ಅಪ್ಪನಂತೆ ಗೆದ್ದ ಬೀಗಿದ ಮಗಳು: ರಾಜೇಶ್ ನಟರಂಗ ಪುತ್ರಿ ಮಲಯಾಳಂ ಚಿತ್ರದಲ್ಲಿ ಶೈನಿಂಗ್

ರಾಜೇಶ್ ನಟರಂಗ ಯಾರಿಗೆ ಗೊತ್ತಿಲ್ಲ? ಕನ್ನಡ ಸಿನಿಮಾ ಪ್ರೇಮಿಗಳಿಗೆಲ್ಲರಿಗೂ ಈ ನಟನ ಬಗ್ಗೆ ಚೆನ್ನಾಗಿಯೇ ಪರಿಚಯವಿರುತ್ತೆ. ಸಿನಿಮಾ ಹಾಗೂ ಧಾರಾವಾಹಿ ಎರಡರಲ್ಲೂ ಬ್ಯುಸಿ. ಸದ್ಯ ಅಮೃತಧಾರೆ ಅನ್ನೋ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಇಲ್ಲಿವರೆಗೂ ಬಹುತೇಕ ಮಂದಿಗೆ ರಾಜೇಶ್ ನಟರಂಗ ಬಗ್ಗೆ ಮಾತ್ರ ಗೊತ್ತಿದೆ. ಆದರೆ, ಅವರಿಗೂ ಒಬ್ಬ ಮಗಳಿದ್ದಾಳೆ. ಆಕೆನೂ ಸಿನಿಮಾಗಳಲ್ಲಿ ಬ್ಯುಸಿ ಅನ್ನೋದು ಬಹುತೇಕ ಮಂದಿಗೆ ಗೊತ್ತಿರಲಿಕ್ಕಿಲ್ಲ. ಹೌದು,ರಾಜೇಶ್ ನಟರಂಗ ಪುತ್ರಿ ಕೂಡ ಸಿನಿಮಾ ನಟಿನೇ.. ಈಗಾಗಲೇ ಅದ್ಭುತ ನಟರು, ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.

Rajesh Nataranga daughter Dhwani Rajesh entered Mollywood with Fahadh Faasil

ಅಂದ್ಹಾಗೆ, ರಾಜೇಶ್ ನಟರಂಗ ಪುತ್ರಿಯ ಹೆಸರು ಧ್ವನಿ ರಾಜೇಶ್. ಮಲಯಾಳಂ ನಟ ಫಹಾದ್ ಫಾಸಿಲ್ ಸಿನಿಮಾದಲ್ಲಿ ಧ್ವನಿ ರಾಜೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಷ್ಟು ಧ್ವನಿ ರಾಜೇಶ್ ಮಲಯಾಳಂ ಚಿತ್ರರಂಗಕ್ಕೆ ಹೋಗಿದ್ದೇಗೆ? ಯಾವ್ಯಾವ ಭಾಷೆಯಲ್ಲಿ ಸಿನಿಮಾ ಮಾಡಿದ್ದಾರೆ? ಹಿನ್ನೆಲೆಯೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಧ್ವನಿ ರಾಜೇಶ್ ಮಲಯಾಳಂನಲ್ಲಿ ಬ್ಯುಸಿ

ಮಲಯಾಳಂ ನಟ ಫಹಾದ್ ಫಾಸಿಲ್ ನಟನೆಯ ಸಿನಿಮಾ 'ಪಚುವುಂ ಅತ್ಬುತ ವಿಳಕ್ಕುಂ' ಇತ್ತೀಚೆಗೆ ರಿಲೀಸ್ ಆಗಿತ್ತು. ಏಪ್ರಿಲ್ 28ರಂದು ತೆರೆಕಂಡಿರೋ ಈ ಸಿನಿಮಾಗೆ ಕೇರಳದ ಜನರು ಮೆಚ್ಚಿದ್ದಾರೆ. ಇದೇ ಸಿನಿಮಾ ರಾಜೇಶ್ ನಟರಂಗ ಪುತ್ರಿ ಧ್ವನಿ ರಾಜೇಶ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Rajesh Nataranga daughter Dhwani Rajesh entered Mollywood with Fahadh Faasil

ಧ್ವನಿ ರಾಜೇಶ್ ಈ ಸಿನಿಮಾದಲ್ಲಿ ನಿಧಿಯ ಪಾತ್ರದಲ್ಲಿ ನಟಿಸಿದ್ದಾರೆ. ಮಲಯಾಳಂ ಗೊತ್ತಿಲ್ಲದೆ ಇದ್ದರೂ, ಚಿಕ್ಕ ವಯಸ್ಸಿನಲ್ಲೇ ಆ ಪಾತ್ರದಲ್ಲಿ ಜೀವಿಸಿದ್ದಾರೆ. ಹೀಗಾಗಿ ನಿಧಿ ಪಾತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಧ್ವನಿ ಮಲಯಾಳಂ ಚಿತ್ರರಂಗದಲ್ಲಿ ಜನಪ್ರಿಯರ ನಟಿಯಾಗಿದ್ದಾರೆ. ಅಷ್ಟಕ್ಕೂ ಮಲಯಾಳಂ ಸಿನಿಮಾಗೆ ಅವಕಾಶ ಸಿಕ್ಕಿದ್ದೆ ಇಂಟ್ರೆಸ್ಟಿಂಗ್ ಸ್ಟೋರಿ.

ಹಾರ್ಲಿಕ್ಸ್ ಜಾಹೀರಾತಿನಿಂದ ಅವಕಾಶ

ಧ್ವನಿ ರಾಜೇಶ್ ಈ ಹಿಂದೆ ಹಾರ್ಲಿಕ್ಸ್ ಜಾಹೀರಾತಿನಲ್ಲಿ ನಟಿಸಿದ್ದರು. ಅದರ ಕಾಸ್ಟಿಂಗ್ ಡೈರೆಕ್ಟರ್ ಗಾಯತ್ರಿ ಸ್ಮಿತಾ 'ಪಚುವುಂ ಅತ್ಬುತ ವಿಳಕ್ಕುಂ' ಸಿನಿಮಾದ ನಿರ್ದೇಶಕರಿಗೆ ಅಖಿಲ್ ಬಳಿ ಧ್ವನಿಯ ಬಗ್ಗೆ ಮಾತಾಡಿದ್ದರು. ಆಗ ಧ್ವನಿ ಇನ್ನೂ 8ನೇ ತರಗತಿ ಓದುತ್ತಿದ್ದರು. ಅದೇ ವೇಳೆ ಲಾಕ್‌ಡೌನ್ ಬಂದಿದ್ದರಿಂದ ಸಿನಿಮಾ ಕೊಂಚ ತಡವಾಯಿತು.

ಈ ಸಿನಿಮಾದಲ್ಲಿ ನಿಧಿಯಾಗಿ ಓದಬೇಕು ಅನ್ನೋ ಹಂಬಲವಿರುವ ಹುಡುಗಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಈಗಾಗಲೇ ರಿಲೀಸ್ ಆಗಿದ್ದು, ಬಾಕ್ಸಾಫೀಸ್‌ನಲ್ಲಿ ಹಿಟ್ ಅಂತನೂ ಸಾಬೀತಾಗಿದೆ. ಅಲ್ಲದೆ ಧ್ವನಿ ರಾಜೇಶ್ ಪಾತ್ರಕ್ಕೆ ಮೆಚ್ಚುಗೆ ಕೂಡ ಸಿಕ್ಕಿದೆ.

ಇರಾನಿ ನಿರ್ದೇಶಕರು ಸಿನಿಮಾದಲ್ಲಿ ನಟನೆ

ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಇರಾನಿ ನಿರ್ದೇಶಕ ಮಜಿದ್ ಮಜಿದಿ ಸಿನಿಮಾದಲ್ಲಿ ನಟಿಸಿದ್ದಾರೆ. ಮಜಿದ್ ಮಜಿದಿ 'ಬಿಯೊಂಡ್ ದಿ ಕ್ಲೌಡ್' ಅನ್ನೋ ಹಿಂದಿ ಸಿನಿಮಾವನ್ನು ನಿರ್ದೇಶಿಸಿದ್ದರು. ಆ ಸಿನಿಮಾದಲ್ಲೂ ಧ್ವನಿ ರಾಜೇಶ್ ಬಾಲ ಕಲಾವಿದೆಯಾಗಿದೆ ನಟಿಸಿದ್ದಾರೆ. ಈ ಸಿನಿಮಾದ ತನಿಶಾ ಪಾತ್ರಕ್ಕೆ ಮೆಚ್ಚುಗೆ ಸಿಕ್ಕಿತ್ತು.

ಸದ್ಯ ಮಲಯಾಳಂ ಸಿನಿಮಾ ರಿಲೀಸ್ ಆಗಿ ಗೆದ್ದಿದೆ. ಧ್ವನಿ ನಟಿಸಿದ ಪಾತ್ರಕ್ಕೂ ಮೆಚ್ಚುಗೆ ಸಿಕ್ಕಿದೆ. ಫಹಾದ್ ಫಾಸಿಲ್ ಅಂತಹ ನಟನೊಂದಿಗೆ ನಟಿಸಿದ ಖುಷಿಯಲ್ಲಿದ್ದಾರೆ. ಸದ್ಯ ಫೈನ್ ಆರ್ಟ್ಸ್ ವ್ಯಾಸಾಂಗ ಮಾಡುತ್ತಿರುವ ಧ್ವನಿ ರಾಜೇಶ್‌ಗೆ ಕನ್ನಡದಲ್ಲೂ ಒಳ್ಳೊಳ್ಳೆ ಅವಕಾಶಗಳು ಸಿಗಲಿ.

More from Filmibeat

English summary
Rajesh Nataranga daughter Dhwani Rajesh entered Mollywood with Fahadh Faasil, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X