ಮಮ್ಮುಟ್ಟಿ 'ಟರ್ಬೊ'ಗೆ ರಾಜ್ ಬಿ ಶೆಟ್ಟಿ ಸಾಥ್: ಮಲಯಾಳಂ 2ನೇ ಸಿನಿಮಾಗೆ ಸಿಕ್ತು ಭವ್ಯ ಸ್ವಾಗತ!

ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ರಾಜ್ ಬಿ ಶೆಟ್ಟಿಯ 'ಟೋಬಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಷ್ಟು ಚಮತ್ಕಾರ ಮಾಡಿಲ್ಲ. ಆದರೆ, ರಾಜ್ ಬಿ ಶೆಟ್ಟಿಯ ನಟನೆ ಕಂಡು ಪ್ರೇಕ್ಷಕರೇ ಬೆಚ್ಚಿ ಬಿದ್ದಿದ್ದರು. 'ಟೋಬಿ'ಯ ಅವತಾರದಲ್ಲಿ ರಾಜ್ ಕಂಡು ದಂಗಾಗಿದ್ದರು.

'ಟೋಬಿ' ಸಿನಿಮಾ ಮಾಡುವಾಗಲೇ ರಾಜ್ ಬಿ ಶೆಟ್ಟಿ ಮಲಯಾಳಂ ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಮೊದಲ ಮಾಲಿವುಡ್ ಸಿನಿಮಾ 'ರುಧೀರಂ' ಶೂಟಿಂಗ್ ಕೂಡ ಮುಗಿದು ರಿಲೀಸ್‌ಗೂ ರೆಡಿಯಾಗಿದೆ. ಅಷ್ಟರಲ್ಲೇ ಮತ್ತೊಂದು ಮಲಯಾಳಂ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

mammootty-raj-b-shetty-turbo

ಹೌದು, ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಹೊಸ ಸಿನಿಮಾ 'ಟರ್ಬೊ'ದಲ್ಲಿ ರಾಜ್‌ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸ್ವತ: ಮಮ್ಮುಟ್ಟಿನೇ ತನ್ನ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ತಮ್ಮ ಸಿನಿಮಾ ತಂಡಕ್ಕೆ ರಾಜ್ ಬಿ ಶೆಟ್ಟಿಯನ್ನು ಗ್ರ್ಯಾಂಡ್ ಆಗಿಯೇ ವೆಲ್‌ಕಮ್ ಮಾಡಿದ್ದಾರೆ. ಈ ಹೊಸ ಸಿನಿಮಾ ಬಗ್ಗೆ ತಿಳಿಯಲು ಮುಂದೆ ಓದಿ.

ಇತ್ತೀಚೆಗೆ ಮಮ್ಮುಟ್ಟಿ ನಟಿಸಿದ 'ಕನ್ನುರ್ ಸ್ಕ್ವಾಡ್' ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂಪಾಯಿಯನ್ನು ಬಾಚಿಕೊಂಡಿತ್ತು. ಇದೇ ಜೋಷ್‌ನಲ್ಲಿ ಹೊಸ ಸಿನಿಮಾ 'ಟರ್ಬೊ'ವನ್ನು ಅನೌನ್ಸ್ ಮಾಡಿದ್ದರು. ವೈಶಾಖ್ ಈ ಸಿನಿಮಾದ ನಿರ್ದೇಶಕ. ಮಮ್ಮುಟ್ಟಿಗೆ 'ಪೋಕಿರಿ ರಾಜ', 'ಮಧುರ ರಾಜ' ಅಂತ ಸಿನಿಮಾಗಳಿಗೆ ವೈಶಾಖ್ ಆಕ್ಷನ್ ಕಟ್ ಹೇಳಿದ್ದರು. 'ಟರ್ಬೋ' ಈ ಜೋಡಿಯ ಮೂರನೇ ಸಿನಿಮಾ.

ಇದೇ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. 'ಟರ್ಬೋ' ಸಿನಿಮಾವನ್ನು ಮಲಯಾಳಂ ಮೆಗಾಸ್ಟಾರ್ ನಿರ್ಮಾಣ ಸಂಸ್ಥೆ ಮಮ್ಮುಟ್ಟಿ ಕಂಪನಿ ಹಣ ಹೂಡುತ್ತಿದೆ. ಮಿದುನ್ ಮಾನ್ಯೂಯೆಲ್ ಥಾಮಸ್ ಈ ಸಿನಿಮಾಗೆ ಸ್ಕ್ರಿಪ್ಟ್ ಬರೆದಿದ್ದಾರೆ. ಈಗಾಗಲೇ ವರದಿಯಾಗಿರುವ ಪ್ರಕಾರ, ಇದೊಂದು ಪಕ್ಕಾ ಆಕ್ಷನ್ ಕಾಮಿಡಿ ಸಿನಿಮಾ.

ಮಮ್ಮುಟ್ಟಿ ಪುತ್ರ ದುಲ್ಖರ್ ಸಲ್ಮಾನ್ ಹಿಂದೊಮ್ಮೆ ಕನ್ನಡ ನಟ ರಾಜ್ ಬಿ ಶೆಟ್ಟಿ ಜೊತೆ ಸೇರಿ ಸಿನಿಮಾ ಮಾಡಬೇಕು ಎಂದು ಹೇಳಿದ್ದರು. ಅದರಂತೆಯೇ ಈಗ ಮಮ್ಮುಟ್ಟಿ ನಿರ್ಮಾಣ ಸಂಸ್ಥೆಯಲ್ಲಿ ರಾಜ್ ಬಿ ಶೆಟ್ಟಿ ನಟಿಸುತ್ತಿದ್ದಾರೆ. ಮೊದಲ ಸಿನಿಮಾ 'ರುಧ್ರಿರಂ' ಬಿಡುಗಡೆಗೂ ಮುನ್ನವೇ ಮತ್ತೊಂದು ಸಿನಿಮಾ ಸಿಕ್ಕಿದೆ. "ಅತ್ಯಂತ ಪ್ರತಿಭಾವಂತ ನಟ" ಎಂದು ಮಮ್ಮುಟ್ಟಿಯೇ ನಟ ರಾಜ್ ಬಿ ಶೆಟ್ಟಿಯನ್ನು ಕರೆದಿದ್ದು ಕನ್ನಡಿಗರಿಗೆ ಖುಷಿ ಕೊಟ್ಟಿದೆ.

ಸದ್ಯ ರಾಜ್ ಬಿಟ್ಟಿ ನಟಿಸಿ, ನಿರ್ದೇಶಿಸಿದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇದೇ ನವೆಂಬರ್ 24ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಮೋಹಕತಾರೆ ರಮ್ಯಾ ಇದೇ ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಜೊತೆ ಸಿರಿ ರವಿಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಬಾಲಾಜಿ ಮನೋಹರ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

ಇನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ '45' ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕೂಡ ಪ್ರಮುಖ ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಹಾಗೇ ರಿಯಲ್ ಸ್ಟಾರ್ ಉಪೇಂದ್ರ ಕೂಡ ಇದ್ದಾರೆ. ಮೂವರು ನಟರ ಜುಗಲ್ ಬಂಧಿ ಹೇಗಿರುತ್ತೆ ಅನ್ನೋ ಕುತೂಹಲವಿದೆ.

More from Filmibeat

English summary
Raj B. Shetty is playing an important role in the Mummootty movie Turbo. Here are the details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X