Drishyam 3: ಮೋಹನ್‌ಲಾಲ್ 'ದೃಶ್ಯಂ 3' ಗ್ಲೋಬಲ್ ರಿಲೀಸ್; ಏನಿದು ರಿಲೀಸ್ ಪ್ಯಾನ್?

ಭಾರತೀಯ ಚಿತ್ರರಂಗ ಫ್ರಾಂಚೈಸಿಗಳಲ್ಲಿಯೇ ಹೆಚ್ಚು ನಿರೀಕ್ಷೆಯಿರುವ ಸಿನಿಮಾ 'ದೃಶ್ಯಂ 3'. ಈ ಹಿಂದೆ ಬಂದ ಎರಡು ಸೀರಿಸ್‌ಗಳೂ ಪ್ರೇಕ್ಷಕರಿಗೆ ಹುಚ್ಚು ಹಿಡಿಸಿದ್ದವು. ಸಿನಿಪ್ರಿಯರನ್ನು ಸೀಟಿನ ತುದಿಯಲ್ಲಿ ಕೂರುವಂತೆ ಮಾಡಿದ ಸಿನಿಮಾವಿದು. ಮೋಹನ್‌ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ ಈ ಮಲಯಾಳಂ ಸಿನಿಮಾದ ಮೂರನೇ ಸೆಗ್ಮೆಂಟ್ ರಿಲೀಸ್‌ಗೆ ರೆಡಿಯಾಗಿದೆ. ಇದಕ್ಕೆ ಬೇಡಿಕೆನೂ ಹೆಚ್ಚಾಗಿದೆ.

ಮಲಯಾಳಂ ಸಿನಿಮಾ ಕೇರಳ ಹಾಗೂ ಅಕ್ಕ-ಪಕ್ಕದ ರಾಜ್ಯಗಳಲ್ಲಿ ಹೆಚ್ಚಾಗಿ ರಿಲೀಸ್ ಆಗುತ್ತವೆ. ಹಾಗೇ ದುಬೈ ಸೇರಿದಂತೆ ವಿದೇಶ ಕೆಲವು ಭಾಗಗಳಲ್ಲಿ ಬಿಡುಗಡೆ ಮಾಡುತ್ತಾರೆ. ಆದ್ರೀಗ 'ದೃಶ್ಯಂ 3'ಯನ್ನು ಹಿಂದೆಂದೂ ನಿರೀಕ್ಷೆ ಮಾಡದಷ್ಟು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ. 'ದೃಶ್ಯಂ' ಮೂರನೇ ಪಾರ್ಟ್ ವಿಶ್ವದಾದ್ಯಂತ ರಿಲೀಸ್ ಆಗುವುದಕ್ಕೆ ವೇದಿಕೆ ರೆಡಿಯಾಗಿದೆ.

Mohanlal and director Jeethu Joseph movie Drishyam 3 Worldwide Rights sold for Panorama PEN Studios

ಹೌದು, ಮೋಹನ್‌ಲಾಲ್ ಮತ್ತೆ ಜಾರ್ಜ್ ಕುಟ್ಟಿಯಾಗಿ ತೆರೆಮೇಲೆ ಎಂಟ್ರಿ ಕೊಡುವುದಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಮೋಹನ್‌ಲಾಲ್ ನಟಿಸಿದ 'ದೃಶ್ಯಂ' ಸೀರಿಸ್ ಇದೇ ಮೊದಲ ಬಾರಿಗೆ ಗ್ಲೋಬಲ್ ರಿಲೀಸ್ ಆಗುತ್ತಿದೆ. ಕಳೆದ ಎರಡು ಸೀರಿಸ್‌ಗಳು ವಿಶ್ವ ಮಟ್ಟದಲ್ಲಿ ಸದ್ದು ಮಾಡಿರುವುದರಿಂದ 'ದೃಶ್ಯಂ' ಮೂರನೇ ಭಾಗವನ್ನು ವಿಶ್ವದಾದ್ಯಂತ ಥಿಯೇಟ್ರಿಕಲ್ ರಿಲೀಸ್‌ಗೆ ಮುಂದಾಗಿದೆ.

ಪನೋರಮಾ ಸ್ಟುಡಿಯೋ ಹಾಗೂ ಪೆನ್ ಸ್ಟುಡಿಯೋ ಈ ಎರಡು ಸಂಸ್ಥೆಗಳು ವಿಶ್ವದಾದ್ಯಂತ ವಿತರಣೆ ಹಕ್ಕು ಹಾಗೂ ಡಿಜಿಟಲ್ ರಿಲೀಸ್ ಹಕ್ಕುಗಳನ್ನು ಪಡೆದುಕೊಂಡಿದೆ. ಇದು ಈ ವರ್ಷದಲ್ಲಿ ಅತೀ ದೊಡ್ಡ ಡೀಲ್‌ಗಳಲ್ಲಿ ಒಂದು ಎಂದು ಬಣ್ಣಿಸಲಾಗಿದೆ. ಪನೋರಮಾ ಸ್ಟುಡಿಯೋಸ್‌ನ ಛೇರ್‌ಮನ್ ಕುಮಾರ್ ಮಂಗತ್ ಪಾಠಕ್ ಪಿಂಕ್‌ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ 'ದೃಶ್ಯಂ 3' ಟ್ರೈಲರ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ನನಗೆ ದೃಶ್ಯಂ ಸಿನಿಮಾಗಿಂತ ಮಿಗಿಲು. ಇಂದು ಭಾರತೀಯ ಚಿತ್ರರಂಗವನ್ನು ಬದಲಿಸುವ ಜರ್ನಿ. ನಾನು ದೃಶ್ಯಂ 3ಯನ್ನು ಭಾರತದ ಅತೀ ದೊಡ್ಡ ಅಂತರಾಷ್ಟ್ರೀಯ ರಿಲೀಸ್ ಮಾಡುವುದಕ್ಕೆ ಹೊರಟಿದ್ದೇವೆ." ಎಂದು ಹೇಳಿದ್ದಾರೆ.

ಹಾಗೇ ಪೆನ್ ಸ್ಟುಡಿಯೋದ ನಿರ್ದೇಶಕ ಡಾ.ಜಯಂತಿಲಾಲ್ ಕೂಡ " ದೃಶ್ಯಂ 3 ಜೊತೆ ಭಾರತದ ಕಥೆಗಳನ್ನು ವಿಶ್ವಕ್ಕೆ ತೆಗೆದುಕೊಂಡು ಹೋಗಬೇಕು ಅನ್ನೋ ನಮ್ಮ ಗುರಿಯನ್ನು ಮುಂದುವರೆಸುತ್ತಿದ್ದೇವೆ" ಎಂದಿದ್ದಾರೆ. ಹೀಗಾಗಿ ಈ ಎರಡೂ ಸಂಸ್ಥೆಗಳು 'ದೃಶ್ಯಂ 3' ಸಿನಿಮಾಗೆ ಗ್ಲೋಬಲ್ ಟಚ್ ಕೊಡುವುದಕ್ಕೆ ಮುಂದಾಗಿದ್ದಾರೆ. ಆದರೆ, ಡೀಲ್ ಎಷ್ಟಕ್ಕಾಗಿದೆ ಅನ್ನೋದು ಇನ್ನೂ ಗೊತ್ತಾಗಿಲ್ಲ.

ಇನ್ನು ಮೋಹನ್‌ಲಾಲ್ ನಟಿಸುತ್ತಿರುವ 'ದೃಶ್ಯಂ 3' ಸಿನಿಮಾವನ್ನು ನಿರ್ದೇಶಕ ಜೀತು ಜೋಸೆಫ್ ಕಂಪ್ಲೀಟ್ ಮಾಡಿದ್ದು, ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿದೆ. ಈ ಸಿನಿಮಾವನ್ನು ಗ್ಲೋಬಲ್ ಲೆವೆಲ್‌ನಲ್ಲಿ ರಿಲೀಸ್ ಮಾಡಬೇಕು ಅಂತ ನಿರ್ದೇಶಕ ಜೀತು ಜೋಸೆಫ್ ಪ್ರಯತ್ನ ಪಟ್ಟಿದ್ದರು. ಅದು ಈಗ ಈಡೇರಿದೆ. ಹೀಗಾಗಿ ಜಾರ್ಜ್ ಕುಟ್ಟಿಯ ಮುಂದಿನ ನಡೆಯನ್ನು ಇಡೀ ವಿಶ್ವವೇ ನೋಡಲಿದೆ. ಆದರೆ, ಇನ್ನೂ ರಿಲೀಸ್ ಯಾವಾಗ, ಪ್ಲ್ಯಾನ್ ಏನು ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

English summary
Mohanlal and director Jeethu Joseph movie Drishyam 3 Worldwide Rights sold for Panorama, PEN Studios.
Read more about: mohanlal malayalam movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X