"ವೈಯಕ್ತಿಕ ಸವಾಲುಗಳೊಂದಿಗೆ ಹೋರಾಡುತ್ತಿದ್ದೇನೆ" ನಟಿ ನಜ್ರಿಯಾ ನಜೀಮ್; ಬೆಂಬಲಕ್ಕೆ ನಿಂತ ಮೇಘನಾ ರಾಜ್

ಮಲಯಾಳಂ ಚಿತ್ರರಂಗದ ಸ್ಟಾರ್ ನಟಿ ನಜ್ರಿಯಾ ನಜೀವ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಶೇರ್ ಮಾಡಿದ್ದರು. ತಮಿಳಿನ 'ರಾಜಾ ರಾಣಿ', ಮಲಯಾಳಂನ 'ಬೆಂಗಳೂರು ಡೇಸ್' ಸೇರಿದಂತೆ ಹಲವು ಸೂಪರ್‌ ಹಿಟ್ ಸಿನಿಮಾಗಳನ್ನು ನೀಡಿರುವ ನಟಿಯೀಕೆ. ಇತ್ತೀಚೆಗಷ್ಟೇ ಇವರ ಸಿನಿಮಾ 'ಸೂಕ್ಷ್ಮದರ್ಶಿನಿ' ರಿಲೀಸ್‌ ಆಗಿತ್ತು. ಆದರೆ, ಈ ಸಿನಿಮಾದ ಪ್ರಚಾರದಲ್ಲಿ ನಜ್ರಿಯಾ ನಜೀಮ್ ಕಾಣಿಸಿಕೊಂಡಿರಲಿಲ್ಲ.

ಸಿನಿಮಾದ ಪ್ರಚಾರದಲ್ಲಿ ಅಷ್ಟೇ ಅಲ್ಲ. ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿಯೂ ನಜ್ರಿಯಾ ನಜೀಮ್ ಆಕ್ಟಿವ್ ಆಗಿ ಇರಲಿಲ್ಲ. ಸಿನಿಮಾ ಮಂದಿಯ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಅಷ್ಟೇ ಸ್ನೇಹಿತರ ಫೋನ್‌ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ಮಲಯಾಳಂ ಚಿತ್ರರಂಗದಲ್ಲಿ ನಜ್ರಿಯಾ ನಜೀಮ್ ಬಗ್ಗೆ ಆತಂಕ ವ್ಯಕ್ತವಾಗಿತ್ತು. ಈ ಸಂಬಂಧ ನಜ್ರಿಯಾ ನಜೀಮ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕವಾಗಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಈ ಪೋಸ್ಟ್‌ಗೆ ಚಿತ್ರರಂಗ ತಾರೆಯರು ಪ್ರತಿಕ್ರಿಯಿಸಿದ್ದು, ನಜ್ರಿಯಾ ಬೆಂಬಲಕ್ಕೆ ನಿಂತ್ತಿದ್ದಾರೆ.

Meghana Raj Danish Sait Samantha come in support of Nazriya Nazim after an emotional post

ನಜ್ರಿಯಾ ನಜೀವ್ ಗೆಳತಿ ನಟಿ ಮೇಘನಾ ರಾಜ್‌ರಿಂದ ಹಿಡಿದು ಸಮಂತಾವರೆಗೂ ನಟಿಗೆ ಧೈರ್ಯ ತುಂಬಿದ್ದಾರೆ. ನಜ್ರಿಯಾ ಮಲಯಾಳಂನ ಸ್ಟಾರ್ ನಟ 'ಪುಷ್ಪ 2' ಶೇಖಾವತ್ ಖ್ಯಾತಿಯ ಫಹಾದ್ ಫಾಸಿಲ್ ಅವರ ಪತ್ನಿ. ವೈಯಕ್ತಿಕ ಸಮಸ್ಯೆಗಳಿಂದ ಹೋರಾಡುತ್ತಿದ್ದು, ಎಲ್ಲದರಿಂದ ದೂರವಿದ್ದೇನೆ ಎಂದು ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ಈ ಪೋಸ್ಟ್‌ ವೈರಲ್ ಆಗುತ್ತಿದ್ದಂತೆ ತಾರೆಯರು ಆ ಪೋಸ್ಟ್‌ಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಆರಂಭದಲ್ಲಿ ನಟಿ ನಜ್ರಿಯಾ ನಜೀಮ್ ಸೋಶಿಯಲ್ ಮೀಡಿಯಾ ಆಕ್ಟಿವ್ ಆಗಿಲ್ಲದೆ ಇರುವುದು, ಸಿನಿಮಾ ಮಂದಿಯ ಕೈಗೆ ಸಿಗದೇ ಇರುವುದು ಚರ್ಚೆಯನ್ನು ಹುಟ್ಟಾಕಿತ್ತು. ನಜ್ರಿಯಾ ಹಾಗೂ ಫಹಾದ್ ಫಾಸಿಲ್ ಇಬ್ಬರೂ ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು. ಹೀಗಾಗಿ ಖುದ್ದಾಗಿ ನಜ್ರಿಯಾ ತನ್ನ ಇನ್‌ಸ್ಟಾಗ್ರಾಂನಲ್ಲಿ ಕಾರಣಗಳನ್ನು ತಿಳಿಸಿದ್ದಾರೆ. ಈ ಪೋಸ್ಟ್‌ನಲ್ಲಿ ನಜ್ರಿಯಾ ನಜೀಮ್ ಫಹಾದ್ ಎಂದೇ ತನ್ನ ಹೆಸರು ಬರೆದುಕೊಂಡಿದ್ದು, ವಿಚ್ಚೇದನದ ಗುಮಾನಿಗೆ ತೆರೆ ಎಳೆದಿದ್ದಾರೆ.

ಅಷ್ಟಕ್ಕೂ ನಜ್ರಿಯಾ ನಜೀಮ್ ಬರೆದ ಪತ್ರದಲ್ಲಿ ಏನಿದೆ ಅಂತ ನೋಡುವುದಾರೇ, "ನೀವೆಲ್ಲರೂ ಆರಾಮಾಗಿದ್ದೀರಿ ಎಂದು ಭಾವಿಸಿದ್ದೇನೆ. ಕೆಲವು ದಿನಗಳಿಂದ ನಾನು ನಿಮ್ಮೆಲ್ಲರಿಂದ ಯಾಕೆ ದೂರವಿದ್ದೆ ಅನ್ನೋದನ್ನು ಹೇಳುವುದಕ್ಕೆ ಬಯಸುತ್ತೇನೆ. ನಾನು ಈ ಅದ್ಭುತ ಕಮ್ಯೂನಿಟಿಯಲ್ಲಿ ಎಷ್ಟು ಆಕ್ಟಿವ್ ಆಗಿರುತ್ತೇನೆ ಎಂಬುವುದು ನಿಮ್ಮೆಲ್ಲರಿಗೂ ಗೊತ್ತು. ಆದರೆ, ನಾನು ಕೆಲವು ತಿಂಗಳುಗಳಿಂದ ಭಾವನಾತ್ಮಕವಾಗಿ ಹಾಗೂ ವೈಯಕ್ತಿಕ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದೇನೆ. ಅದು ನಾನು ಇಲ್ಲಿಗೆ ಹಾಜರಿ ಹಾಕುವುದಕ್ಕೆ ಅನುಮತಿಯನ್ನು ನೀಡುತ್ತಿಲ್ಲ." ಎಂದು ನಜ್ರಿಯಾ ನಜೀಮ್ ಹೇಳಿದ್ದರು.

ಹಾಗೆಯೇ " ನಾನು ನನ್ನ 30ನೇ ಹುಟ್ಟುಹಬ್ಬವನ್ನು, ಹೊಸ ವರ್ಷವನ್ನು, ಸೂಕ್ಷ್ಮದರ್ಶನಿ ಸಿನಿಮಾದ ಯಶಸ್ಸನ್ನು ಹಾಗೂ ಹಲವು ಪ್ರಮುಖ ಕ್ಷಣಗಳನ್ನು ಮಿಸ್ ಮಾಡಿಕೊಂಡಿದ್ದೇನೆ. ಹಾಗೇ ನನ್ನ ಸ್ನೇಹಿತರಿಗೆ ಯಾಕೆ ಇಷ್ಟು ದಿನ ಗೈರಾಗಿದ್ದಕ್ಕೆ, ನಿಮ್ಮ ಕರೆಗಳನ್ನು ಸ್ವೀಕರಿಸದೇ ಇದ್ದಿದ್ದಕ್ಕೆ, ನಿಮ್ಮ ಸಂದೇಶಗಳಿಗೆ ಪ್ರತಿಕ್ರಿಯೆ ನೀಡದೇ ಇದ್ದಿದ್ದಕ್ಕೆ ಕ್ಷಮೆಯನ್ನು ಕೇಳುತ್ತೇನೆ." ಎಂದು ಹೇಳಿದ್ದರು.

"ಹಾಗೆ ನಾನು ನನ್ನ ಎಲ್ಲಾ ಸಹೋದ್ಯೋಗಿಗಳಿಗೆ ಕ್ಷಮೆಯನ್ನು ಕೇಳುತ್ತೇನೆ. ಅವರು ಕೆಲಸದ ನಿಮಿತ್ತ ನನ್ನನ್ನು ಸಂಪರ್ಕ ಮಾಡುವುದಕ್ಕೆ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ನಾನು ಆ ವೇಳೆ ಗೈರಾಗಿದ್ದು, ಅದಕ್ಕಾಗಿ ನಾನು ಕ್ಷಮೆಯನ್ನು ಕೇಳುತ್ತೇನೆ. ಆದರೆ, ಇನ್ನೊಂದು ಪಾಸಿಟಿವ್ ಅಂಶವಿದೆ. ನನಗೆ ಅತ್ಯುತ್ತಮ ನಟಿ ವಿಭಾಗದಲ್ಲಿ ಕೇರಳ ಫಿಲ್ಮ್ ಕ್ರಿಟಿಕ್ಸ್ ಪ್ರಶಸ್ತಿ ಸಿಕ್ಕಿದೆಯೆಂದು ಹೇಳುವುದಕ್ಕೆ ಥ್ರಿಲ್ ಆಗುತ್ತಿದೆ. ನನ್ನನ್ನು ಈ ಪ್ರಶಸ್ತಿಗೆ ಗುರುತಿಸಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹಾಗೇ ನನ್ನೊಂದಿಗೆ ಪ್ರಶಸ್ತಿಯನ್ನು ಗೆದ್ದವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ." ಎಂದಿದ್ದಾರೆ ನಜ್ರಿಯಾ ನಜೀಮ್.

" ಇಲ್ಲಿವರೆಗೂ ನನ್ನ ಜರ್ನಿ ತುಂಬಾನೇ ಕಷ್ಟಕರವಾಗಿತ್ತು. ಆದರೆ, ನಾನು ಈ ಜರ್ನಿಯಲ್ಲಿ ಬೇಗನೇ ಗುಣಮುಖಳಾಗುವುದಕ್ಕೆ ಸಾಕಷ್ಟು ಪ್ರಯತ್ನ ಪಡುತ್ತಿದ್ದೇನೆ. ಹಾಗೇ ದಿನದಿಂದ ದಿನಕ್ಕೆ ನಾನು ಉತ್ತಮಗೊಳ್ಳುತ್ತಿದ್ದೇನೆ. ಇಂತಹ ಸಮಯದಲ್ಲಿ ನೀವು ನನ್ನನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಪ್ರಶಂಸಿಸುತ್ತೇನೆ. ಮತ್ತೆ ಎಂದಿನಂತೆ ಹಿಂತಿರುಗುವುದಕ್ಕೆ ನನಗೆ ಇನ್ನೂ ಸ್ವಲ್ಪ ಸಮಯ ಬೇಕಿದೆ. ನಾನು ಗುಣಮುಖಳಾಗುವ ಹಂತದಲ್ಲಿದ್ದೇನೆ ಎಂದು ನಿಮಗೆ ಮಾತು ಕೊಡುತ್ತೇನೆ. ನಾನು ಹೀಗೆ ಕಣ್ಮರೆಯಾಗಿದ್ದಕ್ಕೆ ನನ್ನ ಕುಟುಂಬ, ಸ್ನೇಹಿತರು, ಅಭಿಮಾನಿಗಳಿಗೆ ವಿವರಣೆ ಕೊಡಬೇಕಿತ್ತು. ಈ ಪತ್ರವನ್ನು ಬರೆಯುವುದಕ್ಕೆ ಇದೇ ಕಾರಣ." ಎಂದು ಪತ್ರದಲ್ಲಿ ಬರೆದಿದ್ದರು.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನಜ್ರಿಯಾಗೆ ತಾರೆಯರು ಬೆಂಬಲಕ್ಕೆ ಬಂದಿದ್ದಾರೆ. ಅದರಲ್ಲೂ ಆತ್ಮೀಯ ಗೆಳತಿ ಮೇಘನಾ ರಾಜ್, ಪಾರ್ವತಿ, ಸಮಂತಾ, ಟೊವಿನೋ ಥಾಮಸ್, ಡ್ಯಾನಿಶ್ ಸೇಠ್ ಸೇರಿದಂತೆ ಹಲವು ಮಂದಿ ತಾರೆಯರು ಮಲಯಾಳಂ ನಟಿಯ ಈ ಕಷ್ಟದ ಕ್ಷಣಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ನಟಿಗೆ ಧೈರ್ಯವನ್ನು ತುಂಬಿದ್ದಾರೆ. ಈ ಕಷ್ಟದಿಂದ ಪಾರಾಗುವಂತೆ ಬೆಂಬಲ ಕೊಟ್ಟಿದ್ದಾರೆ.

ಮಲಯಾಳಂ ನಟಿ ನಜ್ರಿಯಾ ನಜೀಮ್ ಅವರ ಗೆಳತಿ ನಟಿ ಮೇಘನಾ ರಾಜ್ ಈ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ. " ಬೇಬಿ ಗರ್ಲ್.. ನಾವು ನಿನ್ನನ್ನು ತುಂಬಾನೇ ಪ್ರೀತಿಸುತ್ತೇವೆ. ನಿನ್ನ ಜೊತೆಗೆ ಯಾವಾಗಲೂ ಇರುತ್ತೇವೆ. ಅದು ನಿನಗೆ ಗೊತ್ತು" ಎಂದು ಕಮೆಂಟ್ ಮಾಡಿದ್ದಾರೆ. ಇತ್ತ ಡ್ಯಾನಿಶ್ ಸೇಠ್ ಕೂಡ "ಜಾಗರೂಕರಾಗಿರಿ, ನಿಮಗೆ ಬೇಕಾದಷ್ಟು ಸಮಯ ತೆಗೆದುಕೊಳ್ಳಿ. ಈ ಜಗತ್ತು ನಿಮಗಾಗಿ ಕಾಯುತ್ತೆ." ಎಂದು ಕಮೆಂಟ್ ಮಾಡಿದ್ದಾರೆ.

ನಟಿ ನಜ್ರಿಯಾ ನಜೀಮ್‌ಗೆ ಈಗ ಕೇವಲ 30 ವರ್ಷ. ಚಿತ್ರರಂಗಕ್ಕೆ ಅತೀ ಚಿಕ್ಕ ವಯಸ್ಸಿಗೆ ಕಾಲಿಟ್ಟಿದ್ದ ನಜ್ರಿಯಾ ಬಹುಬೇಗನೇ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಮಲಯಾಳಂ ಸೂಪರ್ ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದರು. ಸಿನಿಮಾಗೆ ಕಾಲಿಡುವುದಕ್ಕೂ ಮುನ್ನ ನಜ್ರಿಯಾ ಮುಸ್ಲಿಂ ಸಂಪ್ರದಾಯ ಹಿನ್ನೆಲೆಯುಳ್ಳ ಟಿವಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ಬಳಿಕ ಕೇರಳದ ಜನಪ್ರಿಯ ಟಿವಿ ಚಾನೆಲ್ ಕೈರಾಲಿ ಟಿವಿಗೆ ನಿರೂಪಕಿಯಾದರು. ನಂತರ ಏಷ್ಯಾನೆಟ್‌ನ 'ಸ್ಟಾರ್ ಸಿಂಗರ್' ರಿಯಾಲಿಟಿ ಶೋವನ್ನೂ ನಡೆಸಿಕೊಟ್ಟಿದ್ದರು.

ಬಳಿಕ ಮಲಯಾಳಂ ಚಿತ್ರರಂಗಕ್ಕೆ ಬಾಲ ನಟಿಯಾಗಿ ಎಂಟ್ರಿ ಕೊಟ್ಟಿದ್ದ ನಜ್ರಿಯಾ ಮಮ್ಮುಟ್ಟಿ ಹಾಗೂ ಮೋಹನ್‌ಲಾಲ್ ಅಂತಹ ದಿಗ್ಗಜರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಮಲಯಾಳಂ ಸಿನಿಮಾ 'ಮ್ಯಾಡ್ ಡ್ಯಾಡ್' ಮೂಲಕ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿತ್ತು. ಆನಂತರ ಮಲಯಾಳಂ ಹಾಗೂ ತಮಿಳು ಎರಡೂ ಭಾಷೆಯಲ್ಲಿ ನಿರ್ಮಾಣಗೊಂಡಿದ್ದ 'ನಿರಂ' ಸಿನಿಮಾದಲ್ಲಿ ನಟಿಸಿದ್ದರು. ಇದರಲ್ಲಿ ನಿವಿನ್ ಪೌಲಿ ನಜ್ರಿಯಾ ನಜೀಮ್ ಅನ್ನು ಪ್ರಪೋಸ್ ಮಾಡುವ ದೃಶ್ಯ ಸಿಕ್ಕಾಪಟ್ಟೆ ಹಿಟ್ ಆಗಿತ್ತು.

ಆದರೆ, ನಜ್ರಿಯಾ ಕರಿಯರ್‌ಗೆ ದೊಡ್ಡ ಬ್ರೇಕ್ ಕೊಟ್ಟಿದ್ದು 'ರಾಜಾ ರಾಣಿ' ತಮಿಳು ಸಿನಿಮಾ. ಇದರಲ್ಲಿ ಈಕೆಯ ಪಾತ್ರ ಚಿಕ್ಕದಾಗಿದ್ದರೂ, ಚಿತ್ರರಂಗದ ಗಮನ ಸೆಳೆದು ಬಿಟ್ಟರು. ಇಲ್ಲಿಂದ ಮತ್ತೆ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ್ದರು. 'ಬೆಂಗಳೂರು ಡೇಸ್' ಸಿನಿಮಾ ವೇಳೆ 'ಪುಷ್ಪ 2' ಖ್ಯಾತಿಯ ಫಹಾದ್ ಫಾಸಿಲ್ ಪರಿಚಯವಾಗಿತ್ತು. ಇಬ್ಬರೂ ಡೇಟಿಂಗ್ ಶುರು ಮಾಡಿದ್ದರು. ಸಿನಿಮಾ ತೆರೆಕಂಡ ಒಂದು ವರ್ಷದ ಬಳಿಕ ಅಂದರೆ, 2014ರಂದು ನಜ್ರಿಯಾ ಹಾಗೂ ಫಹಾದ್ ಫಾಸಿಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಲ್ಲಿಂದ ಇವರು ಸಿನಿಮಾಗೆ ನಾಲ್ಕು ವರ್ಷ ಬ್ರೇಕ್ ಕೊಟ್ಟಿದ್ದರು. ಮದುವೆ ಬಳಿಕ ನಾಲ್ಕು ವರ್ಷ ಒಂದೇ ಒಂದು ಸಿನಿಮಾದಲ್ಲಿಯೂ ನಟಿಸಿರಲಿಲ್ಲ. 2024, ನವೆಂಬರ್‌ನಲ್ಲಿ ಇವರ ಸೂಕ್ಷ್ಮ ದರ್ಶಿನಿ ಸಿನಿಮಾ ರಿಲೀಸ್ ಆಗಿತ್ತು. ಅಲ್ಲಿಂದ ನಜ್ರಿಯಾ ಚಿತ್ರರಂಗದಿಂದ ಅಂತರವನ್ನು ಕಾಯ್ದುಕೊಂಡಿದ್ದರು.

More from Filmibeat

English summary
Meghana Raj, Danish Sait, Samantha come in support of Nazriya Nazim after an emotional postt
Read more about: actress health meghana raj
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X