47ನೇ ವಯಸ್ಸಿನಲ್ಲಿ 2ನೇ ಮದುವೆ ಬಗ್ಗೆ ಮತ್ತೆ ಮೀನಾ ಶಾಕಿಂಗ್ ಕಾಮೆಂಟ್; ನಟಿಯ ನಿರ್ಧಾರವೇನು?
ದಕ್ಷಿಣ ಭಾರತದ ಜನಪ್ರಿಯ ನಟಿ ಮೀನಾ ಇತ್ತೀಚೆಗೆ ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದರೂ, ಮೀನಾ ಬಹು ಬೇಡಿಕೆಯ ನಟಿಯಾಗಿದ್ದಾರೆ. ಆದರೆ, ಕಳೆದ ಕೆಲವು ತಿಂಗಳುಗಳಿಂದ ಎರಡನೇ ಮದುವೆ ಬಗ್ಗೆನೇ ಚರ್ಚೆಯಾಗುತ್ತಿದೆ.
ಮೀನಾ ಪತಿ ನಿಧನರಾದ ಕೆಲವು ದಿನಗಳಲ್ಲಿ ಮೀನಾ ಎರಡನೇ ಮದುವೆ ಬಗ್ಗೆ ಸುದ್ದಿ ಹರಿದಾಡುವುದಕ್ಕೆ ಶುರುವಾಗಿತ್ತು. ಶೀಘ್ರದಲ್ಲೇ ದಕ್ಷಿಣ ಭಾರತದ ಜನಪ್ರಿಯ ನಟಿ ಮೀನಾ ಎರಡನೇ ಮದುವೆಯಾಗಲಿದ್ದಾರೆ ಎಂಬ ಜೋರಾಗಿಯೇ ಸದ್ದು ಮಾಡಿತ್ತು. ಈ ಬಗ್ಗೆ ಆಗಾಗ ಮೀನಾ ಸ್ಪಷ್ಟನೆ ನೀಡುತ್ತಿದ್ದರೂ, ಸುದ್ದಿಗಳು ಹರಿದಾಡುವುದು ಮಾತ್ರ ನಿಂತಿರಲಿಲ್ಲ.

ಸೋಶಿಯಲ್ ಮೀಡಿಯಾಗಳಲ್ಲಿ, ಮಾಧ್ಯಮಗಳಲ್ಲಿ ಆಗಾಗ ಚರ್ಚೆಯಾಗುತ್ತಿರುವ ಸುದ್ದಿ ಬಗ್ಗೆ ಮೀನಾ ಸಿಟ್ಟಿಗೆದ್ದಿದ್ದಾರೆ. ಇತ್ತೀಚೆಗೆ ಮತ್ತೊಂದು ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ತಮ್ಮ ಎರಡನೇ ಮದುವೆ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ಕೊಟ್ಟಿದ್ದಾರೆ. ಇಷ್ಟೇ ಅಲ್ಲದೆ, 2ನೇ ಮದುವೆ ಬಗ್ಗೆ ತಮ್ಮ ನಿರ್ಧಾರವೇನು? ಅನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಮೀನಾಗೆ ಈಗ 47 ವರ್ಷ. ಇವರಿಗೆ ಒಬ್ಬ ಮಗಳು ಕೂಡ ಇದ್ದಾರೆ. ಹೀಗಿದ್ದರೂ, ಮೀನಾ ಮತ್ತೊಂದು ಮದುವೆ ಆಗಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ತನ್ನ ಕುಟುಂಬದ ಮೇಲೆ ಪರಿಣಾಮ ಬೀರುತ್ತಿದೆ ಈ ಹಿಂದೆ ನೀಡಿದ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಆದರೆ, ಈ ಬಾರಿಯ ಸಂದರ್ಶನದಲ್ಲಿ ಮೀನಾ ಖಡಕ್ ಆಗಿ ತಮ್ಮ ಮುಂದಿನ ನಿರ್ಧಾರವೇನು? ಅನ್ನುವುದನ್ನು ಹೇಳಿದ್ದಾರೆ.
ಇತ್ತೀಚೆಗಷ್ಟೇ ನೀಡಿದ ಯೂಟ್ಯೂಬ್ ಸಂದರ್ಶನದಲ್ಲಿ ಮೀನಾ ಕುತೂಹಲಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ತಮ್ಮ ಪತಿ ಸಾವಿನ ಬಗ್ಗೆ ಮಾತಾಡಿದ್ದಾರೆ. ಮೀನಾ ಪತಿ ವಿದ್ಯಾಸಾಗರ್‌ಗೆ ಶ್ವಾಸಕೋಶದ ಸಮಸ್ಯೆಯಿತ್ತು. ಹೀಗಾಗಿ ಶ್ವಾಸಕೋಶದ ಕಿಸಿ ಮಾಡಿಸಿ, ಪತಿ ಜೀವ ಬದುಕಿಸಲು ಹೋರಾಟ ಮಾಡಿದ್ದರು. ಹೀಗಾಗಿ ಒಂದು ವೇಳೆ ಶ್ವಾಸಕೋಸ ಸಿಕ್ಕಿದರೂ, ಅವರಿಗೆ ಮ್ಯಾಚ್ ಆಗುವಂತಹದ್ದು ಸಿಗುತ್ತಿರಲಿಲ್ಲ ಎಂದು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

ಇದೇ ವೇಳೆ ನಿರೂಪಕರು ಎರಡನೇ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದರು. ಅದಕ್ಕೆ ಮೀನಾ ತನ್ನ ಮುಂದಿನ ನಿರ್ಧಾರವೇನು? ಅನ್ನುವುದನ್ನು ಹೇಳಿಕೊಂಡಿದ್ದಾರೆ. ಇಂಡಸ್ಟ್ರಿಯಲ್ಲಿ ಸಾಕಷ್ಟು ಮಂದಿ ನಟಿಯರು ಸಿಂಗಲ್ ಆಗಿದ್ದಾರೆ. ಅಷ್ಟೇ ಯಾಕೆ ನಾಯಕರೂ ಒಂಟಿಯಾಗಿದ್ದಾರೆ. ತನ್ನ ಬಗ್ಗೆ ಇಂತಹದ್ದೇ ಮದುವೆ ಬಗ್ಗೆ ಸುದ್ದಿಗಳು ಬಂದಾಗ ತುಂಬಾ ಬೇಸರವಾಗಿತ್ತು ಎಂದಿದ್ದಾರೆ.
"ಇಂತಹ ಸುಳ್ಳು ಸುದ್ದಿಗಳನ್ನು ಯಾಕೆ ಬರೆಯುತ್ತೀರಾ? ನನ್ನ ಬದುಕು ಹಾಗೂ ಸಿನಿಮಾಗಳ ಬಗ್ಗೆ ಎಲ್ಲರಿಗೂ ಗೊತ್ತು. ಹೀಗಿದ್ದರೂ ಸುಳ್ಳು ಸುದ್ದಿಗಳನ್ನು ಯಾಕೆ ಬರೆಯುತ್ತೀರ? ಇದರಿಂದ ನನ್ನ ಕುಟುಂಬಕ್ಕೆ ಬೇಸರವಾಗಿದೆ. ನಿಜವಾದ ಸಂಗತಿಗಳನ್ನು ತಿಳಿದು ಬರೆಯಿರಿ. ಇಂತಹ ಸುಳ್ಳು ಸುದ್ದಿಗಳನ್ನು ಹೇಳುವ ಮಾಧ್ಯಮಗಳ ಮೇಲೆ ನನಗೆ ತುಂಬಾ ಕೋಪವಿದೆ" ಎಂದು ನಟಿ ಮೀನಾ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಇದೇ ಸಂದರ್ಶನದಲ್ಲಿ ಎರಡನೇ ಮದುವೆ ಆಗುವುದಿಲ್ಲ. ಒಂಟಿಯಾಗಿಯೇ ಇರುತ್ತೇನೆ ಎಂದಿದ್ದಾರೆ. " ಹಲವು ಮಂದಿ ಒಂಟಿಯಾಗಿದ್ದಾರೆ. ನಾನು ಹಾಗೇ ಇರುತ್ತೇನೆ. ನನಗೆ ಎರಡನೇ ಮದುವೆ ಯೋಚನೆ ಇಲ್ಲ. ಇನ್ಮುಂದೆ ಇಂತಹ ಸುದ್ದಿ ಬರೆಯಬೇಡಿ." ಎಂದು ಮೀನಾ ಮತ್ತೊಂದು ಸ್ಪಷ್ಟನೆ ಕೊಟ್ಟಿದ್ದಾರೆ. ಅವರ ಕಮೆಂಟ್‌ಗಳೇ ಈಗ ವೈರಲ್ ಆಗುತ್ತಿವೆ.


Click it and Unblock the Notifications










