ಕಪ್ಪು ಹಣದಿಂದ ಸಿನಿಮಾ ಮಾಡಿ EDಗೆ ₹25 ಕೋಟಿ ಕಟ್ಟಿದ ಆರೋಪ: ಯೂಟ್ಯೂಬ್ ಚಾನೆಲ್ ವಿರುದ್ಧ ಪೃಥ್ವಿರಾಜ್ ಕಿಡಿ

ಪೃಥ್ವಿರಾಜ್ ಸುಕುಮಾರನ್ ಮಲಯಾಳಂ ಚಿತ್ರರಂಗದ ಸ್ಟಾರ್ ನಟ. ನಿರ್ದೇಶಕ ಹಾಗೂ ನಟನಾಗಿ ಗುರುತಿಸಿಕೊಂಡಿರೋ ಪೃಥ್ವಿರಾಜ್ ಮಲಯಾಳಂ ಚಿತ್ರರಂಗದಲ್ಲಿ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದ್ದಾರೆ.

ಇದೇ ನಟ ಮಲಯಾಳಂನ ಯೂಟ್ಯೂಬ್ ಚಾನೆಲ್‌ವೊಂದರ ವಿರುದ್ಧ ಕಿಡಿಕಾರಿದ್ದಾರೆ. ಇಂದು (ಮೇ 11) ಮಲಯಾಳಂ ಚಾನೆಲ್ ವಿರುದ್ಧ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

Prithviraj Angry on Malayalam youtube channel says he is making propaganda films and paid ED 25Cr

ಮಲಯಾಳಂ ಯೂಟ್ಯೂಬ್ ಚಾನೆಲ್ ಒಂದು ಪೃಥ್ವಿರಾಜ್ ಸುಕುಮಾರನ್ ವಿರುದ್ಧ ಸುದ್ದಿಯೊಂದನ್ನು ಪ್ರಕಟಿಸಿತ್ತು. ಪೃಥ್ವಿರಾಜ್ 'ಪ್ರೊಪಾಗಾಂಡಾ' ಸಿನಿಮಾಗಳನ್ನು ಮಾಡುತ್ತಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಇದೇ ಚಾನೆಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೃಥ್ವಿರಾಜ್ ಸುಕುಮಾರನ್ ನಿರ್ಧರಿಸಿದ್ದಾರೆ. ಅಷ್ಟಕ್ಕೂ ಆ ಯೂಟ್ಯೂಬ್ ಚಾನೆಲ್ ಬಿತ್ತರಿಸಿದ ವರದಿ ಏನು? ಅಂತ ತಿಳಿಯಲು ಮುಂದೆ ಓದಿ.

ಯೂಟ್ಯೂಬ್ ಚಾನೆಲ್ ವರದಿ ಏನು?

ಮಲಯಾಳಂನ ಮರುನದನ್ ಮಲಯಾಳಿ ಅನ್ನೋ ಯೂಟ್ಯೂಬ್ ಚಾನೆಲ್ ಇಂದು (ಮೇ 11) ವರದಿಯೊಂದನ್ನು ಪ್ರಕಟಿಸಿತ್ತು. ಇದು ಮಾಲಿವುಡ್‌ನ ಸ್ಟಾರ್‌ ನಟನ ಕಣ್ಣುಗಳನ್ನು ಕೆಂಪಾಗಿಸಿದೆ.

Prithviraj Angry on Malayalam youtube channel says he is making propaganda films and paid ED 25Cr

ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರ್ ಪ್ರೊಪಾಗಾಂಡಾ ಸಿನಿಮಾವನ್ನು ಮಾಡುತ್ತಿದ್ದಾರೆ. ಹೀಗಾಗಿ ಅವರು ಜಾರಿ ನಿರ್ದೇಶನಾಲಯಕ್ಕೆ ಬರೋಬ್ಬರು 25 ಕೋಟಿ ರೂ.ಯನ್ನು ಪಾವತಿ ಮಾಡಲೇ ಬೇಕಿದೆ ಎಂದು ವರದಿ ಮಾಡಿತ್ತು. ಇದು ಪೃಥ್ವಿರಾಜ್ ಸುಕುಮಾರ್ ಆಕ್ರೋಶಕ್ಕೆ ಕಾರಣವಾಗಿದೆ.

ಮಧ್ಯ ಪ್ರಾಚ್ಯದಿಂದ ಹಣ ಬರುತ್ತೆ

ಪೃಥ್ವಿರಾಜ್ ಸುಕುಮಾರನ್‌ಗೆ ಮಧ್ಯ ಪ್ರಾಚ್ಯದಿಂದ ಬಂದ ಹಣ ಬಂದಿದೆ. ಅದನ್ನು ಜಾರಿ ನಿರ್ದೇಶನಾಲಯ ತನಿಖೆ ಮಾಡುತ್ತಿದೆ. ಈ ವೇಳೆ ಮಹತ್ವದ ದಾಖಲೆಗಳು ಸಿಕ್ಕಿವೆ. ಅಲ್ಲದೆ ಮಲಯಾಳಂನ ಜನಪ್ರಿಯ ನಿರ್ದೇಶಕ ಆಂಟೋನಿ ಪೆರುಂಬವೂರ್ ಹಾಗೂ ಲಿಸ್ಟಿನ್ ಸ್ಟೀಫನ್ ಅವರನ್ನೂ ವಿಚಾರಣೆ ಮಾಡಲಾಗಿದೆ ಎಂದು ಮರುನದನ್ ಮಲಯಾಳಿ ಯೂಟ್ಯೂಚ್ ಚಾನೆಲ್ ವರದಿ ಮಾಡಿತ್ತು.

ಮಧ್ಯ ಪ್ರಾಚ್ಯದಿಂದ ಮಲಯಾಳಂ ಚಿತ್ರರಂಗಕ್ಕೆ ಕಪ್ಪು ಹಣ ಹರಿದು ಬರುತ್ತಿದೆ. ಚಿತ್ರರಂಗದ ಹಲವರು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆಂಬ ಗಂಭೀರ ಆರೋಪ ಮಾಡಲಾಗಿತ್ತು. ಈ ವರದಿ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಪೃಥ್ವಿರಾಜ್ ಸುಕುಮಾರ್ ಕಿಡಿಕಾರಿದ್ದಾರೆ.

"ಕಾನೂನು ಕ್ರಮ ಕೈಗೊಳ್ಳುತ್ತೇನೆ"

ಪೃಥ್ವಿರಾಜ್ ಸುಕುಮಾರನ್ ಮರುನದನ್ ಮಲಯಾಳಿ ಯೂಟ್ಯೂಬ್ ಚಾನೆಲ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ. ಸಿವಿಲ್ ಹಾಗೂ ಕ್ರಿಮಿನಲ್ ಡಿಫಮೇಷನ್ ಕೇಸ್ ದಾಖಲಿಸುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

" ಇಂತಹ ಸುದ್ದಿಗಳನ್ನು ಸಾಮಾನ್ಯವಾಗಿ ನಾನು ಬಿಟ್ಟುಬಿಡುತ್ತೇನೆ. ಯಾಕೆಂದರೆ, ಈಗಿನ ಕಾಲದಲ್ಲಿ ನೈತಿಕ ಪತ್ರಿಕೋದ್ಯಮ ಅನ್ನೋದು ಉಳಿದಿಲ್ಲ. ಆದರೆ, ಸುದ್ದಿಯ ಹೆಸರಿನಲ್ಲಿ ಸುಳ್ಳುಗಳನ್ನು ಪ್ರಚಾರ ಮಾಡುವುದಕ್ಕೂ ಒಂದು ಲಿಮಿಟ್ ಇದೆ. ಹೀಗಾಗಿ ಸಿವಿಲ್ ಹಾಗೂ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಹಾಕುತ್ತಿದ್ದೇನೆ. ಇನ್ನೂ ಆಶ್ಚರ್ಯದಿಂದ ನೋಡುತ್ತಿರುವವರಿಗೆ ನಾನು ಯಾವುದೇ ರೀತಿಯ ದಂಡವನ್ನು ಕಟ್ಟಿಲ್ಲ ಎಂದು ಹೇಳುತ್ತೇನೆ" ಎಂದು ಸ್ಪಷ್ಟನೆ ನೀಡಿದ್ದಾರೆ.

More from Filmibeat

English summary
Prithviraj Sukumaran Angry on Malayalam youtube channel says he is making propaganda films and paid ED 25Cr.know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X