ನ್ಯೂಯಾರ್ಕ್ ಇಂಡಿಯನ್ ಫಿಲಂ ಫೆಸ್ಟಿವಲ್: ಮಲಯಾಳಂ ನಟ ನಿವಿನ್ ಪೌಲಿಗೆ ಪ್ರಶಸ್ತಿ

ನ್ಯೂಯಾರ್ಕ್ ಇಂಡಿಯನ್ ಫಿಲಂ ಫೆಸ್ಟಿವಲ್‌ನಲ್ಲಿ (ಎನ್‌ವೈಐಎಫ್ಎಫ್) 'ಮೂತೋನ್' ಚಿತ್ರದ ಅಭಿನಯಕ್ಕಾಗಿ ಮಲಯಾಳಂ ನಟ ನಿವಿನ್ ಪೌಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಜುಲೈ 24 ಗೀತು ಮೋಹನ್‌ದಾಸ್ ನಿರ್ದೇಶನದ 'ಮುತೋನ್' ಚಿತ್ರ ಮೂರು ಪ್ರಶಸ್ತಿಗಳನ್ನು ಪಡೆದಿದೆ.

Recommended Video

Unseen “Nightout” Behind the scene video | Filmibeat Kannada

ಮೂತೋನ್ ಚಿತ್ರ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದರೆ, ಈ ಚಿತ್ರದ ಅಭಿನಯಕ್ಕಾಗಿ ಸಂಜನಾ ದೀಪು ಅತ್ಯುತ್ತಮ ಬಾಲನಟಿ ಪ್ರಶಸ್ತಿ ಗಳಿಸಿದ್ದಾರೆ.

ಮುಂಬೈ ಮತ್ತು ಲಕ್ಷದ್ವೀಪದಲ್ಲಿ ಚಿತ್ರೀಕರಣಗೊಂಡಿರುವ 'ಮೂತೋನ್' ಚತ್ರ, ತನ್ನ ಅಣ್ಣನನ್ನು ಹುಡುಕುತ್ತಾ ಮುಂಬೈಗೆ ಬರುವ 14 ವರ್ಷದ ಬಾಲಕನ ಕಥೆಯನ್ನು ಹೊಂದಿದೆ. ಇದು ಹಿಂದಿ ಮತ್ತು ಮಲಯಾಳಂನಲ್ಲಿ ತಯಾರಾಗಿದ್ದು, ನಿವಿನ್ ಪೌಲಿ, ಸಂಜನಾ, ರೋಷನ್ ಮ್ಯಾಥ್ಯೂ, ಶಶಾಂಕ್ ಅರೋರಾ, ಶೋಬಿತಾ ಧುಳಿಪಳ ಮುಂತಾದವರು ನಟಿಸಿದ್ದಾರೆ.

Nivin Pauly Wins Best Actor For Moothon In New York Indian Film Festival

ಇದು ನಿರ್ದೇಶಕ ಗೀತು ಮೋಹನ್ ದಾಸ್ ಅವರ ಮೂರನೇ ಚಿತ್ರ. ಹಾಗೆಯೇ ಮೂತೋನ್ ಅವರ ಮೊದಲ ಪೂರ್ಣಾವಧಿ ಚಿತ್ರ. ಅವರ ಎರಡನೆಯ ಸಿನಿಮಾ 'ಲಯರ್ಸ್ ಡೈಸ್' ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದಿತ್ತು.

ಗೀತು ಅವರು ಮಲಯಾಳಂ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದರೆ, ಅನುರಾಗ್ ಕಶ್ಯಪ್ ಹಿಂದಿ ಭಾಷೆಯ ಕೆಲಸಗಳನ್ನು ಮಾಡಿದ್ದಾರೆ. 2019ರಲ್ಲಿ ಈ ಚಿತ್ರ ಟೊರಾಂಟೊ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಕಳೆದ ವಾರ ಜೀ 5 ಮೂಲಕ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು.

ಚಿತ್ರೋತ್ಸವದಲ್ಲಿ ಮತ್ತೊಂದು ಮಲಯಾಳಂ ಸಿನಿಮಾ 'ರನ್ ಕಲ್ಯಾಣಿ' ನಟನೆಗಾಗಿ ಗಾರ್ಗಿ ಅನಂತನ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಸೌರವ್ ವಿಷ್ಣು ನಿರ್ದೇಶನದ ತೈಲಿಂಗ್ ಪಾಂಡ್ ಅತ್ಯುತ್ತಮ ಸಾಕ್ಷ್ಯ ಚಿತ್ರ, ವಿಭಾ ಬಕ್ಷಿ ನಿರ್ದೇಶನದ 'ಸನ್ ರೈಸ್' ಅತ್ಯುತ್ತಮ ಫೀಚರ್ ಡಾಕ್ಯುಮೆಂಟರಿ ಪ್ರಶಸ್ತಿ ಪಡೆದಿವೆ.

ಅರೇಬಿಯನ್ ನೈಟ್ಸ್ ಅತ್ಯುತ್ತಮ ಕಿರುಚಿತ್ರ, ನಾಕ್ ನಾಕ್ ನಾಕ್ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಗಳನ್ನು ಹಾಗೂ ಗಮಕ್ ಘರ್ ಚಿತ್ರಕ್ಕೆ ಅಂಚಲ್ ಮಿಶ್ರಾ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.

More from Filmibeat

English summary
Nivin Pauly has won best actor award for Geetu Mohandas directed Malayalam film Moothon in New York Indian Film Festival 2020.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X