ಆಡಿಷನ್‌ನಲ್ಲಿ ರಿಜೆಕ್ಟ್, ಒಂದೇ ವರ್ಷದಲ್ಲಿ 35 ಸಿನಿಮಾ ರಿಲೀಸ್; ಮೋಹನ್‌ಲಾಲ್ ಸೂಪರ್‌ಸ್ಟಾರ್ ಆಗಿದ್ದೇಗೆ?
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಇಂದು (ಮೇ 21) 64ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಯಸ್ಸು 64 ಆದರೂ, ಇನ್ನೂ 40ರ ಆಸುಪಾಸಿನ ಚೈತನ್ಯ. ದಕ್ಷಿಣ ಭಾರತದ ಚಿಕ್ಕ ಚಿತ್ರರಂಗದ ಸೂಪರ್‌ಸ್ಟಾರ್ ಆಗಿದ್ದರೂ, ಇಡೀ ವಿಶ್ವವೇ ಮೆಚ್ಚುವ ನಟನಾಗಿ ಗುರುತಿಸಿಕೊಂಡಿದ್ದಾರೆ. ಮಲಯಾಳಂ ಅಷ್ಟೇ ಅಲ್ಲ. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ನಟಿಸಿ, ಅಲ್ಲಿನ ಪ್ರೇಕ್ಷಕರ ಅಭಿಮಾನವನ್ನು ಪಡೆದಿದ್ದಾರೆ.
ಇಂದು ಮೋಹನ್‌ಲಾಲ್ ಮಲಯಾಳಂ ಚಿತ್ರರಂಗದ ಮೆಗಾ ಸೂಪರ್‌ಸ್ಟಾರ್. ಆದರೆ, ಈ ಹಂತಕ್ಕೆ ಬರುವುದಕ್ಕೆ ಮೋಹನ್‌ಲಾಲ್ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಸಿನಿಮಾವೊಂದರಲ್ಲಿ ವಿಲನ್ ಪಾತ್ರಕ್ಕೆ ರಿಜೆಕ್ಟ್ ಆಗಿದ್ದ ಈ ನಟ ಇಂದು ಮಲಯಾಳಂ ಚಿತ್ರರಂಗದ ಮೆಗಾ ಸೂಪರ್‌ಸ್ಟಾರ್.

ಸಿನಿಮಾರಂಗದಲ್ಲಿ ತಮ್ಮದೇ ಚರಿತ್ರೆಯನ್ನು ಬರೆದಿರೋ ನಟ. ಮೋಹನ್‌ಲಾಲ್ ಇದೂವರೆಗೂ ಇಟ್ಟಿರೋ ಪ್ರತಿಯೊಂದು ಹೆಜ್ಜೆಯೂ ರೋಚಕ ಎನಿಸುತ್ತದೆ. ಆರಂಭದ ದಿನಗಳಲ್ಲಿ ಮೋಹನ್‌ಲಾಲ್ ವಿಲನ್ ಪಾತ್ರವೊಂದಕ್ಕೆ ಆಡಿಷನ್ ಕೊಟ್ಟಿದ್ದರು. ಪ್ಯಾನಲ್‌ನಲ್ಲಿ ಕೂತಿದ್ದ ನಿರ್ದೇಶಕರು ಮೋಹನ್‌ಲಾಲ್ ಲುಕ್ ನೋಡಿ 100ಕ್ಕೆ ಕೇವಲ 2 ಅಂಕಗಳನ್ನು ಕೊಟ್ಟಿದ್ದರು.
1978ರಲ್ಲಿ ಮೋಹನ್‌ಲಾಲ್ 'ತಿರನೋತ್ತಮ್' ಅನ್ನುವ ಮೊದಲ ಸಿನಿಮಾ ಸೆಟ್ಟೇರಿತ್ತು. ಇದರಲ್ಲಿ ಮೋಹನ್‌ಲಾಲ್ ವಿಶೇಷ ಚೇತನ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈ ಸಿನಿಮಾ ಸೆನ್ಸಾರ್‌ಶಿಪ್‌ನ ತೊಂದರೆಯಿಂದ ರಿಲೀಸ್ ಆಗಲಿಲ್ಲ. ಸುಮಾರು 25 ವರ್ಷಗಳ ಬಳಿಕ ಈ ಸಿನಿಮಾ ರಿಲೀಸ್ ಆಯ್ತು.
ಫಾಜಿಲ್ ನಿರ್ದೇಶಿಸಿದ 'ಮಂಜಿಲ್ ವಿರಿಂಜ ಪೂಕ್ಕಲ್' ಅನ್ನುವ ಸಿನಿಮಾದಲ್ಲಿ ಮೋಹನ್‌ಲಾಲ್ ಖಳನಾಯಕನಾಗಿ ನಟಿಸಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬಿಗ್ ಹಿಟ್ ಆಗಿತ್ತು. ಮೋಹನ್‌ಲಾಲ್ ಈ ಸಿನಿಮಾದ ಆಡಿಷನ್‌ಗೆ ಹೋಗಿದ್ದರು. ಈ ವೇಳೆ ನಿರ್ದೇಶಕರು ಪ್ಯಾನಲ್ ಇತ್ತು. ಇದರಲ್ಲಿ ಕೆಲ ನಿರ್ದೇಶಕರು ಮೋಹನ್‌ಲಾಲ್ ಲುಕ್ ನೋಡಿ ರಿಜೆಕ್ಟ್ ಮಾಡಿದ್ದರು. 100 ಅಂಕಗಳಿಗೆ ಕೇವಲ 2 ಅಂಕಗಳನ್ನಷ್ಟೇ ನೀಡಿದ್ದರು. ಆದರೆ, ಅದೇ ಪ್ಯಾನಲ್‌ನಲ್ಲಿದ್ದ ಫಾಜಿಲ್, ಜಿಜೋ ಇಬ್ಬರು ಅತೀ ಹೆಚ್ಚು ಮಾರ್ಕ್ಸ್ ಕೊಟ್ಟಿದ್ದರು. ಹೀಗಾಗಿ ಮೋಹನ್‌ಲಾಲ್ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಸಿನಿಮಾ ಸೂಪರ್ ಹಿಟ್ ಆಯ್ತು. ಅಲ್ಲಿಂದ ಸುಮಾರು 25 ಸಿನಿಮಾಗಳಿಗೆ ವಿಲನ್ ಆಗಿ ನಟಿಸಿದ್ದರು.

ಮೋಹನ್‌ಲಾಲ್ ವಿಲನ್ ಆಗಿ ನಟಿಸಿದ್ದರೂ, ಹೀರೊ ಆಗುವುದಕ್ಕೆ ಹೆಚ್ಚು ಸಮಯ ಹಿಡಿಯಲಿಲ್ಲ. ಕೇವಲ ಆರು ವರ್ಷಗಳಲ್ಲಿ ಮೋಹನ್‌ಲಾಲ್ ಬ್ಯುಸಿಯಾಗಿ ಬಿಟ್ಟರು. ಇದೇ ವರ್ಷ ಮೋಹನ್‌ಲಾಲ್ ನಟಿಸಿದ 34 ಸಿನಿಮಾಗಳು ರಿಲೀಸ್ ಆಗಿದ್ದವು. ಇದರಲ್ಲಿ 25 ಸಿನಿಮಾಗಳು ಹಿಟ್ ಲಿಸ್ಟ್ ಸೇರಿದ್ದರು. ಇಂಟ್ರೆಸ್ಟಿಂಗ್ ವಿಷಯ ಅಂದರೆ, ಪ್ರತಿ 15 ದಿನಗಳಿಗೊಮ್ಮೆ ಒಂದೊಂದು ಮೋಹನ್‌ಲಾಲ್ ಸಿನಿಮಾ ರಿಲೀಸ್ ಆಗುತ್ತಿತ್ತು.
ಮೋಹನ್‌ಲಾಲ್ ಇದೂವರೆಗೂ ಸುಮಾರು 400 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದರೆ, ಪ್ರತಿವರ್ಷ ಮೋಹನ್‌ಲಾಲ್ ನಟಿಸಿದ ಸರಾಸರಿ 20 ಸಿನಿಮಾಗಳು ರಿಲೀಸ್ ಆಗಿವೆ. ನಾಲ್ಕು ದಶಕಗಳ ಕಾಲ ತಮ್ಮ ನಟನೆ ಮೂಲಕ ನಟಿಸಿರುವ ಮೋಹನ್‌ಲಾಲ್ ಇಂದಿಗೂ ಸೂಪರ್‌ಸ್ಟಾರ್ ಆಗಿ ಮೆರೆದಿದ್ದಾರೆ.


Click it and Unblock the Notifications











