೆ. ಟೊವಿನೊ ಥಾಮಸ್ ನಟಿಸಿದ ಸಿನಿಮಾ 'ಮಿನ್ನಲ್ ಮುರಳಿ' ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಜನಪ್ರಿಯತೆಯನ್ನೇ ಆಧಾರವಾಗಿಟ್ಟುಕೊಂಡು ದಕ್ಷಿಣ ಭಾರತದ ಸಿನಿಮಾಗಳಿಗೆ ಡಬ್ ಮಾಡಲಾಗುತ್ತಿದೆ.

 ಹಿಂದಿಗೂ ಫೋರೆನ್ಸಿಕ್ ರಿಮೇಕ್

ಹಿಂದಿಗೂ ಫೋರೆನ್ಸಿಕ್ ರಿಮೇಕ್

'ಮಿನ್ನಾಲ್ ಮುರಳಿ' ಜನಪ್ರಿಯತೆಯಿಂದ ಟೊವಿನೊ ಥಾಮಸ್ ನಟಿಸಿದ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಈಗ 'ಫೋರೆನ್ಸಿಕ್' ಸಿನಿಮಾ ಬಾಲಿವುಡ್‌ಗೆ ರಿಮೇಕ್ ಆಗುತ್ತಿದ್ದು, ವಿಕ್ರಾಂತ್ ಮಸೈ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಇವರೊಂದಿಗೆ ರಾಧಿಕಾ ಆಪ್ಟೆ, ಪ್ರಾಚಿ ದೇಸಾಯಿ, ರೋಹಿತ್ ರಾಯ್ ಕೂಡ ನಟಿಸಲಿದ್ದಾರೆ ಎನ್ನಲಾಗಿದೆ. ಸದ್ಯ ಕನ್ನಡಕ್ಕೆ 'ಅಂತಿಮ ಕ್ಷಣ' ಹೆಸರಿನಲ್ಲಿ ಡಬ್ ಆಗುತ್ತಿದ್ದು, ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಾ? ಅನ್ನುವ ಕುತೂಹಲವಿದೆ.

More from Filmibeat

English summary
Malayalam psychological thriller movie ‘Forensic’ dubbed in Kannada as Antima Kshana. Minnal Murali fame Tovin Thomas and Mamta Mohandas played as lead roles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X