'ದೃಶ್ಯಂ' ಕಥೆ ಮೋಹನ್‌ಲಾಲ್‌ಗೆ ಹೇಳಿದ್ದಲ್ಲ; 2 ಆಯ್ಕೆ ಇಟ್ಟು ರಿಜೆಕ್ಟ್ ಮಾಡಿದ್ದ ಮಮ್ಮುಟ್ಟಿ

ಮಲಯಾಳಂ ಚಿತ್ರರಂಗದ ಐಕಾನಿಕ್ ಸಿನಿಮಾ 'ದೃಶ್ಯಂ' ದೇಶಾದ್ಯಂತ ಸದ್ದು ಮಾಡಿದೆ. ಬೇರೆ ಬೇರೆ ಭಾಷೆಗಳಲ್ಲಿ ಈ ಸಿನಿಮಾವನ್ನು ರಿಮೇಕ್ ಮಾಡಲಾಗಿದೆ. ಸದ್ಯ 'ದೃಶ್ಯಂ 3' ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಜೀತು ಜೋಸೆಫ್ ನಿರ್ದೇಶಿಸಿದ ಈ ಸಿನಿಮಾ ಭಾರತದ ಬಾಕ್ಸಾಫೀಸ್‌ನಲ್ಲಿ 90 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇನ್ನೂ ಎರಡು ಸೀಕ್ವೆಲ್‌ಗಳು ಲಿಸ್ಟ್‌ನಲ್ಲಿ ಇವೆ ಅನ್ನೋ ಮಾತು ಕೇಳಿ ಬರುತ್ತಿದೆ.

ಮೋಹನ್‌ಲಾಲ್‌ ವೃತ್ತಿ ಬದುಕಿಗೆ ಹೊಸ ಇಮೇಜ್ ಕೊಟ್ಟ ಈ ಸಿನಿಮಾದ ಕಥೆಯನ್ನು ಬೇರೊಬ್ಬರಿಗೆ ಹೇಳಲಾಗಿತ್ತು. ನಿರ್ದೇಶಕ ಜೀತು ಜೋಸೆಫ್ ಕತೆ ಹೆಣೆದಾಗ, ಮೊದಲು ಮಲಯಾಳಂನ ಮತ್ತೊಬ್ಬ ಸೂಪರ್‌ಸ್ಟಾರ್ ಮಮ್ಮುಟ್ಟಿಗೆ ಹೇಳಿದ್ದರು. ಈ ಕಥೆಯನ್ನು ಕೇಳಿದ ಬಳಿಕ ಮಮ್ಮುಟ್ಟಿ ನಿರ್ದೇಶಕರ ಮುಂದೆ ಎರಡು ಕಾರಣಗಳನ್ನು ಇಟ್ಟು ರಿಜೆಕ್ಟ್ ಮಾಡಿದ್ದರು. ಆ ಬಳಿಕವೇ 'ದೃಶ್ಯಂ' ಮೋಹನ್‌ಲಾಲ್ ಬಳಿಗೆ ಬಂದಿತ್ತು.

Mohanlal was not a first choice for Drishyam Jethu Joseph was approached another superstar

ಮಮ್ಮುಟ್ಟಿ 'ದೃಶ್ಯಂ' ರಿಜೆಕ್ಟ್ ಮಾಡಿದ್ದು ಮೋಹನ್‌ಲಾಲ್‌ ವರದಾನವಾಯ್ತು. ಅವರ ವೃತ್ತಿ ಬದುಕಿನ ಅತ್ಯುತ್ತಮ ಸಿನಿಮಾಗಳ ಸಾಲಿಗೆ ಈ ಸಿನಿಮಾ ಕೂಡ ಸೇರಿಕೊಳ್ಳುವುದಕ್ಕೆ ಸಾಧ್ಯವಾಯ್ತು. ಇತ್ತೀಚೆಗೆ ನಿರ್ದೇಶಕ ಜೀತು ಜೋಸೆಫ್ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. ಅಸಲಿಗೆ ಮಮ್ಮುಟ್ಟಿ 'ದೃಶ್ಯಂ' ಸಿನಿಮಾವನ್ನು ಯಾಕೆ ಒಪ್ಪಿಕೊಂಡಿಲ್ಲ? ನಿರ್ದೇಶರ ಮುಂದೆ ಇಟ್ಟಿದ್ದ ಆ 2 ಕಾರಣಗಳು ಯಾವುವು?

'ದೃಶ್ಯಂ' ಮೊದಲ ಆಯ್ಕೆ ಮಮ್ಮುಟ್ಟಿ

ಮೋಹನ್‌ಲಾಲ್ ಇಲ್ಲದ 'ದೃಶ್ಯಂ' ಅನ್ನು ಊಹಿಸಿಕೊಳ್ಳುವುದು ಕೂಡ ಈಗ ಕಷ್ಟ. ಆದರೆ, ನಿರ್ದೇಶಕರು ಮೊದಲ ಕಥೆ ಹೇಳಿದ್ದೇ ಮಮ್ಮುಟ್ಟಿಗೆ ಅಂದರೆ ಊಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಬಹುಶ: ಮೋಹನ್‌ಲಾಲ್ ಬದಲು ಮಮ್ಮುಟ್ಟಿ ನಟಿಸಿದ್ದರೂ ಇದೇ ರೀತಿ ಪ್ರತಿಕ್ರಿಯೆ ಸಿಗುತ್ತಿತ್ತೇನೋ. ಆದರೆ, ಈಗ ಜಾರ್ಜ್ ಕುಟ್ಟಿ ಪಾತ್ರದಲ್ಲಿ ಊಹಿಸಿಕೊಳ್ಳುವುದು ಕಷ್ಟ.

Also Read
ಒಟಿಟಿಯಲ್ಲಿ ಮೋಹನ್ ಲಾಲ್-ಮಮ್ಮುಟ್ಟಿ ಅಬ್ಬರ: 'ಪೇಟ್ರಿಯಾಟ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರು, ಯಾವಾಗ ಸ್ಟ್ರೀಮಿಂಗ್?
ಒಟಿಟಿಯಲ್ಲಿ ಮೋಹನ್ ಲಾಲ್-ಮಮ್ಮುಟ್ಟಿ ಅಬ್ಬರ: 'ಪೇಟ್ರಿಯಾಟ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರು, ಯಾವಾಗ ಸ್ಟ್ರೀಮಿಂಗ್?

ಮಮ್ಮುಟ್ಟಿ ರಿಜೆಕ್ಟ್ ಮಾಡ್ಲಿಲ್ಲ.. ಆಯ್ಕೆ ಇಟ್ಟರು

ಜೀತು ಜೋಸೆಫ್ ಹೇಳಿದ ಕಥೆಯನ್ನು ಮಮ್ಮುಟ್ಟಿ ರಿಜೆಕ್ಟ್ ಮಾಡಿರಲಿಲ್ಲ. ಆದರೆ, ನಿರ್ದೇಶಕರ ಮುಂದೆ 2 ಆಯ್ಕೆಯನ್ನು ಇಟ್ಟಿದ್ದರು. ಇತ್ತೀಚೆಗೆ ಮೀಡಿಯಾ ಒನ್‌ಗೆ ನೀಡಿದ ಸಂದರ್ಶನದಲ್ಲಿ ಜೇತು ಜೋಸೆಫ್ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಮುಮ್ಮುಟ್ಟಿ ನಿರ್ದೇಶಕ ಜೀತು ಜೋಸೆಫ್ ಮುಂದೆ 2 ಆಯ್ಕೆಗಳನ್ನು ಇಟ್ಟಿದ್ದರು. ಅದರಲ್ಲಿ ಒಂದು ಎರಡು ವರ್ಷ ಕಾಯುವುದು. ಇನ್ನೊಂದು ಮತ್ತೊಬ್ಬ ನಟನೊಂದಿಗೆ ಸಿನಿಮಾ ಮಾಡುವುದು. 'ದೃಶ್ಯಂ' ನಿರ್ದೇಶಕರು ಎರಡನೆಯದ್ದನ್ನು ಆಯ್ಕೆ ಮಾಡಿಕೊಂಡರು. ಅಷ್ಟ ಅಲ್ಲದೇ, ಮಮ್ಮುಟ್ಟಿ ಯಾಕೆ 2 ಆಯ್ಕೆ ಕೊಟ್ಟರು ಅನ್ನೋದನ್ನು ರಿವೀಲ್ ಮಾಡಿದ್ದಾರೆ.

Mohanlal was not a first choice for Drishyam Jethu Joseph was approached another superstar

ಮಮ್ಮುಟ್ಟಿ 2 ಆಯ್ಕೆ ಕೊಟ್ಟಿದ್ದಕ್ಕೆ ಕಾರಣವೇನು?

ಜೀತು ಜೋಸೆಫ್ 'ದೃಶ್ಯಂ' ಕತೆ ಹೇಳಿದಾಗ ಮಮ್ಮುಟ್ಟಿ ಬ್ಯಾಕ್ ಟು ಬ್ಯಾಕ್ ಕೌಟುಂಬಿಕ ಹಿನ್ನೆಲೆಯುಳ್ಳ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಹೀಗಾಗಿ ಮತ್ತೊಂದು ಸಿನಿಮಾದಲ್ಲಿ ತಂದೆಯ ಪಾತ್ರ ಬೇಡ ಎಂದು ಮಮ್ಮುಟ್ಟಿ ನಿರ್ಧರಿಸಿದ್ದರು. ಆದರೆ, ಎರಡು ವರ್ಷ ಕಾಯುವುದೇ ಆದರೆ, 'ದೃಶ್ಯಂ' ಸಿನಿಮಾದಲ್ಲಿ ನಟಿಸುವುದಾಗಿ ಮಮ್ಮುಟ್ಟಿ ಭರವಸೆಯನ್ನೂ ನೀಡಿದ್ದರು. ಆದರೆ, ನಿರ್ದೇಶಕರಿಗೆ ಕಾಯುವುದು ಸೂಕ್ತವಲ್ಲ ಎಂದು ಅನಿಸಿ, ಮೋಹನ್‌ಲಾಲ್‌ಗೆ ಕಥೆಯನ್ನು ಒಪ್ಪಿಸಿದ್ದರು.

'ದೃಶ್ಯಂ' ಮಮ್ಮುಟ್ಟಿ ಬೆಂಬಲ ಹೇಗಿತ್ತು?

'ದೃಶ್ಯಂ' ಸಿನಿಮಾವನ್ನು ಮಮ್ಮುಟ್ಟಿ ರಿಜೆಕ್ಟ್ ಮಾಡಿದ್ದರೂ, ಹಿಂದಿನಿಂದ ಬೆಂಬಲ ನೀಡಿದ್ದರು. ಜೀತು ಜೋಸೆಫ್ ಅದಕ್ಕೊಂದು ಸನ್ನಿವೇಶವನ್ನೂ ವಿವರಿಸಿದ್ದಾರೆ. ಈ ಸಿನಿಮಾದ ರಾಣಿ ಪಾತ್ರದಲ್ಲಿ ನಟಿಸುವುದಕ್ಕೆ ಮೀನಾ ಹಿಂದೇಟು ಹಾಕುತ್ತಿದ್ದರು. ಆ ವೇಳೆ ಮೀನಾ ಕೌಟುಂಬಿಕ ಜೀವನ ಹಾಗೂ ವೃತ್ತಿ ಬದುಕಿನ ಬಗ್ಗೆ ಗೊಂದಲದಲ್ಲಿ ಇದ್ದರು. ಈ ವೇಳೆ ಮಮ್ಮುಟ್ಟಿ 'ದೃಶ್ಯಂ' ಸಿನಿಮಾದಲ್ಲಿ ಅವರ ಪಾತ್ರದ ಪ್ರಾಮುಖ್ಯತೆಯನ್ನು ಅರಿವು ಮಾಡಿಸಿದ್ದರು. ಹೀಗಾಗಿ ಮೀನಾ ಒಪ್ಪಿದರು ಅಂತ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಒಂದು ವೇಳೆ 'ದೃಶ್ಯಂ'ನಲ್ಲಿ ಮಮ್ಮುಟ್ಟಿ ನಟಿಸಿದ್ದರೇ..

English summary
Mohanlal was not a first choice for Drishyam. Jethu Joseph was approached another superstar Mammootty. But he rejected to do Georgekutty.
Read more about: mohanlal mammootty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X