ಮೋಹನ್‌ಲಾಲ್‌ಗೆ ಏಟಿನ ಮೇಲೆ ಏಟು.. 'ರಾಮ್' ಕಥೆ ಲೀಕ್: ಇದು 'ಪಠಾಣ್' ಎಂದ ನೆಟ್ಟಿಗರು!
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್‌ಗೆ ಯಾಕೋ ಹಿನ್ನೆಡೆಯಾಗುತ್ತಿದೆ. ಒಂದರ ಹಿಂದೊಂದು ಸಂಕಷ್ಟ ಎದುರಾಗುತ್ತಿದೆ. ಇತ್ತೀಚೆಗೆ ಇವರದ್ದೇ ಸಿನಿಮಾ ಒಂದು ಕೋಟಿ ಬ್ಯುಸಿನೆಸ್ ಮಾಡುವುದಕ್ಕೂ ಹೆಣಗಾಡಿತ್ತು.
ಈಗ ಮೋಹನ್‌ಲಾಲ್ ಹೊಸ ಸಿನಿಮಾದ ಕಥೆ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ. ಮೊದಲೇ ಹೀನಾಯ ಸೋಲು ಕಂಡು ಹೊರಬರಲು ಪರದಾಡುತ್ತಿರುವ ಸೂಪರ್‌ಸ್ಟಾರ್‌ಗೆ ಸಿನಿಮಾದ ಸ್ಟೋರಿ ಲೀಕ್ ಆಗಿದ್ದು ಮತ್ತೊಂದು ಹಿನ್ನೆಡೆಯದಂತಾಗಿದೆ.
'ರಾಮ್' ಸಿನಿಮಾದ ಕಥೆಯ ಕೆಲವು ತುಣುಕುಗಳು ಲೀಕ್ ಆಗಿವೆ. ಈ ಪ್ಲಾಟ್ ಓದಿದ ಬಳಿಕ ಇತ್ತೀಚೆಗೆ ರಿಲೀಸ್ ಆಗಿರುವ ಬಾಲಿವುಡ್ ಕಿಂಗ್ ಖಾನ್ ಸಿನಿಮಾ 'ಪಠಾಣ್'ಗೆ ಹೋಲಿಕೆ ಮಾಡಲಾಗುತ್ತಿದೆ. ಅಷ್ಟಕ್ಕೂ ಮೋಹನ್‌ಲಾಲ್ ಸಿನಿಮಾ ಈ ಮಟ್ಟಿಗೆ ಟ್ರೋಲ್ ಆಗುತ್ತಿರೋದ್ಯಾಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಮೋಹನ್‌ಲಾಲ್ ಸಿನಿಮಾ ಕಥೆ ಲೀಕ್
ಮಾಲಿವುಡ್ ಸೂಪರ್‌ಸ್ಟಾರ್ ಮೋಹನ್‌ಲಾಲ್ 'ರಾಮ್' ಅನ್ನೋ ಸಿನಿಮಾ ನಟಿಸುತ್ತಿದ್ದಾರೆ. ಈ ಸಿನಿಮಾ ಕಥೆ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಸೋರಿಕೆಯಾಗಿದೆ ಎನ್ನಲಾದ ಕಥೆಯನ್ನು ಓದಿದ ಬಳಿಕ 'ರಾಮ್' ಅನ್ನು ಬಾಲಿವುಡ್‌ನ 'ಪಠಾಣ್' ಸಿನಿಮಾ ಹೋಲಿಕೆ ಮಾಡಲಾಗುತ್ತಿದೆ. 'ರಾಮ್' ಹಾಗೂ 'ಪಠಾಣ್' ಎರಡೂ ಸಿನಿಮಾಗಳ ಕಥೆಯಲ್ಲಿ ಹೋಲಿಕೆ ಇದೆ ಎಂದೇ ಹೇಳಲಾಗುತ್ತಿದೆ.
ಸೋರಿಕೆಯಾದ 'ರಾಮ್' ಕಥೆಯೇನು?
ಟ್ವಿಟರ್‌ನಲ್ಲಿ ಎಬಿ ಜಾರ್ಜ್ ಅನ್ನೋ ಅಕೌಂಟ್‌ನಿಂದ 'ರಾಮ್' ಸಿನಿಮಾ ಕಥೆ ಸೋರಿಕೆಯಾಗಿದೆ. ಇದರ ಪ್ರಕಾರ, ಈ ಸಿನಿಮಾ ಕೂಡ RAW ಎಜೆಂಟ್ ಅನ್ನು ಟ್ರ್ಯಾಕ್ ಮಾಡುವ ಕಥೆಯೇ ಆಗಿದೆ. ರಾಮ್ ಮೋಹನ್ ಅನ್ನೋ RAW ಏಜೆಂಟ್ ಇದ್ದಕ್ಕಿದ್ದಂತೆ ಕಾಣೆಯಾಗುತ್ತಾನೆ. ಭಯೋತ್ಪಾದನೆ ಗುಂಪು ಸಿದ್ಧಪಡಿಸಲು ಪರಮಾಣು ಅಸ್ತ್ರವನ್ನು ನಾಶಪಡಿಸಲು ಸೇನೆಗೆ ರಾಮ್ ಮೋಹನ್ ಅನ್ನೋ RAW ಏಜೆಂಟ್‌ನ ಜಾಣ್ಮೆ ಹಾಗೂ ದೈಹಿಕ ತಾಕತ್ತಿನ ಅವಶ್ಯಕತೆ ಅಗತ್ಯವಿರುತ್ತೆ. ಇದೇ ಕಥೆ ಹೆಚ್ಚು ಕಡಿಮೆ 'ಪಠಾಣ್' ಸಿನಿಮಾದಲ್ಲೂ ಇದೆ ಎಂದು ಹೇಳುತ್ತಿದ್ದಾರೆ.

'ರಾಮ್' ಸಿನಿಮಾ 'ದೃಶ್ಯಂ' ಜೋಡಿಯ ಕಥೆ
ಮೋಹನ್‌ಲಾಲ್ ಹಾಗೂ ಜೀತು ಜೋಸೆಫ್ ಜೊತೆಯಾಗಿದ್ದಾರೆ ಅಂದ್ರೆ, ಆ ಸಿನಿಮಾ ಪ್ರೇಕ್ಷಕರಿಗೆ ಮೋಡಿ ಮಾಡೋದು ಗ್ಯಾರಂಟಿ. ಈ ಹಿಂದೆ ಬಂದಿರೋ 'ದೃಶ್ಯಂ 1' & 'ದೃಶ್ಯಂ 2' ಸಿನಿಮಾಗಳು ಎಲ್ಲಾ ಭಾಷೆಯಲ್ಲೂ ರಿಮೇಕ್ ಆಗಿತ್ತು. ಈಗ 'ರಾಮ್' ಸಿನಿಮಾ ಮೇಲೂ ಅದೇ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಆದ್ರೀಗ ಸೋರಿಕೆ ಮಾಡದ ಕಥೆ ನೋಡಿ ನೆಟ್ಟಿಗರು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

'ರಾಮ್' ಮಲಯಾಳಂ ಸಿನಿಮಾ 'ಪಠಾಣ್'
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಸಿನಿಮಾ 'ರಾಮ್' ಕಥೆ ಸೋರಿಕೆಯಾದ ವಿಷಯ ಮುಟ್ಟುತ್ತಿದ್ದಂತೆ ನೆಟ್ಟಿಗರು ಅಲರ್ಟ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮೋಹನ್‌ಲಾಲ್ ಸಿನಿಮಾಗೆ ಕಮೆಂಟ್‌ಗಳ ಮೇಲೆ ಕಮೆಂಟ್ ಮಾಡುತ್ತಿದ್ದಾರೆ. ಕೆಲವರಂತೂ ಈ ಸಿನಿಮಾವನ್ನು 'ಮಲಯಾಳಂನ ಪಠಾಣ್' ಎಂದು ಕಾಮಿಡಿ ಮಾಡುತ್ತಿದ್ದಾರೆ. 'ಪಠಾಣ್ ಫ್ರಮ್ ಮಾಲಿವುಡ್', 'ಪಠಾಣ್ 2.0' ಎಂದು ಹೇಳುತ್ತಿದ್ದಾರೆ.


Click it and Unblock the Notifications











