ನಟಿಯರ ನಗ್ನ ದೃಶ್ಯಕ್ಕಾಗಿ ಕ್ಯಾರಾವಾನ್‌ನಲ್ಲಿ ರಹಸ್ಯ ಕ್ಯಾಮರಾ; ನಟಿ ಹೇಳಿಕೆ ಬಳಿಕ ನಿರ್ಮಾಪಕರಿಂದ ಮೀಟಿಂಗ್

ಹೇಮಾ ಕಮಿಡಿ ವರದಿ ಬಳಿಕ ಮಲಯಾಳಂ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಆಗಿದೆ. ಒಬ್ಬೊಬ್ಬರೇ ನಟಿಯರು ಮುಂದೆ ಬಂದು ತಮಗಾದ ಕಹಿ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ತಮಗಾದ ಲೈಂಗಿಕ ಕಿರುಕುಳ ಬಗ್ಗೆ ಓಪನ್ ಆಗಿ ಮಾತಾಡುತ್ತಿದ್ದಾರೆ. ಈ ಸಂಬಂಧ ಮಲಯಾಳಂ ದಿಗ್ಗಜರ ವಿರುದ್ಧ ಕೇಸ್ ಕೂಡ ದಾಖಲಾಗಿದೆ. ಹೇಮಾ ಕಮಿಟಿ ವರದಿ ಬಳಿಕ ಮಲಯಾಳಂ ಚಿತ್ರರಂಗ ತಲೆ ತಗ್ಗಿಸುವಂತಹ ಸ್ಥಿತಿ ನಿರ್ಮಾಣ ಆಗಿದೆ.

ಇದೇ ಸಂದರ್ಭದಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿ ರಾಧಿಕಾ ಶರತ್ ಕುಮಾರ್ ಸ್ಪೋಟಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದರು. ಹೇಮಾ ಕಮಿಡಿ ವರದಿ ಬಹಿರಂಗಗೊಂಡ ಬಳಿಕ ನೀಡಿದ ಸಂದರ್ಶನದಲ್ಲಿ ಮಲಯಾಳಂ ಚಿತ್ರರಂಗದಲ್ಲಿ ತಾವು ಎದುರಿಸಿದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದರು.

Radhika Sarathkumar alleges hidden cameras inside caravan producer calls meeting with owners

ರಾಧಿಕಾ ಶರತ್‌ಕುಮಾರ್ ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ವೇಳೆ ತಮಗಾದ ಅನುಭವವನ್ನು ಹಂಚಿಕೊಂಡಿದ್ದರು. ನಟಿಯರ ಬೆತ್ತಲೆ ದೃಶ್ಯವನ್ನು ಸೆರೆ ಹಿಡಿಯುವುದಕ್ಕಾಗಿ ರಹಸ್ಯ ಕ್ಯಾಮರಾವನ್ನು ಅಳವಡಿಸುತ್ತಾರೆ ಎಂದು ಹೇಳಿಕೆ ಮಲಯಾಳಂ ಸಿನಿಮಾ ಮಂದಿಗೆ ದೊಡ್ಡ ತಲೆ ನೋವಾಗಿದೆ. ಹೀಗಾಗಿ ಕೇರಳದ ಸಿನಿಮಾ ನಿರ್ಮಾಪಕರು ಕ್ಯಾರಾವಾನ್ ಮಾಲೀಕರಿಗೆ ಮೀಟಿಂಗ್‌ಗೆ ಆಹ್ವಾನಿಸಿದ್ದಾರೆ.

ದಕ್ಷಿಣ ಭಾರತದ ಬಹುಭಾಷಾ ನಟಿಯ ಹೇಳಿಕೆಯನ್ನು ಮಲಯಾಳಂ ಚಿತ್ರರಂಗದ ನಿರ್ಮಾಪಕರು ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಸಿನಿಮಾ ತಾರೆಯರಿಗೆ ಕ್ಯಾರಾವಾನ್ ಸೇವೆ ನೀಡುವ ಎಲ್ಲಾ ಮಾಲೀಕರನ್ನು ಮೀಟಿಂಗ್‌ಗೆ ಆಹ್ವಾನಿದೆ. ಸೆಪ್ಟೆಂಬರ್ 6ರಂದು ಕ್ಯಾರಾವಾನ್ ಮಾಲೀಕರೊಂದಿಗೆ ಕೇರಳದ ಸಿನಿಮಾ ನಿರ್ಮಾಪಕರು ಈ ವಿಷಯದ ಕುರಿತು ಚರ್ಚೆ ಮಾಡಲಿದ್ದಾರೆ. ಆ ಬಳಿಕ ಹೊಸ ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆಯಿದೆ.

Radhika Sarathkumar alleges hidden cameras inside caravan producer calls meeting with owners

ಮಲಯಾಳಂ ಸಿನಿಮಾ ನಿರ್ಮಾಪಕರು ಕ್ಯಾರಾವಾನ್ ಮಾಲೀಕ ಜೊತೆ ಈಗಾಗಲೇ ತಮಗೆ ಬಂದಿರುವ ದೂರಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಮಹಿಳೆಯರ ಸುರಕ್ಷತೆ ಬಗ್ಗೆನೂ ಚರ್ಚಿಸಲಿದ್ದಾರೆ. ಹಾಗೇ ಕ್ಯಾರಾವಾನ್‌ನಲ್ಲಿ ಏನೆಲ್ಲ ಅಗತ್ಯ ಸೌಲಭ್ಯಗಳನ್ನು ನೀಡಬೇಕು. ಯಾವ್ಯಾವ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಅನ್ನುವ ಬಗ್ಗೆ ಮಾರ್ಗಸೂಚಿ ನೀಡುವ ಸಾಧ್ಯತೆಯಿದೆ.

ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ರಾಧಿಕಾ ಶರತ್‌ಕುಮಾರ್ ಕೊಟ್ಟ ಸ್ಟೋಟಕ ಹೇಳಿಕೆ ಸಂಚಲನ ಸೃಷ್ಟಿಸಿದೆ. ರಾಧಿಕಾ ಶರತ್‌ಕುಮಾರ್ ಮಲಯಾಳಂ ಚಿತ್ರರಂಗದಲ್ಲಿ ತಮಗಾದ ಅನುಭವವನ್ನು ಹೀಗೆ ಹೇಳಿಕೊಂಡಿದ್ದರು.

"ನಾನು ಕೇರಳದಲ್ಲಿ ಒಂದು ಸೆಟ್‌ನಲ್ಲಿ ಇದ್ದೆ. ಆ ವೇಳೆ ಜನರು ಒಟ್ಟಾಗಿ ಸೇರಿಕೊಂಡು ಏನನ್ನೋ ನೋಡಿ ನಗುತ್ತಿದ್ದರು. ನಾನು ಹಾಗೆ ಹೋಗುವಾಗ ಅವರು ವಿಡಿಯೋವನ್ನು ನೋಡುತ್ತಿರುವುದನ್ನು ಗಮನಿಸಿದೆ. ನಾನು ತಂಡದವರನ್ನು ಕರೆದು ಏನು ನೋಡುತ್ತಿದ್ದಾರೆಂದು ಕೇಳಿದೆ. ಆಗ ನನಗೆ ನಟಿಯರು ಬಟ್ಟೆ ಬದಲಿಸುವ ಸಮಯದಲ್ಲಿನ ಬೆತ್ತಲೆ ವಿಡಿಯೋಗಳನ್ನು ನೋಡುತ್ತಿದ್ದರು. ಅದನ್ನು ಕ್ಯಾರಾವಾನ್‌ನಲ್ಲಿ ರಹಸ್ಯ ಕ್ಯಾಮರಾವಿಟ್ಟು ಸೆರೆ ಹಿಡಿದಿದ್ದರು. ಕೇವಲ ಹೆಸರು ಟೈಪ್ ಮಾಡಿದರೆ ಸಾಕು ಆ ನಟಿಯರ ವಿಡಿಯೋ ಸಿಗುತ್ತಿತ್ತು. ನಾನು ಆ ವಿಡಿಯೋವನ್ನು ನೋಡಿದ್ದೇನೆ" ಎಂದಿದ್ದರು.

ಈ ಪ್ರಕರಣದ ಬಳಿಕ ತಾನು ಕ್ಯಾರಾವಾನ್ ಅನ್ನು ಬಳಸುವುದನ್ನೇ ನಿಲ್ಲಿಸಿದ್ದೆ ಎಂದು ರಾಧಿಕಾ ಶರತ್‌ಕುಮಾರ್ ಇದೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಹೀಗೆ ಮಲಯಾಳಂ ಚಿತ್ರರಂಗದ ಕಾಮಕಾಂಡದ ಬಗ್ಗೆ ಹಿರಿಯ ನಟಿ ಕೂಡ ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.

More from Filmibeat

English summary
Radhika Sarathkumar alleges hidden cameras inside caravans
Read more about: radhika malayalam filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X