ಸಿನಿಮಾ ಸೆಟ್‌ನಲ್ಲಿ ಶಕೀಲಾ ಕೆನ್ನೆಗೆ ಹೊಡೆದಿದ್ದರು ಸಿಲ್ಕ್ ಸ್ಮಿತಾ

ಒಂದು ಕಾಲದಲ್ಲಿ ಶಕೀಲಾ ಹೆಸರು ಕೇಳಿದರೆ ಪಡ್ಡೆ ಹುಡುಗರ ಮೈ ರೋಮಾಂಚನವಾಗುತ್ತಿತ್ತು. ಅವರ ಚಿತ್ರಗಳ ಎದುರು ಕೋಟಿಗಟ್ಟಲೆ ಹಣ ಸುರಿದು ಮಾಡಿದ ಸಿನಿಮಾಗಳು ಮಕಾಡೆ ಮಲಗುತ್ತಿದ್ದವು. ಈಗಲೂ ಶಕೀಲಾ ಸಿನಿಮಾಗಳನ್ನು ಹುಡುಕಿ ನೋಡುವವರಿಗೇನೂ ಕಡಿಮೆಯಿಲ್ಲ. ಅವರದೇ ಆದ ದೊಡ್ಡ ಅಭಿಮಾನಿ ಬಳಗವಿದೆ. ಅವರು ಹೊರ ಜಗತ್ತಿಗೆ ತಮ್ಮ ಅಭಿಮಾನವನ್ನು ಪ್ರದರ್ಶಿಸುವುದಿಲ್ಲವಷ್ಟೇ!

Recommended Video

Arjun Janya is back in action after having a heart attack | Arjun Janya | Music Director

ಬಿ ಗ್ರೇಡ್ ಸಿನಿಮಾಗಳನ್ನು ಮಾಡುತ್ತಿದ್ದ ಶಕೀಲಾ, ತಮ್ಮ ಬದುಕನ್ನು ಬದಲಿಸಿಕೊಳ್ಳಲು ನಿರ್ಧರಿಸಿದರು. ಬಿ ಗ್ರೇಡ್ ಚಿತ್ರಗಳ ನಿರ್ಮಾಣ ನಿಂತು ಹೋಗಿ ಕ್ರಮೇಣ ಮಲಯಾಳಂ ಚಿತ್ರರಂಗ ತನ್ನ ಕಳಂಕ ತೊಡೆದು ವಿಭಿನ್ನ ಸಿನಿಮಾಗಳನ್ನು ಮಾಡುವತ್ತ ಚಳವಳಿ ನಡೆಸಿದಾಗ ಶಕೀಲಾ ಕೂಡ ತಮ್ಮ ದಿಕ್ಕು ಬದಲಿಸಿದರು. ಮುಖ್ಯ ವಾಹಿನಿಯ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಕನ್ನಡದ ಬಿಗ್ ಬಾಸ್‌ನಲ್ಲಿ ಕೂಡ ಅವರು ಭಾಗವಹಿಸಿದ್ದರು. ಮುಂದೆ ಓದಿ...

ಕಹಿ ಘಟನೆ ನಡೆದಿತ್ತು

ಕಹಿ ಘಟನೆ ನಡೆದಿತ್ತು

90ರ ದಶಕದಲ್ಲಿ ಶಕೀಲಾ ವಯಸ್ಕರ ಸಿನಿಮಾಗಳಿಂದ ಹೆಸರು ಮಾಡಿದ್ದರೆ, ಅದೇ ಸಮಯದಲ್ಲಿ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಐಟಂ ಡ್ಯಾನ್ಸ್ ಮಾಡುವ ಮೂಲಕ ಜನಪ್ರಿಯರಾಗಿದ್ದವರು ನಟಿ ಸಿಲ್ಕ್ ಸ್ಮಿತಾ. ಈ ಇಬ್ಬರ ನಡುವೆ ಕಹಿ ಘಟನೆಯೊಂದು ನಡೆದಿತ್ತು. ಇದನ್ನು ಸ್ವತಃ ಶಕೀಲಾ ಒಮ್ಮೆ ಬಹಿರಂಗಪಡಿಸಿದ್ದರು.

ರಿಹರ್ಸಲ್‌ಗೆ ಒಪ್ಪದ ಸಿಲ್ಕ್

ರಿಹರ್ಸಲ್‌ಗೆ ಒಪ್ಪದ ಸಿಲ್ಕ್

ಸಿನಿಮಾವೊಂದರ ಸನ್ನಿವೇಶದಲ್ಲಿ ಸಿಲ್ಕ್ ಸ್ಮಿತಾ ಹಾಗೂ ಶಕೀಲಾ ಒಟ್ಟಿಗೆ ನಟಿಸಬೇಕಿತ್ತು. ಅದರಲ್ಲಿ ಶಕೀಲಾ ಕೆನ್ನೆಗೆ ಸಿಲ್ಕ್ ಸ್ಮಿತಾ ಹೊಡೆಯುವ ದೃಶ್ಯವಿತ್ತು. ಆಗ ಇನ್ನೂ ಹೊಸಬರಾಗಿದ್ದ ಶಕೀಲಾ, ದೃಶ್ಯದ ರಿಹರ್ಸಲ್ ಮಾಡೋಣ ಎಂದು ಕೇಳಿದ್ದರಂತೆ. ಆದರೆ ಸಿಲ್ಕ್ ಸ್ಮಿತಾ ರಿಹರ್ಸಲ್‌ಗೆ ಮುಂದಾಗಿರಲಿಲ್ಲ.

ನಿಜಕ್ಕೂ ಹೊಡೆದಿದ್ದ ಸ್ಮಿತಾ

ನಿಜಕ್ಕೂ ಹೊಡೆದಿದ್ದ ಸ್ಮಿತಾ

ಚಿತ್ರೀಕರಣದ ವೇಳೆಯೇ ಆರಾಮಾಗಿ ಶೂಟ್ ಮಾಡೋಣ ಎಂದು ಸಿಲ್ಕ್ ಸ್ಮಿತಾ ಹೇಳುತ್ತಿದ್ದರು. ಆದರೆ ಚಿತ್ರೀಕರಣದ ಸಂದರ್ಭದಲ್ಲಿ ಶಕೀಲಾ ಕೆನ್ನೆಗೆ ಸಿಲ್ಕ್ ಸ್ಮಿತಾ ನಿಜಕ್ಕೂ ಜೋರಾಗಿ ಬಾರಿಸಿದ್ದರಂತೆ. ಇದರಿಂದ ಶಕೀಲಾ ಕೆನ್ನೆ ಊದಿಕೊಳ್ಳುವಷ್ಟು ನೋವಾಗಿತ್ತು. ಸೆಟ್‌ನಲ್ಲಿ ಅವಮಾನಗೊಂಡ ಶಕೀಲಾ ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ.

ಭಯದಿಂದ ಹೊಡೆದಿರಬಹುದು

ಭಯದಿಂದ ಹೊಡೆದಿರಬಹುದು

ಸಿಲ್ಕ್ ಸ್ಮಿತಾ ನಿರ್ದೇಶಕರೊಬ್ಬರೊಂದಿಗೆ ಸಂಬಂಧ ಹೊಂದಿದ್ದರು. ಹೊಸಬಳಾದ ತಾನು ಎಲ್ಲಿ ಆಕೆಯ ಸ್ಥಾನವನ್ನು ಕಿತ್ತುಕೊಳ್ಳುತ್ತೇನೋ ಎಂಬ ಭಯದಿಂದ ಶೂಟಿಂಗ್‌ನಲ್ಲಿನ ಸಮಯ ಬಳಸಿಕೊಂಡು ನಿಜವಾಗಿಯೂ ಹೊಡೆದಿರಬಹುದು ಎಂದು ಶಕೀಲಾ ಅಭಿಪ್ರಾಯಪಟ್ಟಿದ್ದರು.

ಮನವೊಲಿಕೆ ಮಾಡಿದ ನಿರ್ಮಾಪಕ

ಮನವೊಲಿಕೆ ಮಾಡಿದ ನಿರ್ಮಾಪಕ

ಆದರೆ ಈ ಘಟನೆ ಶಕೀಲಾ ಅವರಿಗೆ ತೀವ್ರ ದುಃಖ ಉಂಟುಮಾಡಿತ್ತು. ನಂತರ ಎರಡು ದಿನ ಅವರು ಶೂಟಿಂಗ್‌ಗೆ ಹೋಗಿರಲಿಲ್ಲ. ಮುಂದೆ ಎಲ್ಲಿಯೂ ಸಿಲ್ಕ್ ಸ್ಮಿತಾ ಜತೆ ಶೂಟಿಂಗ್ ಮಾಡುವ ಸನ್ನಿವೇಶಗಳಿಲ್ಲ ಎಂದು ನಿರ್ಮಾಪಕರು ಭರವಸೆ ನೀಡಿದ ನಂತರವೇ ಅವರು ಶೂಟಿಂಗ್‌ಗೆ ತೆರಳಿದ್ದರಂತೆ.

ಚಾಕೊಲೇಟ್ ನೀಡಿದ ಸ್ಮಿತಾ

ಚಾಕೊಲೇಟ್ ನೀಡಿದ ಸ್ಮಿತಾ

ಚಿತ್ರೀಕರಣದ ಸ್ಥಳದಲ್ಲಿ ಸ್ಮಿತಾ ಅವರ ಕಾರ್ ನೋಡಿದ ಕೂಡಲೇ ಅಲ್ಲಿಂದ ಬೇರೆ ಕಡೆ ಹೊರಟರಂತೆ. ಆದರೆ ಸ್ಮಿತಾ ಅವರನ್ನು ತಡೆದು ಸಮಾಧಾನ ಪಡಿಸಿ ಚಾಕೊಲೇಟ್ ಬಾಕ್ಸ್ ನೀಡಿದರಂತೆ. ಹೊಸಬಳಾಗಿರುವುದರಿಂದ ಹೊಡೆತ ತಿಂದಾಗ ಅಳುವುದು ಹೇಗೆ ಎನ್ನುವುದು ಗೊತ್ತಿರಲಾರದು. ಹೀಗಾಗಿ ಜೋರಾಗಿ ಹೊಡೆದಿದ್ದು ಎಂದು ಸಮಜಾಯಿಷಿ ನೀಡಿದರಂತೆ. ಇದನ್ನು ಇನ್ನೂ ಮರೆತಿಲ್ಲ ಎಂದಿದ್ದಾರೆ ಶಕೀಲಾ.

More from Filmibeat

English summary
Shakeela once recalled a bitter experience with Silk Smitha on the set of a film in her earlier stage of cinema life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X