"ಮೋಹನ್ ಲಾಲ್ ಕೃತಜ್ಞತೆ ಇಲ್ಲದ ನಟ"; ಮಲಯಾಳಂನ ಹಿರಿಯ ನಟಿ ಶಾಂತಿ ವಿಲಿಯಮ್ಸ್ ಆರೋಪ

ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅಂದರೆ, ಸಿನಿಪ್ರಿಯರಿಗೆ ಪಂಚ ಪ್ರಾಣ. ಅವರ ಸಿನಿಮಾಗಳನ್ನು ಮೆಚ್ಚಿಕೊಂಡವರೇನು ಕಮ್ಮಿಯಲ್ಲ. ಮೋಹನ್‌ಲಾಲ್ ತಮ್ಮ ಸಿನಿಮಾಗಳಲ್ಲಿ ಆ ಮಟ್ಟಿಗೆ ರಂಜಿಸುತ್ತಾ ಬಂದಿದ್ದಾರೆ. ಇಂದಿಗೂ ಮಲಯಾಳಂ ಚಿತ್ರರಂಗದಲ್ಲಿ ಮೋಹನ್‌ಲಾಲ್ ಸಿನಿಮಾಗಳು ಜೋರಾಗಿ ಸದ್ದು ಮಾಡುತ್ತವೆ.

ಆದರೆ, ಇತ್ತೀಚೆಗೆ ಮಲಯಾಳಂ ಹಿರಿಯ ನಟಿಯೊಬ್ಬರು ಮೋಹನ್‌ಲಾಲ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಮಲಯಾಳಂನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಶಾಂತಿ ಮಿಲಿಯಮ್ಸ್ ಮಲಯಾಳಂ ಸೂಪರ್‌ಸ್ಟಾರ್ "ಕೃತಜ್ಞತೆ ಇಲ್ಲದ ನಟ" ಎಂದು ಗಂಭೀರ ಆರೋಪ ಮಾಡಿದ್ದಾರೆ.

Shanthi Williams Criticizes Mohanlal for Not Attending Her Husband s Funeral

ಮಲಯಾಳಂ ನಟಿ ಶಾಂತಿ ವಿಲಿಯಮ್ಸ್ ಮಲಯಾಳಂ ಸಿನಿಪ್ರಿಯರಿಗೆ ಚೆನ್ನಾಗಿಯೇ ಪರಿಚಯವಿದೆ. ಈ ನಟಿ ತನ್ನ 12ನೇ ವಯಸ್ಸಿನಲ್ಲಿಯೇ ಬಾಲನಟಿಯಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಅಷ್ಟೇ ಅಲ್ಲದೆ, ಕಿರುತೆರೆಯಲ್ಲೂ ನಟಿಸಿ ಜನರ ಮೆಚ್ಚುಗೆ ಗಳಿಸಿದ ನಟಿಯೀಕೆ.

ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಶಾಂತಿ ವಿಲಿಯಮ್ಸ್ ಸಂದರ್ಶನ ನೀಡಿದ್ದರು. ಇದರಲ್ಲಿ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಶಾಂತಿ ವಿಲಿಯಮ್ಸ್ ಮಲಯಾಳಂ ಚಿತ್ರರಂಗದಲ್ಲಿ ನಿರ್ದೇಶಕರಾಗಿ, ನಿರ್ಮಾಪಕರಾಗಿ ಮಿಂಚಿದ್ದ ವಿಲಿಯಮ್ಸ್ ಅವರನ್ನು ವಿವಾಹವಾಗಿದ್ದಾರೆ. ಮೋಹನ್‌ಲಾಲ್‌ಗಾಗಿ ವಿಲಿಯಮ್ಸ್ ನಾಲ್ಕು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

Shanthi Williams Criticizes Mohanlal for Not Attending Her Husband s Funeral

ಮೋಹನ್‌ಲಾಲ್ ಹಾಗೂ ಮಿಲಿಯಮ್ಸ್ ಇಬ್ಬರೂ ಆತ್ಮೀಯರಾಗಿದ್ದರು. ಆದರೆ, ವಿಲಿಯಮ್ಸ್ ತೀರಿಕೊಂಡಾಗ ಅಂತಿಮ ದರ್ಶನ ಪಡೆಯುವುದಕ್ಕೂ ಮೋಹನ್‌ಲಾಲ್ ಬಂದಿರಲಿಲ್ಲ ಎಂದು ಶಾಂತಿ ವಿಲಿಯಮ್ಸ್ ಸಂದರ್ಶನದ ವೇಳೆ ಗಂಭೀರ ಆರೋಪ ಮಾಡಿದ್ದಾರೆ. ಮೋಹನ್ ಲಾಲ್ ಹಲವಾರು ಬಾರಿ ನಮ್ಮ ಮನೆಯ ಊಟ ಮಾಡಿದ್ದಾರೆ. ಆ ಕೃತಜ್ಞತೆಯನ್ನೂ ಅವರು ತೋರಿಸಲಿಲ್ಲ ಎಂದು ಶಾಂತಿ ವಿಲಿಯಮ್ಸ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

"ಮೋಹನ್‌ಲಾಲ್‌ ಮನೆಗೆ ಬಂದರೆ ನೇರವಾಗಿ ಅಡುಗೆ ಮನೆಗೆ ಹೋಗುತ್ತಿದ್ದರು. ಅಮ್ಮ ಅವರಿಗಾಗಿ ಮೀಸು ಸಾರು ಮಾಡಿ ಬಡಿಸಿದ್ದರು. ನಮ್ಮ ಮನೆ ಬಳಿ ಮಲಯಾಳಂ ಸಿನಿಮಾವೊಂದರ ಚಿತ್ರೀಕರಣ ನಡೆಯುತ್ತಿದ್ದಾಗ, ನಮ್ಮ ಮನೆಯಿಂದಲೇ ಊಟ ತೆಗೆದುಕೊಂಡು ಹೋದವರು ಮೋಹನ್ ಲಾಲ್" ಎಂದು ಶಾಂತಿ ವಿಲಿಯಮ್ಸ್ ಹೇಳಿಕೊಂಡಿದ್ದಾರೆ.

ಮೋಹನ್‌ಲಾಲ್ ಮೇಲೆ ಅವರ ಆಕ್ರೋಶಕ್ಕೆ ಪ್ರಮುಖ ಕಾರಣವೆಂದರೆ, ಪತಿ ವಿಲಿಯಮ್ಸ್ ತೀರಿಕೊಂಡಾಗ, ಮೋಹನ್‌ಲಾಲ್ ಅಂತಿಮ ದರ್ಶನಕ್ಕೆ ಬಂದಿರಲಿಲ್ಲ. ಹೀಗಾಗಿ ಮೋಹನ್‌ಲಾಲ್ ಕೃತಘ್ನತೆ ಇಲ್ಲದ ನಟ. ಅವರನ್ನು ಇಷ್ಟಪಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಮೋಹನ್‌ಲಾಲ್ ಜೊತೆ ನಾಲ್ಕು ಸಿನಿಮಾ ಮಾಡಿದ್ದೇವೆ. ಸಿನಿಮಾ ಒಂದರ ವೇಳೆ ನಾನು ತುಂಬು ಗರ್ಭಿಣಿಯಾಗಿದ್ದೆ. ನಡೆಯಲೂ ಆಗದ ಸ್ಥಿತಿ. ಆ ವೇಳೆ ನನ್ನ ಎಲ್ಲಾ ಒಡವೆಗಳನ್ನು ಮಾರಿ 60 ಸಾವಿರ ರೂಪಾಯಿ ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ.

More from Filmibeat

English summary
Actress Shanthi Williams says Mohanlal ungrateful for his absence at her husband's demise. Read more on the controversy:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X