"ಕೆಟ್ಟದಾಗಿ ವರ್ತಿಸುವವರ ವಿರುದ್ಧ ಬೆರಳು ತೋರಿಸಿ": ಸುಳ್ಳು ಸುದ್ದಿ ಹಬ್ಬಿಸುವವರತ್ತ ನಿತ್ಯಾ ಮೆನನ್ ಕಿಡಿ!

ನಿತ್ಯಾ ಮೆನನ್ ಬಹುಭಾಷಾ ನಟಿ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ನಾಲ್ಕು ಭಾಷೆಯ ಜನರಿಗೆ ನಿತ್ಯಾ ಮೆನನ್ ಪರಿಚಯವಿದೆ. ಹಾಗೆ ಹಿಂದಿ ಭಾಷೆಯಲ್ಲೂ ನಟಿಸಿರೋದು ನಿತ್ಯಾ ಮೆನನ್ ಪ್ರತಿಭೆಗೊಂದು ಸಾಕ್ಷಿ. ಸದ್ಯ ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಇವರೂ ಕೂಡ ಇಬ್ಬರು.

ಇತ್ತೀಚೆಗೆ ನಿತ್ಯಾ ಮೆನನ್ ಬಗ್ಗೆ ಸುದ್ದಿಯೊಂದು ಹರಿದಾಡಿತ್ತು. ಈ ಸುದ್ದಿ ಸುಳ್ಳು ಎಂದು ನಿತ್ಯಾ ಮೆನನ್ ತಿರುಗಿಬಿದ್ದಿದ್ದರು. ನಟಿಯರ ಜೀವನದಲ್ಲಿ ದಿನ ಬೆಳಗಾದರೆ ಇಂತಹ ಗಾಳಿ ಸುದ್ದಿಗಳು ಓಡಾಡುತ್ತಲೇ ಇರುತ್ತವೆ. ಆದರೆ, ಆ ಎಲ್ಲಾ ಸುದ್ದಿಗಳಿಗೂ ನಟಿಯರು ಪ್ರತಿಕ್ರಿಯೆ ನೀಡುವುದಕ್ಕೆ ಹೋಗುವುದಿಲ್ಲ. ಆದರೆ, ನಿತ್ಯಾ ಮೆನನ್ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದರು.

Nithya Menen reacting on gossip and fake news about her and her career

ದಕ್ಷಿಣ ಭಾರತದ ಜನಪ್ರಿಯ ನಟಿ ಇತ್ತೀಚೆಗೆ ನ್ಯೂಸ್ 18ಗೆ ಸಂದರ್ಶನ ನೀಡಿದ್ದರು. ಅದರಲ್ಲಿ ತಮ್ಮ ವಿರುದ್ಧ ಹಬ್ಬಿದ್ದ ಸುಳ್ಳು ಸುದ್ದಿಗಳ ಬಗ್ಗೆ, ಅದಕ್ಯಾಕೆ ಪ್ರತಿಕ್ರಿಯೆ ನೀಡಿದೆ ಅನ್ನುವುದರ ಬಗ್ಗೆ ನಿತ್ಯಾ ಮೆನನ್ ಸಮಜಾಯಿಷಿ ನೀಡಿದ್ದಾರೆ. ಅಷ್ಟಕ್ಕೂ ನಟಿ ನಿತ್ಯಾ ಮೆನನ್ ಅಂತಹದ್ದೇನು ಹೇಳಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.

ನಿತ್ಯಾ ಮೆನನ್ ವಿರುದ್ಧ ಸುಳ್ಳು ಸುದ್ದಿ

ಇತ್ತೀಚೆಗೆ ಕಿಡಿಗೇಡಿಗಳು ನಿತ್ಯಾ ಮೆನನ್ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು. ತಮಿಳು ಚಿತ್ರರಂಗದಿಂದ ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದೇನೆ. ಸಿನಿಮಾದ ಚಿತ್ರೀಕರಣದ ವೇಳೆ ತಮಿಳಿನ ನಟನೊಬ್ಬ ಕಿರುಕುಳ ನೀಡಿದ್ದ ಎಂದು ನಿತ್ಯಾ ಮೆನನ್ ಹೇಳಿಕೆ ಕೊಟ್ಟಿರೋದಾಗಿ ಸುದ್ದಿ ಹಬ್ಬಿತ್ತು. ತಕ್ಷಣವೇ ನಿತ್ಯಾ ಮೆನನ್ ಸ್ಕ್ರೀನ್ ಶಾಟ್ ಸಮೇತ ಇದು ಎಂದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪ್ರತಿಕ್ರಿಯೆ ನೀಡಿದ್ದರು. ಇದೇ ವಿಚಾರವಾಗಿ ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ಮತ್ತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

"ಕೆಟ್ಟ ವರ್ತನೆ ವಿರುದ್ಧ ಬೆರಳು ತೋರಿಸಿ"

ತನ್ನ ವಿರುದ್ಧ ಸುಳ್ಳಿ ಸುದ್ದಿಯನ್ನು ಹಬ್ಬಿಸಿದವರ ವಿರುದ್ಧ ತಾನೇಕೆ ಪ್ರತಿಕ್ರಿಯೆ ನೀಡಿದೆ ಅನ್ನೋದನ್ನು ವಿವರಿಸಿದ್ದಾರೆ. " ಯಾರೋ ನನಗೆ ಕಿರುಕುಳ ನೀಡಿದ್ದಾರೆ ಅಂತ ಅವರು ಹೇಗೆ ಹೇಳುವುದಕ್ಕೆ ಸಾಧ್ಯ? ಈ ವಿಷಯವನ್ನು ಹೊರ ಹಾಕಲೇಬೇಕು ಅಂತ ನಾನು ನಿರ್ಧರಿಸಿದ್ದೆ. ಕೆಲವರು ನಿಮ್ಮ ವಿರುದ್ಧ ಕೆಟ್ಟದಾಗಿ ವರ್ತನೆ ತೋರಿದರೆ, ನೀವು ಅವರತ್ತ ಬೆರಳನ್ನು ತೋರಿಸಲೇಬೇಕು. ಅದರ ಪರಿಣಾಮ ಹೇಗಿರುತ್ತೆ ಅನ್ನೋದನ್ನು ತೋರಿಸಬೇಕು ಅಂತ ನಾನು ಬಯಸುತ್ತೇನೆ." ಎಂದು ನಿತ್ಯಾ ಮೆನನ್ ಪ್ರತಿಕ್ರಿಯೆ ನೀಡಿದ್ದಾರೆ.

Nithya Menen reacting on gossip and fake news about her and her career

"ನನಗೆ ನನ್ನ ಆರೋಗ್ಯ ಮುಖ್ಯ"

" ಇಂತಹ ವಿಷಯಗಳು ನಿಮ್ಮ ಮೇಲೆ ಪರಿಣಾಮ ಬೀರಬಾರದು ಎಂಬುವುದು ನನ್ನ ಭಾವನೆ. ನೀವು ತುಂಬಾನೇ ಆಧ್ಯಾತ್ಮಿಕವಾಗಿರಬೇಕು. ಇಲ್ಲದೇ ಹೋದಲ್ಲಿ ನಿಮ್ಮ ಮನಸ್ಸು ಹಾಳಾಗುತ್ತೆ. ಇಂತಹ ವಿಷಯಗಳ ಬಗ್ಗೆ ನೀವು ಸಮಾಧಾನದಿಂದ ಇರಲು ಸಾಧ್ಯವೇ ಇಲ್ಲ. ನನಗೆ ನನ್ನ ಆರೋಗ್ಯ ಮುಖ್ಯ. ಇಂತಹ ಸುದ್ದಿಗಳಿಂದ ನಾನು ಅಸಮಧಾನಗೊಳ್ಳಲು ಸಾಧ್ಯವಿಲ್ಲ" ಎಂದು ನಿತ್ಯಾ ಮೆನನ್ ಹೇಳಿದ್ದಾರೆ.

ಕುಮಾರಿ ಶ್ರೀಮತಿ ವೆಬ್ ಸೀರಿಸ್ ರಿಲೀಸ್

ನಿತ್ಯಾ ಮೆನನ್ ಹಿಂದಿನಂತೆ ಹೆಚ್ಚೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೂ, ತೆಲುಗು, ತಮಿಳು ಭಾಷೆಯಲ್ಲಿ ಆಗಾಗ ಹೊಸ ಹೊಸ ಪ್ರಾಜೆಕ್ಟ್‌ಗಳೊಂದಿಗೆ ಪ್ರತ್ಯಕ್ಷ ಆಗುತ್ತಾರೆ. ಇತ್ತೀಚೆಗೆ ತೆಲುಗಿನಲ್ಲಿ 'ಕುಮಾರಿ ಶ್ರೀಮತಿ' ಅನ್ನುವ ವೆಬ್ ಸೀರಿಸ್ ಬಿಡುಗಡೆಯಾಗಿದೆ. ಈ ವೆಬ್ ಸೀರಿಸ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ಧವೂ ಸಮರ ಸಾರಿದ್ದಾರೆ.

More from Filmibeat

English summary
Nithya Menen reacting on gossip and fake news about her and her career:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X