ಒಂದೇ ವರ್ಷದಲ್ಲಿ ಮಲಯಾಳಂ ನಟ ನಿವಿನ್ ಪೌಲಿಯ 4 ಸಿನಿಮಾ ರಿಲೀಸ್; ವೆಬ್ ಸೀರಿಸ್ ನಲ್ಲೂ ಬ್ಯುಸಿ
ದಕ್ಷಿಣ ಭಾರತದಲ್ಲಿಯೇ ಅತ್ಯಂತ ಯಶಸ್ವಿ ಚಿತ್ರರಂಗ ಅಂದರೆ ಅದು ಮಲಯಾಳಂ ಇಂಡಸ್ಟ್ರಿ. ಈ ವರ್ಷ ಕೂಡ ಮಲಯಾಳಂ ಚಿತ್ರರಂಗ ಅತೀ ಹೆಚ್ಚು ಯಶಸ್ವಿ ಸಿನಿಮಾಗಳನ್ನು ಕೊಟ್ಟಿದೆ. ಮೋಹನ್‌ಲಾಲ್, ದುಲ್ಖರ್ ಸಲ್ಮಾನ್, ಫಹಾದ್ ಫಾಸಿಲ್ ಸೇರಿದಂತೆ ಕಲ್ಯಾಣಿ ಪ್ರಿಯದರ್ಶನ್ ಯಶಸ್ವಿ ತಾರೆಯರಾಗಿ ಹೊರ ಹೊಮ್ಮಿದ್ದಾರೆ. ಇವರೊಂದಿಗೆ ಮಲಯಾಳಂ ಮತ್ತೊಬ್ಬ ಸ್ಟಾರ್ ನಟ ನಿವಿನ್ ಪೌಲಿ ಅಖಾಡಕ್ಕೆ ಇಳಿಯುವುದಕ್ಕೆ ಸಜ್ಜಾಗಿದ್ದಾರೆ.
ಮಾಲಿವುಡ್‌ನ ಸ್ಟಾರ್ ನಟ ನಿವಿನ್ ಪೌಲಿ ಅಕ್ಟೋಬರ್ 11 ರಂದು 40ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂದರ್ಭದಲ್ಲಿರುವ ನಿವಿನ್ ಪೌಲಿ ತನ್ನ ಮುಂಬರುವ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ಆ ಎಲ್ಲಾ ಸಿನಿಮಾಗಳು ಬಹುತೇಕ ಇದೇ ವರ್ಷ ಒಂದರ ಹಿಂದೊಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಕೆಲವು ಸಿನಿಮಾಗಳ ರಿಲೀಸ್ ಡೇಟ್ ಈಗಾಗಲೇ ಅನೌನ್ಸ್ ಕೂಡ ಆಗಿದೆ.

ನಿವಿನ್ ಪೌಲಿ ಈಗಾಗಲೇ ಮಲಯಾಳಂ ಇಂಡಸ್ಟ್ರಿಯಲ್ಲಿ ವರ್ಸಟೈಲ್ ಆಕ್ಟರ್ ಅಂತ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ನಿವಿನ್ ಪೌಲಿ ನಟಿಸಿರುವ ಸಿನಿಮಾಗಳು ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಹೆಸರು ಮಾಡಿದ್ದವು. ಮಲಯಾಳಂ ಹಾಗೂ ತಮಿಳು ಸಿನಿಮಾರಂಗದಲ್ಲಿ ಸದಾ ವಿಭಿನ್ನ ಸ್ಕ್ರಿಪ್ಟ್‌ಗಳನ್ನು ಮೂಲಕ ಮತ್ತೆ ಸಿನಿಪ್ರಿಯರನ್ನು ಸೆಳೆದಿರುವ ಈ ನಟ ಮತ್ತೆ ಹೊಸ ಪ್ರಾಜೆಕ್ಟ್‌ಗಳ ಮೂಲಕ ಗಮನ ಸೆಳೆಯುವುದಕ್ಕೆ ಬರುತ್ತಿದ್ದಾರೆ.
ಅಂದ್ಹಾಗೆ ನಿವಿಲ್ ಪೌಲಿ ಬಳಿ ಇರುವ ಸಿನಿಮಾಗಳ್ಯಾವುವು ಅನ್ನೋದನ್ನು ನೋಡುವುದಾರೇ, ಮೊದಲಿಗೆ 'ಸರ್ವಂ ಮಾಯ' ಅನ್ನೋ ಹಾರರ್ ಕಾಮಿಡಿ ಸಿನಿಮಾ ನಿರೀಕ್ಷೆ ಹುಟ್ಟಿಸಿದೆ. 2025ರ ಕ್ರಿಸ್‌ಮಸ್‌ಗೆ ಈ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಅಜು ವರ್ಗೀಸ್ ಅವರೊಂದಿಗೆ ನಿವಿಲ್ ಪೌಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಈ ಸಿನಿಮಾ ಈ ವರ್ಷದ ಕೊನೆಯಲ್ಲಿ ಬಾಕ್ಸಾಫೀಸ್‌ನಲ್ಲಿ ಹಲ್‌ಚಲ್ ಎಬ್ಬಿಸಬಹುದೆಂದು ನಿರೀಕ್ಷೆ ಮಾಡಲಾಗಿದೆ.

'ಸರ್ವಂ ಮಾಯ' ರಿಲೀಸ್ ಬಳಿಕ 'ಬೆತ್ಲೆಹೆಮ್ ಕುಟುಂಬ ಯುನಿಟ್'ಎಂಬ ಸಿನಿಮಾ ರಿಲೀಸ್ ಆಗಲಿದೆ. ಈಗಾಗಲೇ 'ಪ್ರೇಮಲು' ಅನ್ನೋ ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಟಿರುವ ತಂಡದಿಂದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ನಿವಿನ್ ಪೌಲಿ ಜೊತೆ ಮಮಿತಾ ಬೈಜು ನಟಿಸುತ್ತಿದ್ದಾರೆ. ಇದೂ ಕೂಡ ನಿವಿನ್ ಪೌಲಿ ವೃತ್ತಿ ಬದುಕಿಗೆ ಹೊಸ ಹುರುಷು ಕೊಡಬಹುದೆಂಬ ನಿರೀಕ್ಷೆಯಿದೆ.
ಹಾರರ್ ಕಾಮಿಡಿ ಹಾಗೂ ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳ ಜೊತೆಗೆ 'ಬೆಬಿ ಗರ್ಲ್' ಥ್ರಿಲ್ಲರ್ ಸಿನಿಮಾದಲ್ಲೂ ನಿವಿನ್ ಪೌಲಿ ನಟಿಸಿದ್ದಾರೆ. ಇನ್ನು ತಮಿಳಿನಲ್ಲಿ ನಿರ್ದೇಶಕ ರಾಮ್ ಆಕ್ಷನ್ ಕಟ್ ಹೇಳ್ತಿರೋ ವಿಭಿನ್ನ ರೊಮ್ಯಾಂಟಿಕ್ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ 'ಏಳು ಕಡಲ್ ಏಳು ಮಲೈ' ಕೂಡ ಇನ್ನೇನು ಶೀಘ್ರದಲ್ಲೇ ಬಿಡುಗಡೆಯಾಗುವ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಈ ಸಿನಿಮಾಗಳ ಜೊತೆ ತಮಿಳಿನ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ಮಿಸುತ್ತಿರುವ 'ಬೆನ್ಜ್' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಿವಿನ್ ಪೌಲಿ 'ವಾಲ್ಟರ್' ಎಂಬ ಪಾತ್ರದ ಮೂಲಕ ಡಿಫ್ರೆಂಟ್ ಆಗಿ ಪ್ರೇಕ್ಷಕರನ್ನು ರಂಜಿಸುವುದಕ್ಕೆ ರೆಡಿಯಾಗಿದ್ದಾರೆ.
ಇನ್ನು ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಜೊತೆಗೆ ವೆಬ್ ಸೀರೀಸ್‌ನಲ್ಲೂ ನಟಿಸಿದ್ದಾರೆ. 'ಫಾರ್ಮಾ' ಎಂಬ ವೆಬ್ ಸೀರಿಸ್ ಮೂಲಕ ಡಿಜಿಟಲ್ ಕ್ಷೇತ್ರಕ್ಕೂ ಪದಾರ್ಪಣೆ ಮಾಡುತ್ತಿದ್ದಾರೆ. ಇದಷ್ಟೇ ಅಲ್ಲದೆ ನಿರ್ಮಾಪಕರಾಗಿ ನಿವಿನ್ ಪೌಲಿ ಗುರುತಿಸಿಕೊಂಡಿದ್ದು, ಪಾನ್ ಇಂಡಿಯನ್ ಸೂಪರ್‌ಹೀರೋ ಸಿನಿಮಾ 'ಮಲ್ಟಿವರ್ಸ್ ಮನುಮಧನ್' ಹಾಗೂ ನಯನತಾರಾ ಅಭಿನಯದ 'ಡಿಯರ್ ಸ್ಟುಡೆಂಟ್ಸ್' ಅಂತಹ ಸಿನಿಮಾಗಳಿಗೆ ಬೆಂಬಲ ನೀಡುತ್ತಿದ್ದಾರೆ.


Click it and Unblock the Notifications











