5 ವರ್ಷಗಳಿಂದ ನಿರ್ಮಾಣ ಆಗತ್ತಿರುವ ಈ ಸಿನಿಮಾಗೆ ಕೊನೆಗೂ ಸಿಕ್ತು ರಿಲೀಸ್ ಡೇಟ್: ಯಾವುದು ಈ ಚಿತ್ರ?
ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿರುವ ಸಿನಿಮಾ ಸುಮಾರು ಐದು ವರ್ಷಗಳಿಂದ ನಿರ್ಮಾಣ ಆಗುತ್ತಲೇ ಇತ್ತು. ಒಂದಲ್ಲ ಒಂದು ಅಡೆ ತಡೆಗಳನ್ನು ಎದುರಿಸಿಕೊಂಡು ನಿರ್ಮಾಣ ಆಗುತ್ತಿದ್ದ ಈ ಸಿನಿಮಾಗೀಗ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಅದುವೇ 'ದಿ ಗೋಟ್ ಲೈಫ್' (ಆಡು ಜೀವಿತಂ).
'ದಿ ಗೋಸ್ಟ್ ಲೈಫ್' ಮಲಯಾಳಂ ಚಿತ್ರರಂಗಕ್ಕೆ ವಿಶಿಷ್ಠವಾದ ಸಿನಿಮಾ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ವೃತ್ತಿ ಬದುಕಿನಲ್ಲೇ ಇದು ವಿಶಿಷ್ಠವಾದ ಸಿನಿಮಾವಿದು. ಈ ಸಿನಿಮಾ ಕಳೆದ ಐದು ವರ್ಷಗಳಿಂದ ನಿರ್ಮಾಣ ಆಗುತ್ತಲೇ ಇತ್ತು. ಇತ್ತ ಪ್ರೇಕ್ಷಕರು ಕೂಡ ಕಾದೂ ಕಾದು ಸುಸ್ತಾಗಿದ್ದರು.

ಇದೊಂದು ಸರ್ವೈವಲ್ ಅಡ್ವೆಂಚರ್ ಸಿನಿಮಾ. ಬೆನ್ಯಾಮಿನ್ ಅವರ 'ಗೋಟ್ ಡೇಸ್' ಕಾದಂಬರಿ ಆಧರಿಸಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಒಂದು ದಶಕದಿಂದ ಈ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿತ್ತು. ಐದು ವರ್ಷದಿಂದ ಸಿನಿಮಾ ಶೂಟಿಂಗ್ ಆಗುತ್ತಿದ್ದರೂ, ಅಡೆತಡೆಗಳು ಎದುರಾಗಿತ್ತು. ಕೊನೆಗೂ ಈಗ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಈ ಸಿನಿಮಾ ನೈಜ ಕಥೆ ಆಧರಿಸಿದ ಚಿತ್ರವಾಗಿದೆ.
ಪೃಥ್ವಿ ರಾಜ್ ಸುಕುಮಾರನ್ ಅಭಿನಯದ ದಿ ಗೋಟ್ ಲೈಫ್, ದಿ ಎಪಿಕ್ ಟೇಲ್ ಆಫ್ ದಿ ಗ್ರೇಟೆಸ್ಟ್ ಸರ್ವೈವಲ್ ಅಡ್ವೆಂಚರ್ ಸಿನಿಮಾಗೆ ರಿಲೀಸ್ ಡೇಟ್ ಫಿಕ್ಸ್ ಆಗಿದೆ. 2024ರ ಏಪ್ರಿಲ್ 10 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು ರಾಷ್ಟ ಪ್ರಶಸ್ತಿ ವಿಜೇತ ಬ್ಲೆಸ್ಸಿ ನಿರ್ದೇಶನದ ಸಿನಿಮಾ. ಈ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ಹಲವು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಂದಹಾಗೆ 'ದಿ ಗೋಟ್ ಲೈಫ್' (ಆಡು ಜೀವಿತಂ) ಕಥೆ ಕೇರಳದಿಂದ ಸೌದಿ ಅರೇಬಿಯಾಗೆ ವಲಸೆ ಹೋಗುವ ವ್ಯಕ್ತಿಯ ಕುರಿತಾದ ಸಿನಿಮಾ ಆಗಿದೆ. ಕೆಲಸ ಹುಡುಕಿಕೊಂಡು ಸೌದಿ ಅರೇಬಿಯಾಗೆ ವಲಸೆ ಹೋಗುವ ನಸೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿ ಅಲ್ಲಿ ಅನುಭವಿಸುವ ಕಷ್ಟ, ಎದುರಿಸುವ ಸಮಸ್ಯೆ ಅನ್ನೇ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಪಾಸ್‌ಪೋರ್ಟ್ ಕಸಿದಿಟ್ಟುಕೊಂಡು ಕೊಡುವ ಹಿಂಸೆ, ಮರುಭೂಮಿಯಲ್ಲಿ ಆತ ಪಡುವ ಯಾತನೆಯನ್ನು ಹೇಳಲಾಗಿದೆ.
ಅಂದ್ಹಾಗೆ ನಿರ್ದೇಶಕ ಬ್ಲೆಸ್ಸಿ ಹದಿನೈದು ವರ್ಷದಿಂದ ಕಂಡ ಕನಸಿನ ಕಥೆಯಿದು. ಇಲ್ಲಿ ಪೃಥ್ವಿರಾಜ್ ಸುಕುಮಾರನ್ ವಲಸಿಗನಾಗಿ ಹೊಸ ಲುಕ್ ಮೂಲಕ ಕಾಣಿಸಿಕೊಂಡಿದ್ದಾರೆ. ಹಲವಾರು ವರ್ಷಗಳಿಂದ ಈ ಸಿನಿಮಾಗಾಗಿ ದುಡಿದಿದ್ದಾರೆ. ನಜೀಬ್ ಪಾತ್ರಕ್ಕಾಗಿ ಪೃಥ್ವಿರಾಜ್ ಸಾಕಷ್ಟು ದೇಹವನ್ನು ದಂಡಿಸಿದ್ದಾರೆ. ಅವರು ಸಿನಿಮಾಗಾಗಿ ಸುಮಾರು 30 ಕೆಜಿ ತೂಕ ಇಳಿಸಿಕೊಂಡಿದ್ದು, ಕಳೆದ ಐದು ವರ್ಷಗಳಿಂದ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಬ್ಲೆಸ್ಸಿ ನಿರ್ದೇಶನದ ಈ ಸಿನಿಮಾವನ್ಬು ವಿಷುಯಲ್ ರೊಮ್ಯಾನ್ಸ್ ನಿರ್ಮಿಸಿದ್ದು, ಹಾಲಿವುಡ್ ನಟ ಜಿಮ್ಮಿ ಜೀನ್-ಲೂಯಿಸ್, ಅಮಲಾ ಪೌಲ್, ಕೆ.ಆರ್.ಗೋಕುಲ್ ಮತ್ತು ಪ್ರಸಿದ್ಧ ಅರಬ್ ನಟರಾದ ತಾಲಿಬ್ ಅಲ್ ಬಲೂಶಿ ಮತ್ತು ರಿಕಾಬಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಗೋಟ್ ಲೈಫ್ ಏಪ್ರಿಲ್ 10 ರಂದು ಹಿಂದಿ, ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











