ಮತ್ತೊಂದು ರೇಂಜ್ ರೋವರ್ ದುಬಾರಿ ಕಾರು ಖರೀದಿಸಿದ ಮೋಹನ್‌ಲಾಲ್: ಬೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅತೀ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣದ ನಟರಲ್ಲಿ ಒಬ್ಬರು. ನಟನೆ ಬಿಟ್ಟರೆ ಮೋಹನ್‌ಲಾಲ್‌ಗೆ ಅಡುಗೆ ಮಾಡೋದು ಅಂದ್ರೆ ತುಂಬಾನೇ ಇಷ್ಟ. ಕುಕಿಂಗ್ ಜೊತೆನೇ ಕಾರುಗಳು ಮೇಲೂ ಕ್ರೇಜ್ ಕಮ್ಮಿಯೇನಿಲ್ಲ. ಹಾಗಾಗಿಯೇ ಆಗಾಗ ಹೊಸ ಹೊಸ ಕಾರುಗಳನ್ನು ಖರೀದಿ ಮಾಡುತ್ತಲೇ ಇರುತ್ತಾರೆ.
ಮೋಹನ್‌ಲಾಲ್ ಗ್ಯಾರೇಜ್ ತುಂಬ ದುಬಾರಿ ಕಾರುಗಳೇ ಇವೆ. ಕಾರುಗಳ ಮೇಲಿನ ಪ್ರೀತಿ ಹೆಚ್ಚಿರೋದ್ರಿಂದ ಸೂಪರ್‌ಸ್ಟಾರ್ ಇತ್ತೀಚೆಗೆ ಹೊಸ ದುಬಾರಿ ಕಾರೊಂದು ಖರೀದಿ ಮಾಡಿದ್ದಾರೆ. ಈ ಐಶಾರಾಮಿ ಕಾರು ಈಗ ಮೋಹನ್‌ಲಾಲ್ ಮನೆ ಸೇರಿದೆ. ಫೋಟೊಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಾರೆ.

₹5 ಕೋಟಿ ಕಾರು ಖರೀದಿಸಿದ ಮೋಹನ್‌ಲಾಲ್
ಮೋಹನ್‌ಲಾಲ್ ಐಷಾರಾಮಿ ಕಾರುಗಳ ಲಿಸ್ಟ್‌ನಲ್ಲಿ ರೇಂಜ್ ರೋವರ್ ಆಟೋಬಯೋಗ್ರಫಿ ಸೇರಿಕೊಂಡಿದೆ. ಇದರ ಬೆಲೆ ಬರೋಬ್ಬರಿ 5 ಕೋಟಿ ರೂಪಾಯಿ. ಇದರಲ್ಲಿ ಐಷಾರಾಮಿ ಸವಲತ್ತುಗಳು ಇವೆ. ಮೋಹನ್‌ಲಾಲ್ ಬೇಡಿಕೆಯಂತೆಯೇ ಈ ಕಾರಿಗೆ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ ಎನ್ನಲಾಗಿದೆ.
ಇತ್ತೀಚೆಗೆ ಇದೇ ಐಷಾರಾಮಿ ಕಾರನ್ನು ಮೋಹನ್‌ಲಾಲ್ ತಮ್ಮ ಪತ್ನಿ ಹಾಗೂ ಆಪ್ತರೊಂದಿಗೆ ಹೋಗಿ ಖರೀದಿ ಮಾಡಿದ್ದಾರೆ. ಕೊಚ್ಚಿಯಲ್ಲಿರುವ ಮೋಹನ್‌ಲಾಲ್ ಮನೆಯ ಗ್ಯಾರೇಜ್‌ನಲ್ಲಿ ಹೊಸ ಕಾರು ಸೇರ್ಪಡೆಯಾಗಿದ್ದು, ಇದೇ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಹಾಗಿದ್ದರೆ, ಈ ಕಾರಿನ ಹೈಲೈಟ್ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ರೇಂಜ್ ರೋವರ್ ಕಾರಿನ ಹೈಲೈಟ್ ಏನು?
ಮೋಹನ್‌ಲಾಲ್ ಖರೀದಿಸಿದ ₹5 ಕೋಟಿ ರೇಂಜ್ ರೋವರ್ ಕಾರಿನಲ್ಲಿ ಸಾಕಷ್ಟು ಸವಲತ್ತುಗಳಿವೆ. ಪವರ್ ವಿಂಡೋಸ್, ಪವರ್ ಬೂಟ್, ಅಡ್ಜೆಸ್ಟೆಬಲ್ ಸ್ಟೇರಿಂಗ್, ಥ್ರಿ ಜೋನ್ ಕ್ಲೈಮ್ಯಾಟ್ ಕಂಟ್ರೋಲ್, ಫ್ರಂಡ್ ಮತ್ತು ರೇರ್ ಸೆನ್ಸಾರ್, ಸುರಕ್ಷತೆಗಾಗಿ ಟಾರ್ಕ್ ವೆಕ್ಟರಿಂಗ್ ಸೇರಿದಂತೆ ಹಲವು ಸಲವತ್ತುಗಳು ಈ ದುಬಾರಿ ಕಾರಿನಲ್ಲಿ ಇದೆ.
ರೇಂಜ್ ರೋವರ್ ಆಟೋಮ್ಯಾಟಿಕ್ ಕಾರು ಕೇವಲ 6.1 ಸೆಕೆಂಡ್‌ಗಳಲ್ಲಿ 0 ಯಿಂದ 100 ಕಿ.ಮೀ ವೇಗ ಪಡೆದುಕೊಳ್ಳುತ್ತೆ. ಮೋಹನ್‌ಲಾಲ್ ಇತ್ತೀಚೆಗೆ ಟೊಯೋನಾ ಇನ್ನೋವಾ ಕ್ರಿಸ್ಟಾ ಜೆಡ್ 7 ಆಟೋ ಎಡಿಷನ್ ಅನ್ನು ಖರೀದಿ ಮಾಡಿದ್ದರು. ಇದರೊಂದಿಗೆ ಮೋಹನ್‌ಲಾಲ್ ಟೊಯೋಟಾ ಮಿನಿವ್ಯಾನ್ ಓನರ್ ಕೂಡ ಹೌದು. ಮೋಹನ್ ಲಾಲ್ ರೇಂಜ್ ರೋವರ್ ಆಟೋಬಯೋಗ್ರಫಿ ಕಾರು ಖರೀದಿ ಬಳಿಕ ಕ್ರೇಜ್ ಹೆಚ್ಚಾಗಿದೆ.
ಮೋಹನ್‌ಲಾಲ್ ವಿರುದ್ಧ ಗಂಭೀರ ಆರೋಪ
ಇತ್ತೀಚೆಗೆ ಮೋಹನ್‌ಲಾಲ್ ವಿರುದ್ಧ ಗೆಳೆಯ ಹಾಗೂ ನಟ ಶ್ರೀನಿವಾಸನ್ ಗಂಭೀರ ಆರೋಪ ಮಾಡಿದ್ದರು. ಮೋಹನ್‌ಲಾಲ್ ಒಬ್ಬ ಬೂಟಾಟಿಕೆ ವ್ಯಕ್ತಿ ಎಂದು ಆರೋಪ ಮಾಡಿದ್ದರು. ಇದೇ ವೇಳೆ ಪ್ರೇಮ್ ನಾಜೀರ್ ಕನಸಿನ ಪ್ರಾಜೆಕ್ಟ್ ಅನ್ನು ಮೋಹನ್‌ಲಾಲ್ ತಿರಸ್ಕರಿಸಿದ್ದರು ಎಂದೂ ಆರೋಪ ಮಾಡಲಾಗಿದೆ. ಅಲ್ಲದೆ ಸಾಯುವುದಕ್ಕೂ ಮುನ್ನ ಕಂಪ್ಲೀಟ್ ಆಕ್ಟರ್‌ನ ಎಲ್ಲಾ ರಹಸ್ಯಗಳನ್ನೂ ರಿವೀಲ್ ಮಾಡುವುದಾಗಿ ಶ್ರೀನಿವಾಸನ್ ಹೇಳಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಪ್ರಿಯದರ್ಶನ್ ಪ್ರತಿಕ್ರಿಯೆ ನೀಡಿದ್ದರು. " ಇಬ್ಬರೂ ನನಗೆ ಉತ್ತಮ ಸ್ನೇಹಿತರು. ಅವರು ಯಾಕೆ ಇಂತಹ ಗಂಭೀರ ಆರೋಪ ಮಾಡಿದ್ರು ಅನ್ನೋದು ನನಗೆ ಗೊತ್ತಿಲ್ಲ. ಅವರ ಆರೋಗ್ಯ ಇದಕ್ಕೆ ಕಾರಣವಿರಬಹುದು. ಏನೂ ಕಾರಣ ಗೊತ್ತಿಲ್ಲದೆ ಕಮೆಂಟ್ ಮಾಡುವುದು ಸರಿಯಿಲ್ಲ" ಎಂದು ನಿರ್ದೇಶಕ ಪ್ರಿಯದರ್ಶನ್ ಹೇಳಿಕೆ ನೀಡಿದ್ದಾರೆ.


Click it and Unblock the Notifications











