ಕೇರಳ ವಿಶ್ವವಿದ್ಯಾನಿಲಯದಲ್ಲಿ ಸನ್ನಿ ಲಿಯೋನ್ ಡ್ಯಾನ್ಸ್‌ಗೆ ನಿರಾಕರಣೆ; ಕಾರಣ ಅದಲ್ಲ, ಬೇರೆಯಿದೆ!

ಬಾಲಿವುಡ್ ನಟಿ ಸನ್ನಿ ಲಿಯೋನ್ ಈಗ ಭಾರತದ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್‌ಗೆ ಕಾಲಿಡುವುದಕ್ಕೂ ಮುನ್ನ ಸನ್ನಿಯ ಇಮೇಜ್ ಈಗ ಇಲ್ಲ. ಹೀಗಾಗಿ ಆಕೆಗೆ ಭಾರತದಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಆದರೆ, ಕೇರಳದ ಯೂನಿವರ್ಸಿಟಿ ಸನ್ನಿ ಲಿಯೋನ್ ಡಾನ್ಸ್ ಪರ್ಫಾಮೆನ್ಸ್ ಮಾಡುವುದಕ್ಕೆ ನಿರಾಕರಣೆ ಮಾಡಿ ಸುದ್ದಿಯಾಗಿದೆ.

ಸನ್ನಿ ಲಿಯೋನ್ ಮಲಯಾಳಂ ಸಿನಿಮಾಗಳಲ್ಲಿ ನಟಿಸುವುದಕ್ಕೆ ಸಜ್ಜಾಗುತ್ತಿದ್ದಂತೆ ಕೇರಳದಲ್ಲಿ ಡ್ಯಾನ್ಸ್ ಪರ್ಫಾಮೆನ್ಸ್ ನೀಡುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಮುಂದಿನ ತಿಂಗಳ ಮೊದಲ ವಾರದಲ್ಲಿ ಸನ್ನಿ ಲಿಯೋನ್ ಕೇರಳದ ಯೂನಿವರ್ಸಿಟಿಯಲ್ಲಿ ಡ್ಯಾನ್ಸ್ ಮಾಡಬೇಕಿತ್ತು. ಆದರೆ, ಅಲ್ಲಿನ ಉಪಕುಲಪತಿಗಳು ಈ ಇವೆಂಟ್‌ಗೆ ಅನುಮತಿಯನ್ನು ನಿರಾಕರಿಸಿದ್ದಾರೆ.

Sunny Leone s performance was cancelled at Kerala University due to this reason

ಈಗಾಗಲೇ ನಿಗದಿಯಾದಂತೆ ಕೇರಳದ ತಿರುವನಂತಪುರಂನ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಸನ್ನಿ ಲಿಯೋನ್ ಡ್ಯಾನ್ಸ್ ಪರ್ಫಾಮೆನ್ಸ್‌ ನಿಗದಿಯಾಗಿತ್ತು. ಜುಲೈ 5, 2024ರಂದು ಸನ್ನಿ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ರಂಜಿಸಲು ಸಜ್ಜಾಗಿದ್ದರು. ಅಷ್ಟರೊಳಗೆ ಈ ಇವೆಂಟ್‌ಗೆ ಅನುಮತಿಯನ್ನು ನಿರಾಕರಿಸಲಾಗಿದೆ. ಹಾಗಂತ ಈ ಇವೆಂಟ್ ಕ್ಯಾನ್ಸಲ್ ಆಗುವುದಕ್ಕೆ ಎಲ್ಲರೂ ಊಹಿಸಿರುವ ಕಾರಣ ಅಲ್ಲ.

ಕೇರಳ ಯೂನಿವರ್ಸಿಟಿಯ ಉಪ ಕುಲಪತಿ ಡಾ. ಮೋಹನನ್ ಕುನ್ನುಮ್ಮಲ್ ರಿಜಿಸ್ಟರರ್‌ಗೆ ಈ ಆದೇಶವನ್ನು ನೀಡಿದ್ದಾರೆ. ಇಂಜಿನಿಯರಿಂಗ್ ಕಾಲೇಜಿಗೆ ಇವೆಂಟ್‌ನಲ್ಲಿ ಸನ್ನಿ ಲಿಯೋನ್ ಶೋ ಅನ್ನು ಸೇರಿಸಬಾರದು ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಸೂಕ್ತ ಕಾರಣಗಳನ್ನು ನೀಡಲಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ದುರಂತವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

2023, ನವೆಂಬರ್‌ನಲ್ಲಿ ಎರ್ನಾಕುಲಂನಲ್ಲಿನ ಕೊಚ್ಚಿನ್ ಯೂನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಮ್ಯೂಸಿಕ್ ಫೆಸ್ಟಿವಲ್ ನಡೆದಿತ್ತು. ಇಲ್ಲಿ ಗಾಯಕಿ ನಿಖಿತಾ ಗಾಂಧಿಯ ಕಾನ್ಸರ್ಟ್ ಅನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ನಡೆದ ದುರಂತದಲ್ಲಿ ನಾಲ್ಕು ಮಂದಿ ವಿದ್ಯಾರ್ಥಿಗಳು ಸಾವನ್ನಪ್ಪಿದರು. 60 ಮಂದಿಗೆ ಗಂಭೀರ ಗಾಯಗಳಾಗಿದ್ದವು. ಹೀಗಾಗಿ ಮುನ್ನಚ್ಚರಿಕೆಯ ಕ್ರಮವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

Sunny Leone s performance was cancelled at Kerala University due to this reason

ಈ ಹಿಂದೆ ತಿರುವನಂತಪುರಂ ಇಂಜಿನಿಯರಿಂಗ್ ಕಾಲೇಜ್‌ನ ಇವೆಂಟ್‌ನಲ್ಲಿ ಡಿಜೆ ಪಾರ್ಟಿ ಹಾಗೂ ಮ್ಯೂಸಿಕ್ ನೈಟ್ ಮಾಡುವುದಕ್ಕೂ ಪರ್ಮಿಷನ್ ಅನ್ನು ನೀಡಿರಲಿಲ್ಲ. ಈಗ ಕೇರಳ ಯೂನಿವರ್ಸಿಟಿಯಲ್ಲಿ ಅನುಮತಿಯನ್ನು ಪಡೆಯದೆ ಸನ್ನಿ ಲಿಯೋನ್ ಅವರ ಡ್ಯಾನ್ಸ್ ಪರ್ಫಾಮೆನ್ಸ್ ಅನ್ನು ಆಯೋಜನೆ ಮಾಡಲಾಗಿತ್ತು. ಹೀಗಾಗಿ ಉಪಕುಲಪತಿ ಸಂದೇಶವನ್ನು ರವಾನೆ ಮಾಡಿದ್ದು, ಯುನಿವರ್ಸಿಟಿಯ ಕ್ಯಾಂಪಸ್‌ನಲ್ಲಿ ಅಥವಾ ಹೊರಗೆ ಯಾವುದೇ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ.

ಇನ್ನು ಸನ್ನಿ ಲಿಯೋನ್ ಸಿನಿಮಾ ವಿಷಯಕ್ಕೆ ಬರೋದಾದರೆ, ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಏಪ್ರಿಲ್‌ನಲ್ಲಿ ಸಿನಿಮಾ ಸೆಟ್ಟೇರಿದೆ. ಹಾಗೇ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಈಗಾಗಲೇ ನಟಿಸುತ್ತಿದ್ದಾರೆ. 'ರಾಗಿಣಿ ಎಂಎಂಎಸ್ 2', 'ಜಿಸ್ಮ್‌ 2', 'ಕುಚ್ ಕುಚ್ ಲೊಚಾ ಹೈ', 'ಏಕ್ ಪೆಹೆಲಿ ಲೀಲಾ', 'ಮಸ್ತಿಜಾದೆ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಸನ್ನಿ ಲಿಯೋನ್ ನಟಿಸಲಿದ್ದಾರೆ.

More from Filmibeat

English summary
Sunny Leone's performance was cancelled at Kerala University
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X