Drishyam 3: ಮೋಹನ್‌ಲಾಲ್ 'ದೃಶ್ಯಂ 3' ಚೆನ್ನಾಗಿಲ್ವಾ? ಯಾಕಿಷ್ಟು ನೆಗೆಟಿವ್ ಕಾಮೆಂಟ್ಸ್?

ಈ ವರ್ಷದ ಮತ್ತೊಂದು ಬಹು ನಿರೀಕ್ಷೆಯ ಸಿನಿಮಾ 'ದೃಶ್ಯಂ 3' ಇಂದು (ಮೇ 21) ರಿಲೀಸ್ ಆಗಿದೆ. ಕಳೆದ ಎರಡು ಸೀಕ್ವೆಲ್‌ಗಳನ್ನು ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದರು. ಆ ಎರಡೂ ಸಿನಿಮಾಗೂ ಸಿಕ್ಕ ರೆಸ್ಪಾನ್ಸ್ ಆಧರಿಸಿ 3ನೇ ಸೀಕ್ವೆಲ್‌ಗೆ ಮೋಹನ್‌ಲಾಲ್ ಹಾಗೂ ನಿರ್ದೇಶಕ ಜೀತು ಜೋಸೆಫ್ ಕೈ ಹಾಕಿದ್ದರು. ಅದೇ ಸಿನಿಮಾ ಈಗ ವಿಶ್ವದಾದ್ಯಂತ ರಿಲೀಸ್ ಆಗಿದೆ.

'ದೃಶ್ಯಂ' ಸೀಕ್ವೆಲ್ ಮಲಯಾಳಂ ಚಿತ್ರರಂಗದ ಇಮೇಜ್ ಅನ್ನೇ ಬದಲಿಸಿ, ಹೊಸ ಟ್ರೆಂಡ್ ಹುಟ್ಟಾಕಿದ ಸಿನಿಮಾ. ಮೋಹನ್‌ಲಾಲ್, ಮೀನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಥ್ರಿಲ್ಲರ್ ಡ್ರಾಮಾ ಭಾಷೆಯನ್ನೇ ಮರೆಸಿ ಮನರಂಜನೆ ನೀಡಿತ್ತು. ಆದರೆ, 'ದೃಶ್ಯಂ 3' ರಿಲೀಸ್ ಆಗುತ್ತಿದ್ದಂತೆ ಮೊದಲೆರಡು ಪಾರ್ಟ್‌ಗಳಿಗೆ ಸಿಕ್ಕಷ್ಟೇ ರೆಸ್ಪಾನ್ಸ್ ಸಿಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಮೊದಲ ದಿನವೇ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್‌ಗಳು ಹರಿದಾಡುತ್ತಿದೆ. ಸಿನಿಮಾ ನೋಡಿದವರು ಏನಂತಿದ್ದಾರೆ? ಯಾಕಿಷ್ಟು ನೆಗೆಟಿವ್ ಕಾಮೆಂಟ್ಸ್?

Mohanlal Meena starrer Drishyam 3 movie is getting lot of negative reviews here is the reason

ಕ್ಲೈಮ್ಯಾಕ್ಸ್ ಶಾಕ್ ಕೊಡುತ್ತೆ

"ಎಂತಹ ಸಿನಿಮಾ ಮಾಡಿದ್ದೀರಿ ಜೀತು ಜೋಸೆಫ್. 2 ಗಂಟೆ 39 ನಿಮಿಷ ಕಣ್ಣು ಮಿಟುಕಿಸದೆ ಹೇಗೆ ಕಳೆದೆ ಅನ್ನೋದು ನನಗೆ ಗೊತ್ತಿಲ್ಲ. ಕೆಲವು ದೃಶ್ಯಗಳಲ್ಲಿ ನಾನು ಥ್ರಿಲ್ ಆದೆ. ಮೋಹನ್‌ಲಾಲ್ ಅವರು ಅದ್ಭುತವಾಗಿ ಪರ್ಫಾರ್ಮ್ ಮಾಡಿದ್ದಾರೆ. ಒಂದರ ಹಿಂದೊಂದು ಸಕ್ಸಸ್ ಸಿಕ್ಕಿದೆ. ಥಿಯೇಟರ್‌ನಲ್ಲಿ ಕ್ಲೈಮ್ಯಾಕ್ಸ್ ಖಂಡಿತವಾಗಿಯೂ ಶಾಕ್ ಕೊಡುತ್ತೆ. ದೃಶ್ಯಂ 3 ಬ್ಲಾಕ್‌ ಬಸ್ಟರ್ ಆಗಿ ಮುಂದುವರೆಯುತ್ತಿದೆ" ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ತಾಳ್ಮೆ ಪರೀಕ್ಷೆ ಮಾಡುತ್ತೆ

"ಮೊದಲಾರ್ಧ ಸ್ವಲ್ಪ ಬೇಗನೇ ಮುಗಿದು ಹೋಗುತ್ತೆ. ಸೆಕೆಂಡ್ ಆಫ್ ನಿಜಕ್ಕೂ ನನ್ನ ತಾಳ್ಮೆಯನ್ನು ಪರೀಕ್ಷೆ ಮಾಡಿತು. ಮೊದಲ ಹಾಗೂ ಎರಡನೇ ಭಾಗದ ಎಲ್ಲಾ ಖಳನಾಯಕರೂ ಈ ಸಿನಿಮಾದಲ್ಲಿ ಸೇರಿಕೊಂಡು ಜಾರ್ಜ್ ಕುಟ್ಟಿ ಹಾಗೂ ಅವರ ಕುಟುಂಬದ ನೆಮ್ಮದಿಯನ್ನು ಹಾಳು ಮಾಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ರಾಣಿ. ಕ್ಲೈಮ್ಯಾಕ್ಸ್ ತೃಪ್ತಿ ಕೊಟ್ಟಿದೆ. ಎಂಡ್ ಕ್ರೆಡಿಟ್‌ನಲ್ಲಿ ನಾಲ್ಕನೇ ಭಾಗದ ಸುಳಿವು ಕೊಟ್ಟಿದ್ದಾರೆ. ಅದು ನನಗೆ ಗಾಬರಿ ಹುಟ್ಟಿಸಿತು. ಸಾಕು ಸರ್ ಸಾಕು ಎನಿಸಿತು. ಒಟ್ಟಾರೆ ದೃಶ್ಯಂ 3 ಆವರೇಜ್ ಸಿನಿಮಾ" ಎಂದು 5ಕ್ಕೆ 3 ಸ್ಟಾರ್ ಕೊಟ್ಟು ಕಾಮೆಂಟ್ ಮಾಡಿದ್ದಾರೆ.

Also Read
Drishyam- 3 Review: ಹಿಟ್ ಸರಣಿಯಲ್ಲಿ ಕೊಂಚ ನಿರಾಸೆ ಮೂಡಿಸುವ ಜಾರ್ಜ್‌ಕುಟ್ಟಿ 3ನೇ ಆಟ
Drishyam- 3 Review: ಹಿಟ್ ಸರಣಿಯಲ್ಲಿ ಕೊಂಚ ನಿರಾಸೆ ಮೂಡಿಸುವ ಜಾರ್ಜ್‌ಕುಟ್ಟಿ 3ನೇ ಆಟ

ದೃಶ್ಯಂ 3 ಖುಷಿ ಕೊಡ್ತು

"ದೃಶ್ಯಂ 3 ಸಿನಿಮಾ ನೋಡಿ ಖುಷಿ ಆಯ್ತು. ಮೂಲ ಸಿನಿಮಾವನ್ನು ಮರೆಯದೆ 3 ಗಂಟೆಯ ಟ್ರೈಲರ್ ಅನ್ನು ಸೀಕ್ವೆಲ್ ಮಾಡುವುದು ಹೇಗೆ ಅನ್ನೋದನ್ನು ಇದನ್ನು ನೋಡಿದರೆ ತಿಳಿಯುತ್ತೆ. ನಾಲ್ಕನೇ ಭಾಗ ಬರುವವರೆಗೆ.." ಎಂದು ಮತ್ತೊಬ್ಬರ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಹಿಂದಿ ವರ್ಷನ್ ವಿಭಿನ್ನ ಸ್ಟೋರಿ

"ರಿಮೇಕ್ ಸಿನಿಮಾ ಬರುವುದಕ್ಕೆ ದೃಶ್ಯಂ 3 ವಿರುದ್ಧ ಪಿಆರ್ ನಿರೂಪಣೆ ಅಂತೂ ಶುರುವಾಗಿದೆ. ಹಿಂದಿ ವರ್ಷನ್ ವಿಭಿನ್ನ ಸ್ಟೋರಿ ಇರುತ್ತೆ. ಅವರು ನೇರವಾಗಿ ಈ ಕಥೆಯನ್ನು ಅಡಾಪ್ಟ್ ಮಾಡಿಕೊಳ್ಳುವುದಕ್ಕೆ ಬರುವುದಿಲ್ಲ. ಯಾಕಂದ್ರೆ ಅವರು ಪಾರ್ಟ್ 2ನಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಈ ಕಥೆಯನ್ನು ಖರೀದಿ ಮಾಡಬೇಡಿ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಹಣಕ್ಕಾಗಿ ಸಿನಿಮಾ ಮಾಡಿದ್ದಾರೆ

"ಒತ್ತಾಯಪೂರ್ವಕವಾಗಿ ಹಾಗೂ ಅಗತ್ಯವಿಲ್ಲದೆ ದೃಶ್ಯಂ 3 ಮಾಡಿರೋ ಹಾಗೆ ಫೀಲ್ ಆಯ್ತು. ಈ ಸಿನಿಮಾವನ್ನು ಸ್ಟೋರಿಗಾಗಿ ಅಲ್ಲ, ಕೇವಲ ಹಣಕ್ಕಾಗಿ ಮಾತ್ರ ಮಾಡಿದ್ದಾರೆಂದು ಗೊತ್ತಾಗುತ್ತೆ. ನಿಮ್ಮ ಸಮಯ ಹಾಗೂ ಹಣವನ್ನು ಈ ಸಿನಿಮಾಗಾಗಿ ಹಾಳು ಮಾಡಿಕೊಳ್ಳಬೇಡಿ." ಎಂದು ಇನ್ನೊಬ್ಬರು ದೃಶ್ಯಂ 3 ಸಿನಿಮಾ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ರೇಜರ್ ಶಾರ್ಪ್ ಸ್ಕ್ರೀನ್‌ಪ್ಲೇ

"ಏನೇ ಸಂದರ್ಭ ಇದ್ದರೂ ಜಾರ್ಜ್ ಕುಟ್ಟಿ ಯಾವಾಗಲೂ 10 ಹೆಜ್ಜೆ ಮುಂದೆ ಇರುತ್ತಾರೆ. ರೇಜರ್ ಶಾರ್ಪ್ ಸ್ಕ್ರೀನ್‌ಪ್ಲೇ, ಕೊನೆಯವರೆಗೂ ಸಸ್ಪೆನ್ಸ್ ಅನ್ನು ಜೀವಂತವಾಗಿ ಇಡುತ್ತದೆ. ಡ್ರಾಮಾ ಹಾಗೂ ಸೀಟಿನ ತುದಿಯಲ್ಲಿ ಕೂರುವ ಥ್ರಿಲ್ ಅನ್ನು ಪರ್ಫೆಕ್ಟ್ ಆಗಿ ಮಿಶ್ರಣ ಮಾಡಲಾಗಿದೆ" ಎಂದು ಇನ್ನೊಬ್ಬ ನೆಟ್ಟಿಗರು ಹೇಳಿದ್ದಾರೆ.

ಚಿತ್ರಕಥೆ ರಿಪೀಟ್ ಆಗಿದೆ

"ಮೋಹನ್‌ಲಾಲ್, ಸಿದ್ದಿಕಿ, ಮುರಳಿ ಗೋಪಿ ಉತ್ತಮವಾಗಿ ನಟಿಸಿದ್ದಾರೆ. ಸಿನಿಮಾ ಮೇಕಿಂಗ್ ವೀಕ್ ಆಗಿದೆ. ನಿರ್ದೇಶಕ ಜೀತು ಜೋಸೆಫ್ ಸ್ಕ್ರೀನ್‌ಪ್ಲೇ ರೊಟೀನ್ ಹಾಗೂ ರಿಪೀಟ್ ಆಗಿದೆ ಎನಿಸುತ್ತಿದೆ. ಮೊದಲಾರ್ಧ ಸೀರಿಯಲ್ ತರ ಭಾಸವಾಗುತ್ತೆ. ಆದರೆ, ಒಳ್ಳೆಯ ಇಂಟರ್‌ವಲ್‌ನಲ್ಲಿ ಎಂಡ್ ಆಗುತ್ತೆ. ಇಲ್ಲಿಂದ ಸಿನಿಮಾ ಪಿಕ್ ಆಗುತ್ತೆ. ದ್ವಿತೀಯಾರ್ಧ ಎಂಗೇಜಿಂಗ್ ಆಗಿದೆ. ಆದರೆ, ಕ್ಲೈಮ್ಯಾಕ್ಸ್‌ನಲ್ಲಿ ವ್ಹಾವ್ ಎನ್ನುವಂತಹ ಅಂಶ ಮಿಸ್ ಆಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ.

English summary
Mohanlal, Meena starrer Drishyam 3 movie is getting lot of negative reviews here is the reason.
Read more about: mohanlal meena
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X